Hubballi: ಹೆಂಡ್ತಿ ಶೀಲ ಶಂಕಿಸಿ ಕೊಲೆಗೈದ ಗಂಡನಿಗೆ ಜೀವಾವಧಿ ಶಿಕ್ಷೆ

By Girish Goudar  |  First Published Mar 31, 2022, 10:23 AM IST

*  ಹುಬ್ಬಳ್ಳಿಯ ಕೋರ್ಟ್‌ನಿಂದ ಮಹತ್ವದ ಅದೇಶ
*  2018ರ ಮಾರ್ಚ್ 23ರಂದು ನಡೆದಿದ್ದ ಕೊಲೆ
*  ಸರ್ಕಾರದ ಪರ ವಾದ ಮಂಡಿಸಿದ್ದ ಗಿರಿಜಾ ತಮ್ಮಿನಾಳ 
 


ವರದಿ: ಗುರುರಾಜ ಹೂಗಾರ

ಹುಬ್ಬಳ್ಳಿ(ಮಾ.31):  ಶೀಲ ಶಂಕಿಸಿ ಪತ್ನಿಯನ್ನು ಹತ್ಯೆಗೈದಿದ್ದ(Murder) ಅಪರಾಧಿ ಪತಿಗೆ ಹುಬ್ಬಳ್ಳಿ ಕೋರ್ಟ್(Hubballi Court) ಜೀವಾವಧಿ ಶಿಕ್ಷೆ ವಿಧಿಸಿ ಮಹತ್ವದ ಅದೇಶ ಹೊರಡಿಸಿದೆ‌. ಹುಬ್ಬಳ್ಳಿಯ, ಗದಗ ರಸ್ತೆಯಲ್ಲಿರುವ ಚಾಲುಕ್ಯ ನಗರದ ನಿವಾಸಿ ಕಿಶೋರ ಬೊಮ್ಮಾಜಿ ಜೀವಾವಧಿ ಶಿಕ್ಷೆಗೊಳಗಾದ(Sentenced to life Imprisonment) ಅಪರಾಧಿ. ಹುಬ್ಬಳ್ಳಿಯ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಅಪರಾಧಿಗೆ ಜೀವಾವಧಿ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 50,000 ರೂಪಾಯಿ ದಂಡ ವಿಧಿಸಿ ತೀರ್ಪು(Verdict) ನೀಡಿದೆ.

Tap to resize

Latest Videos

2011ರಲ್ಲಿ ಆಂಧ್ರಪ್ರದೇಶ(Andhra Pradesh) ಗುಂಟೂರು ಮೂಲದ ಲವೀನಾರನ್ನು ಕಿಶೋರ್ ವಿವಾಹವಾಗಿದ್ದರು. ದಂಪತಿಗೆ ಒಂದು ಹೆಣ್ಣು ಮಗು ಜನಿಸಿತ್ತು. ಹೆಂಡತಿ ಶೀಲ ಶಂಕಿಸಿ ಕಿಶೋರ ಜಗಳವಾಡುತ್ತಿದ್ದ. ತಂದೆ- ತಾಯಿ ಜತೆ ಮಾತನಾಡಲೆಂದು ಪರಿಚಯಸ್ಥರೊಬ್ಬರಿಂದ ಲವೀನಾ ಮೊಬೈಲ್ ಫೋನ್ ಪಡೆದಿದ್ದಳು. ಇದರಿಂದ ಮತ್ತಷ್ಟು ಸಂಶಯಪಟ್ಟು ಜಗಳ ತೆಗೆದಿದ್ದ. 2018ರ ಮಾರ್ಚ್ 23ರಂದು ಕುತ್ತಿಗೆಗೆ ವೈರ್‌ನಿಂದ ಬಿಗಿದು ಕೊಲೆ ಮಾಡಿದ್ದ. ನಂತರ ಆಕೆಯೇ ಆತ್ಮಹತ್ಯೆ(Suicide) ಮಾಡಿಕೊಂಡಿದ್ದಾಳೆಂಬಂತೆ ಬಿಂಬಿಸಲು ಯತ್ನಿಸಿದ್ದ.

ಸೆಕ್ಸ್‌ ಬೇಡವೆಂದ್ರೆ ಟೀಂನಿಂದ ಹೊರಹಾಕೋ ಬೆದರಿಕೆ, ಕಾಮುಕ ಕಬಡ್ಡಿ ಕೋಚ್‌ ಕಂಬಿ ಹಿಂದೆ..!

ಈ ಕುರಿತು ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಇನ್‌ಸ್ಪೆಕ್ಟರ್ ಬಿ.ಆರ್. ಗಡ್ಡೇಕರ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ದೇವೇಂದ್ರಪ್ಪ ಬಿರಾದಾರ ಅವರು ಅಪರಾಧಿಗೆ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ. 40,000 ರೂ.ಗಳನ್ನು ಮೃತಳ ಮಗಳಿಗೆ ಪರಿಹಾರ ನೀಡಲು ಸೂಚಿಸಿದ್ದಾರೆ. ಸರ್ಕಾರದ ಪರ ಸರ್ಕಾರಿ ಅಭಿಯೋಜಕಿ ಗಿರಿಜಾ ತಮ್ಮಿನಾಳ ವಾದ ಮಂಡಿಸಿದ್ದರು.

ಸಾಕ್ಷಿ ಹೇಳಿದ 13ರ ಬಾಲಕ : ಅಪ್ಪನಿಗೆ ಆಯ್ತು ಜೀವಾವಧಿ ಶಿಕ್ಷೆ

ಚಾಮರಾಜನಗರ: 13ರ ಬಾಲಕ (Boy) ಸಾಕ್ಷ್ಯವನ್ನು ಪರಿಗಣಿಸಿ ಮದ್ಯದ ನಶೆಯಲ್ಲಿ ಪತ್ನಿ (Wife) ಕೊಂದಿದ್ದ ಪತಿಗೆ ಇಲ್ಲಿನ ಜಿಲ್ಲಾ ನ್ಯಾಯಲಯ (Court)  ಜೀವಾವಧಿ ಶಿಕ್ಷೆ  ವಿಧಿಸಿ ಆದೇಶ ಹೊರಡಿಸಿತ್ತು.  ಚಾಮರಾಜನಗರ (Chamarajanagar) ತಾಲೂಕಿನ ಉತ್ತುವಳ್ಳಿ ಗ್ರಾಮದ ಮಂಜು ಎಂಬಾತ ಶಿಕ್ಷೆಗೊಳಗಾದ ಅಪರಾಧಿ. 13 ವರ್ಷದ ಶಿವರಾಜು ಎಂಬ ಬಾಲಕ  ‘ತನ್ನ ತಾಯಿಯನ್ನು ಹೇಗೆ ಕೊಂದನು, ಯಾವ ರೀತಿ ಗಲಾಟೆ ನಡೆಯುತ್ತಿತ್ತು’’ ಎಂಬುದನ್ನು ಸವಿವರವಾಗಿ ತಿಳಿಸಿದ್ದನ್ನು ಪರಿಗಣಿಸಿದ ಸತ್ರ ಮತ್ತು ಪ್ರಧಾನ ನ್ಯಾಯಾಲಯದ (Court) ಹೆಚ್ಚುವರಿ ನ್ಯಾ. ಎನ್‌.ಆರ್‌. ಲೋಕಪ್ಪ ಅಪರಾಧಿಗೆ ಜೀವಾವಧಿ ಶಿಕ್ಷೆ ಹಾಗೂ 2 ಲಕ್ಷ ರು. ದಂಡ ವಿಧಿಸಿದ್ದರು.

Gang Rape Case:ಅಖಿಲೇಶ್ ಸರ್ಕಾರದಲ್ಲಿ ಮಂತ್ರಿಯಾಗಿದ್ದ SP ನಾಯಕನಿಗೆ ಜೀವಾವಧಿ ಶಿಕ್ಷೆ!

ಏನಿದು ಪ್ರಕರಣ:  

18 ವರ್ಷಗಳ ಹಿಂದೆ ಉತ್ತುವಳ್ಳಿ ಗ್ರಾಮದ ಚಿನ್ನತಾಯಮ್ಮ ಎಂಬಾಕೆಯನ್ನು ಮಂಜು ವಿವಾಹವಾಗಿದ್ದ (Marriage). ಆದರೆ, 5-6 ವರ್ಷಗಳಿಂದ ಈಚೆಗೆ ಮದ್ಯ ಪಾನಕ್ಕೆ ದಾಸನಾಗಿ ನಿತ್ಯ ಪತ್ನಿಯೊಟ್ಟಿಗೆ ಜಗಳ ಮಾಡುವುದನ್ನು ರೂಢಿಸಿಕೊಂಡಿದ್ದನು. ಅದೇ ರೀತಿ, 2017 ರ ಅಕ್ಟೋಬರ್‌ 26 ಮಧ್ಯರಾತ್ರಿ ದಂಪತಿ ಜಗಳ ತಾರಕಕ್ಕೇರಿದೆ. ಆ ವೇಳೆ, ಮಂಜು ಪತ್ನಿ ಚಿನ್ನತಾಯಮ್ಮಳಿಗೆ ಮರದ ಪಟ್ಟಿಯಿಂದ ತಲೆಗೆ ಹೊಡೆದು, ಜುಟ್ಟು ಹಿಡಿದು ಗೋಡೆಗೆ ಗುದ್ದಿಸಿ ಕೊಲೆ (Murder) ಮಾಡಿದ್ದ.

ಅಂದು ರಾತ್ರಿ ತನ್ನ ಅಪ್ಪ-ಅಮ್ಮನ ನಡುವೆ ನಡೆದ ಗಲಾಟೆಯನ್ನು ಸಂಪೂರ್ಣ ಕಂಡಿದ್ದ ಮಗ ಶಿವರಾಜು ಕೊಲೆ ಮಾಡಿದ್ದು ಹೇಗೆ ಎಂಬುದನ್ನು ನ್ಯಾಯಾಲಯಕ್ಕೆ ವಿವರಿಸಿ ಅಪರಾಧಿಗೆ ಶಿಕ್ಷೆಯಾಗುವಂತೆ ಮಾಡಿದ್ದಾನೆ. ಘಟನೆ ಸಂಬಂಧ ಚಾಮರಾಜನಗರ ಗ್ರಾಮಾಂತರ ಠಾಣೆಯಲ್ಲಿ (Police Station) ಪ್ರಕರಣ ದಾಖಲಾಗಿತ್ತು. ಸರ್ಕಾರದ ಪರವಾಗಿ ಉಷಾ ವಾದ ಮಂಡಿಸಿದ್ದರು.
 

click me!