ತಿಂಗಳ ಹಿಂದೆಯಷ್ಟೇ ಮದುವೆ ಆಗಿದ್ದ ನವ ವಿವಾಹಿತೆ, ಗ್ರಾಮಲೆಕ್ಕಿಗೆಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಬಿಳಿಕೆರೆಯಲ್ಲಿ ನಡೆದಿದೆ.
ವರದಿ : ಮಧು.ಎಂ.ಚಿನಕುರಳಿ. ಏಷ್ಯಾನೆಟ್ ಸುವರ್ಣನ್ಯೂಸ್
ಮೈಸೂರು (ಮಾ.12): ತಿಂಗಳ ಹಿಂದೆಯಷ್ಟೇ ಮದುವೆ ಆಗಿದ್ದ ನವ ವಿವಾಹಿತೆ, ಗ್ರಾಮಲೆಕ್ಕಿಗೆಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಬಿಳಿಕೆರೆಯಲ್ಲಿ ನಡೆದಿದೆ. ಮದುವೆ ಸಂದರ್ಭದಲ್ಲಿ ವರದಕ್ಷಿಣೆ ಕಿರಿಕಿರಿ ಅನುಭವಿಸಿದ್ದ ಹುಡುಗಿ, ಗಂಡನ ಕಿರುಕುಳದಿಂದ ಸಾವನ್ನಪ್ಪಿದ್ದಾಳೆ ಎಂದು ಪೋಷಕರು ದೂರು ನೀಡಿದ್ದಾರೆ. ಹುಣಸೂರು ತಾಲೂಕಿನ ಬಿಳಿಕೆರೆ ಹೋಬಳಿಯ ಶ್ಯಾನುಬೋಗನಹಳ್ಳಿ ವಲಯದ ಗ್ರಾಮಲೆಕ್ಕಾಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಕೃಷ್ಣಾಬಾಯಿ ತುಕಾರಾಂ ಪಡ್ಕೆ 25 ಮೃತ ಗ್ರಾಮ ಲೆಕ್ಕಿಗರು. ಕೃಷ್ಣಾಬಾಯಿ ತುಕಾರಾಂ ಮೂಲತಃ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಎಸ್‌ಗಳ್ಳಿ ಗ್ರಾಮದವರಾಗಿದ್ದು, ತಿಂಗಳ ಹಿಂದಷ್ಟೆ ಬೆಳಗಾಂನ ಸುಭಾಷ್ ಬೋಸ್ಲೆಯವರನ್ನು ವಿವಾಹವಾಗಿದ್ದಳು, ಆತ ಚಾಮರಾಜನಗರ ಜಿಲ್ಲೆ ಹನೂರಿನ ಅರಣ್ಯ ಇಲಾಖೆಯ ಫಾರೆಸ್ಟ್ ಗಾರ್ಡ್ ಆಗಿ ಕೆಲಸ ನಿರ್ವಹಿಸುತ್ತಿದ್ದ.
undefined
ಒಂದು ತಿಂಗಳ ಹಿಂದೆ ಮದುವೆ ಆಗಿದ್ದ ನವ ದಂಪತಿ ನಾಲ್ಕು ದಿನಗಳ ಹಿಂದಷ್ಟೆ ಕರ್ತವ್ಯಕ್ಕೆ ಹಾಜರಾಗಿದ್ದರು. ಬಿಳಿಕೆರೆ ಎಸ್.ಬಿ.ಐ.ಹಿಂಬಾಗದ ಬಾಡಿಗೆ ಮನೆಯಲ್ಲಿ ಸಹೋದ್ಯೋಗಿ ಗ್ರಾಮಲೆಕ್ಕಾಧಿಕಾರಿ ಚೈತ್ರ ಮತ್ತು ಅವರ ತಾಯಿಯೊಂದಿಗೆ ಜೊತೆಯಲ್ಲೇ ಈಕೆ ವಾಸವಿದ್ದರು.
ಗೂಡ್ಸ್‌ಶೆಡ್ ರಸ್ತೆ ಬುಲ್ಲಾರ್ಡ್ಸ್‌ಗೆ ಡಿಕ್ಕಿ ಹೊಡೆದು ಅಪ್ರಾಪ್ತ ಬಾಲಕ ಸಾವು: ಅತಿವೇಗದಿಂದ ಅಪಘಾತ
ಶನಿವಾರ ಚೈತ್ರ ಹಾಗೂ ತಾಯಿ ಮನೆಯಲ್ಲೇ ಇದ್ದರು. ಕೃಷ್ಣಾಬಾಯಿ ತುಕಾರಾಂ ಫಡ್ಕೆಯವರು ಬೆಳಗ್ಗೆಯಿಂದಲೇ ಪತಿಯೊಂದಿಗೆ ಮೊಬೈಲ್‌ನಲ್ಲಿ ಜೋರಾಗಿ ಮಾತನಾಡುತ್ತಿದ್ದರು. ನಂತರ ರೂಂ ಚಿಲಕ ಹಾಕಿಕೊಂಡಿದ್ದರು. ಅನೇಕ ಬಾರಿ ಕೂಗಿದರೂ ಬಾಗಿಲು ತೆಗೆಯಲಿಲ್ಲ. ಏನೋ ಅನಾಹುತ ಆಗಿರಬೇಕೆಂದು ಅಕ್ಕಪಕ್ಕದವರ ನೆರವಿನಿಂದ ಬಾಗಿಲು ಒಡೆದು ನೋಡಲಾಗಿ ಕಿಟಕಿಯ ಸರಳಿಗೆ ಬಟ್ಟೆಯಿಂದ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
BENGALURU CRIME: ಹೆಂಡತಿಯನ್ನು ಮಂಚಕ್ಕೆ ಕರೆದವನ ತಲೆಯನ್ನೇ ಸೀಳಿದ ಗಂಡ: ಕುಡಿದ ಅಮಲಿನಲ್ಲಿ ಕೊಲೆಯಾದ ಯುವಕ
ತಕ್ಷಣವೇ ಹಿರಿಯ ಅಧಿಕಾರಿಗಳು ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ ಮೇರೆಗೆ ಸ್ಥಳಕ್ಕಾಗಮಿಸಿದ ಪೊಲೀಸರು ತಹಸೀಲ್ದಾರ್ ಡಾ.ಅಶೋಕರ ಸಮ್ಮುಖದಲ್ಲಿ ಶವವನ್ನು ಆಸ್ಪತ್ರೆಗೆ ಸ್ಥಳಾಂತರಿಸಿದ್ದರು. ಮೃತರ ಸಹೋದರ ಪತಿ ಸುಭಾಷ್ ವಿರುದ್ದ ವರದಕ್ಷಿಣೆ ಕಿರುಕುಳ ಕೇಸ್ ದಾಖಲಿಸಿದ್ದಾರೆ. ಬಿಳಿಕೆರೆ ಠಾಣೆ ಪೊಲೀಸರು ಕೇಸ್ ದಾಖಲಿಸಿಕೊಂಡು ವಿಚಾರಣೆ ನಡೆಸಿದ್ದಾರೆ.