ಮಹಿಳೆ ಬಾಯಿಗೆ ಬಟ್ಟೆ ತುರುಕಿ ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ವಿಜಯನಗರದಲ್ಲಿ ನಡೆದಿದೆ. ಕಮಲಮ್ಮ (50) ದುಷ್ಕರ್ಮಿಗಳಿಂದ ಕೊಲೆಯಾದ ಮಹಿಳೆ. ಹೊಸದುರ್ಗದಲ್ಲಿ ಪಿಡಬ್ಲ್ಯೂಡಿ ಇಂಜಿನಿಯರ್ ಆಗಿರುವ ಮಲ್ಲಿಕಾರ್ಜುನ್ ಎಂಬುವವರ ಪತ್ನಿಯಾಗಿರುವ ಕಮಲಮ್ಮ.
ಶಿವಮೊಗ್ಗ (ಜೂ.18) : ಮಹಿಳೆ ಬಾಯಿಗೆ ಬಟ್ಟೆ ತುರುಕಿ ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ವಿಜಯನಗರದಲ್ಲಿ ನಡೆದಿದೆ. ಕಮಲಮ್ಮ (50) ದುಷ್ಕರ್ಮಿಗಳಿಂದ ಕೊಲೆಯಾದ ಮಹಿಳೆ. ಹೊಸದುರ್ಗದಲ್ಲಿ ಪಿಡಬ್ಲ್ಯೂಡಿ ಇಂಜಿನಿಯರ್ ಆಗಿರುವ ಮಲ್ಲಿಕಾರ್ಜುನ್ ಎಂಬುವವರ ಪತ್ನಿಯಾಗಿರುವ ಕಮಲಮ್ಮ.
ಮನೆಯಲ್ಲಿ ಕಮಲಮ್ಮ ಒಬ್ಬರೇ ಇರುವುದು ತಿಳಿದು ಮನೆಗೆ ನುಗ್ಗಿರುವ ದುಷ್ಕರ್ಮಿಗಳು. ಈ ವೇಳೆ ಕಮಲಮ್ಮ ಪ್ರಶ್ನಿಸಿದ್ದಾಳೆ. ದುಷ್ಕರ್ಮಿಗಳಿಗೆ ಪ್ರತಿರೋಧ ಒಡ್ಡಿದರೂ ಬಿಡದ ದುಷ್ಕರ್ಮಿಗಳು ಬಾಯಿಗೆ ಬಟ್ಟೆ ತುರುಕಿ ಉಸಿರುಗಟ್ಟಿಸಿದ್ದಾರೆ. ಕಮಲಮ್ಮರನ್ನು ಉಸಿರುಗಟ್ಟಿಸಿ ಕೊಂದ ಬಳಿಕ ಮನೆಯಲ್ಲಿದ್ದ ನಗದು ಹಣವನ್ನು ತೆಗೆದುಕೊಂಡು ಹೋಗಿರುವ ದುಷ್ಕರ್ಮಿಗಳು.
ಮರಳು ಮಾಫಿಯಾ: ರಾತ್ರಿ ಗಸ್ತು ಮುಗ್ಸಿ ಬರ್ತೀನಿ ಅಂದಾಂವ ಹಾದಿ ಹೆಣವಾದ!
ನಿನ್ನೆ ಪತಿ ಮಲ್ಲಿಕಾರ್ಜುನ್ ಕಮಲಮ್ಮಳ ಮೊಬೈಲ್ಗೆ ಎಷ್ಟೇ ಕರೆ ಮಾಡಿದರೂ ಕರೆ ಸ್ವೀಕರಿಸದ ಕಮಲಮ್ಮ. ಕರೆ ಸ್ವೀಕರಿಸದ ಹಿನ್ನೆಲೆ ಪತಿ ಪಕ್ಕದ ಮನೆಯವರಿಗೆ ಕರೆಮಾಡಿ ಮನೆಗೆ ಹೋಗಿ ನೋಡಲು ತಿಳಿಸಿದ್ದಾರೆ. ಅದರಂತೆ ಪಕ್ಕದ ಮನೆಯವರು ಮನೆಗೆ ಬಂದು ನೋಡಿದಾಗ ಕಮಲಮ್ಮ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ. ಪಕ್ಕದ ಮನೆಯವರಿಂದ ವಿಷಯ ತಿಳಿದ ಬಳಿಕ ಪತಿ ಮಲ್ಲಿಕಾರ್ಜುನ್ ಮನೆಯತ್ತ ದೌಡಾಯಿಸಿದ್ದಾರೆ.
ಘಟನೆ ಬಗ್ಗೆ ಮಾಹಿತಿ ಪಡೆದ ತುಂಗಾ ನಗರ ಪೊಲೀಸ್ ಠಾಣೆಯ ಪಿಐ ಮಂಜುನಾಥ್ ನೇತೃತ್ವದ ತಂಡ ಸ್ಥಳಕ್ಕೆ ಭೇಟಿ ಪರಿಶೀಲನೆ. ಸದ್ಯ ದಾವಣಗೆರೆ ವಿಧಿವಿಜ್ಞಾನ ಪೊಲೀಸರ ತಂಡ ಆಗಮನಕ್ಕೆ ಕಾಯುತ್ತಿರುವ ಪೊಲೀಸರು. ಕಮಲಮ್ಮನವರ ಕೊಲೆ ಮಾಡಿ ನಗದು ದೋಚಿರುವ ದುಷ್ಕರ್ಮಿಗಳು ಆಭರಣಗಳನ್ನು ತೆಗೆದುಕೊಂಡಿಲ್ಲ. ಇದು ದ್ವೇಷದ ಹಿನ್ನೆಲೆಯಲ್ಲಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಒಂದು ವರ್ಷದ ಹಿಂದೆ ಕೊಲೆಯಾದ ಮಹಿಳೆ, ಪತ್ತೆಯಾಗದ ಗುರುತು
ನಾಗಮಂಗಲ: ತಾಲೂಕಿನ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ-75ರ ಕಂಚಿನಕೋಟೆ ಗೇಚ್ ಬಳಿ ಸೇತುವೆ ಕೆಳಭಾಗದಲ್ಲಿ ಕಳೆದ ಒಂದೂವರೆ ವರ್ಷದ ಹಿಂದೆ ಕೊಲೆ ಮಾಡಿ ತಂದು ಬಿಸಾಡಿದ್ದ ಅಪರಿಚಿತ ಮಹಿಳೆ (60) ಮೃತದೇಹ ಗುರುತು ಇದುವರೆಗೂ ಪತ್ತೆಯಾಗಿಲ್ಲ.
ಕಳೆದ 2022ರ ಜ.1 ರಂದು ಸುಮಾರು 6 ವರ್ಷದ ಮಹಿಳೆಯನ್ನು ಕೊಲೆ ಮಾಡಿ ಕಂಚಿನಕೋಟೆ ಗೇಟ್ ಬಳಿ ಸೇತುವೆ ಕೆಳಭಾಗದಲ್ಲಿ ಬಿಸಾಡಲಾಗಿತ್ತು. ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದರೂ ಸಹ ಈವರೆಗೂ ಕೊಲೆಯಾಗಿರುವ ಅಪರಿಚಿತ ಮೃತ ಮಹಿಳೆಯ ಹೆಸರು ವಿಳಾಸ ಅಥವಾ ಕೊಲೆಗಾರರು ಯಾರೆಂದು ತಿಳಿದುಬಂದಿಲ್ಲ. ಪೊಲೀಸರು ತಾಲೂಕಿನ ಆದಿಚುಂಚನಗಿರಿ ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆಗೊಳಪಡಿಸಿದ್ದರು.
ಈ ಅಪರಿಚಿತ ಮಹಿಳೆಯನ್ನು ಯಾರೋ ಕೊಲೆ ಮಾಡಿರುವ ಸತ್ಯಾಂಶ ಮರಣೋತ್ತರ ಪರೀಕ್ಷೆಯಿಂದ ತಿಳಿದುಬಂದಿದ್ದ ಹಿನ್ನಲೆಯಲ್ಲಿ ಇಲಾಖೆಯ ನಿಯಮಾನುಸಾರ ಪೊಲೀಸರೇ ಅಪರಿಚಿತ ಮೃತ ಮಹಿಳೆಯ ಅಂತ್ಯಸಂಸ್ಕಾರವನ್ನು ನಡೆಸಿದ್ದರು. ಪ್ರಕರಣ ನಡೆದು ಒಂದೂವರೆ ವರ್ಷ ಕಳೆದರೂ ಸಹ ಮೃತ ಮಹಿಳೆಯ ಹೆಸರು, ವಿಳಾಸ ಅಥವಾ ವಾರಸುದಾರರು ಯಾರೆಂದು ಈವರೆಗೂ ತಿಳಿದು ಬಂದಿಲ್ಲ. ಹಾಗಾಗಿ ಪೊಲೀಸರು ಮೃತ ಮಹಿಳೆಯ ಹೆಸರು ವಿಳಾಸದ ಜೊತೆಗೆ ಆರೋಪಿಗಳ ಪತ್ತೆಗಾಗಿ ತನಿಖೆ ಮುಂದುವರಿಸಿದ್ದಾರೆ.
ಹೆಂಡ್ತಿ ಕೊಲ್ಲೋಕೆ ಕಂಟ್ರಿ ಪಿಸ್ತೂಲ್ ಖರೀದಿಸಿದ ಪತಿ: ಗನ್ ಇಟ್ಕೊಳೋಕೆ ಗೊತ್ತಾಗದೇ ಜೈಲು ಸೇರಿದ
ಅಪರಿಚಿತ ಮಹಿಳೆಯ ಶವದ ಮೇಲೆ ಕೆಂಪು ಬಣ್ಣದ ಸೀರೆ ಮತ್ತು ಅದೇ ಬಣ್ಣದ ರೆವಿಕೆ, ಕತ್ತಿನಲ್ಲಿ ಧರಿಸಿದ್ದ ಲಿಂಗವು ದೊರೆತಿತ್ತು. ಕೊಲೆಯಾಗಿದ್ದ ಈ ಮೃತ ಮಹಿಳೆಯ ಬಗ್ಗೆ ಮಾಹಿತಿ ದೊರೆತಲ್ಲಿ ನಾಗಮಂಗಲ ಆರಕ್ಷಕ ವೃತ್ತ ನಿರೀಕ್ಷಕರ ಮೊ-9480804837, ಬೆಳ್ಳೂರು ಪಿಎಸ…ಐ ಮೊ.ನಂ.9480804853 ಸಂರ್ಪಿಸುವಂತೆ ಕೋರಿದ್ದಾರೆ.