ಬೆಳಗಾವಿ: ಕಳ್ಳರೆಂದು ಭಾವಿಸಿ ಅಮಾಯಕ ಯುವಕರನ್ನು ಮನಬಂದಂತೆ ಥಳಿಸಿದ ಗ್ರಾಮಸ್ಥರು!

By Ravi Janekal  |  First Published Aug 30, 2023, 5:28 PM IST

ಕಳ್ಳರೆಂದು ಭಾವಿಸಿ ಅಮಾಯಕ ಯುವಕರನ್ನು ಹಿಡಿದು ಕಂಬಕ್ಕೆ ಕಟ್ಟಿಹಾಕಿ ಥಳಿಸಿರುವ ಘಟನೆ ಬೆಳಗಾವಿ ಜಿಲ್ಲೆ, ಚಿಕ್ಕೋಡಿ ತಾಲೂಕಿನ ಜೋಡಕುರುಳಿ ಗ್ರಾಮದಲ್ಲಿ ನಡೆದಿದೆ.


ಬೆಳಗಾವಿ (ಆ.30): ಕಳ್ಳರೆಂದು ಭಾವಿಸಿ ಅಮಾಯಕ ಯುವಕರನ್ನು ಹಿಡಿದು ಕಂಬಕ್ಕೆ ಕಟ್ಟಿಹಾಕಿ ಥಳಿಸಿರುವ ಘಟನೆ ಬೆಳಗಾವಿ ಜಿಲ್ಲೆ, ಚಿಕ್ಕೋಡಿ ತಾಲೂಕಿನ ಜೋಡಕುರುಳಿ ಗ್ರಾಮದಲ್ಲಿ ನಡೆದಿದೆ.

ಕೆಲಸದ ನಿಮಿತ್ತ ಮಂಗಳವಾರ ಬೆಳಗಿನ ಜಾವ ಜೋಡಕುರುಳಿ ಗ್ರಾಮಕ್ಕೆ ಬಂದಿದ್ದ ನಾಲ್ವರು ಯುವಕರು.ಯುವಕರನ್ನು ಕಂಡು ಅನುಮಾನಗೊಂಡ ಗ್ರಾಮಸ್ಥರು. ಇತ್ತೀಚೆಗೆ ಮಕ್ಕಳ ಕಳ್ಳರ ವದಂತಿ ಹೆಚ್ಚಾದ ಹಿನ್ನೆಲೆ ಯುವಕರನ್ನು ಕಳ್ಳರೆಂದು ಭಾವಿಸಿ ಗ್ರಾಮಸ್ಥರು ಹಿಡಿದುಕೊಂಡಿದ್ದಾರೆ. ಈ ವೇಳೆ ಯುವಕರು ತಾವು ಕಳ್ಳರಲ್ಲವೆಂದು ರಾಯಭಾಗ ತಾಲೂಕಿನ ಕೆಂಪಟ್ಟಿಗ್ರಾಮದವರೆಂದು ಪರಿಪರಿಯಾಗಿ ಬೇಡಿಕೊಂಡರೂ ಬಿಡದ ಗ್ರಾಮಸ್ಥರು ಕಟ್ಟಿಹಾಕಿ ಮನಬಂದಂತೆ ಥಳಿಸಿದ್ದಾರೆ. ಈ ವೇಳೆ ಒಬ್ಬ ಯುವಕ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಚಿಕ್ಕೋಡಿ ಪೊಲೀಸರು. ಯುವಕರನ್ನು ಬಿಡುಗಡೆಗೊಳಿಸಿದ್ದಾರೆ. 

Tap to resize

Latest Videos

ಚಿಕ್ಕ ಗಾಯಕ್ಕೆ ಆಸ್ಪತ್ರೆ ಹೋಗಿ ಶವವಾಗಿ ಹಿಂದಿರುಗಿದ ಚಿರಾಯು! ವೈದ್ಯರ ನಿರ್ಲಕ್ಷ್ಯ ಆರೋಪ

ಈ ಪ್ರಕರಣ ಸಂಬಂಧ ಯುವಕರಿಗೆ ಥಳಿಸಿದ ಹತ್ತಕ್ಕೂ ಹೆಚ್ಚು ಗ್ರಾಮಸ್ಥರ ವಿರುದ್ಧ ದೂರು ದಾಖಲಿಸಿಕೊಂಡು ವಿಚಾರಣೆ ಮುಂದುವರಿಸಿದ್ದಾರೆ. ಒಟ್ಟಿನಲ್ಲಿ ಕಳ್ಳರ ಹಾವಳಿಯಿಂದ ಸಜ್ಜನರು ಕೂಡ ಅಪರಿಚಿತ ಊರಲ್ಲಿ ಓಡಾಡಲು ಭಯಪಡುವಂತಾಗಿರುವುದು ಸುಳ್ಳಲ್ಲ. 

ಚೀಟರ್ ಮೋನ್ಯಾ ಸೇರಿ ಕುಟುಂಬಸ್ಥರ ಬಂಧನ:

ಧಾರವಾಡ: ಇಲ್ಲಿಯ ಹೊಯ್ಸಳನಗರದ ಮನೆಯೊಂದರ ಕಂಪೌಂಡ್‌ನಲ್ಲಿ ಕಾರು ನಿಲ್ಲಿಸಿದ್ದರ ವಿಚಾರವಾಗಿ ನಡೆದ ಗಲಾಟೆಯಲ್ಲಿ ಮನೆಯ ಮಾಲೀಕರು ಮತ್ತು ಬಾಡಿಗೆದಾರರ ಮೇಲೆ ಹಲ್ಲೆ ಮಾಡಿದ ಪ್ರಕರಣದ ಹಿನ್ನೆಲೆಯಲ್ಲಿ ಮೋಹನ ವಾಳ್ವೇಕರ ಅಲಿಯಾಸ ಚೀಟರ್ ಮೋನ್ಯಾ ನನ್ನು ಉಪನಗರ ಪೊಲೀಸರು ಬಂಧಿಸಿದ್ದು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

ಕಳೆದ ಆ.19ರಂದು ಬಾಡಿಗೆದಾರ ವಿದ್ಯಾರ್ಥಿ ಹೃಷಕೇಶ ತಾಂಗಡೆ, ಮನೆಯ ಮಾಲೀಕ ರೋಹನ ಕಲಗಾರ ಅವರ ಮೇಲೆ ಹಲ್ಲೆ ನಡೆಸಿದ ಘಟನೆ ಸಂಬಂಧಿಸಿದಂತೆ ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆರೋಪಿಗಳ ಬಂಧನಕ್ಕೆ ಮುಂದಾಗಿದ್ದ ಪೊಲೀಸರಿಂದ ತಪ್ಪಿಸಿಕೊಂಡು ಊರು ಬಿಟ್ಟಿದ್ದ ವಾಳ್ವೇಕರ ಹಾಗೂ ಕುಟುಂಬದ ಸದಸ್ಯರಾದ ಯುವರಾಜ, ದೇವರಾಜ ಹಾಗೂ ಮಮತಾ ವಾಳ್ವೇಕರ ತಲೆ ಮರೆಸಿಕೊಂಡಿದ್ದರು.

ದೂರು ದಾಖಲಾದ ನಂತರ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ ಉಪ ನಗರ ಪೊಲೀಸರು ಮಂಗಳವಾರ ಗೋಕಾಕದಲ್ಲಿ ಅವರನ್ನು ವಶಕ್ಕೆ ಪಡೆದಿದ್ದು ಧಾರವಾಡಕ್ಕೆ ಕರೆತಂದು ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದಾರೆ.

click me!