ಕುಡಿತದ ಚಟ ಹೊಂದಿದ್ದ ಚೆಲ್ಲಮುತ್ತು, ಕುಡಿದ ಅಮಲಿನಲ್ಲಿ ಪೊನ್ನತಾಳ್ ಜೊತೆ ಆಗಾಗ್ಗೆ ಜಗಳವಾಡುತ್ತಿದ್ದರು. ಇದೇ ರೀತಿ, ಹೆಂಡತಿಯ ಮೇಲೆ ಕೈಮಾಡಿದ ಗಂಡನ ವಿರುದ್ಧ ಸಿಟ್ಟಿಗೆದ್ದ ಪತ್ನಿ ಬಿಸಿ ಎಣ್ಣೆಯನ್ನು ಸುರಿದಿದ್ದಾರೆ ಎಂದು ತಿಳಿದುಬಂದಿದೆ.
ದಿಂಡಿಗಲ್ (ಸೆಪ್ಟೆಂಬರ್ 4, 2023): ಪದೇ ಪದೇ ಜಗಳವಾಡುತ್ತಿದ್ದ ಪತಿಯಿಂದ ಮನನೊಂದ 55ರ ಹರೆಯದ ಮಹಿಳೆ ಆತನ ಮೇಲೆ ಬಿಸಿ ಎಣ್ಣೆ ಸುರಿದು ಕೊಲೆ ಮಾಡಿರುವ ಆಘಾತಕಾರಿ ಘಟನೆ ವರದಿಯಾಗಿದೆ. ಈ ಸಂಬಂಧ ಪೊಲೀಸರು ಆರೋಪಿ ಮಹಿಳೆಯನ್ನು ಬಂಧಿಸಿದ್ದಾರೆ. ಆಗಸ್ಟ್ 27 ರಂದು ನಡೆದ ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ವ್ಯಕ್ತಿಯನ್ನು ದಿಂಡುಗಲ್ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅವರು ಶನಿವಾರ ರಾತ್ರಿ ಮೃತಪಟ್ಟರು.
ಮೃತ ಚೆಲ್ಲಮುತ್ತುಗೆ 63 ವರ್ಷವಾಗಿದ್ದು, ಅವರು ದಿಂಡಿಗಲ್ ಜಿಲ್ಲೆಯ ಒಡ್ಡಂಛತ್ರಂ ತಾಲೂಕಿನ ರೈತ. ಅವರು ಪೊನ್ನತಾಳ್ ಅವರನ್ನು ವಿವಾಹವಾಗಿದ್ದು, ಈ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಕುಡಿತದ ಚಟ ಹೊಂದಿದ್ದ ಚೆಲ್ಲಮುತ್ತು, ಕುಡಿದ ಅಮಲಿನಲ್ಲಿ ಪೊನ್ನತಾಳ್ ಜೊತೆ ಆಗಾಗ್ಗೆ ಜಗಳವಾಡುತ್ತಿದ್ದರು ಎಂದು ತಿಳಿದುಬಂದಿದೆ.
ಇದನ್ನು ಓದಿ: ಗರ್ಭಿಣಿ ಪತ್ನಿಯನ್ನು ಹಿಗ್ಗಾಮುಗ್ಗ ಥಳಿಸಿ, ಬೆತ್ತಲೆ ಮೆರವಣಿಗೆ ಮಾಡಿದ ಪಾಪಿ ಪತಿ: ವಿಡಿಯೋ ವೈರಲ್
ಇದೇ ರೀತಿ, ಚೆಲ್ಲಮುತ್ತು ಅವರು ಆಗಸ್ಟ್ 27 ರಂದು ಕುಡಿದು ಮನೆಗೆ ಬಂದು ಪೊನ್ನತಾಳ್ ಅವರೊಂದಿಗೆ ಜಗಳವಾಡಿದ್ದರು. ತನಗಾಗಿ ಪೂರಿ ಮಾಡುವಂತೆ ಪತಿ ಹೆಂಡತಿಗೆ ಒತ್ತಾಯಿಸಿದ, ಆದರೆ ಆಕೆ ಇದನ್ನು ನಿರಾಕರಿಸಿದಳು. ಹೀಗಾಗಿ ಮಲಗುವ ಮುನ್ನ ಚೆಲ್ಲಮುತ್ತು ಹೆಂಡತಿಯನ್ನು ಥಳಿಸಿದ್ದಾನೆ. ಇದರಿಂದ ಬೇಸರಗೊಂಡು ಕೋಪಗೊಂಡ ಮಹಿಳೆ ಬಾಣಲೆಯಲ್ಲಿ ತೆಂಗಿನೆಣ್ಣೆ ಕುದಿಸಿ ಮಲಗಿದ್ದ ಗಂಡನ ಮೇಲೆ ಸುರಿದಿದ್ದಾಳೆ.
ಆತನ ಕಿರುಚಾಟ ಕೇಳಿ ದೌಡಾಯಿಸಿದ ನೆರೆಹೊರೆಯವರು ಚೆಲ್ಲಮುತ್ತು ಅವರನ್ನು ಒಡ್ಡಂಚತಿರಂ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು. ಆದರೆ ಅವರ ಸ್ಥಿತಿ ಗಂಭೀರವಾಗಿದ್ದರಿಂದ ದಿಂಡಿಗಲ್ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಲಾಯಿತು. ಆದರೂ, ಚಿಕಿತ್ಸೆ ಫಲಕಾರಿಯಾಗದೆ ಚೆಲ್ಲಮುತ್ತು ಶನಿವಾರ ರಾತ್ರಿ ನಿಧನರಾದರು.
ಇದನ್ನೂ ಓದಿ: ಮಗಳಿಗೆ ಲೈಂಗಿಕ ಕಿರುಕುಳ: ವಿರೋಧಿಸಿದ ಪತ್ನಿಯನ್ನೇ ಹೊಡೆದು ಕೊಂದ ಪಾಪಿ ಪತಿ!
ಅವನು ಸತ್ತ ನಂತರ, ಪೊಲೀಸರು ಗಾಯದ ಪ್ರಕರಣವನ್ನು ಕೊಲೆ ಪ್ರಕರಣವನ್ನಾಗಿ ಮಾರ್ಪಡಿಸಿದರು ಮತ್ತು ಪೊನ್ನತಾಳ್‌ನನ್ನು ಬಂಧಿಸಿದರು. ಮಹಿಳೆ ತಪ್ಪೊಪ್ಪಿಕೊಂಡಿದ್ದು, ಪತಿಯಿಂದ ಬೇಸತ್ತಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಅಕ್ಕನಿಗೆ ಬಿಯರ್ ಕುಡಿಸಿ ತಂಗಿಯಿಂದ್ಲೇ ಕೊಲೆ? ಚಿನ್ನ, ಲಕ್ಷಾಂತರ ರೂ. ಹಣದೊಂದಿಗೆ ಬಾಯ್‌ಫ್ರೆಂಡ್ ಜತೆ ಪರಾರಿ!
ಇದನ್ನೂ ಓದಿ: ಹೆಂಡ್ತಿ ತಂಗಿಯನ್ನು ಮುಟ್ತಿದ್ದ ಅಪ್ರಾಪ್ತ ಬಾಲಕನ ಕೊಂದು ಬಾಡಿ ಪೀಸ್ ಪೀಸ್ ಮಾಡಿದ ಆಟೋ ಡ್ರೈವರ್!