ವಿವಾಹಿತ ಪುರುಷನೊಂದಿಗೆ ಪತ್ನಿ ಪರಾರಿ, ಹುಡುಕಿಕೊಡುವಂತೆ ಠಾಣೆ ಮೆಟ್ಟಿಲೇರಿದ ಪತಿ! ಅತ್ತ ಪತಿಯನ್ನ ಹುಡುಕಿಕೊಡುವಂತೆ ಪತ್ನಿ ದೂರು!

By Kannadaprabha News  |  First Published Jan 20, 2024, 8:43 PM IST

ವಿವಾಹಿತ ಮಹಿಳೆ ಮತ್ತೊಬ್ಬ ವಿವಾಹಿತ ಪುರುಷನ ಜೊತೆ ಓಡಿ ಹೋಗಿದ್ದು ನನ್ನ ಪತಿಯನ್ನು ಹುಡುಕಿಕೊಂಡುವಂತೆ ಪತ್ನಿ ಹಾಗೂ ಪತ್ನಿಯನ್ನು ಹುಡುಕಿಕೊಡುವಂತೆ ಪತಿ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.


ಬೆಂಗಳೂರು (ಜ.20): ವಿವಾಹಿತ ಮಹಿಳೆ ಮತ್ತೊಬ್ಬ ವಿವಾಹಿತ ಪುರುಷನ ಜೊತೆ ಓಡಿ ಹೋಗಿದ್ದು ನನ್ನ ಪತಿಯನ್ನು ಹುಡುಕಿಕೊಂಡುವಂತೆ ಪತ್ನಿ ಹಾಗೂ ಪತ್ನಿಯನ್ನು ಹುಡುಕಿಕೊಡುವಂತೆ ಪತಿ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.

ಬೆಂಗಳೂರಿನ ಪುಟ್ಟೇನಹಳ್ಳಿಯ ಇಲಿಯಾಸ್ ನಗರದಲ್ಲಿ ಘಟನೆ ನಡೆದಿದೆ. ಸುಮೈಯಾ ಬಾನು ಮತ್ತು ವಸೀಂ 7 ವರ್ಷಗಳ ಹಿಂದೆ ಮದುವೆ ಮಾಡಿಕೊಂಡಿದ್ದರು. ಈ ದಂಪತಿಗೆ ಮೂರು ವರ್ಷದ ಹೆಣ್ಣು ಮಗುವಿದೆ. ಆದರೆ ವಸೀಂ ಇತ್ತೀಚೆಗೆ ದಿಲ್ ಷಾದ್ ಎಂಬಾಕೆಯ ಮೇಲೆ ಪ್ರೇಮಾಂಕುರವಾಗಿದೆ. ಅದರಂತೆ ಈ ಜೋಡಿ ಆಗಾಗೇ ಭೇಟಿಯಾಗುತ್ತಿದ್ದರು.

Tap to resize

Latest Videos

ಹಾವೇರಿಯಲ್ಲಿ ಮತ್ತೊಂದು ನೈತಿಕ ಪೊಲೀಸಗಿರಿ ! ಹಿಂದು ಯುವಕ ಮುಸ್ಲಿಂ ಯುವತಿಗೆ ಥಳಿತ!

ಇನ್ನು ಪತಿ ವಸೀಂ ನಡುವಳಿಕೆ ಮೇಲೆ ಅನುಮಾನಗೊಂಡ ಸುಮೈಯಾ ಬಾನು ಪತಿಯನ್ನು ಹಿಂಬಾಲಿಸಿದ್ದಾಳೆ. ವಸೀಂ ದಿಲ್ ಷಾದ್ ಜೊತೆ ಹೋಟೆಲ್ ನಲ್ಲಿ ತಂಗಿದ್ದಾಗ ಕುಟುಂಬಸ್ಥರು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದರು. ಅಲ್ಲದೆ ತನ್ನ ಪತಿಯೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ದಿಲ್ ಷಾದ್ ಳನ್ನು ಹಿಡಿದು ಥಳಿಸಿದ್ದರು. ಈ ಸಂಬಂಧ ಪುಟ್ಟೇನಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿತ್ತು. 

ಇದೀಗ ವಸೀಂ ಹಾಗೂ ದಿಲ್ ಷಾದ್ ಜೋಡಿ ರಾತ್ರೋರಾತ್ರಿ ಪರಾರಿಯಾಗಿದ್ದು ಪತಿಯನ್ನು ಹುಡುಕಿಕೊಂಡುವಂತೆ ಸುಮೈದಾ ಬಾನು ಹಾಗೂ ಪತ್ನಿಯನ್ನು ಹುಡುಕಿಕೊಂಡುವಂತೆ ದಿಲ್ ಷಾದ್ ಪತಿ ನಯೀಂ ಠಾಣೆಗೆ ದೂರು ನೀಡಿದ್ದು ಪೊಲೀಸರು ಇಬ್ಬರಿಗಾಗಿ ಹುಡುಕಾಟ ನಡೆಸಿದ್ದಾರೆ.

ಬೆಂಗಳೂರು: ಮೊಬೈಲ್‌ ಕಳ್ಳನನ್ನು ಬೆನ್ನಟಿ ಹಿಡಿದ ಟ್ರಾಫಿಕ್ ಪೊಲೀಸರು!

click me!