ಅಫಜಲ್ಪುರ: ಅನೈತಿಕ ಸಂಬಂಧ ಶಂಕೆ, ಯುವಕನ ಕೊಲೆ

By Kannadaprabha News  |  First Published Mar 12, 2023, 10:30 PM IST

ಕಲಬುರಗಿ ಜಿಲ್ಲೆಯ ಅಫಜಲ್ಪುರ ತಾಲೂಕಿನ ಚಿಂಚೋಳಿ ಗ್ರಾಮದಲ್ಲಿ ನಡೆದ ಘಟನೆ. 


ಕಲಬುರಗಿ(ಮಾ.12): ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂಬ ಶಂಕೆಯ ಮೇರೆಗೆ ಯುವಕನೋರ್ವನನ್ನು ಕೊಲೆ ಮಾಡಿರುವ ಘಟನೆ ಅಫಜಲ್ಪುರ ತಾಲೂಕಿನ ಚಿಂಚೋಳಿ ಗ್ರಾಮದಲ್ಲಿ ನಡೆದಿದೆ. 

ಈ ಕುರಿತು ಮೃತನ ತಂದೆ ಸಂಗಣ್ಣ ಮಲ್ಲಪ್ಪ ಜಮಾದಾರ ಅಫಜಲ್ಪುರ ಠಾಣೆಯಲ್ಲಿ ದೂರು ದಾಖಲಿಸಿದ್ದು ದೂರಿನಲ್ಲಿ ಸೈಬಣ್ಣ ಕಂಬಾರತೋಟ, ತುಳಜಪ್ಪ ಜಗದಿ, ಶ್ರೀಮಂತ ಕಂಬಾರತೋಟ, ನಾಗೇಶ ಜಗದಿ, ವಿಜಯಕುಮಾರ ಜಗದಿ, ಗುರುಸಿದ್ದವ್ವ ಕಂಬಾರತೋಟ, ಜ್ಯೋತಿ ಕಂಬಾರತೋಟ ಎಂಬುವವರೆಲ್ಲ ಕೂಡಿಕೊಂಡು ತಮ್ಮ ಮಗನ ಮರ್ಮಾಂಗದ ಮೇಲೆ ಒದ್ದು ಕತ್ತು ಹಿಸುಕಿ, ವಿಷ ಉಣಿಸಿ ಕೊಲೆ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Tap to resize

Latest Videos

undefined

Bengaluru Crime: ಹೆಂಡತಿಯನ್ನು ಮಂಚಕ್ಕೆ ಕರೆದ ಸ್ನೇಹಿತನ ತಲೆಯನ್ನೇ ಸೀಳಿದ ಗಂಡ

ಅಫಜಲ್ಪುರ ಠಾಣೆ ಪೊಲೀಸ್‌ರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

click me!