ಭೀಕರ ಅಪಘಾತ: ಖಾಜಾ ಬಂದೇನವಾಜ ದರ್ಗಾ ಉರುಸ್‌ಗೆ ಹೊರಟಿದ್ದ ಐದು ಜನರು ಸ್ಥಳದಲ್ಲೇ ಸಾವು!

Published : Jun 06, 2023, 08:16 AM ISTUpdated : Jun 06, 2023, 09:26 AM IST
ಭೀಕರ ಅಪಘಾತ: ಖಾಜಾ ಬಂದೇನವಾಜ ದರ್ಗಾ ಉರುಸ್‌ಗೆ ಹೊರಟಿದ್ದ ಐದು ಜನರು ಸ್ಥಳದಲ್ಲೇ ಸಾವು!

ಸಾರಾಂಶ

ನಿಂತಿದ್ದ ಲಾರಿಗೆ ಕ್ರೂಷರ್ ಡಿಕ್ಕಿಯಾಗಿ 5 ಜನ ಮೃತಪಟ್ಟು, 13  ಜನರು ಗಾಯಗೊಂಡಿರುವ  ಘಟನೆ ಯಾದಗಿರಿ ತಾಲೂಕಿನ ಬಳಿಚಕ್ರ ಗ್ರಾಮದ ರಾಷ್ಟ್ರೀಯ ಹೆದ್ದಾರಿ 150 ರಲ್ಲಿ ನಡೆದಿದೆ

ಯಾದಗಿರಿ (ಜೂ.6): ನಿಂತಿದ್ದ ಲಾರಿಗೆ ಕ್ರೂಷರ್ ಡಿಕ್ಕಿಯಾಗಿ 5 ಜನ ಮೃತಪಟ್ಟು, 13  ಜನರು ಗಾಯಗೊಂಡಿರುವ  ಘಟನೆ ಯಾದಗಿರಿ ತಾಲೂಕಿನ ಬಳಿಚಕ್ರ ಗ್ರಾಮದ ರಾಷ್ಟ್ರೀಯ ಹೆದ್ದಾರಿ 150 ರಲ್ಲಿ ನಡೆದಿದೆ.

ಆಂಧ್ರಪ್ರದೇಶದ ನಂದ್ಯಾಲ್ ಜಿಲ್ಲೆಯಿಂದ ಕಲಬುರಗಿಯ ಖಾಜಾ ಬಂದೇನವಾಜ ದರ್ಗಾದ ಉರುಸ್(Urus of Khaja Bandenawaja Dargah, Kalaburagi) ಜಾತ್ರೆಗೆ ತೆರಳುತ್ತಿದ್ದರು. ಈ ವೇಳೆ ಬಳಿಚಕ್ರ ಬಳಿ ರಸ್ತೆ ಪಕ್ಕ ನಿಲ್ಲಿಸಿದ್ದ ಲಾರಿಗೆ ಕ್ರೂಷರ್ ಡಿಕ್ಕಿಯಾಗಿದೆ. ವೇಗವಾಗಿ ಬಂದು ಡಿಕ್ಕಿಯಾಗಿರುವ ರಭಸಕ್ಕೆ ಕ್ರೂಷರ್‌ನಲ್ಲಿದ್ದ 5 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಓರ್ವ ಬಾಲಕಿ, ಓರ್ವ ಬಾಲಕ ಸಾವು ಸೇರಿದಂತೆ ಐದು ದುರ್ಮರಣ ಮುನೀರ್( 40), ನಯಾಮತ್ (40), ಮುದ್ದತ್ ಶಿರ್ ( 12), ರಮಿಜಾ ಬೇಗಂ (50) ಹಾಗೂ ಸುಮ್ಮಿ (12) ಮೃತರು  13ಜನರು  ಗಾಯಾಳುಗಳನ್ನು ರಾಯಚೂರಿನ ರೀಮ್ಸ್ ಆಸ್ಪತ್ರೆಗೆ ದಾಖಲು

ಬೆಂಗಳೂರು - ಮೈಸೂರು ದಶಪಥ ಹೆದ್ದಾರಿಯಲ್ಲಿ ಭೀಕರ ಅಪಘಾತ: ಕಾರು ಪಲ್ಟಿಯಾಗಿ ಐವರಿಗೆ ಗಂಭೀರ ಗಾಯ

ಭೀಕರ ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿರುವ ಸೈದಾಪುರ ಪೊಲೀಸರು. ಅಪಘಾತ ನಡೆದ ಸ್ಥಳ ಪರಿಶೀಲನೆ ನಡೆಸಿದರು. ಸೈದಾಪುರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ.

ಅಪಘಾತದಲ್ಲಿ ತಂದೆ-ಮಗ ಸಾವು

ಆಂಧ್ರಪ್ರದೇಶದ ಬಂಡಿ ಆತ್ಮಕೂರು ಗ್ರಾಮದ ತಂದೆ ಮುನೀರ್, ಮಗ ಮುದ್ದಸೀರ್ ಕ್ರೂಷರ್ ಉರುಸ್‌ಗೆ ತೆರಳಿದ್ದರು. ಆದರೆ ಭೀಕರ ರಸ್ತೆ ಅಪಘಾತ ತಂದೆ ಮಗ ಸ್ಥಳದಲ್ಲೇ ಮೃತಪಟ್ಟು ಸಾವಿನಲ್ಲೂ ಒಂದಾಗಿದ್ದಾರೆ. ಉಳಿದ ಮೂವರು ವೇಲಗೋಡ ಗ್ರಾಮದವರು ಎನ್ನಲಾಗಿದೆ. ಮೃತಪಟ್ಟ ಐದೂ ಜನ ಸಂಬಂಧಿಕರಾಗಿದ್ದರು. ನಿದ್ದೆ ಮಂಪರಿನಲ್ಲಿದ್ದ ಕ್ರೂಷರ್ ಚಾಲಕ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿರುವುದೇ ದುರ್ಘಟನೆಗೆ ಕಾರಣವಾಗಿದೆ.

ಬಸ್‌-ಬೈಕ್‌ ಡಿಕ್ಕಿ: ವಿದ್ಯಾರ್ಥಿ ಸಾವು

ಮೂಡುಬಿದಿರೆ: ಮಂಗಳೂರು ಕಾರ್ಕಳ ರಾಷ್ಟ್ರೀಯ ಹೆದ್ದಾರಿಯ ತೋಡಾರಿನ ಹಂಡೇಲು ಎಂಬಲ್ಲಿ ಖಾಸಗಿ ಬಸ್‌ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಬೈಕ್‌ ಸವಾರ ಕಾಲೇಜು ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟಘಟನೆ ಸೋಮವಾರ ಸಂಜೆ ನಡೆದಿದೆ.

 ಇಲ್ಲಿನ ಆಳ್ವಾಸ್‌ ಕಾಲೇಜಿನ ಪ್ರಥಮ ಬಿಸಿಎ ವಿದ್ಯಾರ್ಥಿ ಎಡಪದವು ರಾಜೇಶ್ವರೀ ಜ್ಯುವೆಲ್ಲ​ರ್‍ಸ್ನ ಚಂದ್ರಹಾಸ ಆಚಾರ್ಯ ಅವರ ಪುತ್ರ ಕಾರ್ತಿಕ್‌ ಆಚಾರ್ಯ (19) ಮೃತರು. ಸಹಸವಾರ ಅದೇ ಕಾಲೇಜಿನ ವಿದ್ಯಾರ್ಥಿ ಹರ್ಷ ಎಂಬವರು ಅಲ್ಪಸ್ವಲ್ಪ ಗಾಯಗಳಿಂದ ಪಾರಾಗಿದ್ದಾರೆ. 

ಕಾರ್ತಿಕ್‌ ಅವರು ಕಾಲೇಜು ಮುಗಿಸಿ ತನ್ನ ಬೈಕ್‌ನಲ್ಲಿ ಮನೆಗೆ ತೆರಳುತ್ತಿದ್ದರು. ಈ ವೇಳೆ ಮಂಗಳೂರಿನಿಂದ ಮೂಡುಬಿದಿರೆಗೆ ಬರುತ್ತಿದ್ದ ಖಾಸಗಿ ಎಕ್ಸ್‌ಪ್ರೆಸ್‌ ಬಸ್‌ ಮತ್ತೊಂದು ಬಸ್ಸನ್ನು ಓವರ್‌ಟೇಕ್‌ ಮಾಡುವ ಭರದಲ್ಲಿ ತೀರ ಬಲಭಾಗಕ್ಕೆ ಚಲಿಸಿ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಕಾರ್ತಿಕ್‌ ಹೆಲ್ಮೆಟ್‌ ಧರಿಸಿದ್ದರೂ ಪ್ರಾಣ ಉಳಿಯಲಿಲ್ಲ. 

ಟಿಪ್ಪರ್-ಕಾರು ನಡುವೆ ಭೀಕರ ಅಪಘಾತ: ಇಬ್ಬರು ಸಾವು, ಓರ್ವ ಗಂಭೀರ ಗಾಯ

ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಬಸ್‌ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ
ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?