ಅಕ್ರಮ ಸಂಬಂಧ ಪ್ರಶ್ನಿಸಿದ ಪತ್ನಿಗೆ ಹಿಗ್ಗಾಮುಗ್ಗ ಥಳಿತ, ಜೈಲು ಸೇರಿದ ಪತಿ, ಪ್ರೇಯಸಿ ಪರಾರಿ!

By Kannadaprabha News  |  First Published Jan 21, 2024, 7:31 AM IST

ಅಕ್ರಮ ಸಂಬಂಧ ಪ್ರಶ್ನಿಸಿದ ಪತ್ನಿಗೆ ಬೆಲ್ಟ್ ನಿಂದ ಹಿಗ್ಗಾಮುಗ್ಗ ಥಳಿಸಿದ ಪತಿಯನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವ ಪ್ರಕರಣ ತಾಲೂಕಿನ ಹಂಚ್ಯ ಗ್ರಾಮದಿಂದ ಜರುಗಿದೆ.


ಹುಣಸೂರು (ಜ. 21) : ಅಕ್ರಮ ಸಂಬಂಧ ಪ್ರಶ್ನಿಸಿದ ಪತ್ನಿಗೆ ಬೆಲ್ಟ್ ನಿಂದ ಹಿಗ್ಗಾಮುಗ್ಗ ಥಳಿಸಿದ ಪತಿಯನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವ ಪ್ರಕರಣ ತಾಲೂಕಿನ ಹಂಚ್ಯ ಗ್ರಾಮದಿಂದ ಜರುಗಿದೆ.

ಗ್ರಾಮದ ಸಯ್ಯಾದ್ ಮೊಕಿದೀನ್ ಅವರ ಪುತ್ರ ಸಯ್ಯಾದ್ ಯಾಸಿನ್ (32) ಎಂಬಾತನೆ ಪೊಲೀಸರ ಅತಿಥಿಯಾಗಿ ನ್ಯಾಯಾಂಗ ಬಂಧನಕ್ಕೆ ಒಳಪಟ್ಟಿರುವ ಅರೋಪಿಯಾಗಿದ್ದಾನೆ. ಈತನ ಪತ್ನಿ ಅಂಬ್ರೀನ್ ಬಾನು (31) ಎಂಬಾಕೆಯೆ ಪತಿಯಿಂದ ಹಿಗ್ಗಾಮುಗ್ಗ ಥಳಿತದ ಹಲ್ಲೆಗೆ ಒಳಗಾಗಿ ಪಟ್ಟಣದ ಸಾರ್ವಜನಿಕ ಅಸ್ಪತ್ರೆ ಸೇರಿ ಚಿಕಿತ್ಸೆ ಪಡೆಯುತ್ತಿರುವ ನತದೃಷ್ಟೆ ಗೃಹಿಣಿ.

Tap to resize

Latest Videos

 

ಮದುವೆಯಾಗಿ ಮಕ್ಕಳಿದ್ರೂ ಹೊಟೇಲ್ ರೂಂನಲ್ಲಿ ಸಿಕ್ಕಿಬ್ಬಿದ್ದ ಜೋಡಿ! ಮುಂದೇನಾಯ್ತು ನೋಡಿ!

ಪತಿಯ ಥಳಿತಕ್ಕೆ ಒಳಗಾಗಿ ಅಸ್ಪತ್ರೆ ಸೇರಿ ಚಿಕಿತ್ಸೆ ಪಡೆಯುತ್ತಿರುವ ಅಂಬ್ರೀನಾ ಕಳೆದ 8 ವರ್ಷಗಳ ಹಿಂದೆ ಸಯ್ಯಾದ್ ಯಾಸಿನೊಂದಿಗೆ ಮದುವೆಯಾಗಿ ಮೂರು ಮಕ್ಕಳಿದ್ದಾರೆ. ಈಕೆಯ ಪತಿ ಕೆಲವು ಟೂರಿಸ್ಟ್ ಬಸ್ ಗಳನ್ನು ಇಟ್ಟುಕೊಂಡು ಬಾಡಿಗೆಗೆ ಕಳುಹಿಸುತ್ತಿದ್ದನು, ಇತ್ತೀಚೆಗೆ ಧರ್ಮಸ್ಥಳ ಗ್ರಾಮೀಣ ಸಂಘದ ಪ್ರತಿನಿಧಿಗಳು ಪ್ರವಾಸಕ್ಕೆ ಹೋಗುವಾಗ ಈತ ಬಸ್ ಗಳನ್ನು ಕಳುಹಿಸುತ್ತಿದ್ದು, ಧರ್ಮಸ್ಥಳ ಸಂಘದ ಅರಕಲಗೂಡು ತಾಲೂಕು ರಾಮನಾಥಪುರದ ಪ್ರತಿನಿಧಿಯಾಗಿದ್ದ ಹೇಮಲತಾ ಈತನಿಗೆ ಪರಿಚಯವಾಗಿ, ಸ್ನೇಹಕ್ಕೆ ತಿರುಗಿ ಆಗಾಗ್ಗೆ ಮನೆಗೂ ಕರೆದುಕೊಂಡು ಬರುತ್ತಿದ್ದು, ಜ. 16 ರಂದು ತನ್ನ ಪತಿ ಅವನ ಪ್ರೇಯಸಿಯೊಂದಿಗೆ ನಡೆದುಕೊಳ್ಳುತ್ತಿರುವುದನ್ನು ನೋಡಿ ಮನೆಯಲ್ಲಿ ಈ ರೀತಿ ಸರಿಯಲ್ಲ ಎಂದು ಪತ್ನಿ ಪ್ರಶ್ನಿಸಿದಕ್ಕೆ ಕುಪಿತಗೊಂಡ ಪತಿ ತನ್ನ ಬೆಲ್ಟ್ ನಿಂದ ಹಿಗ್ಗಾಮುಗ್ಗ ಥಳಿಸಿ ಮಾರಣಾಂತಿಕವಾಗಿ ಹಲ್ಲೆ ನಡೆಸಿ ತನ್ನ ಪ್ರೇಯಸಿಯೊಂದಿಗೆ ಪರಾರಿಯಾಗಿದ್ದ.

ಸಾಲ ವಾಪಸ್ ಕೇಳಲು ಹೋದವನಿಗೆ ಮಚ್ಚಿನೇಟು..! ಅವನನ್ನ ಮುಗಿಸಲು ಆಕೆ ಮಾಡಿದ ಪ್ಲ್ಯಾನ್‌ ಏನ್‌ ಗೊತ್ತಾ ?

ಹಲ್ಲೆಗೆ ಒಳಗಾದ ಅಂಬ್ರೀನ್ ಹುಣಸೂರು ಸಾರ್ವಜನಿಕ ಅಸ್ಪತ್ರೆ ಸೇರಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಯ ವೈದ್ಯರು ಮಾಹಿತಿ ಮೆರೆಗೆ ಜ. 17 ರಂದು ಅಸ್ಪತ್ರೆಗೆ ಬಂದ ಗ್ರಾಮಾಂತರ ಪೊಲೀಸರಿಗೆ ಹಲ್ಲೆಗೆ ಒಳಗಾಗಿದ್ದ ಅಂಬ್ರೀಣ್ ದೂರು ನೀಡಿದರು. ದೂರು ಪಡೆದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸಯ್ಯಾದ್ ಯಾಸಿನ್ ಮತ್ತು ಹೇಮಾವತಿ ವಿರುದ್ದ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ

ಪತ್ನಿಯ ಮೆಲೆ ಮಾರಣಾಂತಿವಾಗಿ ಹಲ್ಲೆ ನಡೆಸಿ ಪರಾರಿಯಾಗಿದ್ದ ಸಯ್ಯಾದ್ ಯಾಸಿನ್ ಶನಿವಾರ ಹುಣಸೂರು ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದಾಗ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದಾಗ ಆರೋಪಿಯನ್ನು ನ್ಯಾಯಾಂಗ ಬಂಧನನಕ್ಕೆ ಒಪ್ಪಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಇನ್ಸ್ಪೆಕ್ಟರ್ ಎನ್. ಮುನಿಯಪ್ಪ, ಮುಖ್ಯಪೇದೆಗಳಾದ ಮಲ್ಲೇಶ್, ಸಿದ್ದರಾಜು ಹಾಗೂ ಸಿಬ್ಬಂದಿ ಕಾರ್ಯನಿರ್ವಹಿಸಿದರು.

click me!