Bengaluru Crime: ಯುವತಿಯನ್ನು ಉಸಿರುಗಟ್ಟಿಸಿ ಕೊಲೆ: ಬಾಯ್‌ಫ್ರೆಂಡ್‌ಗಾಗಿ ಪೊಲೀಸರ ಹುಡುಕಾಟ

By BK Ashwin  |  First Published Jun 6, 2023, 12:06 PM IST

ಖಾಸಗಿ ಕಂಪನಿಯ ಉದ್ಯೋಗಿಯಾಗಿದ್ದ ಆಕಾಂಕ್ಷ ಎಂಬ ಯುವತಿ ಕೊಲೆಯಾಗಿದ್ದು, ಈ ಸಂಬಂಧ ಬೆಂಗಳೂರು ಪೊಲೀಸರು ತನಿಖೆ ನಡೆಸುತ್ತಿದ್ದು, ಆಕೆಯ ಬಾಯ್‌ಫ್ರೆಂಡ್‌ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. 


ಬೆಂಗಳೂರು (ಜೂನ್ 6, 2023): ಬೆಂಗಳೂರಿನಲ್ಲಿ ಮತ್ತೆ ಯುವತಿಯೊಬ್ಬಳ ಕೊಲೆಯಾಗಿದೆ. ಮೃತ ಯುವತಿಯನ್ನು ಖಾಸಗಿ ಕಂಪನಿಯ ಉದ್ಯೋಗಿಯಾಗಿದ್ದ ಆಕಾಂಕ್ಷ ಎಂದು ಗುರುತಿಸಲಾಗಿದ್ದು, ಈ ಸಂಬಂಧ ಬೆಂಗಳೂರಿನ ಜೀವನ್ ಭೀಮಾನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

ಇನ್ನು, ಕೊಲೆಯಾಗಿರುವ ಆಕಾಂಕ್ಷ ಅರ್ಪಿತ್‌ ಎಂಬುವವನನ್ನು ಪ್ರೀತಿಮಾಡ್ತಿದ್ದು, ಈ ಹಿನ್ನೆಲೆ ಪೊಲೀಸರು ಅರ್ಪಿತ್‌ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆ ಆತನಿಗಾಗಿ ಬೆಂಗಳೂರು ಪೊಲೀಸರು ಬಲೆ ಬೀಸಿದ್ದಾರೆ ಎಂದು ತಿಳಿದುಬಂದಿದೆ.

Tap to resize

Latest Videos

ಇದನ್ನು ಓದಿ: ಇದೆಂತ ದುರಂತ ಪ್ರೀತಿ! ಎಣ್ಣೆ ಏಟಲ್ಲಿ ಬರ್ತಡೇ ವಿಷ್‌ ಮಾಡಲು ಗರ್ಲ್‌ ಫ್ರೆಂಡ್‌ ಮನೆಗೆ ಹೋಗಿ ಕೊಲೆಯಾದ ಯುವಕ

23 ವರ್ಷದ ಆಕಾಂಕ್ಷ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ ಎಂದು ರೂಮ್‌ಮೇಟ್ ನವನೀತ್ ಎಂಬಾತ ದೂರು ನೀಡಿದ್ದಾನೆ. ಬೆಂಗಳೂರಿನ ಕೋಡಿಹಳ್ಳಿಯ ಪ್ಯಾರಡೈಸ್ ಅಪಾರ್ಟ್ಮೆಂಟ್‌ನಲ್ಲಿ ತಡರಾತ್ರಿ ಮನೆಯಲ್ಲಿ ಅನುಮಾನಾಸ್ಪದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಈ ಹಿನ್ನೆಲೆ ಸದ್ಯ ಶವವನ್ನ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿರೋ ಜೀವನ್ ಭೀಮಾನಗರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಅಲ್ಲದೆ, ಜೀವನ್ ಭೀಮಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಹೈದರಾಬಾದ್‌ ಮೂಲದ ಆಕಾಂಕ್ಷ ಹಾಗೂ ದೆಹಲಿ ಮೂಲದ ಅರ್ಪಿತ್ ಇಬ್ಬರೂ ಲಿವ್‌ ಇನ್‌ ರಿಲೇಷನ್‌ಶಿಪ್‌ನಲ್ಲಿದ್ರು. ಒಟ್ಟಿಗೆ ವಾಸಿಸುತ್ತಿದ್ದ ಅರ್ಪಿತ್‌ ಮೇಲೆ ಪೊಲೀಸರಿಗೆ ಅನುಮಾನ ಮೂಡಿದ್ದು, ಪೊಲೀಸರು  ಆರೋಪಿಗಾಗಿ ಹುಡುಕಾಟ ನಡೆಸ್ತಿದ್ದಾರೆ. 

ಇದನ್ನೂ ಓದಿ: ದತ್ತು ಕೇಂದ್ರದಲ್ಲಿ ಮಗುವಿನ ಮೇಲೆ ಅಮಾನುಷ ಹಲ್ಲೆ; ಕೂದಲು ಹಿಡಿದು ನೆಲಕ್ಕೆ ಎಸೆದ ಪಾಪಿ ಮಹಿಳೆ: ವಿಡಿಯೋದಲ್ಲಿ ಸೆರೆ

ನಿನ್ನೆ ಇಬ್ಬರ ನಡುವೆ ಗಲಾಟೆ ಆಗಿದ್ದು, ಇಬ್ಬರು ಬೇರೆಯಾಗಬೇಕು ಎಂದು ಮಾತಾಡಿಕೊಂಡಿದ್ದರು. ಈ ನಡುವೆ ನಿನ್ನೆ ಇಬ್ಬರು ಮನೆಯಲ್ಲಿ ಇರುವಾಗ ಗಲಾಟೆ ಶುರುವಾಗಿದೆ. ನಂತರ, ಅರ್ಪಿತ್ ಆಕಾಂಕ್ಷಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ. 

ಬಳಿಕ ಯುವತಿಯ ಕುತ್ತಿಗೆಗೆ ಬಟ್ಟಿ ಕಟ್ಟಿ ನೇಣು ಹಾಕಿಕೊಂಡು ಮೃತಪಟ್ಟಿರುವ ರೀತಿ ಬಿಂಬಿಸುವ ಯತ್ನ ನಡೆದಿದೆ ಎಂದೂ ಹೇಳಲಾಗಿದೆ. ಆದರೆ, ಮೃತ ದೇಹವನ್ನ ಫ್ಯಾನ್‌ಗೆ ಕಟ್ಟಲಾಗದೆ ನೆಲದ ಮೇಲೆ ಬಿಟ್ಟು ಅರ್ಪಿತ್‌ ಎಸ್ಕೇಪ್ ಆಗಿದ್ದಾನೆ. ರಾತ್ರಿ ಮತ್ತೋರ್ವ ರೂಮ್‌ಮೇಟ್‌ ಕೆಲಸ ಮುಗಿಸಿ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. 

ಇದನ್ನೂ ಓದಿ: ಅವಿವಾಹಿತ ಪುರುಷರಿಗೆ ಶಾಕಿಂಗ್ ನ್ಯೂಸ್‌: AI ಮೂಲಕ ಸೃಷ್ಟಿಯಾದ ವ್ಯಕ್ತಿಯನ್ನೇ ಮದ್ವೆಯಾದ ಮಹಿಳೆ!

ಮೊದಲು ಪೊಲೀಸರು ಈ ಪ್ರಕರಣವನ್ನು ಅನುಮಾನಾಸ್ಪದ ಸಾವು ಎಂದುಕೊಂಡಿದ್ರೂ, ಸ್ಥಳ ಪರಿಶೀಲನೆ ಬಳಿಕ ಕೊಲೆ ಎಂಬುದು ಬೆಳಕಿಗೆ ಬಂದಿದೆ. ಸದ್ಯ ಅರೋಪಿ ವಿರುದ್ದ ಕೊಲೆ ಕೇಸ್ ದಾಖಲು ಮಾಡಿದ ಜೀವನ್ ಭೀಮಾ ನಗರ ಪೊಲೀಸರು, ತಲೆಮರೆಸಿಕೊಂಡಿರೋ ಆರೋಪಿಗಾಗಿ ಪೊಲೀಸರ ಹುಡುಕಾಟ ಮುಂದುವರಿದಿದೆ. 

ಇನ್ನು, ಈ ಸಂಬಂಧ ಪೂರ್ವ ವಲಯದ ಅಡಿಷನಲ್ ಕಮಿಷನರ್ ಚಂದ್ರಶೇಖರ್, ಆಕಾಂಕ್ಷ ಅಂತಾ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ರು. ನಿನ್ನೆ ಸಂಜೆ ಸುಮಾರಿಗೆ ಕೊಲೆಯಾಗಿದೆ. ಅವನ ಬಾಯ್‌ಫ್ರೆಂಡ್‌ ಮೇಲೆ ನಮಗೆ ಅನುಮಾನ ಇದೆ. ಆತನ ಪತ್ತೆಗೆ ಈಗಾಗಲೇ ನಾಲ್ಕು ಟೀಂ ರಚಿಸಿ ಹುಡುಕಾಟ ನಡೆಸಲಾಗ್ತಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಮಗನನ್ನು ಕೊಂದು ತಲೆಯ ಭಾಗವನ್ನು ಬೇಯಿಸಿ ತಿಂದ ಕ್ರೂರಿ ತಾಯಿ: ಕಾರಣ ಕೇಳಿದ ಪೊಲೀಸರೇ ಬೆಚ್ಚಿ ಬಿದ್ರು!

ಅಲ್ಲದೆ, ಎರಡು ವರ್ಷಗಳಿಂದ ಇಬ್ಬರೂ ಪರಿಚಯ ಇದ್ರು. ಆರೋಪಿ ಆಕೆಯನ್ನ ಕೊಲೆ ಮಾಡಿದ ನಂತರ ಸೀನ್ ಕ್ರಿಯೇಟ್ ಮಾಡಲು ಪ್ರಯತ್ನಿಸಿದ್ದ. ಫ್ಯಾನ್‌ಗೆ ದುಪ್ಪಟ್ಟಾ ಹಾಕಿ ನೇಣಿನ ರೀತಿ ಪ್ಲಾನ್ ಮಾಡಿದ್ದ. ಆದ್ರೆ ಅದು ಆಗಿಲ್ಲ, ಸದ್ಯ ಹೆಚ್ಚಿನ ತನಿಖೆ ನಡೆಸಲಾಗ್ತಿದೆ ಎಂದು ಪೂರ್ವ ವಲಯದ ಹೆಚ್ಚುವರಿ ಪೊಲೀಸ್ ಆಯುಕ್ತ ಚಂದ್ರಶೇಖರ್ ಮಾಹಿತಿ ನೀಡಿದ್ದಾರೆ. 

ಸದ್ಯ ಆರೋಪಿ ಅರ್ಪಿತ್‌ಗೆ ಬಲೆ ಬೀಸಿರುವ ಪೊಲೀಸರು ಬೆಂಗಳೂರಿನ ಏರ್‌ಪೋರ್ಟ್‌ನಲ್ಲಿ  ಮಾಹಿತಿ ಕಲೆಗೆ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ. 
 

click me!