
ಬೆಂಗಳೂರು(ನ.25): ಮನೆ ಮುಂದೆ ಒಣ ಹಾಕಿದ್ದ ಖಾಕಿ ಬಣ್ಣದ ಸಾಕ್ಸ್‌ಗಳನ್ನೇ ಕೈ ಗ್ಲೋಸ್ ಮಾಡಿಕೊಂಡು ಕಾನ್‌ಸ್ಟೇಬಲ್‌ವೊಬ್ಬರ ಮನೆ ಬೀಗ ಮುರಿದು ಹಾಡಹಗಲೇ ಕಿಡಿಗೇಡಿಗಳು ಚಿನ್ನಾಭರಣ ದೋಚಿದ್ದಾರೆ.
ಹೊಸಕೆರೆಹಳ್ಳಿ ಸಮೀಪದ ನಿವಾಸಿ ಸಶಸ್ತ್ರ ಮೀಸಲು ಪಡೆಯ ಕಾನ್‌ಸ್ಟೇಬಲ್ ಚೇತನ್ ಮನೆಯಲ್ಲಿ ಕಳ್ಳತನವಾಗಿದ್ದು, ಈ ಸಂಬಂಧ ಗಿರಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎರಡು ದಿನಗಳ ಹಿಂದೆ ಚೇತನ್ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮಧ್ಯಾಹ್ನದ ಹೊತ್ತಿನಲ್ಲಿ ಈ ಕೃತ್ಯ ನಡೆದಿದೆ ಎಂದು ತಿಳಿದು ಬಂದಿದೆ.
ಯಾದಗಿರಿ ಶ್ರೀಗಂಧ ಕಳವು: ಶಿವಮೊಗ್ಗ, ಕೇರಳದ ನಂಟು
ಹೊಸಕೆರೆಹಳ್ಳಿ ಬಳಿ ಚೇತನ್ ಕುಟುಂಬ ನೆಲೆಸಿದ್ದು, ಈ ದಂಪತಿ ಜತೆ ಚೇತನ್ ಭಾಮೈದ ಸಹ ನೆಲೆಸಿದ್ದಾರೆ. ಚೇತನ್ ಪತ್ನಿ ಸಹ ನೌಕರಿಯಲ್ಲಿದ್ದಾರೆ. ಎಂದಿನಂತೆ ಕೆಲಸಕ್ಕೆ ಬೆಳಗ್ಗೆ ದಂಪತಿ ತೆರಳಿದ್ದರು. ಸಾಫ್ಟ್‌ವೇರ್ ಉದ್ಯೋಗಿ ಆಗಿರುವ ಅವರ ಭಾಮೈದ ಸಹ ಕೆಲಸಕ್ಕೆ ಹೋಗಿದ್ದರು. ಆ ವೇಳೆ ಮನೆ ಬಳಿ ಬಂದಿರುವ ಕಳ್ಳರು, ಚೇತನ್ ಮನೆ ಮುಂದೆ ಒಣ ಹಾಕಿದ್ದ ಸಾಕ್ಸ್‌ಗಳನ್ನು ಕೈಗ್ಲೋಸ್ ಮಾಡಿಕೊಂಡು ಬೀಗ ಮುರಿದು ಒಳ ಪ್ರವೇಶಿಸಿದ್ದಾರೆ. ಬಳಿಕ ಮನೆಯಲ್ಲಿದ್ದ ಚಿನ್ನ ಸೇರಿದಂತೆ ₹1.3 ಲಕ್ಷ ಮೌಲ್ಯದ ವಸ್ತುಗಳನ್ನು ದೋಚಿದ್ದಾರೆ. ಸಂಜೆ ಕೆಲಸ ಮುಗಿಸಿ ಚೇತನ್ ಭಾಮೈದ ಮನೆಗೆ ಮರಳಿದಾಗ ಕೃತ್ಯ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ