Hassan: ಕಾರು ಓವರ್ ಟೇಕ್ ಮಾಡಿದ್ದಕ್ಕೆ ಹಲ್ಲೆ: ನ್ಯಾಯಕ್ಕೆ ಮಹಿಳೆ ಕಣ್ಣೀರ ಮನವಿ

By Suvarna News  |  First Published Mar 31, 2022, 1:40 PM IST

ಕಾರು ಓವರ್ ಟೇಕ್ ಮಾಡಿದ್ದಕ್ಕೆ ಅಡ್ಡಗಟ್ಟಿ ಹಲ್ಲೆ ಮಾಡಿದ್ದಾರೆಂದು ಮಹಿಳೆಯೊಬ್ಬರು ನೋವು ತೋಡಿಕೊಂಡು ನ್ಯಾಯ ಕೇಳಿದ್ದಾರೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಬಿಸ್ಲೆ ಬಳಿ ಕಾರು ಅಡ್ಡಗಟ್ಟಿ ಹಲ್ಲೆ ಮಾಡಿದ್ದಾರೆಂದು ದೂರಿದ್ದಾರೆ. 


ವರದಿ: ಕೆ.ಎಂ.ಹರೀಶ್, ಏಷ್ಯಾನೆಟ್ ಸುವರ್ಣ ನ್ಯೂಸ್.

ಹಾಸನ (ಮಾ.31): ಕಾರು ಓವರ್ ಟೇಕ್ ಮಾಡಿದ್ದಕ್ಕೆ ಅಡ್ಡಗಟ್ಟಿ ಹಲ್ಲೆ (Attack) ಮಾಡಿದ್ದಾರೆಂದು ಮಹಿಳೆಯೊಬ್ಬರು (Women) ನೋವು ತೋಡಿಕೊಂಡು ನ್ಯಾಯ ಕೇಳಿದ್ದಾರೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಬಿಸ್ಲೆ ಬಳಿ ಕಾರು ಅಡ್ಡಗಟ್ಟಿ ಹಲ್ಲೆ ಮಾಡಿದ್ದಾರೆಂದು ದೂರಿದ್ದಾರೆ. ಘಟನೆ ಬಗ್ಗೆ ಮಾಹಿತಿ ನೀಡಿದರೂ 112 ನೆರವಿಗೆ ಬರಲಿಲ್ಲ ಎಂದು ಬೆಂಗಳೂರು ಮೂಲದ ಮಹಿಳೆ ಸ್ಕಂದನಾ ಅಳಲು ತೋಡಿಕೊಂಡಿದ್ದಾರೆ. ಮಾರ್ಚ್ 27ರಂದು ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಬಿಸಿಲೆ‌ ಘಾಟ್ ಬಳಿ ಘಟನೆ ನಡೆದಿದ್ದು, ಘಟನೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ (Social Media) ಮಾಹಿತಿಯನ್ನು ಬೆಂಗಳೂರು ಜೆ.ಪಿ ನಗರದ ಮಹಿಳೆ ಸ್ಕಂದನಾ ಹಂಚಿಕೊಂಡಿದ್ದಾರೆ.

Tap to resize

Latest Videos

ಮಹಿಳೆಗೆ ಮಕ್ಕಳಿದ್ದರೂ ಕುಡಿದ ಅಮಲಿನಲ್ಲಿದ್ದ ಪುಂಡರು ದುರ್ವರ್ತನೆ ತೋರಿ, ತಮ್ಮ ತಂದೆ ಹಾಗೂ ಪತಿ ಮೇಲೆ ಹಲ್ಲೆ ಮಾಡಿದರು. ಕೂಡಲೇ 100ಗೆ ಫೋನ್ ಮಾಡಿದರೆ ಅವರು 112ಗೆ ಕರೆ ಮಾಡೋಕೆ ಹೇಳಿದರು. ಎಲ್ಲಾ ಮಾಹಿತಿ ಪಡೆದು ಬಳಿಕ ಸಮೀಪದ ಠಾಣೆಗೆ ಕರೆ ಮಾಡಿ ಎಂದು ಫೋನ್ ನಂಬರ್ ಕೊಟ್ಟರು, ಆ ನಂಬರ್‌ಗೆ ಫೋನ್ ಮಾಡಿದರೆ ಅವರು ತಮ್ಮ ವ್ಯಾಪ್ತಿಗೆ ಬರಲ್ಲ ಎಂದು ಮತ್ತೊಂದು ನಂಬರ್ ಕೊಟ್ಟರು, ಎರಡು ಗಂಟೆಯಾದರೂ ಪೊಲೀಸ್ ನಮ್ಮ ನೆರವಿಗೆ ಬರಲಿಲ್ಲ ಎಂದು ಮಹಿಳೆ ಕಣ್ಣೀರಿಟ್ಟಿದ್ದಾರೆ. ಅಕಸ್ಮಾತ್ ಯಾರಾದ್ರು ಕೊಲೆ ಮಾಡಿದ್ರು ಕೇಳೋರಿಲ್ಲವೇ ಎಂದು ಕಿಡಿಕಾರಿದ್ದಾರೆ. 

ಕಾದಾಡಿ ಪ್ರಾಣ ಉಳಿಸಿಕೊಂಡ ಸಾಕು ನಾಯಿ, ಬೇಟೆಯಾಡಲು ಬಂದ ಚಿರತೆ ಬರಿಗೈಲಿ ವಾಪಸ್

ನನ್ನ ಎರಡುವರೆ ವರ್ಷದ ಮಗು ಜೊತೆ ನಾವು ಸಾಕಷ್ಟು ಕಷ್ಟಪಟ್ಟೆವು, ಸಮಸ್ಯೆ ಇದ್ದಾಗ ಸಹಾಯ ಆಗದ ನಿಮ್ಮ ಸಹಾಯವಾಣಿ ಏಕೆ ಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೊನೆಗೆ ಯಸಳೂರು ಪೊಲೀಸರು ಸ್ಪಂದಿಸಿದ್ರು, ನಮಗೆ ಊಟ  ಕೊಡಿಸಿ ದೂರು ಸ್ಚೀಕರಿಸಿದರು. ಮಾನವೀಯತೆಯಿಂದ ನಮಗೆ ನೆರವಾದ್ರು ಎಂದು ಸಹಾಯ ಮಾಡಿದವರ ಬಗ್ಗೆ ಪ್ರಸಂಶೆ ವ್ಯಕ್ತಪಡಿಸಿದ್ದಾರೆ. ಆದರೆ ತುರ್ತು ಸ್ಪಂದನೆ ಇಲ್ಲದ ಮೇಲೆ 100, 112 ವ್ಯವಸ್ಥೆ ಯಾಕೆ ಎಂದು ಕಿಡಿಕಾರಿದ್ದಾರೆ. ಯಸಳೂರು ಪೊಲೀಸ್ ಠಾಣೆ ಯಲ್ಲಿ ಅಪರಿಚಿತರಿಂದ ಹಲ್ಲೆ ಎಂದು ದೂರು ದಾಖಲಿಸಿದ್ದಾರೆ. ಕುಟುಂಬ ಸಮೇತ ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳಿ ವಾಪಸ್ಸಾಗುತ್ತಿದ್ದಾಗ ಪುಂಡರು ಕಾರು ಅಡ್ಡಗಟ್ಟಿ ಹಲ್ಲೆ ಮಾಡಿದರೆಂದು ಬೆಂಗಳೂರು ಮೂಲದ ಸ್ಕಂದನಾ ನೋವು ತೋಡಿಕೊಂಡಿದ್ದಾರೆ.

ಮಾನವೀಯತೆ ಮೆರೆದ ಹೆಚ್.ಡಿ.ರೇವಣ್ಣ: ಅಪಘಾತಕ್ಕೊಳಗಾಗಿ ರಸ್ತೆ ಮಧ್ಯೆ ನರಳಾಡುತ್ತಿದ್ದವರಿಗೆ ನೆರವಾಗುವ ಮೂಲಕ ಮಾಜಿ ಸಚಿವ ಹೆಚ್ ಡಿ ರೇವಣ್ಣ (HD Revanna) ಮಾನವೀಯತೆ ಮೆರೆದಿದ್ದಾರೆ.  ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಸಂಕೇನಹಳ್ಳಿ ಬಳಿ ಎರಡು ಕಾರುಗಳ ನಡುವೆ ಅಪಘಾತ ಸಂಭವಿಸಿತ್ತು. ಅಪಘಾತದಲ್ಲಿ ಮೂವರು ಮಹಿಳೆಯರು ಗಾಯಗೊಂಡಿದ್ದರು. ಬೇಲೂರು ಕಡೆಗೆ ರೇವಣ್ಣ ಕಾರಿನಲ್ಲಿ ಹೋಗೋ ವೇಳೆ ಸಂಕೇನಹಳ್ಳಿ ಬಳಿ ನಡೆದಿದ್ದ ಅಪಘಾತ (Accident) ಗಮನಿಸಿ ಕಾರು‌ ನಿಲ್ಲಿಸಿ ಗಾಯಾಳುಗಳಿಗೆ ನೆರವು ನೀಡಿದರು. 

HD Devegowda: ನನ್ನನ್ನು ಪ್ರಧಾನಿಯಾಗಿಸಿದ ಜಿಲ್ಲೆಯನ್ನು ಎಂದಿಗೂ ಮರೆಯುವುದಿಲ್ಲ

ಅಂಬ್ಯುಲೆನ್ಸ್ ಗೆ (Ambulance) ಕರೆ ಮಾಡಿಸಿ, ಅಂಬ್ಯುಲೆನ್ಸ್ ಬರುವವರೆಗೂ ಘಟನಾ ಸ್ಥಳದಲ್ಲೆ ಇದ್ದು, ಗಾಯಾಳುಗಳಿಗೆ ಧೈರ್ಯ ತುಂಬಿದ್ದರು. ಅಂಬ್ಯುಲೆನ್ಸ್ ನಲ್ಲಿ ಗಾಯಾಳುಗಳನ್ನು ಹಾಸನ ಹಿಮ್ಸ್ ಆಸ್ಪತ್ರೆ ಗೆ ಕಳುಹಿಸಿ, ಹಿಮ್ಸ್ ನಿರ್ದೇಶಕರಿಗೆ ಕರೆ ಮಾಡಿ ಗಾಯಾಳುಗಳಿಗೆ ಅಗತ್ಯ ಚಿಕಿತ್ಸೆ ಕೊಡಿಸುವಂತೆ ಸೂಚಿಸಿದ್ದಾರೆ. ಮಳೆಯ ನಡುವೆ ತಮ್ಮ ಕಾರು ನಿಲ್ಲಿಸಿ, ಅಪಘಾತದಲ್ಲಿ ಗಾಯಗೊಂಡವರಿಗೆ  ಧೈರ್ಯ ಹೇಳಿ ಚಿಕಿತ್ಸೆ ಗೆ ಕಳಿಸಿದ ಬಳಿಕ ಸ್ಥಳದಿಂದ ಹೆಚ್ ಡಿ ರೇವಣ್ಣ ತೆರಳಿದ್ದಾರೆ. ಬೇಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪಘಾತ ಸಂಭವಿಸಿತ್ತು.ಹೆಚ್. ಡಿ ರೇವಣ್ಣ ಜೊತೆ ಹೆಚ್. ಡಿ. ಸಿ. ಸಿ ಬ್ಯಾಂಕ್ ಅಧ್ಯಕ್ಷ ನಾಗರಾಜ್, ಜೆಡಿಎಸ್ ಮುಖಂಡ ದಿಲೀಪ್ ಹಗರೆ, ಈಶ್ವರ್ ಜೊತೆ ಇದ್ದರು.

click me!