* ಆರೋಪಿಯನ್ನು ಬಂಧಿಸಿದ ಬಿಡದಿ ಠಾಣೆ ಪೊಲೀಸರು
* ಕೊಲೆಯಾದ ರಘುರಾಜನ್- ಆಶಾ
* ಬಿಹಾರ ಮೂಲದ ಜೋಗೀಂದರ್ ಯಾದವ್ ಬಂಧಿತ ಆರೋಪಿ
ರಾಮನಗರ(ಫೆ.10): ಈಗಲ್‌ಟನ್ ರೆಸಾರ್ಟ್‌ನ ವಿಲ್ಲಾದಲ್ಲಿ ಸೋಮವಾರ ನಡೆದಿದ್ದ ವೃದ್ಧ ದಂಪತಿ ಕೊಲೆ(Murder) ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು(Accused) ಬಿಡದಿ ಠಾಣೆ ಪೊಲೀಸರು(Police) ಬಂಧಿಸಿದ್ದಾರೆ. ಕೊಲೆಯಾದ ರಘುರಾಜನ್ ಮತ್ತು ಆಶಾರವರ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ಬಿಹಾರ(Bihar) ಮೂಲದ ಜೋಗೀಂದರ್ ಯಾದವ್(23) ಬಂಧಿತ(Arrest) ಆರೋಪಿ. ಮತ್ತೊಬ್ಬ ಆರೋಪಿ, ಬಂಧಿತನ ಸಂಬಂಧಿ ರವೀಂದ್ರ ಯಾದವ್ ಪರಾರಿಯಾಗಿದ್ದು, ಬಂಧನಕ್ಕೆ ಬಲೆ ಬೀಸಿದ್ದಾರೆ. ಬಂಧಿತನಿಂದ 56,000 ನಗದು ವಶ ಪಡಿಸಿಕೊಂಡಿದ್ದಾರೆ.
ಇಂಡಿಯನ್ ಏರ್‌ಫೋರ್ಸ್‌ನಲ್ಲಿ ವಿಂಗ್ ಕಮಾಂಡರ್ ಆಗಿದ್ದ ರಘುರಾಜನ್ ಐದು ವರ್ಷಗಳ ಹಿಂದೆ ನಿವೃತ್ತಿಯಾಗಿದ್ದು, ಪತ್ನಿ ಆಶಾ ಜತೆ ಈಗಲ್‌ಟನ್ ರೆಸಾರ್ಟ್‌ನ ವಿಲ್ಲಾದಲ್ಲಿ ವಾಸವಿದ್ದರು. ಈ ದಂಪತಿ ಪುತ್ರ ಮತ್ತು ಪುತ್ರಿ ದೆಹಲಿಯಲ್ಲಿ ಉದ್ಯೋಗದಲ್ಲಿದ್ದ ಕಾರಣ ಇವರಿಬ್ಬರೇ ಮನೆಯಲ್ಲಿದ್ದರು. ಮನೆಗೆಲಸ ಹಾಗೂ ನಾಯಿ ನೋಡಿಕೊಳ್ಳಲು ಬಿಹಾರ ಮೂಲದ ಜೋಗಿಂದರ್ ಯಾದವ್‌ನನ್ನು ನಿಯೋಜಿಸಿಕೊಂಡಿದ್ದರು. ಹಣದಾಸೆಗಾಗಿ ವೃದ್ಧ ದಂಪತಿ ಕೊಲೆ ಮಾಡಿರುವ ಆರೋಪಿ, ರಘುರಾಜನ್ರವರ ಮೊಬೈಲ್‌ನಿಂದ ಹಣ ವರ್ಗಾವಣೆಗೆ ಪ್ರಯತ್ನಿಸಿದ್ದಾನೆ. ಸೋಮವಾರ ರಾತ್ರಿ ಮತ್ತು ಮಂಗಳವಾರ ಬೆಳಗ್ಗೆ ದಂಪತಿ ಕರೆ ಸ್ವೀಕರಿಸದಿದ್ದಾಗ ಪುತ್ರ ಅನುಮಾನಗೊಂಡು, ರೆಸಾರ್ಟ್‌ನ ಸೆಕ್ಯೂರಿಟಿ ಗಾರ್ಡ್‌ನನ್ನು ಸಂಪರ್ಕಿಸಿ ಮನೆಗೆ ಹೋಗಿ ಬರುವಂತೆ ತಿಳಿಸಿದಾಗ ಪ್ರಕರಣ ಬೆಳಕಿಗೆ ಬಂದಿತ್ತು.
Illicit Relationship : ಯೋಗ ಕ್ಲಾಸ್‌ನಲ್ಲಿ ಲವ್ವಿ-ಡವ್ವಿ, ಪತಿಯನ್ನೇ ಸುಪಾರಿ ಕೊಟ್ಟು ಮುಗಿಸಿದ ಹಾಸನದ ಹಂತಕಿ!
ಮನೆ ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳ ಸೆರೆ
ಕೊಪ್ಪಳ(Koppal): ನಗರದಲ್ಲಿ ಫೆ. 2ರಂದು ಐದು ಮನೆಗಳ ಕಳ್ಳತನ(Theft) ಮಾಡಿದ್ದ ಇಬ್ಬರು ಕಳ್ಳರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ವಿಜಯನಗರ(Vijayanagara) ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕುಪ್ಪನಕೇರಿಯ ರಾಜಾ(ಪೋತರಾಜಾ)(ಸದ್ದಾಂ ಹುಸೇನ್), ಬಳ್ಳಾರಿ ಜಿಲ್ಲೆಯ ಕಂಪ್ಲಿಯ 22ನೇ ವಾರ್ಡ್‌ನ ಇರ್ಫಾನ ಅಲಿ(ಕಡ್ಡಿ) ಎಂಬವರನ್ನು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ .8,70,000 ಬೆಲೆ ಬಾಳುವ 180 ಗ್ರಾಂ ಬಂಗಾರದ ಆಭರಣ ಹಾಗೂ .60000 ಜಪ್ತಿ ಮಾಡಿದ್ದಾರೆ.
ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾದ ನಗರ ಠಾಣೆ ಪಿಎಸ್‌ಐ ಮಾರುತಿ ಗುಳ್ಳಾರಿ ಹಾಗೂ ಪೊಲೀಸ್ ಸಿಬ್ಬಂದಿ ಕಾರ್ಯಕ್ಕೆ ಜಿಲ್ಲಾ ಎಸ್ಪಿ ಅರುಣಾಂಗ್ಷು ಗಿರಿ, ಡಿವೈಎಸ್ಪಿ ಗೀತಾ ಬೇನಾಳ ಶ್ಲಾಘಿಸಿದ್ದಾರೆ.
ಹಾಡಹಗಲೇ ಮೊಬೈಲ್ ಕಳವು: ಇಬ್ಬರ ಬಂಧನ
ಬೆಂಗಳೂರು(Bengaluru): ಹಾಡಹಗಲೇ ಸಾರ್ವಜನಿಕರ ಮೊಬೈಲ್ ಹಾಗೂ ದ್ವಿಚಕ್ರ ವಾಹನ ಕಳವು(Two-Wheeler Theft) ಮಾಡುತ್ತಿದ್ದ ಇಬ್ಬರು ಕುಖ್ಯಾತ ಕಳ್ಳರನ್ನು ವಿಶ್ವೇಶ್ವರಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕಾರು ನಿಲ್ಲಿಸಬೇಡ ಎಂದಿದ್ದೇ ತಪ್ಪಾಯ್ತು... ಮನೆಗೆ ನುಗ್ಗಿ ರಾಡ್ ನಿಂದ ಹೊಡೆದು ಕೊಂದ ನೆರೆಮನೆಯವರು!
ವಾಲ್ಮೀಕಿನಗರದ ಮಹಮದ್ ಸಲ್ಮಾನ್(30) ಮತ್ತು ಕನಕನಗರದ ಹಫೀಜ್ ಶರೀಫ್(38) ಬಂಧಿತರು. ಆರೋಪಿಗಳು ವಿಚಾರಣೆ ವೇಳೆ ನೀಡಿದ ಮಾಹಿತಿ ಮೇರೆಗೆ ಐದು ಲಕ್ಷ ರು. ಮೌಲ್ಯದ ವಿವಿಧ ಕಂಪನಿಗಳ 25 ಮೊಬೈಲ್ ಫೋನ್‌ಗಳು ಹಾಗೂ ಒಂದು ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಫೆ.2ರಂದು ವ್ಯಕ್ತಿಯೊಬ್ಬರು ಕೆಲಸ ಮುಗಿಸಿ ತಿಂಡಿ ತಿನ್ನಲು ಸಂಜೆ 5 ಗಂಟೆ ಸುಮಾರಿಗೆ ಕೈಯಲ್ಲಿ ಮೊಬೈಲ್ ಫೋನ್ ಹಿಡಿದುಕೊಂಡು ವಿಶ್ವೇಶ್ವರಪುರಂನ ಫುಡ್ ಸ್ಟ್ರೀಟ್‌ನತ್ತ ಹೋಗುತ್ತಿದ್ದರು. ಈ ವೇಳೆ ಸಜ್ಜನ ರಾವ್ ವೃತ್ತದ ಕಡೆಯಿಂದ ದ್ವಿಚಕ್ರ ವಾಹನದಲ್ಲಿ ಬಂದ ಆರೋಪಿಗಳು ಏಕಾಏಕಿ ಆ ವ್ಯಕ್ತಿಯ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದರು. ಬಳಿಕ ಆ ವ್ಯಕ್ತಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಗಸ್ತು ಕರ್ತವ್ಯದಲ್ಲಿದ್ದ ವಿಶ್ವೇಶ್ವರಪುರಂ ಠಾಣೆಯ ಸಿಬ್ಬಂದಿ ನವೀನ್ ಕುಮಾರ್ ಮತ್ತು ಲೋಕೇಶ್ ಆರೋಪಿಗಳನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.