ಮೊದಲ ಪತಿಯ ಹತ್ಯೆಗೆ 2ನೇ ಗಂಡನಿಂದ ಕಿಡ್ನಾಪ್ ಮಾಡಿಸಿದ ಪತ್ನಿ, ಕಾರು ಕೈಕೊಟ್ಟು ಲಾಕ್ !

By Suvarna News  |  First Published Aug 30, 2022, 7:16 PM IST

ಒಬ್ಬಳೇ ಯುವತಿಯನ್ನು ವರಿಸಿದ ಇಬ್ಬರ ಗಂಡಂದಿರ ನಡುವಿನ ಜಗಳ ಇದು.ಮೊದಲ ಗಂಡನನ್ನು ಅಪಹರಣ ಮಾಡಿ ಆತನನ್ನು ಹತ್ಯೆ ಮಾಡಲು ಯತ್ನಿಸಿದ ಎರಡನೇ ಪತಿ ಮತ್ತು ಅವನ ಸಹಚರರ ಇದೀಗ ಕಾಫಿನಾಡಿನ ಪೊಲೀಸರ ಅತಿಥಿಯಾಗಿದ್ದಾರೆ. 


ಚಿಕ್ಕಮಗಳೂರು(ಆ.30 :  ಇದು ಯಾವ ಸಿನಿಮಾಗೂ ಕಡಿಮೆ ಇಲ್ಲದ ನೈಜ ಘಟನೆ. ಪತ್ನಿ ತನ್ನ ಪತಿಗೆ ಗೊತ್ತಿಲ್ಲದಂತೆ ಎರಡನೆ ಮದುವೆಯಾಗಿದ್ದಾಳೆ. ತವರು ಮನಗೆ ಹೋದ ಪತ್ನಿಯಿಂದ ಯಾವುದೇ ಮೆಸೇಜ್ ಇಲ್ಲ, ಫೋನಿಲ್ಲ. ಹೀಗಾಗಿ ಪತ್ನಿಯ ತವರು ಮನೆಗೆ ತೆರಳಿದ ಮೊದಲ ಪತಿಗೆ ಆಘಾತವಾಗಿದೆ. ಈಕೆಗೆ ಎರಡನೇ ಮದುವೆಯಾಗಿರುವುದು ಬೆಳಕಿಗೆ ಬಂದಿದೆ. ಮನ ಒಲಿಸುವ ಪ್ರಯತ್ನ ನಡೆಸಿದರೂ ಯಾವದೇ ಪ್ರಯೋಜನವಾಗದೇ ಮೊದಲ ಗಂಡ ಮರಳಿದ್ದ. ಆದರೆ ಇದರಿಂದ ಕೆರಳಿದ ಪತ್ನಿ ಹಾಗೂ ಎರಡನೇ ಪತಿ ಮೊದಲ ಗಂಡನನ್ನು ಕಿಡ್ನಾಪ್ ಮಾಡಿ ಹತ್ಯೆಗೆ ಸಂಚು ರೂಪಿಸಿದ್ದಾರೆ. ಎಲ್ಲವೂ ಪ್ಲಾನ್ ಪ್ರಕಾರ ನಡೆದಿದೆ. ಸಿನಿಮಿಯಾ ರೀತಿಯಲ್ಲಿ ಅಪಹರಣ ಮಾಡಿ ಕಾರಿನಲ್ಲಿ ಹೋಗುವಾಗ ಕಾರು ಕೈಕೊಟ್ಟಿದೆ. ಇದರಿಂದ ಪತ್ನಿ, ಎರಡನೇ ಪತಿ ಹಾಗೂ ಇತರರ ಸಹಚರರು ಪೊಲೀಸರ ಅತಿಥಿಯಾದ ಘಟನೆ ಚಿಕ್ಕಮಗಳೂರಿನ ಕಡೂರಿನಲ್ಲಿ ನಡೆದಿದೆ.

ಏನಿದು ಪ್ರಕರಣ  : 
ಮೋಹನ್ ರಾಮ್ ಮತ್ತು ಮಂಜುಳಾ ಮೂಲತಃ ರಾಜಸ್ಥಾನದ(Rajasthan) ಮೂಲದವರು. ಮೋಹನ್ ರಾಮ್ ಕಳೆದ ಐದು ವರ್ಷಗಳ ಹಿಂದೆ ಕಡೂರಿಗೆ(Kadur Chikkamagaluru) ಆಗಮಿಸಿ ಸಣ್ಣ ವ್ಯಾಪಾರ ಆರಂಭಿಸಿದ್ದ,ಕಳೆದ ವರ್ಷ ಮಂಜುಳಾ ಎಂಬುವರನ್ನು ಜೋಧಪುರದಲ್ಲಿ ಪ್ರೀತಿಸಿ ಮದುವೆಯಾಗಿದ್ದನು(Love Marriage). ಮದುವೆ ಬಳಿಕ ಮೋಹನ್ ರಾಮ್ ತನ್ನ ಪತ್ನಿಯನ್ನು ಕಡೂರಿಗೆ ಕರೆದುಕೊಂಡು ಬಂದುಸಂಸಾರ ನಡೆಸಿದ್ದ. ಕಡೂರಿಗೆ ಬಂದ 2 ತಿಂಗಳ ನಂತರ ರಾಜಸ್ಥಾನಕ್ಕೆ ಹೋಗಿದ್ದ ಹೆಂಡತಿಯನ್ನ ಕಡೂರಿಗೆ ಕರೆದುಕೊಂಡು ಬರಲು ಹೋಗಿದ್ದ ಪತಿ ಮೋಹನ್ ರಾಮ್ ಜೊತೆ ಮಂಜುಳಾ ಬರಲಿಲ್ಲ. ಕಡೂರಿಗೆ ಬರಲು ಆಕೆ ಒಪ್ಪದ ಹಿನ್ನೆಲೆ ಬೇಸತ್ತು ಮೋಹನ್ ಸುಮ್ಮನಾಗಿದ್ದನು. ಹೆಂಡತಿಯ ಮೇಲಿನ ಪ್ರೀತಿಯಿಂದ ಮೋಹನ್ ಆಗಾಗ್ಗೆ ಅವಳ ಮೊಬೈಲ್‌ಗೆ ಮೆಸೇಜ್ ಮಾಡಿದರೂ ಆಕೆಯಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆ ಕಳೆದ ತಿಂಗಳು ಮತ್ತೆ ಆಕೆಯನ್ನ ಮಾತನಾಡಿಸಿ, ಬುದ್ಧಿ ಹೇಳಿ ಕರೆದುಕೊಂಡು ಬರಲು ಹೋಗಿದ್ದ ಮೋಹನ್‌ಗೆ ಆಘಾತವಾಗಿದೆ.

Latest Videos

undefined

''ಚಾಕುವಿನಿಂದ ಬೆದರಿಸಿ ಮುಂಬೈ ಮಹಿಳೆ ಮೇಲೆ ಗ್ಯಾಂಗ್‌ರೇಪ್‌ ಕಟ್ಟುಕತೆ..!''

ತನ್ನ ಪತಿಗೆ ಹರಿಯಾಣದ ಪಿಪ್ಲಿವಾಲ ಗ್ರಾಮದ ಓಂಪ್ರಕಾಶ್ ಜೊತೆ ಮದುವೆಯಾಗಿರುವುದಾಗಿ ತಿಳಿದು ಬಂದಿದೆ. ಮೋಹನ್ ತನ್ನ ಪತ್ನಿಗೆ ಮೆಸೇಜ್ ಮಾಡುತ್ತಿರುವ ವಿಷಯ ತಿಳಿದ ಎರಡನೇ ಪತಿ ಓಂ ಪ್ರಕಾಶ್ ಮೊದಲ ಪತಿ ಮೋಹನ್ ನನ್ನ ಮುಗಿಸಲು ಸಂಚು ರೂಪಿಸಿದ್ದ. ಏಳು ಜನರ ತಂಡದೊಂದಿಗೆ ಆಗಸ್ಟ್ 28ರ ಭಾನುವಾರ ರಾತ್ರಿ ಕಡೂರಿಗೆ ಬಂದ ಓಂ ಪ್ರಕಾಶ್  ಸಿಪಿಸಿ ಕಾಲೋನಿಯಲ್ಲಿರುವ  ದಿನಸಿ ಅಂಗಡಿಯಲ್ಲಿದ್ದ ಮೋಹನ್ ರಾಮ್ನನ್ನು ಸಿನಿಮಿಯ ಶೈಲೆಯಲ್ಲಿ ಅಪಹರಿಸಿ(Kidnap) ಆತನ ಬಾಯಿಗೆ ಬಟ್ಟೆ ಕಟ್ಟಿ ಥಳಿಸಿ, ಕಾರಿನಲ್ಲಿಯೇ ಕೊಲೆಗೆ(Murder sketch) ಸಂಚು ನಡೆಸಿದ್ದಾರೆ. ಕಾರಿನಲ್ಲಿ ಅಪಹರಿಸಿಕೊಂಡು ಹೋಗುತ್ತಿದ್ದ ದೃಶ್ಯವನ್ನು ಸ್ಥಳೀಯರು ಗಮನಿಸಿದ ಕೂಡಲೇ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ತಕ್ಷಣ ಕಾರ್ಯಪ್ರವೃತರಾದ ಕಡೂರು ಪೊಲೀಸರು ಹಂತಕರ ಕಾರನ್ನ ಚೇಸ್ ಮಾಡಿಕೊಂಡು ಹೋಗುವಾಗ ಕಡೂರು ತಾಲೂಕಿನ ಮತಿಘಟ್ಟ ಬಳಿ ಹಂತಕರ ಕಾರು ಕೈಕೊಟ್ಟಿದೆ. ಇದರ ಪರಿಣಾಮ ಎಂಟು ಜನ ಹಂತಕರು ಪೊಲೀಸರ ಅತಿಥಿಯಾಗಿದ್ದಾರೆ. 

ಸಾವಿನ ದವಡೆಯಲ್ಲಿದ್ದ ಮೋಹನ್ ರಾಮ್ ಅದೃಷ್ಟವಶಾತ್ ಪಾರಾಗಿದ್ದಾರೆ. ಸಿನಿಮಿಯ ರೀತಿ ಗಾಡಿಯನ್ನ ಚೇಸ್ ಮಾಡಿದ ಪೊಲೀಸರು ಆರೋಪಿ 2ನೇ ಪತಿ ಓಂ. ಪ್ರಕಾಶ್ , ಶೈಲೇಂದ್ರ, ಪ್ರದೀಪ್, ದಲ್ಲಾರಾಮ್, ಜಿತೇಂದ್ರ, ಶಂಕರ್ ಪಾಟೀಲ್ ಹಾಗೂ ದಿನೇಶ್ ಎಂಬ ಆರೋಪಿಗಳ ಜೊತೆ ಕೊಲೆಗೈಯಲು ಬಳಸಿದ್ದ ವಿಕೇಟ್ ಹಾಗೂ ಕಾರನ್ನು ವಶಕ್ಕೆ ಪಡೆದ ಪೊಲೀಸರು ಆರೋಪಿಗಳನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಪೊಲೀಸರ ಈ ಕಾರ್ಯಾಚರಣೆಯಲ್ಲಿ ಸಿಪಿಐ ಶಿವುಕುಮಾರ್, ಪಿ.ಎಸ್.ಐ.ಎನ್.ಕೆ. ರಮ್ಯಾ, ಹರೀಶ್, ಸಿಬ್ಬಂದಿಗಳಾದ ಕೃಷ್ಣಮೂರ್ತಿ, ರಾಜಪ್ಪ, ರಮೇಶ್, ಕುಚೇಲ, ಚಂದ್ರಶೇಖರ್ ಹಾಗೂ ಓಂಕಾರ್ ಮತ್ತಿತರಿದ್ದರು ಪಾಲ್ಗೊಂಡಿದ್ದರು.

ಹೋಟೆಲ್‌ನಲ್ಲಿ ಯುವತಿ ಜತೆ ಅಸಭ್ಯ ವರ್ತನೆ ಆರೋಪ: ಇನ್ಸ್‌ಪೆಕ್ಟರ್ ಸಸ್ಪೆಂಡ್‌

ಕೊಲೆಗೈಯಲು 2ನೇ ಗಂಡನಿಂದ ಸಿನಿಮೀ ರೀತಿ ಕಿಡ್ನ್ಯಾಪ್
ಮೊದಲ ಗಂಡನನ್ನು ಎರಡನೆಯ ಗಂಡ ಹಾಗೂ ಇತರ ಏಳು ಜನ ಅಪಹರಣ ಮಾಡಿಕೊಂಡು ತೆರಳುವ ವೇಳೆ ಪೊಲೀಸರು ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ಹಿಡಿಯುವಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕಡೂರು ಪೊಲೀಸರು ಸಫಲರಾಗಿದ್ದಾರೆ. ಕಡೂರು ಪಿಪಿಸಿ ಕಾಲನಿಯ ದಿನಸಿ ವ್ಯಾಪಾರಿ ಮೋಹನ್ ರಾಮ್ ಎಂಬುವನನ್ನು ಅಪಹರಿಸಿದ್ದ ಆರೋಪಿಗಳಾದ ಎರಡನೇ ಪತಿ ಓಂಪ್ರಕಾಶ್, ಶೈಲೇಂದ್ರ, ಪದೀಪ್, ದಲ್ಲಾರಾಮ್, ಜಿತೇಂದ್ರ, ಶಂಕರ್ ಪಾಟೀಲ್ ಹಾಗೂ ದಿನೇಶ್ ಎಂಬುವರನ್ನು ಬಂಧಿಸಿ ಅಪಹರಣ ಹಾಗೂ ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. 

ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು 

click me!