ಸರ್ಕಾರದ ಆಧೀನದ ಮಕ್ಕಳ ಪಾಲನಾ ಕೇಂದ್ರದಲ್ಲಿದ್ದ ಲೈಂಕಿಗ ದೌರ್ಜನ್ಯ ಸಂತ್ರಸ್ತ ಬಾಲಕಿ ಗರ್ಭಿಣಿಯಾಗಿರುವ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ. ರಜೆ ನಿಮಿತ್ತ ಮನೆಗೆ ಹೋಗಿದ್ದ ಬಾಲಕಿಗೆ ಪರಿಚಯ ವ್ಯಕ್ತಿಯಿಂದಲೇ ಲೈಂಗಿಕ ದೌರ್ಜನ್ಯ ನಡೆದಿದೆ. ಬೆಟಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ
ಗದಗ (ಸೆ.4) : ಸರ್ಕಾರದ ಆಧೀನದ ಮಕ್ಕಳ ಪಾಲನಾ ಕೇಂದ್ರದಲ್ಲಿದ್ದ ಲೈಂಕಿಗ ದೌರ್ಜನ್ಯ ಸಂತ್ರಸ್ತ ಬಾಲಕಿ ಗರ್ಭಿಣಿಯಾಗಿರುವ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ..
ಬೆಟಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2018 ರಲ್ಲಿ ನಡೆದಿದ್ದ ಲೈಂಗಿಕ ದೌರ್ಜನ್ಯ ಕೇಸ್ ಸಂಬಂಧಿಸಿದ ಬಾಲಕಿ ಗದಗನ ಮಕ್ಕಳ ಪಾಲನಾ ಕೇಂದ್ರದಲ್ಲಿ ಆರೈಕೆ ಪಡೆಯುತ್ತಿದ್ಲು. ರಜೆ ನಿಮಿತ್ತ ಮನೆಗೆ ಹೋಗಿದ್ದ ಬಾಲಕಿಗೆ ಪರಿಚಯ ವ್ಯಕ್ತಿಯಿಂದಲೇ ಲೈಂಗಿಕ ದೌರ್ಜನ್ಯ(Sexual harassment) ನಡೆದಿದೆ. ಈ ಮಧ್ಯೆ ಬಾಲಕಿ ಗರ್ಭಿಣಿಯಾಗಿದ್ದಾಳೆ.
undefined
ಬಾಲಕಿ ಗರ್ಭಿಣಿಯಾಗಿದ್ದನ್ನ ತಿಳಿದ ಪಾಲನಾ ಕೇಂದ್ರದ ಸಿಬ್ಬಂದಿ ದಿನಾಂಕ ಆಗಸ್ಟ್ 26 ರಂದು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ಸಂಬಂಧ ನಾರಾಯಣ ತಿಕೋಟಿ(Narayana tikoti) (33) ಎಂಬಾತನನ್ನ ಬಂಧಿಸಿರುವ ಗದಗ ಮಹಿಳಾ ಠಾಣೆ ಪೊಲೀಸರು, ತನಿಖೆ ನಡೆಸಿದ್ದಾರೆ..
ಕೊಲೇಟ್ ಕೊಡ್ಸೋದಾಗಿ ಹೇಳಿ 6 ವರ್ಷದ ಬಾಲಕಿ ಮೇಲೆ 16 ವರ್ಷದ ಬಾಲಕನಿಂದ ಲೈಂಗಿಕ ದೌರ್ಜನ್ಯ!
ತಂದೆಯ ಮನೆಗೆ ಹೋಗಿದ್ದ ಬಾಲಕಿ ವಾಪಾಸ್ ಪಾಲನಾ ಕೇಂದ್ರಕ್ಕೆ ಕರೆದುಕೊಂಡು ಬಂದಿದ್ದ ವ್ಯಕ್ತಿಯೇ ಅತ್ಯಾಚಾರ ಮಾಡಿದ್ದಾನೆ.
2018 ರಲ್ಲಿ ಅತ್ಯಾಚಾರ ಕೇಸ್ ಗೆ ಸಂಬಂಧಿಸಿದಂತೆ ಬಾಲಕ ಪಾಲನಾ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಳು. ಆಧಾರ ಕಾರ್ಡ್ ಮಾಡಿಸುವ ಸಲುವಾಗಿ ತಂದೆ ಮನೆಗೆ ಕರೆದುಕೊಂಡು ಹೋಗಿದ್ರು. ವಾಪಾಸ್ ಮಕ್ಕಳ ಪಾಲನಾ ಕೇಂದ್ರಕ್ಕೆ ಬಿಡುವ ನೆಪದಲ್ಲಿ ಪರಿಚಯವ್ಯಕ್ತಿಯೇ ಅತ್ಯಾಚಾರ ವ್ಯಸಗಿರುವ ಬಗ್ಗೆ ದೂರು ದಾಖಲಾಗಿದೆ..
ಬಾಲಕಿಯನ್ನ ಕಾನೂನಿನ ಅನ್ವಯ ಪೋಷಕರ ಭೇಟಿಗೆ ಅವಕಾಶ ಮಾಡಿಕೊಡಲಾಗಿದೆ. ಬಾಲಕಿ ತಂದೆಯನ್ನ ಭೇಟಿಯಾಗಿ ವಾಪಾಸ್ ಬರುವಾಗ ಘಟನೆ ನಡೆದಿದೆ. ಗರ್ಭಿಣಿಯಾದ ವಿಷಯ ತಿಳಿದ ನಂತರ ಬಾಲಕಿಗೆ ಕೌನ್ಸೆಲಿಂಗ್ ಮಾಡಿದಾಗ ದೌರ್ಜನ್ಯವಾದ ಬಗ್ಗೆ ಬಾಲಕಿ ಮಾಹಿತಿ ನೀಡಿದ್ದಾಳೆ ಅಂತಾ ಮಕ್ಕಳ ರಕ್ಷಣಾ ಅಧಿಕಾರಿ ರಾಧಾ ಮಣ್ಣೂರು(Radha mannur) ತಿಳಿಸಿದ್ದಾರೆ..
ಅಪ್ತಾಪ್ತೆ ಮೇಲೆ ರೇಪ್, ಮಗುವಿಗೆ ಜನ್ಮ ನೀಡಿದ ಬೆನ್ನಲ್ಲೇ ಮತ್ತೆ ಸಮೂಹಿಕ ಅತ್ಯಾಚಾರ!
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರೋ ಮಹಿಳಾ ಪೊಲೀಸರು ತನಿಖೆ ನಡೆಸಿದ್ದಾರೆ.. ಆರೋಪಿ ಅರೆಸ್ಟ್ ಮಾಡಿದ್ದು, ತನಿಖೆ ನಡೆಸೋದಾಗಿ ಗದಗ ಎಸ್ ಪಿ ಬಿಎಸ್ ನೇಮಗೌಡ ಮಾಹಿತಿ ನೀಡಿದ್ದಾರೆ.