ತುಮಕೂರು: ಪತ್ನಿಯ ಅಂತ್ಯಸಂಸ್ಕಾರಕ್ಕೆ ಬಾರದ ಗಂಡ; ಮನೆ ಮುಂದೆ ಶವ ಬಿಟ್ಟು ಹೋದ ಗ್ರಾಮಸ್ಥರು!

By Ravi Janekal  |  First Published Aug 30, 2023, 9:27 PM IST

ಅನುಮಾನಾಸ್ಪದವಾಗಿ ವಿವಾಹಿತ ಮಹಿಳೆಯೊಬ್ಬಳು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕೊರಟಗೆರೆ ತಾಲೂಕಿನ ನರಸೀಪುರ ಗ್ರಾಮದಲ್ಲಿ ನಡೆದಿದೆ. ಕಲಾವತಿ(26) ಮೃತ ದುರ್ದೈವಿ. ಅಕ್ರಮ ಸಂಬಂಧಕ್ಕೆ ಪತ್ನಿ ಅಡ್ಡಿಯಾಗಿದ್ದಾಳೆಂದು ಗಂಡ ಸೋಮಶೇಖರ್ ಎಂಬಾತನೇ ಕೊಲೆ ಮಾಡಿ ಬಾವಿಗೆ ಎಸೆದಿದ್ದಾನೆಂಬ ಆರೋಪ ಕೇಳಿ ಬಂದಿದೆ


ತುಮಕೂರು (ಆ.30):  ಅನುಮಾನಾಸ್ಪದವಾಗಿ ವಿವಾಹಿತ ಮಹಿಳೆಯೊಬ್ಬಳು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕೊರಟಗೆರೆ ತಾಲೂಕಿನ ನರಸೀಪುರ ಗ್ರಾಮದಲ್ಲಿ ನಡೆದಿದೆ.

ಕಲಾವತಿ(26) ಮೃತ ದುರ್ದೈವಿ. ಅಕ್ರಮ ಸಂಬಂಧಕ್ಕೆ ಪತ್ನಿ ಅಡ್ಡಿಯಾಗಿದ್ದಾಳೆಂದು ಗಂಡ ಸೋಮಶೇಖರ್ ಎಂಬಾತನೇ ಕೊಲೆ ಮಾಡಿ ಬಾವಿಗೆ ಎಸೆದಿದ್ದಾನೆಂಬ ಆರೋಪ ಕೇಳಿ ಬಂದಿದೆ. 

Tap to resize

Latest Videos

ಪತ್ನಿ ಇದ್ದರೂ ಪರಸ್ತ್ರೀ ಸಂಗ:

ಪತ್ನಿಯಿದ್ದರೂ ಬೇರೊಬ್ಬಳೊಂದಿಗೆ ಸಂಬಂಧ ಇಟ್ಟುಕೊಂಡಿದ್ದ ಪತಿ ಸೋಮಶೇಖರ್. ಪತ್ನಿಯ ವಿರೋಧದ ನಡುವೆಯೂ ಅವಳನ್ನು ಪಕ್ಕದ ಶೆಡ್ಡಿಗೆ ತಂದು ಇಟ್ಟುಕೊಂಡಿದ್ದ. ಇದೇ ವಿಚಾರವಾಗಿ ಪತಿ-ಪತ್ನಿ ಇಬ್ಬರ ನಡುವೆ ಆಗಾಗ  ಜಗಳ ನಡೆಯುತ್ತಿತ್ತು. ನಿನ್ನೆಯೂ ಇದೇ ಕಾರಣಕ್ಕೆ ಜಗಳ ಮಾಡಿಕೊಂಡಿದ್ದಾರೆ. ಅಕ್ರಮ ಸಂಬಂಧಕ್ಕೆ ಪತ್ನಿ ಅಡ್ಡಿಯಾಗಿದ್ದಾಳೆಂದು ಪತಿಯೇ ಕೊಲೆ ಮಾಡಿದ್ದಾನೆಂದು ಮೃತ ಮಹಿಳೆ ಕುಟುಂಬಸ್ಥರು ಆರೋಪ ಮಾಡಿದ್ದಾರೆ. 

 

ಗೆಳೆಯನೆಂದು ಮನೆಯೊಳಗೆ ಬಿಟ್ಟುಕೊಂಡಿದ್ದೇ ತಪ್ಪಾಯ್ತು, ಪಾಲಿಕೆ ಸದಸ್ಯ ಮಾಡಿದ್ದೇನು ಗೊತ್ತಾ?

ಪತ್ನಿಯ ಅಂತ್ಯಸಂಸ್ಕಾರಕ್ಕೂ ಬಾರದ ಪತಿ:

ಪತ್ನಿ ಅನುಮಾನಾಸ್ಪದವಾಗಿ ಮೃತಪಟ್ಟರು ಪತ್ನಿ ಶವ ಸಂಸ್ಕಾರಕ್ಕೆ ಬಾರದ ಪತಿ ಸೋಮಶೇಖರ್. ಪತಿಯೇ ಕೊಲೆ ಮಾಡಿರುವುದರಿಂದ ಬಂದಿಲ್ಲವೆಂಬ ಶಂಕೆ. ಹೀಗಾಗಿ ಅಂತ್ಯಸಂಸ್ಕಾರ ಮಾಡದ ಗ್ರಾಮಸ್ಥರು. ಮೃತ ಮಹಿಳೆಯ ಮನೆ ಎದುರೇ ಶವ ಇಟ್ಟು ಹೊರಟು ಹೋಗಿರುವ ಅಮಾನವಿಯ ಘಟನೆ ನಡೆದುಹೋಗಿದೆ.

ಮಗಳ ಮೇಲೆ ಕಣ್ಣಾಕಿದ ಲಿವ್ ಇನ್ ಪಾರ್ಟ್‌ನರ್‌, 'ಅದನ್ನೇ' ಕಟ್‌ ಮಾಡಿ ಕೊಲೆ ಮಾಡಿದ ಮಹಿಳೆ!

click me!