'ಮಂಗಳವಾರ ಮಟನ್‌ ಮಾಡ್ತೀರಾ' ಅನ್ನೋ ವಿಚಾರಕ್ಕೆ ದಂಪತಿಗಳ ಗಲಾಟೆ, ತಪ್ಪಿಸಲು ಹೋದವನ ಕೊಲೆ!

By Santosh Naik  |  First Published Oct 20, 2022, 1:05 PM IST

ಮಂಗಳವಾರ ಮಟನ್‌ ಅಡುಗೆ ಮಾಡುವ ವಿಚಾರದಲ್ಲಿ ಗಂಡ ಹೆಂಡತಿ ನಡುವಿನ ಜಗಳ ವಿಕೋಪಕ್ಕೆ ಹೋಗಿದೆ. ಈ ವೇಳೆ ಈ ಗಲಾಟೆ ಬಿಡಿಸಲು ಬಂದ ನೆರೆಮನೆಯನು ಕೊಲೆಯಾದ ಘಟನೆ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದಿದೆ.
 


ಭೋಪಾಲ್‌ (ಅ.20): ಮಧ್ಯಪ್ರದೇಶದ ಭೋಪಾಲ್‌ನಲ್ಲಿ ವ್ಯಕ್ತಿಯೊಬ್ಬ ತನ್ನ ನೆರೆಮನೆಯವನ್ನೇ ಕೊಂದಿರುವ ಘಟನೆ ಮಂಗಳವಾರ ನಡೆದಿದೆ. ಗಂಡ-ಹೆಂಡತಿ ನಡುವಿನ ಗಲಾಟೆಯನ್ನು ಬಿಡಿಸಲು ಹೋದ ವೇಳೆ ನೆರೆಮನೆಯನ ಕೊಲೆಯಾಗಿದೆ. ದೇಶದಲ್ಲಿ ಬಹುತೇಕ ಹಿಂದುಗಳು ಮಂಗಳವಾರವನ್ನು ಶುಭ ದಿನ ಎಂದುಕೊಳ್ಳುತ್ತಾರೆ. ಹಾಗಾಗಿ ಆ ದಿನದಂದು ಮಾಂಸಾಹಾರ ಸೇವನೆ ಮಾಡುವುದಿಲ್ಲ. ಆದರೆ, ಮಂಗಳವಾರ ಮಟನ್‌ ಅಡುಗೆ ಮಾಡುವ ವಿಚಾರದಲ್ಲಿ ಭೋಪಾಲ್‌ ನಿವಾಸಿಯಾಗಿರುವ ಪಪ್ಪು ಅರಿವಾರ್‌ ಹಾಗೂ ಆತನ ಪತ್ನಿ ನಡುವೆ ಗಲಾಟೆ ನಡೆದಿದೆ. ಇದನ್ನು ತಪ್ಪಿಸಲು ಹೋದ ನೆರಮನೆಯವನಾದ ಬಲ್ಲು ನಾಥ್‌ ಎನ್ನುವ ವ್ಯಕ್ತಿಯ  ಕೊಲೆಯಾಗಿದೆ. ಮಂಗಳವಾರ ಮಟನ್‌ ಅಡುಗೆ ಮಾಡುವ ವಿಚಾರಕ್ಕೆ ಪಪ್ಪು ಅರಿವಾರ್‌ ಪತ್ನಿ ವಿರೋಧ ವ್ಯಕ್ತಪಡಿಸಿದ್ದಳು. ಈ ವಿಚಾರವಾಗಿ ಗಂಡ-ಹೆಂಡತಿ ನಡುವೆ ದೊಡ್ಡ ಗಲಾಟೆ ಏರ್ಪಟ್ಟಿದೆ. ಪಕ್ಕದ ಮನೆಯಲ್ಲಿ ಗಲಾಟೆ ನಡೆಯುತ್ತಿರುವುದನ್ನು ಗಮನಿಸಿದ ಬಲ್ಲು, ಈ ವೇಳೆ ಪಪ್ಪು ಹಾಗೂ ಆತನ ಪತ್ನಿ ನಡುವೆ ಗಲಾಟೆಯನ್ನು ಬಿಡಿಸುವ ಪ್ರಯತ್ನ ಮಾಡಿದ್ದಾರೆ. ಗಲಾಟೆಯನ್ನು ಬಿಡಿಸುವಲ್ಲಿ ಯಶಸ್ವಿಯಾದ ಬಳಿಕ ಬಲ್ಲು ತಮ್ಮ ಮನೆಗೆ ವಾಪಾಸ್‌ ಹೋಗಿದ್ದಾರೆ. ಆದರೆ. ಈ ವೇಳೆ ಬಲ್ಲು ಅವರ ಮನೆಗೆ ತೆರಳಿದ ಪಪ್ಪು ಆತನನ್ನು ಕೊಲೆ ಮಾಡಿದ್ದಾರೆ.

ಬಲ್ಲು ಸಾವಿನ ನಂತರ, ಪತ್ನಿ ನೀಡಿದ ಹೇಳಿಕೆಯ ಆಧಾರದ ಮೇಲೆ ಪೊಲೀಸರು ಪಪ್ಪು ವಿರುದ್ಧ ದೂರು ದಾಖಲಿಸಿದ್ದಾರೆ. ಅದೇ ದಿನ ಪಪ್ಪುವನ್ನು ಬಂಧಿಸಲಾಗಿದೆ. ಭೋಪಾಲ್‌ನ ಬಿಲ್ಕ್ಹಿರಿಯಾ ಪ್ರದೇಶದಲ್ಲಿ ಘಟನೆ ನಡೆದಿದ್ದು, 45 ವರ್ಷದ ಬಲ್ಲು ನಾಥ್‌ ದಾರುವಾಗಿ ಸಾವು ಕಂಡಿದ್ದಾರೆ. 26 ವರ್ಷದ ಪಪ್ಪು ಅರಿವಾರ್‌ರನ್ನು(Pappu Ahirwar)  ಪೊಲೀಸರು ಶೀಘ್ರವೇ ಬಂಧಿಸಿದ್ದಾರೆ. ಆರೋಪಿಯು ಬಲ್ಲುನಾಥ್‌ನ ತಲೆಯ ಹಿಂಭಾಗಕ್ಕೆ ರಾಜಸ್ಥಾನಿ ಸ್ಟಿಕ್‌ನಿಂದ ಹೊಡೆದಿದ್ದಾನೆ ಎನ್ನಲಾಗಿದೆ, ಅವನು ನೆಲಕ್ಕೆ ಬಿದ್ದಾಗ ಅವನ ಮುಖಕ್ಕೆ ಮತ್ತೊಂದು ಬಲವಾದ ಏಟು ನೀಡಿದ್ದಾನೆ.

ಹೊಡೆತ ತಿಂದ ಏಟಿಗೆ ಬಲ್ಲುನಾಥ್‌ನ ತಲೆಗೆ ಗಂಭೀರ ಗಾಯವಾಗಿದೆ. ಮುಖಕ್ಕೆ ಬಲವಾಗಿ ಗುದ್ದಿದ ಪರಿಣಾಮವಾಗಿ ಬಲ್ಲುನಾಥ್‌ ಅವರ ಹಲ್ಲು ಮೂಡ ಮುರಿದು ಹೋಗಿದೆ. ಆತ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎಂದು ಹೇಳಲಾಗಿದೆ. ಘಟನೆ ನಡೆದ ಸುದ್ದಿ ತಿಳಿಯುತ್ತಿದ್ದಂತೆ ಬಿಲ್ಕ್ಹಿರಿಯಾ (Bilkhiria Police)  ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಬಿಲ್ಖಿರಿಯಾ ಸ್ಟೇಷನ್ ಹೌಸ್ ಆಫೀಸರ್ ಸುನಿಲ್ ಚತುರ್ವೇದಿ (sunil chaturvedi) ಘಟನೆ ಬಗ್ಗೆ ಮಾಹಿತಿ ನೀಡಿದ್ದು, ಮೃತ ವ್ಯಕ್ತಿ ಬಲ್ಲು ನಾಥ್‌, ತಮ್ಮ ಮಗ ಸಚಿನ್ (19) ಜೊತೆ ಬಿಲ್ಕ್ಹಿರಿಯಾದ ಚಾವ್ನಿಪಥರ್ ಗ್ರಾಮದ ಸಾಗರ್ ಮೊಹಲ್ಲಾದಲ್ಲಿ ವಾಸಿಸುತ್ತಿದ್ದರು. ಅವರ ಪತ್ನಿ ತೀರಿಕೊಂಡಿದ್ದು, ಕೃಷಿ ಕೂಲಿ ಕೆಲಸ ಮಾಡಿಕೊಂಡಿದ್ದರು. 

ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳಿಂದ ಇನ್ಸ್ಟಾಗ್ರಾಮ್ ಸ್ಟಾರ್‌ಗೆ ಗುಂಡಿಕ್ಕಿ ಹತ್ಯೆ

ಇನ್ನು ಆರೋಪಿ ತಮ್ಮ ಪತ್ನಿ ಕುಂತಿ ಬಾಯಿ (Kunti Bhai) ಜೊತೆ  ವಾಸವಿದ್ದರು ಎಂದು ಹೇಳಲಾಗಿದೆ. ಮಂಗಳವಾರ ರಾತ್ರಿ 11 ಗಂಟೆಯ ವೇಳೆಗೆ ಪಪ್ಪು ಮನೆಗೆ ಮಟನ್‌ ತಂದಿದ್ದು ಈ ವೇಳೆ ಗಲಾಟೆ ನಡೆದಿದೆ. ಮಟನ್‌ ಅಡುಗೆ ಮಾಡದ ಕಾರಣಕ್ಕಾಗಿ ಕುಂತಿ ಬಾಯಿಯನ್ನು ಥಳಿಸಿದ ಪಪ್ಪು ಅರಿವಾರ್‌, ಆಕೆಯನ್ನು ಮನೆಯಿಂದ ಹೊರಹಾಕಿದ್ದ.  ಈ ವೇಳೆ ಬಲ್ಲುನಾಥ್‌ (Ballu Nath) ಸೇರಿದಂತೆ ಅಕ್ಕಪಕ್ಕದವರು ಮನೆಯಿಂದ ಹೊರಬಂದಿದ್ದರು. ಬಲ್ಲುನಾಥ್‌ ಸೇರಿದಂತೆ ಇತರ ನಾಲ್ವರು ಕುಂತು ಬಾಯಿಯನ್ನು ರಕ್ಷಣೆ ಮಾಡುತ್ತಿರುವುದನ್ನು ಪಪ್ಪು ಕಂಡಿದ್ದ. ಮನೆಯಿಂದ ಹೊರಹೋಗಿದ್ದ ಕುಂತಿ ಬಾಯಿ ನೆರಮನೆಯಲ್ಲಿ ವಾಸವಿದ್ದಳು.

Tap to resize

Latest Videos

'ಮೊದ್ಲು ಲವ್ವು, ನಂತ್ರ ನೋವು.. ಕೊನೆಗ್‌ ಸಾವು..!' ಬಸ್ಸಲ್ಲಿ ಹುಟ್ಟಿದ ಪ್ರೀತಿ ಬೆಳೆಯೋ ಮುಂಚೆಯೇ ಅಂತ್ಯ!

ಆದರೆ, ಕುಂತಿ ಬಾಯಿಯನ್ನು ರಕ್ಷಣೆ ಮಾಡುತ್ತಿದ್ದ ಬಲ್ಲು ವಿರುದ್ಧ ಪಪ್ಪು ಸಿಟ್ಟಿಗೆದ್ದಿದ್ದ. ಅಂದಾಜು ಒಂದು ಗಂಟೆಯ ಬಳಿಕ ಬಲ್ಲುನಾಥ್‌ ತನ್ನ ಮನೆಯ ಹೊರಭಾಗದಲ್ಲಿ ಕುಳಿತಿದ್ದನ್ನು ಗಮನಿಸಿದ ಪಪ್ಪು ಭಾರವಾದ ರಾಜಸ್ಥಾನಿ ಸ್ಟಿಕ್‌ನಿಂದ ಆತನ ತಲೆಗೆ ಹೊಡೆದಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

click me!