ಆಂಟಿ ಜೊತೆ ಅನೈತಿಕ ಸಂಬಂಧ: ಬೆಳಗಾವಿಯಲ್ಲಿ ಬಿತ್ತು ಯುವಕನ ಹೆಣ..!

By Girish Goudar  |  First Published Jun 18, 2023, 9:55 AM IST

ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲೂಕಿನ ಹಲಕಿ ಬಳಿ ನಡೆದ ಘಟನೆ, ರಮೇಶ್ ಗುಂಜಗಿ ಕೊಲೆಯಾದ ಯುವಕನಾಗಿದ್ದಾನೆ. 


ಬೆಳಗಾವಿ(ಜೂ.18): ಗೃಹಿಣಿ ಜತೆಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಯುವಕನನ್ನ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲೂಕಿನ ಹಲಕಿ ಬಳಿ ಇಂದು(ಭಾನುವಾರ) ನಡೆದಿದೆ. ರಮೇಶ್ ಗುಂಜಗಿ(24) ಕೊಲೆಯಾದ ಯುವಕನಾಗಿದ್ದಾನೆ. 

ವನ್ನೂರ ಗ್ರಾಮದ ನಿವಾಸಿಯಾಗಿರುವ ರಮೇಶ್ ಗುಂಜಗಿ, ಎರಡು ತಿಂಗಳ ಹಿಂದೆ ಮನೆ ಪಕ್ಕದ ವಿವಾಹಿತ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದನಂತೆ. ಈ ವಿಚಾರ ಗೊತ್ತಾಗಿ ಮಹಿಳೆಯ ಪತಿ ಯಲ್ಲಪ್ಪ ಕಸೊಳ್ಳಿ ರಮೇಶ್‌ನನ್ನ ಕೊಲೆ ಮಾಡಿದ್ದಾನೆ. ರಮೇಶ್‌ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಯಲ್ಲಪ್ಪ ಮತ್ತು ಗೆಳೆಯರು ಕೊಲೆ ಮಾಡಿದ್ದಾರೆ. 

Tap to resize

Latest Videos

ಕೊಪ್ಪಳ: ಮದುವೆಯಾಗಿದ್ರೂ ಬಿಡದ ಅನೈತಿಕ ಸಂಬಂಧ, ಆತ್ಮಹತ್ಯೆಗೆ ಶರಣಾದ ಜೋಡಿ..!

ಇದೇ ವಿಚಾರಕ್ಕೆ ಒಂದು ತಿಂಗಳ ಹಿಂದೆ ಗ್ರಾಮದಲ್ಲಿ ರಾಜಿ ಪಂಚಾಯಿತಿ ನಡೆದಿತ್ತು. ಮಾಡಿದ ತಪ್ಪಿಗೆ ಯಲ್ಲಪ್ಪನಿಗೆ ರಮೇಶ್ ಎರಡೂವರೆ ಲಕ್ಷ ದಂಡ ಕೊಟ್ಟಿದ್ದ. ಈ ವೇಳೆ ರಮೇಶ್ ಮನೆಗೆ ಬಂದಿದ್ದ ಮಹಿಳೆ ಹೀಗೆ ಬಂದು ಹದಿನೈದೇ ದಿನಕ್ಕೆ ಮತ್ತೆ ಗಂಡನ ಜತೆಗೆ ಸಂಪರ್ಕಕ್ಕೆ ಬಂದು ತವರು ಮನೆ ಸೇರಿದ್ದಳು. 

ರಮೇಶ್ ಬಿಟ್ಟು ಮತ್ತೆ ಗಂಡನ ಜತೆಗೆ ಸೇರಿಕೊಂಡು ಕೊಲೆ ಮಾಡಿಸಿದ್ದಾಳೆ ಎಂದು ಆರೋಪಿಸಲಾಗಿದೆ. ಕೊಲೆಯಾದ ರಮೇಶ್ ಕುಟುಂಬಸ್ಥರು ಆರೋಪಿಸಿದ್ದಾರೆ. ಗಂಡ ಯಲ್ಲಪ್ಪ, ಹೆಂಡತಿ ಸಾವಕ್ಕ ಮತ್ತು ಆರು ಜನರಿಂದ ವಿರುದ್ಧ ಕೊಲೆ ಆರೋಪಿಸಲಾಗಿದೆ. 

ಗೌಂಡಿ ಕೆಲಸ ಮಾಡ್ತಿದ್ದ ರಮೇಶ್‌ನನ್ನು ಗೆಳೆಯನ ಮೂಲಕ ಕರೆಯಿಸಿ ಹತ್ಯೆ ಮಾಡಿದ್ದಾರೆ ಅಂತ ಆರೋಪಿಸಲಾಗಿದೆ. ಈ ಸಂಬಂಧ ಮುರಗೋಡ ಪೊಲೀಸ್ ಠಾಣೆಯಲ್ಲಿ ಆರು ಜನರ ವಿರುದ್ಧ ಪ್ರಕರಣ ದಾಖಲಾಗಿದೆ. 

click me!