ತನ್ನ ಗೆಳೆಯನೊಂದಿಗೆ ಸೇರಿ ಮಹಿಳೆಯೊಬ್ಬರ ಮೇಲೆ ಖಾರದ ಪುಡಿ ಎರಚಿ ಚಿನ್ನದ ಸರ ಕಸಿಯಲು ಯತ್ನಿಸಿದ ಘಟನೆ ಬೆಂಗಳೂರಿನ
ನಂದಿನಿ ಲೇಔಟ್‌ನಲ್ಲಿ ನಡೆದಿದೆ.
ಬೆಂಗಳೂರು: ನಗರದಲ್ಲಿ ಕಾಲೇಜು ಓದುತ್ತಿದ್ದ ಹುಡುಗಿಯೊಬ್ಬಳು ತನ್ನ ಗೆಳೆಯನೊಂದಿಗೆ ಸೇರಿ ಖತರ್ನಾಕ್ ಕೆಲಸ ಮಾಡಿದ್ದು ಈಗ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಬ್ಯಾಂಕ್ ಲೋನ್ ತೀರಿಸಲಿಕ್ಕೆ ಗೆಳೆಯನ ಜೊತೆ ರಾಬರಿಗಿಳಿದಿದ್ದ ಯುವತಿ ಮೇ 28 ರ ಬೆಳಗ್ಗೆ ನಂದಿನಿ ಲೇಔಟ್ ಪಾರ್ಕ್ ಬಳಿ ವಾಕಿಂಗ್ ಮಾಡ್ತಿದ್ದ ಗಾಯತ್ರಿ ಎಂಬಾಕೆಯ ಮೇಲೆ ಖಾರದ ಪುಡಿ (Chilli Powder) ಎರಚಿ ಚಿನ್ನದ ಸರ ಕಸಿಯಲು ಯತ್ನಿಸಿದ್ದಾಳೆ. ಈ ವೇಳೆ ಮಹಿಳೆ ಗಾಯತ್ರಿ ಜೋರಾಗಿ ಕೂಗಿ ಕೊಂಡಿದ್ದು, ಈ ವೇಳೆ ಮಹಿಳೆಯ ಕಿರುಚಾಟ ಕೇಳಿ ಸ್ಥಳೀಯರೆಲ್ಲಾ ಅಲ್ಲಿಗೆ ಓಡಿ ಬಂದಿದ್ದಾರೆ. ಈ ವೇಳೆ ಬೈಕ್ ಏರಿ ಈ ಖತರ್ನಾಕ್ ಜೋಡಿ ಪರಾರಿಯಾಗಿದ್ದಾರೆ.
ಈ ಇಬ್ಬರು ಯುವಕ ಹಾಗೂ ಯುವತಿ ನಾಗರದ ಖಾಸಗಿ ಕಾಲೇಜಿನಲ್ಲಿ(Private college) ವ್ಯಾಸಾಂಗ ಮಾಡುತ್ತಿದ್ದಾರೆ. ಮೋಜು ಮಾಡುವ ಸಲುವಾಗಿ ಯುವಕ ಆನ್‌ಲೈನ್‌ನಲ್ಲಿ ಇನ್ಸ್ಟಾಂಟ್ ಲೋನ್‌ಗೆ (Instunt Loan) ಅರ್ಜಿ ಸಲ್ಲಿಸಿ 15 ಸಾವಿರ ಸಾಲ ಪಡೆದಿದ್ದಾನೆ. ಪಡೆದ ಸಾಲವನ್ನು ಇಬ್ಬರು ಚೆನ್ನಾಗಿ ಬಳಸಿಕೊಂಡು ಮೋಜು ಮಾಡಿದ್ದಾರೆ. ಆದರೆ ನಂತರ ನಂತರದಲ್ಲಿ ಲೋನ್‌ಗೆ ಹಣ ಕಟ್ಟಲು ಆಗದಿದ್ದಾಗ ಈ ರೀತಿ ಅಡ್ಡದಾರಿ ಹಿಡಿದಿದ್ದಾರೆ.
ಬೆಂಗಳೂರು: ಬೇಕಾಬಿಟ್ಟಿ ಓಡಾಡ್ತಿದ್ದವರ ಬಂಧಿಸಿದಾಗ ಬಯಲಾದ ಬೈಕ್ ರಾಬರಿ ಸ್ಟೋರಿ
ಮೇ 28 ರ ಬೆಳಗ್ಗೆ ನಂದಿನಿ ಲೇಔಟ್ ಪಾರ್ಕ್ (Nandini Layout Park) ಬಳಿ ವಾಕಿಂಗ್ ಮಾಡ್ತಿದ್ದ ಗಾಯತ್ರಿ Gayatri) ಎಂಬಾಕೆಯ ಮೇಲೆ ಖಾರದ ಪುಡಿ ಎರಚಿ ಚಿನ್ನದ ಸರ ಕಸಿಯಲು ಯತ್ನಿಸಿದ್ದಾರೆ. ಆದರೆ ಈ ದರೋಡೆ ಪ್ರಕರಣ ವಿಫಲವಾಗಿದ್ದು, ಈಗ ಈ ಖತರ್ನಾಕ್ ಯುವ ಜೋಡಿ ಕಂಬಿ ಹಿಂದೆ ಕೂರುವ ಹಾಗಾಗಿದೆ. ಒಟ್ಟಿನಲ್ಲಿ ಓದುವ ಸಮಯದಲ್ಲಿ ಇಲ್ಲದ ಶೋಕಿ ಮಾಡಲು ಹೋಗಿ ಜೋಡಿ ಕಂಬಿ ಎಣಿಸುವಂತಾಗಿದೆ.
ಇತ್ತೀಚಿನ ದಿನಗಳಲ್ಲಿ ಕಳ್ಳತನಗಳನ್ನು ಮಾಡಲು ಯಾವುದೆಲ್ಲ ಮಾರ್ಗಗಳು ಸಾಧ್ಯವೋ ಅವೆಲ್ಲವನ್ನು ಕಳ್ಳರು ಅನುಸರಿಸುತ್ತಿದ್ದಾರೆ, ಬ್ಯಾಂಕ್ ಗಳ ಬಳಿ ಬರುವ ವಾಹನಗಳನ್ನ ಪಾಲೋ ಮಾಡುವುದು, ಗ್ರಾಹಕರು ಬಳಸುವ ವಸ್ತುಗಳ ಮೇಲೆ ನಿಗಾ ಇದ್ದೇ ಇರುತ್ತೇ, ಇದೀಗ ಕಾಲೇಜುಗಳ ಬಳಿ ಬರುವ ವಾಹನಗಳ ಮೇಲೂ ಕಳ್ಳರು ಗಮನ ಹರಿಸುತ್ತಿದ್ದಾರೆ. ಅದೇ ರೀತಿ ಕೆಲ ದಿನಗಳ ಹಿಂದೆ ಬೆಂಗಳೂರು (Bengaluru) ಹೊರವಲಯದ ಆನೇಕಲ್ (Anekal) ತಾಲೂಕಿನ ಚಂದಾಪುರ (Chandapura) ವೃತ್ತದಲ್ಲಿರುವ ಸ್ವಾಮಿ ವಿವೇಕಾನಂದ ಕಾಲೇಜಿನ ಬಳಿ ಕಾರಿನಲ್ಲಿದ್ದ ಐದು ಲಕ್ಷ ನಗದನ್ನು ಖದೀಮರು ಎಗರಿಸಿದ್ದಾರೆ.
ಬೆಂಗಳೂರಿನಲ್ಲಿ ಹಾಡಹಗಲೇ ಜ್ಯುವೆಲ್ಲರಿ ಶಾಪ್ ದರೋಡೆ, ಸಿಸಿಟಿವಿಯಲ್ಲಿ ದೃಶ್ಯ ಸೆರೆ..!
ಆನೇಕಲ್ ಪಟ್ಟಣಕ್ಕೆ ಸಮೀಪದ ದೊಡ್ಡಹಾಗಡೆ ನಿವಾಸಿ ಮಂಜುನಾಥ್ ಎಂಬುವವರು ಮಗಳನ್ನು ದಾಖಲಾತಿ ಮಾಡಲು ಇಲ್ಲಿಗೆ ಆಗಮಿಸಿದ್ದರು. ಇದೇ ಸಂದರ್ಭದಲ್ಲಿ ಬ್ಯಾಂಕ್ ಗೆ ಪಾವತಿಸಲು ಐದು ಲಕ್ಷ ರೂಗಳನ್ನು ಬ್ಯಾಗ್ ನಲ್ಲಿರಿಸಿ ಕಾರಿನ ಹಿಂಬದಿ ಸೀಟ್ ಮೇಲಿಟ್ಟಿದ್ದರು. ಆದರೆ ಮಂಜುನಾಥ್ ಕಾರಿನಿಂದ ಹೋಗಿ ಕಾಲೇಜಿನಲ್ಲಿ ದಾಖಲಾತಿ ಬಗ್ಗೆ ವಿವರಣೆಗಳನ್ನ ಪಡೆದು ಬರುವಷ್ಟರಲ್ಲಿ ಕಾರಿನ ಗ್ಲಾಸ್ ಒಡೆದು ಹಣವಿದ್ದ ಬ್ಯಾಗ್ ಅನ್ನು ಕದ್ದೊಯ್ದಿದ್ದರು ಇದರಿಂದ ಮಾಲೀಕ ಶಾಕ್ ಆಗಿದ್ದರು.
ಕಳೆದ ಆರು ತಿಂಗಳುಗಳಲ್ಲಿ ಈ ಪ್ರದೇಶದಲ್ಲಿ ನಡೆದ ಮೂರನೇ ಘಟನೆ ಇದಾಗಿದೆ. ಸಮೀಪವಿರುವ ಸೂರ್ಯಸಿಟಿ ಪೊಲೀಸರು ಪ್ರಕರಣಗಳನ್ನ ಗಂಭೀರವಾಗಿ ಪರಿಗಣಿಸದೇ ಇರುವುದೇ ಇಂತಹ ಘಟನೆಗಳು ಮರುಕಳಿಸಲು ಕಾರಣವಾಗಿದೆ ಎಂಬ ಆರೋಪ ಕೇಳಿ ಬಂದಿದೆ.