
ರಾಂಚಿ (ಆ. 30): ಜಾರ್ಖಂಡ್‌ನ ಧುಮ್ಕಾ ನಗರದಲ್ಲಿ ನಡೆದ ಅಂಕಿತಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡೀ ನಗರದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ. ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಡಿಎಸ್‌ಪಿಯನ್ನು ವಜಾ ಮಾಡುವಂತೆ ಸ್ಥಳೀಯ ಜನರು ಒತ್ತಾಯ ಮಾಡಿದ್ದರು. ಬಿಜೆಪಿ ನಾಯಕರು, ಹಿಂದು ಸಂಘಟನೆಗಳ ಸದಸ್ಯರು ಹಾಗೂ ಅಂಕಿತಾಳ ಕುಟುಂಬದವರು ಪ್ರಕರಣದ ತನಿಖೆಯಿಂದ ಡಿಎಸ್‌ಪಿ ನೂರ್ ಮುಸ್ತಫಾ ಅವರನ್ನು ತೆಗೆದುಹಾಕಬೇಕು ಎಂದು ಒತ್ತಾಯ ಮಾಡಿದ್ದರು. ಅದರಂತೆ ಅವರನ್ನು ಪ್ರಕರಣದ ತನಿಖೆಯಿಂದ ಹೊರಹಾಕಲಾಗಿದೆ. ಮಾಜಿ ಸಿಎಂ ಹಾಗೂ ಬಿಜೆಪಿ ಮುಖಂಡ ರಘುವರ್ ದಾಸ್ ಕೂಡ ಡಿಎಸ್‌ಪಿ ನೂರ್ ಮುಸ್ತಫಾ ಪಿಎಫ್‌ಐ ಜೊತೆ ಶಾಮೀಲಾಗಿದ್ದಾರೆ ಎಂದು ಆರೋಪ ಮಾಡಿದ್ದರು. ಅದೇ ಸಮಯದಲ್ಲಿ, ಈಗ ಇನ್ಸ್‌ಪೆಕ್ಟರ್ ಮಟ್ಟದ ಪೊಲೀಸ್ ಅಧಿಕಾರಿಗಳು ಈ ವಿಷಯವನ್ನು ತನಿಖೆ ಮಾಡಲಿದ್ದು, ಇಡೀ ಪ್ರಕರಣವನ್ನು ಎಸ್‌ಪಿ ಮಟ್ಟದ ಅಧಿಕಾರಿ ಮೇಲ್ವಿಚಾರಣೆ ಮಾಡುತ್ತಾರೆ. ಆದರೆ, ಡಿಎಸ್‌ಪಿ ನೂರ್ ಮುಸ್ತಫಾ ವಿರುದ್ಧ ಈವರೆಗೂ ಯಾವುದೇ ಪ್ರಕರಣ ದಾಖಲು ಮಾಡಲಾಗಿಲ್ಲ. ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಬಾಬುಲಾಲ್ ಮರಾಂಡಿ ಕೂಡ ಈ ಕುರಿತಾಗಿ ಕೆಲವು ದಾಖಲೆಗಳನ್ನು ಹಂಚಿಕೊಂಡಿದ್ದಾರೆ. ಅಂಕಿತಾ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ಶಾರುಖ್ ಹುಸೇನ್‌ನನ್ನು ರಕ್ಷಿಸಲು ನೂರ್ ಮುಸ್ತಫಾ ಪ್ರಯತ್ನ ಮಾಡುತ್ತಿದ್ದಾರೆ. ನೂರ್ ಮುಸ್ತಫಾ ಬುಡಕಟ್ಟು ಜನರ ವಿರೋಧಿ ಹಾಗೂ ಕೋಮುವಾದಿ. ಅದಕ್ಕೆ ನನ್ನ ಬಳಿ ದಾಖಲೆ ಇದೆ ಎಂದಿದ್ದಾರೆ.
ಪ್ರೀತಿಯನ್ನು ನಿರಾಕರಿಸಿದ ಹಾಗೂ ಫೋನ್ ಕರೆಯನ್ನು ಸ್ವೀಕರಿಸಿದ ಕಾರಣಕ್ಕೆ ಶಾರುಖ್ ಹುಸೇನ್ (shahrukh hussain) ಎಂಬಾತ ಮುಂಜಾನೆ ವೇಳೆ 17 ವರ್ಷದ ಹುಡುಗಿ ಅಂಕಿತಾ ಸಿಂಗ್ ಅವರ ಮನೆಗೆ ನುಗ್ಗಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ. ಆಗಸ್ಟ್ 23ರ ಮುಂಜಾನೆ 4.30ಕ್ಕೆ ಈ ಘಟನೆ ನಡೆದಿತ್ತು. ನಾನು ಬೆಂಕಿಯಲ್ಲಿ ಉರಿಯುತ್ತಿದ್ದ ವೇಳೆ ಶಾರುಖ್ ಹುಸೇನ್ ಕಿಟಿಕಿಯ ಹೊರಗಡೆ ನಿಂತಿದ್ದ. ಆತನ ಕೈಯಲ್ಲಿ ಪೆಟ್ರೋಲ್ ತುಂಬಿದ್ದ ಕ್ಯಾನ್ ಹಾಗೂ ಬೆಂಕಿಪೊಟ್ಟಣವಿತ್ತು ಎಂದು ಅಂಕಿತಾ ಸಿಂಗ್ (Ankita Singh) ಸಾವಿಗೂ ಮುನ್ನ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಆರೋಪಿ ಮೊದಲು ಕೋಣೆಯ ಕರ್ಟನ್‌ಗಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ. ಅದಾದ ನಂತರ ಅಂಕಿತಾ ತಪ್ಪಿಸಿಕೊಳ್ಳಲು ಸಾಧ್ಯವಾಗದೇ ಇರುವಂತೆ ಇನ್ನೂ ಹೆಚ್ಚಿನ ಪೆಟ್ರೋಲ್ ಅನ್ನು ಕೋಣೆಗೆ ಸುರಿದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಇದರಿಂದಾಗಿ ಅಂಕಿತಾಗೆ ಕೋಣೆಯಿಂದ ಹೊರಬರುವ ಸಾಧ್ಯತೆಗಳೇ ಇದ್ದಿರಲಿಲ್ಲ ಎಂದು ಪ್ರಕರಣದ ಆರಂಭಿಕ ವಿಚಾರಣೆ ನಡೆಸಿದ್ದ ಪೊಲೀಸ್ ಅಧಿಕಾರಿ ನೂರ್ ಮುಸ್ತಫಾ ಹೇಳಿದ್ದಾರೆ. ಆಕೆಯ ಕುಟುಂಬದವರು ಹಾಗೂ ನೆರೆಹೊರೆಯವರು ಆಕೆಯನ್ನು ರಕ್ಷಿಸಿ ಧುಮ್ಕಾ ವೈದ್ಯಕೀಯ ಕಾಲೇಜು (Dhumka Medical College) ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ. ಶೇ. 95ರಷ್ಟು ಸುಟ್ಟ ಗಾಯಗಳಾದ ಕಾರಣ ಆಕೆಯನ್ನು ರಾಂಚಿಯ ರಿಮ್ಸ್‌ಗೆ ದಾಖಲು ಮಾಡಲಾಗಿತ್ತು.
2 ವರ್ಷಗಳಿಂದ ಶಾರುಖ್‌ನ ಭಯದಲ್ಲೇ ಬದುಕಿದ್ದಳು ಅಂಕಿತಾ, ಶಿಕ್ಷೆಯ ಭಯವಿಲ್ಲದೆ ನಗುತ್ತಲೇ ಬಂದ ಆರೋಪಿ!
ಇನ್ನೊಂದೆಡೆ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಕೂಡ ಈ ಬಗ್ಗೆ ಮಾತನಾಡಿದ್ದು, ತಪ್ಪಿತಸ್ಥರನ್ನು ಬಿಡುವ ಮಾತೇ ಇಲ್ಲ ಎಂದು ಹೇಳಿದ್ದಾರೆ. ಈ ಘಟನೆ ಖಂಡಿತವಾಗಿಯೂ ಹೃದಯ ವಿದ್ರಾವಕವಾಗಿದ್ದು, ಕಾನೂನು ತನ್ನ ತೆಗೆದುಕೊಳ್ಳಲಿದೆ ಎಂದು ಅವರು ಹೇಳಿದ್ದಾರೆ. ಆರೋಪಿಗಳಿಗೆ ಆದಷ್ಟು ಬೇಗ ಶಿಕ್ಷೆಯಾಗುವಂತೆ ನೋಡಿಕೊಳ್ಳುವುದು ನಮ್ಮ ಕೆಲಸ. ಇಂತಹ ಘಟನೆಗಳಿಗೆ ಸಮಾಜದಲ್ಲಿ ಸ್ಥಾನವಿಲ್ಲ ಎಂದು ಸೋರೆನ್ ಹೇಳಿದ್ದಾರೆ. ಇಂತಹ ಘಟನೆಗಳಲ್ಲಿ ಶಿಕ್ಷೆಯ ನಿಬಂಧನೆಗಳನ್ನು ಇನ್ನಷ್ಟು ಬಿಗಿಗೊಳಿಸಬೇಕಾಗಿದೆ ಎಂದು ಅವರು ಹೇಳಿದ್ದಾರೆ.
ಫೋನ್‌ನಲ್ಲಿ ಮಾತನಾಡಿಲ್ಲವೆಂದು ಪಿಯುಸಿ ವಿದ್ಯಾರ್ಥಿನಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ!
ಕುಟುಂಬಕ್ಕೆ 10 ಲಕ್ಷ ಪರಿಹಾರ: ಅಂಕಿತಾ ಸಿಂಗ್ ಕುಟುಂಬಕ್ಕೆ 10 ಲಕ್ಷ ರೂಪಾಯಿ ಪರಿಹಾರವನ್ನೂ ನೀಡಲಾಗಿದೆ. ಅದರೊಂದಿಗೆ ಈ ಹೇಯ ಘಟನೆಗೆ ಸಂಬಂಧಿಸಿದಂತೆ ಆದಷ್ಟು ಬೇಗ ತನಿಖೆ ಪೂರ್ಣ ಮಾಡಿ ತಪ್ಪಿತಸ್ಥನಿಗೆ ಶಿಕ್ಷೆಯಾಗುವಂತೆ ನೋಡುವಂತೆ ಸಿಎಂ ಸೂಚಿಸಿದ್ದಾರೆ. ಈ ಪ್ರಕರಣದಲ್ಲಿ ಎಡಿಜಿ ಶ್ರೇಣಿಯ ಅಧಿಕಾರಿಯಿಂದ ಪ್ರಗತಿಯ ಕುರಿತು ಆರಂಭಿಕ ವರದಿಯನ್ನು ನೀಡುವಂತೆ ಪೊಲೀಸ್ ಮಹಾನಿರ್ದೇಶಕರಿಗೆ ಸೂಚಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ