ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳಿಂದ ಇನ್ಸ್ಟಾಗ್ರಾಮ್ ಸ್ಟಾರ್‌ಗೆ ಗುಂಡಿಕ್ಕಿ ಹತ್ಯೆ

By Anusha Kb  |  First Published Oct 20, 2022, 12:24 PM IST

ಬ್ರೆಜಿಲ್‌ನ ಖ್ಯಾತ ಇನ್ಸ್ಟಾಗ್ರಾಮ್ ಸ್ಟಾರ್‌ ಓರ್ವಳನ್ನು ಮನೆಯಲ್ಲೇ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಬ್ರೆಜಿಲ್‌ನ ಸೆರ್ಗಿಪ್ ರಾಜ್ಯದ ಅರಕಾಜುನಲ್ಲಿರುವ ಸಾಂಟಾ ಮಾರಿಯಾದಲ್ಲಿರುವ ಆಕೆಯ ಮನೆಯಲ್ಲಿಯೇ ಇನ್ಸ್ಟಾಗ್ರಾಮ್ ಸ್ಟಾರ್‌ ನುಬಿಯಾ ಕ್ರಿಸ್ಟಿನಾ ಬ್ರಾಗಾಳನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.


ಬ್ರೆಜಿಲ್‌: ಬ್ರೆಜಿಲ್‌ನ ಖ್ಯಾತ ಇನ್ಸ್ಟಾಗ್ರಾಮ್ ಸ್ಟಾರ್‌ ಓರ್ವಳನ್ನು ಮನೆಯಲ್ಲೇ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಬ್ರೆಜಿಲ್‌ನ ಸೆರ್ಗಿಪ್ ರಾಜ್ಯದ ಅರಕಾಜುನಲ್ಲಿರುವ ಸಾಂಟಾ ಮಾರಿಯಾದಲ್ಲಿರುವ ಆಕೆಯ ಮನೆಯಲ್ಲಿಯೇ ಇನ್ಸ್ಟಾಗ್ರಾಮ್ ಸ್ಟಾರ್‌ ನುಬಿಯಾ ಕ್ರಿಸ್ಟಿನಾ ಬ್ರಾಗಾಳನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಬೈಕ್‌ನಲ್ಲಿ ಬಂದ ಇಬ್ಬರು ಹಂತಕರು ಆಕೆಯ ಮನೆಯಲ್ಲೇ ಆಕೆಗೆ ಗುಂಡಿಕ್ಕಿ ಹತ್ಯೆ (Shot Dead) ಮಾಡಿ ನಂತರ ಬೈಕ್‌ನಲ್ಲಿ ಪರಾರಿಯಾಗಿದ್ದಾರೆ. ಹತ್ಯೆಯಾದ ಬ್ರೆಜಿಲ್‌ (Brazil) ಇನ್ಸ್ಟಾಗ್ರಾಮ್ ಸ್ಟಾರ್ (Instagram Star) ನುಬಿಯಾ ಕ್ರಿಸ್ಟಿನಾ ಬ್ರಾಗಾ (Nubia Cristina Braga) ಇನ್ಸ್ಟಾಗ್ರಾಮ್‌ನಲ್ಲಿ 60 ಸಾವಿರಕ್ಕೂ ಹೆಚ್ಚು ಫಾಲೋವರ್ಸ್‌ಗಳನ್ನು ಹೊಂದಿದ್ದಳು. ಆಕೆಗಿನ್ನು ಬರೀ 23 ವರ್ಷ ವಯಸ್ಸಾಗಿತ್ತು. ಆಕ್ಟೋಬರ್ 14 ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಹತ್ಯೆಗೂ ಮುನ್ನ ಆಕೆ ಮನೆ ಪಕ್ಕದ ಸಲೂನ್‌ಗೆ ಭೇಟಿ ನೀಡಿದ್ದಳು ಎಂದು ತಿಳಿದು ಬಂದಿದೆ.

Tap to resize

Latest Videos

ಪೂರ್ಣ ನಗ್ನಳಾಗಿ ಪೊಲೀಸರನ್ನೇ ಗೋಳು ಹುಯ್ದುಕೊಂಡ ಇನ್ಸ್'ಟಾಗ್ರಾಂ ಸುಂದರಿ

ಸುಮಾರು 60,000 ಇನ್‌ಸ್ಟಾಗ್ರಾಮ್ ಅನುಯಾಯಿಗಳನ್ನು (Instagram Followers) ಹೊಂದಿದ್ದ 23 ವರ್ಷದ ಈ ಸೋಶಿಯಲ್ ಮೀಡಿಯಾ ಪ್ರಭಾವಿಯ ಶವ ಅಕ್ಟೋಬರ್ 14 ರ ರಾತ್ರಿ ಬ್ರೆಜಿಲ್‌ನ ಸೆರ್ಗಿಪ್ ಸ್ಟೇಟ್‌ನ ಅರಾಕಾಜುನಲ್ಲಿರುವ ಸಾಂಟಾ ಮಾರಿಯಾದಲ್ಲಿರುವ ಮನೆಯಲ್ಲಿ  ಪತ್ತೆಯಾಗಿತ್ತು.ಸೆಲೂನ್‌ಗೆ ತೆರಳಿ ಸ್ವಲ್ಪ ಸಮಯದಲ್ಲೇ ಬೈಕ್‌ನಲ್ಲಿ ಬಂದ ಇಬ್ಬರು ಆಗಂತುಕರು ಆಕೆಯ ಮನೆಯ ಮುಂಬಾಗಿಲಿನ ಮೂಲಕ ಪ್ರವೇಶ ಮಾಡಿ ಗುಂಡು ಹಾರಿಸಿ ಬೈಕ್‌ನಲ್ಲಿ ಪರಾರಿಯಾಗಿದ್ದಾರೆ. ಸ್ಥಳದಿಂದ ಪರಾರಿಯಾಗುವ ಮೊದಲು ಹಲವು ಬಾರಿ ಆಕೆಯ ಮೇಲೆ ಗುಂಡು ಹಾರಿಸಿದ್ದಾರೆ ಅಲ್ಲದೇ ದುಷ್ಕರ್ಮಿಗಳು ತಮ್ಮ ಮುಖವನ್ನು ಸಂಪೂರ್ಣವಾಗಿ ಮುಚ್ಚಿಕೊಂಡಿದ್ದರು ಎಂದು ತಿಳಿದು ಬಂದಿದೆ. ನಂತರ ರಾತ್ರಿ  9 ಗಂಟೆಗೆ  ನುಬಿಯಾ ಕ್ರಿಸ್ಟಿನಾ ಬ್ರಾಗಾ ರಕ್ತದ ಮಡುವಿನಲ್ಲಿ ಬಿದ್ದಿರುವುದು ಪತ್ತೆಯಾಗಿದೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.

ರೀಲ್ಸ್ ಅಂತ ಸಿಕ್ಕ ಸಿಕ್ಕಲ್ಲಿ ಕುಣಿತೀರಾ... ಹಾಗಿದ್ರೆ ಈ ವಿಡಿಯೋ ನೀವ್ ನೋಡ್ಲೇಬೇಕು

ಆದರೆ ಈ ಹತ್ಯೆಗೆ ಕಾರಣ ಏನು ಎಂಬುದು ತಿಳಿದು ಬಂದಿಲ್ಲ. ನುಬಿಯಾಳ ಸಂಬಂಧಿಗಳಿಗೆ ಏಕೆ ಈ ಹತ್ಯೆ ನಡೆದಿದೆ ಎಂಬುದನ್ನು ಊಹಿಸುವುದಕ್ಕೂ ಆಗುತ್ತಿಲ್ಲ. ನುಬಿಯಾಗೆ ಏಕೆ ಹೀಗಾಯಿತು ಅವರೇಕೆ ನುಬಿಯಾಳ ಹತ್ಯೆ ಮಾಡಿದರು ಎಂಬುದನ್ನು ತಿಳಿಯಲು ಬಯಸುತ್ತೇವೆ ಎಂದು ಆಕೆಯ ಚಿಕ್ಕಮ್ಮ ಕ್ಲೌಡಿಯಾ ಮೆನೆಜೆಸ್ ಹೇಳಿದ್ದಾಗಿ ಬ್ರೆಜಿಲ್‌ನ ನ್ಯೂಸ್ ಪೋರ್ಟಲ್ ಜಿ1 ವರದಿ ಮಾಡಿದೆ. ಕುಟುಂಬದಲ್ಲಿದ್ದ ಹರೆಯದ ತರುಣಿಯ ದಿಢೀರ್ ಸಾವಿನಿಂದ ಇಡೀ ಕುಟುಂಬದಲ್ಲಿ ಶೋಕ ಅವರಿಸಿದೆ. 

ನುಬಿಯಾಗೆ ಏನಾದರು ಬೆದರಿಕೆ ಇತ್ತೆ ಎಂಬ ಬಗ್ಗೆ ಕೇಳಿದಾಗ, ಆಕೆ ಈ ಬಗ್ಗೆ ಯಾವತ್ತು ಹೇಳಿಲ್ಲ. ಆ ಬಗ್ಗೆ ನಮಗೆ ತಿಳಿದಿಲ್ಲ ಎಂದು ಆಕೆಯ ಸಂಬಂಧಿಗಳು ಹೇಳಿದ್ದಾರೆ.

click me!