ಧಾರವಾಡ: ಪತ್ನಿಯನ್ನು ಕೊಂದಿದ್ದ ಆರೋಪಿ ನೇಣಿಗೆ ಶರಣು

By Suvarna News  |  First Published Oct 20, 2022, 1:41 PM IST

Crime News: ಪತ್ನಿಯನ್ನು ಕೊಂದಿದ್ದ ಆರೋಪಿ ಧಾರವಾಡ ಕೇಂದ್ರ ಕಾರಾಗೃಹದಲ್ಲಿ ನೇಣಿಗೆ ಶರಣಾಗಿದ್ದಾನೆ


ಧಾರವಾಡ (ಅ. 20):  ಪತ್ನಿಯನ್ನು ಕೊಂದಿದ್ದ ಆರೋಪಿ ನೇಣಿಗೆ ಶರಣಾಗಿದ್ದಾನೆ. ಧಾರವಾಡ (Dharwad) ಕೇಂದ್ರ ಕಾರಾಗೃಹದಲ್ಲಿ ಆರೋಪಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಆನಂದ ದುಧನಿ ಆತ್ಮ ಹತ್ಯೆ ಮಾಡಿಕೊಂಡ ಆರೋಪಿ. ಪತ್ನಿಯನ್ನು ಕೊಂದು ಆನಂದ ಜೈಲು ಸೇರಿದ್ದ. ಅಕ್ಟೋಬರ್‌ 14ರಂದು ಜಿಲ್ಲಾ ಆಸ್ಪತ್ರೆ ಬಳಿ  ಪತ್ನಿ ಸವಿತಾಳನ್ನು ಆನಂದ ಕೊಲೆಗೈದಿದ್ದ. ಎರಡು ದಿನಗಳ ಹಿಂದೆ ಆನಂದ್‌ನನ್ನು ಉಪನಗರ ಠಾಣೆ ಪೊಲೀಸರು ಬಂಧಿಸಿದ್ದರು. ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಿದ್ದರು. ಆದರೆ ಆರೋಪಿ ಆನಂದ್‌ ಬೆಡ್‌ಶೀಟ್‌ನಿಂದ ನೇಣು ಹಾಕಿಕೊಂಡ ಆತ್ನಹತ್ಯೆಗೆ ಶರಣಾಗಿದ್ದಾರೆ. 

ದಾವಣಗೆರೆ: ಪೋಕ್ಸೋ ಪ್ರಕರಣದ ಆರೋಪಿ ಆತ್ಮಹತ್ಯೆ: ಜೈಲಿಗೆ ಹೋಗಿ ಬಂದನೆಂಬ ಮಾನಸಿಕ ಹಿಂಸೆಯಿಂದ ಪೋಕ್ಸೋ ಪ್ರಕರಣದ ಆರೋಪಿ ಯುವಕನೊಬ್ಬ ಆತ್ಮಹತ್ಯೆ ಮಾಡಿದ ಘಟನೆ ತಾಲೂಕಿನ ಕೋಲ್ಕುಂಟೆ ಗ್ರಾಮದಲ್ಲಿ ನಡೆದಿದೆ. ತಾಲೂಕಿನ ಕೋಲ್ಕುಂಟೆ ಗ್ರಾಮದ ವೀರೇಶ(24 ವರ್ಷ) ಆತ್ಮಹತ್ಯೆ ಮಾಡಿಕೊಂಡ ಯುವಕ. ಆಟೋ ಚಾಲಕನಾಗಿದ್ದ ವೀರೇಶ 2020ರಲ್ಲಿ ಅಪ್ರಾಪ್ತ ಬಾಲಕಿಗೆ ಕಿರುಕುಳ ನೀಡಿದ್ದ ಆರೋಪದಡಿ ಪೋಕ್ಸೋ ಕಾಯ್ದೆಯಡಿ ಕೇಸ್‌ ದಾಖಲಾಗಿತ್ತು. 

Tap to resize

Latest Videos

ಸುರಪುರ: ಸಂಶಯಾಸ್ಪದವಾಗಿ ನೇಣು ಬಿಗಿದುಕೊಂಡು ವಿದ್ಯಾರ್ಥಿ ಆತ್ಮಹತ್ಯೆ

ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ವೀರೇಶನಿಗೆ ಕೆಲ ದಿನಗಳ ಹಿಂದಷ್ಟೇ ಜಾಮೀನು ಪಡೆದು ಹೊರ ಬಂದಿದ್ದನು. ಊರಿನಲ್ಲಿ ಜೈಲಿಗೆ ಹೋಗಿ ಬಂದವನೆಂದು ಕೆಲವರು ಮಾನಸಿಕ ಕಿರುಕುಳ ನೀಡುತ್ತಿದ್ದ ಕಾರಣ ಮನನೊಂದ ಆತ 9 ಜನರ ಹೆಸರನ್ನು ಚೀಟಿಯಲ್ಲಿ ಬರೆದಿಟ್ಟು, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಊರಿನ ಕೆಲವರ ಚುಚ್ಚು ಮಾತುಗಳಿಂದ ಆತ ನೊಂದಿದ್ದ ಎನ್ನಲಾಗಿದೆ. ಹದಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

click me!