* ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆ.ಆರ್.ಸಾಗರದ ಗ್ರಾಮದಲ್ಲಿ ನಡೆದ ಘಟನೆ
* ಸುತ್ತಿಗೆಯಿಂದ ಹೊಡೆದು ಮಹಿಳೆ, ನಾಲ್ವರು ಮಕ್ಕಳ ಹತ್ಯೆ
* ಆರೋಪಿ ಮಹಿಳೆಯನ್ನು ಬಂಧಿಸಿದ ಪೊಲೀಸರು
ಮಂಡ್ಯ(ಫೆ.10): ಅಕ್ರಮ ಸಂಬಂಧಕ್ಕಾಗಿ(Illicit Relationship) ಮಹಿಳೆಯೊಬ್ಬಳು ನಾಲ್ವರು ಮಕ್ಕಳು ಸೇರಿ ಐವರನ್ನು ಕೊಲೆ(Murder) ಮಾಡಿದ್ದಾಳೆ. ಮೈಸೂರಿನ(Mysuru) ಬೆಲವೆತ್ತ ಗ್ರಾಮದ ಲಕ್ಷ್ಮೀ ಮಂಡ್ಯ(Mandya) ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೆ.ಆರ್.ಸಾಗರದ ಗಂಗಾರಾಮ್ ಎಂಬುವನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು. ಗಂಗಾರಾಮ್‌ಗೆ ಸಂಬಂಧಿಯೂ ಆಗಿರುವ ಮಹಿಳೆ, ಫೆ.6ರಂದು ಗಂಗಾರಾಮ್ ವ್ಯಾಪಾರಕ್ಕೆ ಹೋಗಿರುವ ವೇಳೆ ಆತನ ಮನೆಗೆ ಬಂದು ಪತ್ನಿ ಲಕ್ಷ್ಮೀಬಾಯಿ ಜೊತೆ ಪತಿಯನ್ನು ಬಿಟ್ಟುಕೊಡುವಂತೆ ಜಗಳವಾಡಿದ್ದಾಳೆ.
ತಡರಾತ್ರಿವರೆಗೂ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಕೊನೆಗೆ ಲಕ್ಷ್ಮೀಬಾಯಿ ಮತ್ತು ಮಕ್ಕಳು ನಿದ್ರೆಗೆ ಜಾರುವವರೆಗೂ ಕಾದು ಮಧ್ಯರಾತ್ರಿ 1.30ರ ವೇಳೆಗೆ ಸುತ್ತಿಗೆಯಿಂದ ಮೊದಲು ಲಕ್ಷ್ಮೀಬಾಯಿ ತಲೆಗೆ ಹೊಡೆದಿದ್ದಾಳೆ. ನೋವಿನಿಂದ ಕಿರುಚಿದಾಗ ಮಕ್ಕಳು ಎಚ್ಚರಗೊಂಡಿದ್ದಾರೆ. ಮಕ್ಕಳನ್ನು ಕೊಲ್ಲುವ ಉದ್ದೇಶವಿಲ್ಲದಿದ್ದರೂ ತನ್ನನ್ನು ಗುರುತು ಹಿಡಿಯುವರೆಂಬ ಕಾರಣಕ್ಕೆ ಎಲ್ಲರ ತಲೆಗೆ ಹೊಡೆದು ಐದು ಮಂದಿಯನ್ನು ಕೊಂದಿದ್ದಾಳೆ.
Illicit Relationship: ಮೇಸ್ತ್ರಿ ಜತೆ ಲವ್ವಿ-ಡವ್ವಿ, ಪತ್ನಿಯನ್ನು ಕೊಂದು ಪೊಲೀಸ್ ಠಾಣೆಗೆ ಹೋದ ಪತಿ
ಬಳಿಕ ಶವಗಳ ಮೇಲೆ ರಗ್ಗು ಹೊದಿಸಿ, ಮನೆಯ ಬೀರುವನ್ನು ತೆರೆದು ಕಳ್ಳತನಕ್ಕೆ ಬಂದವರು ನಡೆಸಿರುವ ಕೃತ್ಯವೆಂದು ಬಿಂಬಿಸುವಂತೆ ಬಟ್ಟೆಗಳನ್ನೆಲ್ಲಾ ಚೆಲ್ಲಾಪಿಲ್ಲಿ ಮಾಡಿ, ಮನೆಯ ಹೊರಗಡೆಯಿಂದ ಚಿಲಕ ಹಾಕಿಕೊಂಡು ತೆರಳಿದ್ದಳು. ಅಂತ್ಯಕ್ರಿಯೆ(Funeral) ವೇಳೆ ಮತ್ತೆ ಕೆ.ಆರ್.ಸಾಗರಕ್ಕೆ ಬಂದ ಆರೋಪಿ(Accused) ಲಕ್ಷ್ಮೀ ಯಾರಿಗೂ ಅನುಮಾನ ಬರಬಾರದೆಂದು ಶವಗಳ ಮುಂದೆ ಕುಳಿತು ಗೋಳಾಡಿದ್ದಳು. ಪೊಲೀಸರು(Police) ಪ್ರಕರಣ(Case) ಬೇಧಿಸಿ ಆರೋಪಿ ಮಹಿಳೆಯನ್ನು(Woman) ಬಂಧಿಸಿದ್ದಾರೆ(Arrest).
ಹಾಡಹಗಲೇ ಸ್ನೇಹಿತನ ಕತ್ತು ಕೊಯ್ದು ಹತ್ಯೆ
ಬೆಂಗಳೂರು: ಹಾಡಹಗಲೇ ಆಟೋ ಚಾಲಕನೊಬ್ಬ ಚಾಕುವಿನಿಂದ ಸ್ನೇಹಿತನ ಕತ್ತು ಕೊಯ್ದು ಹತ್ಯೆ(Murder) ಮಾಡಿರುವ ಘಟನೆ ಬುಧವಾರ ನಂದಿನಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ವಿದ್ಯಾರಣ್ಯಪುರ ನಿವಾಸಿ ವಿಶ್ವನಾಥ್ ಅಲಿಯಾಸ್ ಕುಳ್ಳ ವಿಶ್ವ(39)ಹತ್ಯೆಯಾದವರು. ಆರೋಪಿ ನಂದಿನಿ ಲೇಔಟ್‌ನ ನರಸಿಂಹಸ್ವಾಮಿ ಬಡಾವಣೆ ನಿವಾಸಿ ರವಿಕುಮಾರ್ ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಶೋಧ ಕಾರ್ಯ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಕೀಲರ ಕಚೇರಿಯಲ್ಲಿ ಅಟೆಂಡರ್ ಆಗಿದ್ದ ವಿಶ್ವನಾಥ್ ಹಾಗೂ ಆರೋಪಿ ಆಟೋ ಚಾಲಕ ರವಿಕುಮಾರ್ ಸ್ನೇಹಿತರು. ವಿಶ್ವನಾಥ್ ಆಗಾಗ ರವಿಕುಮಾರ್ ಮನೆಗೆ ಬಂದು ಹೋಗುತ್ತಿದ್ದ. ಅದರಂತೆ ಬುಧವಾರ ಬೆಳಗ್ಗೆ 9ಗಂಟೆ ಸುಮಾರಿಗೆ ವಿಶ್ವನಾಥ್, ರವಿಕುಮಾರ್ ಮನೆಗೆ ಬಂದಿದ್ದಾನೆ. ಈ ವೇಳೆ ರವಿಕುಮಾರ್ ಪತ್ನಿ ಮನೆಯಲ್ಲಿದ್ದರು. ಮುಂಜಾನೆಯೇ ಆಟೋ ತೆಗೆದುಕೊಂಡು ಹೊರಹೋಗಿದ್ದ ರವಿಕುಮಾರ್ ಬೆಳಗ್ಗೆ 10 ಗಂಟೆಗೆ ಮನೆಗೆ ಬಂದಾಗ ವಿಶ್ವನಾಥ್ ಮನೆಯಲ್ಲಿದ್ದ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ಆರಂಭವಾಗಿ ಗಲಾಟೆ ತಾರಕಕ್ಕೆ ಏರಿದೆ. ಆಗ ಬೆಡ್ ರೂಮ್‌ನಿಂದ ಚಾಕು ತಂದಿರುವ ರವಿಕುಮಾರ್ ಏಕಾಏಕಿ ವಿಶ್ವನಾಥ್‌ನನ್ನು ನೆಲಕ್ಕೆ ಕೆಡವಿ ಕುತ್ತಿಗೆ ಕೊಯ್ದು ಕೂಡಲೇ ಆಟೋ ಸಹಿತ ಪರಾರಿಯಾಗಿದ್ದಾನೆ. ಅಷ್ಟರಲ್ಲಿ ತೀವ್ರ ರಕ್ತಸ್ರಾವವಾಗಿ ವಿಶ್ವನಾಥ್ ಮೃತಪಟ್ಟಿದ್ದಾನೆ.
Illicit Relationship: ಮದುವೆಯಾದ್ರೂ ಮತ್ತೊಬ್ಬಳ ಜತೆ ಲವ್ವಿಡವ್ವಿ: ಪ್ರಶ್ನಿಸಿದ ಹೆಂಡ್ತಿ ಮೇಲೆ ಮನಬಂದಂತೆ ಹಲ್ಲೆ
ರವಿಕುಮಾರ್ ಮನೆಯ ಬಾಗಿಲ ಬಳಿ ವಿಶ್ವನಾಥ್ ಬಿದ್ದಿರುವುದನ್ನು ಕಂಡ ಸ್ಥಳೀಯರು, ನಂದಿನಿ ಲೇಔಟ್ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಸ್ಥಳಕ್ಕೆ ಧಾವಿಸಿದ ಪೊಲೀಸರು, ಮಹಜರ್ ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿ ರವಿಕುಮಾರ್ ಬಂಧನಕ್ಕೆ ಶೋಧ ಕಾರ್ಯ ಮುಂದುವರಿಸಿದ್ದಾರೆ.
ಅನೈತಿಕ ಸಂಬಂಧ ಕಾರಣ?
ಕೊಲೆಯಾದ ವಿಶ್ವನಾಥ್ ಆಗಾಗ ರವಿಕುಮಾರ್ ಮನೆಗೆ ಬರುತ್ತಿದ್ದರಿಂದ ಆತನ ಪತ್ನಿಯ ಪರಿಚಯವಾಗಿ ಇಬ್ಬರ ನಡುವೆ ಸಲುಗೆ ಬೆಳೆದಿತ್ತು. ಹೀಗಾಗಿ ರವಿಕುಮಾರ್ ಮನೆಯಲ್ಲಿ ಇಲ್ಲದ ಸಮಯದಲ್ಲಿ ಬಂದು ಹೋಗುತ್ತಿದ್ದ ಎನ್ನಲಾಗಿದೆ. ಬುಧವಾರ ಮುಂಜಾನೆ ರವಿಕುಮಾರ್ ಆಟೋ ತೆಗೆದುಕೊಂಡು ಬಾಡಿಗೆ ಹೋಗಿದ್ದ ವಿಚಾರ ತಿಳಿದು ವಿಶ್ವನಾಥ್ ಮನೆಗೆ ಬಂದಿದ್ದ. ರವಿಕುಮಾರ್ ಬಾಡಿಗೆ ಮುಗಿಸಿ ಮನೆಗೆ ಬಂದಾಗ ವಿಶ್ವನಾಥ್, ಪತ್ನಿಯ ಜತೆ ಸಲುಗೆಯಿಂದ ಇರುವುದು ಕಂಡು ಬಂದಿದೆ. ಈ ವಿಚಾರಕ್ಕೆ ಜಗಳವಾಗಿ ರವಿಕುಮಾರ್ ಚಾಕುವಿನಿಂದ ವಿಶ್ವನಾಥ್ ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ.