Haveri: ಚಿನ್ನಿದಾಂಡು ಆಟದ ವಿಚಾರವಾಗಿ ನಡೆದ ಜಗಳ‌ ಕೊಲೆಯಲ್ಲಿ ಅಂತ್ಯ

By Girish Goudar  |  First Published Jun 2, 2022, 10:41 AM IST

*   ಹಾವೇರಿ ಜಿಲ್ಲೆಯ ಜಿಲ್ಲೆಯ ಶಿಗ್ಗಾವಿ ಪಟ್ಟಣದಲ್ಲಿ ನಡೆದ ಘಟನೆ
*   ಮನಬಂದಂತೆ ಉಮೇಶ್ ಮೇಲೆ ಹಲ್ಲೆ ನಡೆಸಿದ್ದ ಆರೋಪಿಗಳು 
*   ಆರೋಪಿಗಳಿಗಾಗಿ ಹುಡುಕಾಟ ಆರಂಭಿಸಿದ ಪೊಲೀಸರು 
 


ಹಾವೇರಿ(ಜೂ.02): ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಮೇಲೆ ಹಲ್ಲೆಯಾಗಿ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ಜಿಲ್ಲೆಯ ಶಿಗ್ಗಾವಿ ಪಟ್ಟಣದ ಎಪಿಎಂಸಿ ಆವರಣದಲ್ಲಿ ಇಂದು(ಗುರುವಾರ) ನಡೆದಿದೆ. 

ಚಿನ್ನಿದಾಂಡು ಆಟದ ವಿಚಾರವಾಗಿ ನಡೆದ ಜಗಳ ನಡೆದಿದೆ. ಮಾತಿಗೆ ಮಾತು ಬೆಳೆದು ಕೊನೆಗೆ ವ್ಯಕ್ತಿ ಮೇಲೆ ಹಲ್ಲೆ ಮಾಡಿ ಚಿನ್ನಿದಾಂಡು ಆಡ್ತಿದ್ದ ಯುವಕರು ಸ್ಥಳದಿಂದ ಪರಾರಿಯಾಗಿದ್ದಾರೆ. ಆರೋಪಿಗಳು ಶಿಗ್ಗಾವಿ ತಾಲೂಕು ಜಕ್ಕಿನ ಕಟ್ಟಿ ಗ್ರಾಮದವರು ಎಂಬ ಪೊಲೀಸರು ಮಾಹಿತಿ ನೀಡಿದ್ದಾರೆ.

Tap to resize

Latest Videos

undefined

ಬಾಯಿಗೆ ಬಟ್ಟೆ ತುರುಕಿ ಅಂಗವಿಕಲೆ ಮೇಲೆ ಅತ್ಯಾಚಾರ

ತೀವ್ರ ಹಲ್ಲೆಗೊಳಗಾದ ಪಟ್ಟಣದ ಉಮೇಶ ಶೇಖಯ್ಯ ಶಿವಯೋಗಿ ಮಠ (33) ಚಿಕಿತ್ಸೆಗಾಗಿ ಹುಬ್ಬಳ್ಳಿ ಕೀಮ್ಸ್‌ಗೆ ಹೋಗುವಾಗ ದಾರಿ ಮಧ್ಯ ಮೃತಪಟ್ಟಿದ್ದಾರೆ. ಮೃತ ಉಮೇಶ್ ಗ್ಯಾರೇಜ್ ನಡೆಸುತ್ತಿದ್ದು, ಗ್ಯಾರೇಜ್ ಮುಂದೆ ಚಿನ್ನಿ ದಾಂಡು ಆಡ್ತಿದ್ದ ಯುವಕರುನ್ನು ಇಲ್ಯಾಕೆ ಆಡ್ತಾ ಇದ್ದೀರಿ? ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಕುಪಿತಗೊಂಡ ಆರೋಪಿಗಳು ಮನಬಂದಂತೆ ಉಮೇಶ್ ಮೇಲೆ ಹಲ್ಲೆ ನಡೆಸಿದ್ದಾರೆ. 
ಈ ವೇಳೆ ಉಮೇಶ್ ಬಿದ್ದು ಒದ್ದಾಡಿದ್ದು, ಸ್ಥಳೀಯರು ಅಂಬುಲೆನ್ಸ್ ಮೂಲಕ ಹುಬ್ಬಳ್ಳಿಗೆ ಸಾಗಿಸೋಕೆ ಪ್ರಯತ್ನ ಮಾಡಿದರೂ ಮಾರ್ಗ ಮಧ್ಯದಲ್ಲೇ ಮೃತ ಪಟ್ಟಿದ್ದಾರೆ. ಮೃತ ಉಮೇಶ್ ಅವರಿಗೆ 2 ವರ್ಷದ ಪುಟ್ಟ ಮಗು ಇದ್ದು, ಕುಟುಂಬಸ್ಥರ ರೋಧನ ಮುಗಿಲು ಮುಟ್ಟಿತ್ತು.

ಘಟನೆ ಕುರಿತು ದೂರು ದಾಖಲಿಸಿಕೊಂಡ ಪೊಲೀಸರು ಹಲ್ಲೆಗೈದ ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.
 

click me!