ಹುಟ್ಟುಹಬ್ಬದ ಸಂಭ್ರಮಾಚರಣೆಗೆಂದು ಉದ್ಯಮಿ ಗಂಡ ತನ್ನನ್ನು ದುಬೈಗೆ ಕರೆದುಕೊಂಡು ಹೋಗಲು ನಿರಾಕರಿಸಿದ ಕಾರಣ ಪತ್ನಿ ಪತಿಯ ಮೂಗಿಗೆ ಗುದ್ದಿದ್ದಾರೆ. ಇದರಿಂದ ಗಂಡ ಮೃತಪಟ್ಟಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಪುಣೆ (ನವೆಂಬರ್ 25, 2023): ಮದ್ವೆಯಾದ್ಮೇಲೆ ಗಂಡ ಏನನ್ನೂ ಮರೆತ್ರೂ ಹೆಂಡತಿಯ ಹುಟ್ಟುಹಬ್ಬ ಹಾಗೂ ತಮ್ಮ ಮದುವೆಯ ವಾರ್ಷಿಕೋತ್ಸವದ ದಿನವನ್ನು ಮರೀಬಾರದು ಅಂತ ಹಲವರು ಆಗಾಗ್ಗೆ ಹೇಳುತ್ತಿರುತ್ತಾರೆ. ಹಾಗೆ, ಈ ದಿನಗಳಂದು ಹೆಂಡತಿಗೆ ಉಡುಗೊರೆ ಅಥವಾ ಹೊರಗೆ ಕರೆದುಕೊಂಡು ಹೋಗುವುದನ್ನು ಸಹ ಪತ್ನಿ ಆಸೆ ಪಡುತ್ತಾರೆ. ಈ ವಿಚಾರ ಹೀಗ್ಯಾಕಪ್ಪ ಅಂತೀರಾ..? ಮುಂದೆ ಓದಿ..
ಹುಟ್ಟುಹಬ್ಬದ ಸಂಭ್ರಮಾಚರಣೆಗೆಂದು ಗಂಡ ತನ್ನನ್ನು ದುಬೈಗೆ ಕರೆದುಕೊಂಡು ಹೋಗಲು ನಿರಾಕರಿಸಿದ ಕಾರಣ ಪತ್ನಿ ಪತಿಯ ಮೂಗಿಗೆ ಗುದ್ದಿದ್ದಾರೆ. ಇದರಿಂದ ಗಂಡ ಮೃತಪಟ್ಟಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಪುಣೆಯ ವನವಡಿ ಪ್ರದೇಶದ ಐಷಾರಾಮಿ ರೆಸಿಡೆನ್ಶಿಯಲ್ ಸೊಸೈಟಿಯಲ್ಲಿರುವ ಅಪಾರ್ಟ್‌ಮೆಂಟ್‌ವೊಂದರಲ್ಲಿ ಶುಕ್ರವಾರ ಈ ಘಟನೆ ನಡೆದಿದೆ.
ಇದನ್ನು ಓದಿ: ಬಿರಿಯಾನಿ ಹಣಕ್ಕಾಗಿ ಯುವಕನ ಕತ್ತು ಹಿಸುಕಿ ಇರಿದು ಕೊಂದ; ನಂತರ ಶವದ ಮೇಲೆ ಡ್ಯಾನ್ಸ್ ಮಾಡಿದ ಬಾಲಕ!
ಮೃತ ವ್ಯಕ್ತಿಯನ್ನು ನಿಖಿಲ್ ಖನ್ನಾ ಎಂದು ಗುರುತಿಸಲಾಗಿದ್ದು, ನಿರ್ಮಾಣ ಉದ್ಯಮದಲ್ಲಿ ಇವರು ಉದ್ಯಮಿಯಾಗಿದ್ದರು. 6 ವರ್ಷಗಳ ಹಿಂದೆ ಪತ್ನಿ ರೇಣುಕಾ (38) ಅವರೊಂದಿಗೆ ನಿಖಿಲ್ ಖನ್ನಾ ಪ್ರೇಮ ವಿವಾಹವಾಗಿದ್ದರು ಎಂದು ತಿಳಿದುಬಂದಿದೆ.
ಈ ಪ್ರಕರಣ ಸಂಬಂಧ ವನವಡಿ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿ ಮಾತನಾಡಿದ್ದು, ಶುಕ್ರವಾರ ಮಧ್ಯಾಹ್ನ ಈ ಘಟನೆ ಸಂಭವಿಸಿದೆ, ಪ್ರಾಥಮಿಕ ತನಿಖೆಯ ಪ್ರಕಾರ, ನಿಖಿಲ್ ತನ್ನ ಹೆಂಡತಿಯ ಹುಟ್ಟುಹಬ್ಬವನ್ನು ಆಚರಿಸಲು ದುಬೈಗೆ ರೇಣುಕಾ ಅವರನ್ನು ಕರೆದುಕೊಂಡು ಹೋಗದ ಕಾರಣ ದಂಪತಿ ಜಗವಾಡಿದ್ದಾರೆ ಎಂದು ತಿಳಿದುಬಂದಿದೆ. ಹಾಗೂ, ಆಕೆಯ ಹುಟ್ಟುಹಬ್ಬ ಮತ್ತು ವಾರ್ಷಿಕೋತ್ಸವದಂದು ದುಬಾರಿ ಉಡುಗೊರೆಗಳನ್ನು ನೀಡಲಿಲ್ಲ ಎಂದು ಪತ್ನಿ ಸಿಟ್ಟಾಗಿದ್ದಾರೆ. ಜತೆಗೆ ಕೆಲವು ಸಂಬಂಧಿಕರ ಹುಟ್ಟುಹಬ್ಬ ಆಚರಿಸಲು ದೆಹಲಿಗೆ ಹೋಗಬೇಕೆಂಬ ತನ್ನ ಆಸೆಗೆ ಸರಿಯಾಗಿ ಪ್ರತಿಕ್ರಿಯೆ ನೀಡದಿದ್ದಕ್ಕಾಗಿಯೂ ರೇಣುಕಾ ನಿಖಿಲ್‌ನೊಂದಿಗೆ ಅಸಮಾಧಾನಗೊಂಡಿದ್ದರು ಎಂದು ಹೇಳಲಾಗಿದೆ.
ಇದನ್ನು ಓದಿ: ಕಾಮುಕ ಪ್ರಿನ್ಸಿಪಾಲ್ ಕಿರುಕುಳ: ಸರ್ಕಾರಿ ಶಾಲೆಯ 142 ಅಪ್ರಾಪ್ತೆಯರಿಗೆ ಲೈಂಗಿಕ ದೌರ್ಜನ್ಯ!
ಶುಕ್ರವಾರ ಜಗಳದ ವೇಳೆ ಪತ್ನಿ ರೇಣುಕಾ ಪತಿ ನಿಖಿಲ್‌ನ ಮುಖಕ್ಕೆ ಗುದ್ದಿದ್ದಾರೆ. ಗುದ್ದಿದ ರಭಸಕ್ಕೆ ನಿಖಿಲ್‌ನ ಮೂಗು ಮತ್ತು ಕೆಲವು ಹಲ್ಲುಗಳು ಮುರಿದು ಹೋಗಿದೆ. ಅಲ್ಲದೆ, ತೀವ್ರ ರಕ್ತಸ್ರಾವದಿಂದ ನಿಖಿಲ್ ಪ್ರಜ್ಞೆ ಕಳೆದುಕೊಂಡಿದ್ದರು ಎಂದು ಮಹಾರಾಷ್ಟ್ರ ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಮಧ್ಯೆ, ಪೊಲೀಸರು ರೇಣುಕಾ ವಿರುದ್ಧ ಐಪಿಸಿ ಸೆಕ್ಷನ್ 302 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಮತ್ತು ಹೆಚ್ಚಿನ ತನಿಖೆಗಾಗಿ ಅವರನ್ನು ಬಂಧಿಸಿದ್ದಾರೆ ಎಂದು ತಿಳಿಸಿದ್ದಾರೆ.
ಇದನ್ನು ಓದಿ: ಮದುವೆಯಲ್ಲಿ ರಸಗುಲ್ಲಾಕ್ಕಾಗಿ ಹೊಡೆದಾಟ: 6 ಜನ ಆಸ್ಪತ್ರೆ ಪಾಲು; ಎಫ್‌ಐಆರ್ ದಾಖಲು