ಯೋಗೀಶಗೌಡ ಕೊಲೆ ಕೇಸ್‌: ವಿನಯ ಕುಲಕರ್ಣಿಗೆ ಎದುರಾಯ್ತು ಸಂಕಷ್ಟ..!

By Kannadaprabha NewsFirst Published Apr 7, 2023, 4:00 AM IST
Highlights

ಪ್ರಕರಣದ ಆರೋಪಿ ಶಿವಾನಂದ ಬಿರಾದಾರ ಸರ್ಕಾರದ ಪರ ಸಾಕ್ಷಿ ನೀಡಲು ಸಮ್ಮತಿ, ಚುನಾವಣಾ ಹೊಸ್ತಿಲಿನಲ್ಲಿ ಇದು ಸಂಕಷ್ಟವೇ ಸರಿ. 

ಬಸವರಾಜ ಹಿರೇಮಠ

ಧಾರವಾಡ(ಏ.07):  ಮಾಜಿ ಸಚಿವ ವಿನಯ ಕುಲಕರ್ಣಿ ವಿಧಾನಸಭಾ ಚುನಾವಣೆಗೆ ಧಾರವಾಡ ಗ್ರಾಮೀಣ ಕ್ಷೇತ್ರದಿಂದ ಟಿಕೆಟ್‌ ತಂದ ಖುಷಿ ಒಂದೆಡೆಯಾದರೆ, ಯೋಗೀಶಗೌಡ ಗೌಡರ ಕೊಲೆ ಪ್ರಕರಣದ ಆರೋಪಿಯೊಬ್ಬ ಮಾಫಿ ಸಾಕ್ಷಿ ಹೇಳಲು ಸಿದ್ಧನಾಗಿರುವುದು ಇನ್ನೊಂದೆಡೆ ತಳಮಳ ಶುರುವಾಗಿದೆ.

ಹೆಬ್ಬಳ್ಳಿ ಜಿಪಂ ಸದಸ್ಯರಾಗಿದ್ದ ಯೋಗೀಶಗೌಡ ಗೌಡರ ಕೊಲೆ ಪ್ರಕರಣದಲ್ಲಿ ಜಾಮೀನಿನಲ್ಲಿರುವ ವಿನಯ ಕುಲಕರ್ಣಿ ಚುನಾವಣೆ ಹೊಸ್ತಿನಲ್ಲಿ ಧಾರವಾಡ ಜಿಲ್ಲೆಯ ಪ್ರವೇಶಕ್ಕೆ ಕೋರಿ ಸುಪ್ರಿಂ ಕೋರ್ಚ್‌ನಲ್ಲಿ ಸಲ್ಲಿಸಿದ್ದ ಅರ್ಜಿ ವಜಾಗೊಂಡ ಬೇಸರದ ಬೆನ್ನಲ್ಲಿಯೇ ಇದೀಗ ಪ್ರಕರಣದ ಆರೋಪಿಯೊಬ್ಬ ಮಾಫಿ ಸಾಕ್ಷಿಯಾಗಲು ಸಿದ್ಧನಾಗಿರುವುದು ವಿನಯ ಕುಲಕರ್ಣಿ ಅವರಿಗೆ ತುಸು ತ್ರಾಸದಾಯಕವೇ ಹೌದು.

ಬೆಳಗಾವಿ ರಾಜಕಾರಣ ಹುಬ್ಬಳ್ಳಿಗೆ ಶಿಫ್ಟ್: ರಹಸ್ಯ ಸಭೆಯಲ್ಲಿ ನಡೆದಿದ್ದೇನು?

ಯೋಗೀಶ್‌ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಿಬಿಐ ತನಿಖೆ ನಡೆಸಿ ವಿನಯ ಕುಲಕರ್ಣಿ ಸೇರಿದಂತೆ ಹಲವರ ವಿರುದ್ಧ ಆರೋಪಪಟ್ಟಿಸಲ್ಲಿಸಿದೆ. ಪ್ರಸ್ತುತ ವಿಚಾರಣೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ನಡೆದಿದೆ. ಇದೇ ವೇಳೆ ಈ ಪ್ರಕರಣದಲ್ಲಿ ವಿನಯ ಕುಲಕರ್ಣಿ ಅವರಿಗೆ ಶಾಕಿಂಗ್‌ ಸಂಗತಿಯೊಂದು ನಡೆದಿದೆ. ಯೋಗೀಶಗೌಡ ಗೌಡರ ಕೊಲೆ ಆರೋಪಿಗಳಿಗೆ ಕಂಟ್ರಿ ಪಿಸ್ತೂಲ್‌ ತಂದುಕೊಟ್ಟಿದ್ದ ಪ್ರಕರಣದ 17ನೇ ಆರೋಪಿ ವಿಜಯಪುರ ಮೂಲದ ಶಿವಾನಂದ ಬಿರಾದಾರ ಸರ್ಕಾರದ ಪರವಾಗಿ ಸಾಕ್ಷಿ ನೀಡಲು ಬೆಂಗಳೂರು ಹೈಕೋರ್ಟ್‌ ಮುಂದೆ ಹೋಗಿದ್ದು ನ್ಯಾಯಾಲಯ ಸಹ ಒಪ್ಪಿಗೆ ನೀಡಿದೆ.

ಹಿಂದೇನಾಗಿತ್ತು?:

2016ರ ಜೂನ್‌ 15ರಂದು ಧಾರವಾಡದಲ್ಲಿ ನಡೆದಿದ್ದ ಯೋಗೀಶ್‌ ಗೌಡ ಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ ಕೂಡ ಜೈಲು ಕಂಡು ಬಂದಿದ್ದಾರೆ. ಕೊಲೆ ನಡೆದ ಬಳಿಕ ಉಪ ನಗರ ಠಾಣೆ ಪೊಲೀಸರು ತನಿಖೆ ನಡೆಸಿ, ಅದಾಗಲೇ ವಿಚಾರಣೆ ಶೇ.90ರಷ್ಟುಮುಗಿದು ಹೋಗಿತ್ತು. ಆದರೆ, ಯಾವಾಗ ರಾಜ್ಯದಲ್ಲಿ ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿತೋ, 2019ರ ಸೆಪ್ಟಂಬರ್‌ 6ರಂದು ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲಾಯಿತು.

ಸಿಬಿಐ 2019ರ ಸೆಪ್ಟಂಬರ್‌ 24ರಂದು ಎಫ್‌ಐಆರ್‌ ದಾಖಲಿಸಿಕೊಂಡು ತನಿಖೆ ಆರಂಭಿಸಿತು. ಪ್ರಕರಣದ ಅಂಗವಾಗಿ ಸಿಬಿಐ ಅನೇಕರನ್ನು ಬಂಧಿಸಿ ಜೈಲಿಗಟ್ಟಿತ್ತು. ಅದರಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ, ಅವರ ಮಾವ ಚಂದ್ರಶೇಖರ ಇಂಡಿ, ಕೆಎಎಸ್‌ ಅಧಿಕಾರಿ ಸೋಮಶೇಖರ್‌ ಕೂಡ ಇದ್ದರು. ಇದೀಗ ಇವರೆಲ್ಲ ಜಾಮೀನಿನ ಮೇಲೆ ಹೊರಗೆ ಬಂದಿದ್ದರೂ ಅವರಿಗೆ ಕಂಟಕ ಮಾತ್ರ ತಪ್ಪಿಲ್ಲ.

ಈ ಪ್ರಕರಣದಲ್ಲಿ ಕೊಲೆ ಮಾಡಲು ಬಂದಿದ್ದ ಆರೋಪಿಗಳು ತಮ್ಮ ರಕ್ಷಣೆಗಾಗಿ ಕಂಟ್ರಿ ಪಿಸ್ತೂಲು ತಂದಿದ್ದರು ಎನ್ನುವ ಮಾಹಿತಿ ಸಿಬಿಐಗೆ ಲಭ್ಯವಾಗಿತ್ತು. ಯೋಗೀಶ್‌ ಹತ್ಯೆಯಲ್ಲಿ ಪಿಸ್ತೂಲು ಬಳಕೆಯಾಗದಿದ್ದರೂ ಈ ಅಂಶ ಸಾಕಷ್ಟುಗಮನ ಸೆಳೆದಿತ್ತು. ಸಿಬಿಐ ತನಿಖೆ ವೇಳೆ ಈ ಅಂಶ ಹೊರಗೆ ಬಂದಿತ್ತು. ಆದರೆ ಆ ಕಂಟ್ರಿ ಪಿಸ್ತೂಲನ್ನು ಹಂತಕರ ಕೈಗೆ ಕೊಟ್ಟವರು ಯಾರು? ಎಂಬುದು ಕುತೂಹಲ ಕೆರಳಿಸಿತ್ತು.

ಕಾಂಗ್ರೆಸ್ಸಿನ ಗ್ಯಾರಂಟಿ ಕಾರ್ಡ್‌ಗೆ ಮೋಸ ಹೋಗಬೇಡಿ: ಸಚಿವ ಹಾಲಪ್ಪ ಆಚಾರ್

ಆಗ ಸಿಬಿಐ ಈ ಅಂಶವನ್ನು ಹೊರಗೆ ತರುವಲ್ಲಿ ಯಶಸ್ವಿಯಾಗಿತ್ತು. ಹೀಗೆ ಹಂತಕರ ಕೈಗೆ ಪಿಸ್ತೂಲು ತಂದು ಕೊಟ್ಟಿದ್ದು ವಿಜಯಪುರ ಜಿಲ್ಲೆಯ ಶಿವಾನಂದ ಶ್ರೀಶೈಲ ಬಿರಾದಾರ್‌. ಈ ಪ್ರಕರಣದಲ್ಲಿ ವಿನಯ ಕುಲಕರ್ಣಿ ಮಾವ ವಿಜಯಪುರದ ಚಂದ್ರಶೇಖರ ಇಂಡಿ ಕೂಡ ಒಬ್ಬ ಪ್ರಮುಖ ಆರೋಪಿ. ಇವರೇ ಶಿವಾನಂದ ಮೂಲಕ ಕಂಟ್ರಿ ಪಿಸ್ತೂಲಿನ ವ್ಯವಸ್ಥೆ ಮಾಡಿದ್ದರು ಎಂದು ಸಿಬಿಐ ತನಿಖೆಯಿಂದ ತಿಳಿದು ಬಂದಿತ್ತು. ಇದೀಗ ಶಿವಾನಂದ ಬಿರಾದಾರ್‌ ಮಾಫಿ ಸಾಕ್ಷಿಯಾಗಲು ಬಯಸಿ ಬೆಂಗಳೂರಿನ ಹೈಕೋರ್ಚ್‌ಗೆ ಅರ್ಜಿ ಸಲ್ಲಿಸಿದ್ದ. ಪ್ರಕರಣದಲ್ಲಿ 17ನೇ ಆರೋಪಿಯಾಗಿರುವ ಈತನಿಗೆ ಮಾಫಿ ಸಾಕ್ಷಿಯಾಗಲು ಹೈಕೋರ್ಚ್‌ ಒಪ್ಪಿಗೆ ನೀಡಿದ್ದು, ಮಹತ್ವದ ಬೆಳವಣಿಗೆ ಎನ್ನಬಹುದು.

ಮುಖ್ಯಮಂತ್ರಿ ಬೊಮ್ಮಾಯಿ ಸೋಲಿಸಲು ಕಾಂಗ್ರೆಸ್‌ ವಿನಯ ಕುಲಕರ್ಣಿ ಅವರನ್ನು ಶಿಗ್ಗಾಂವ ಕ್ಷೇತ್ರದಿಂದ ಸ್ಪರ್ಧಿಸಲು ಸೂಚಿಸಿತ್ತು. ಆದರೆ, ಧಾರವಾಡ ಕ್ಷೇತ್ರದಿಂದಲೇ ಸ್ಪರ್ಧಿಸುತ್ತೇನೆಂದು ಹಠ ಹಿಡಿದು ವಿನಯ ಇದೀಗ ಟಿಕೆಟ್‌ ತೆಗೆದುಕೊಂಡು ಬಂದಿದ್ದಾರೆ. ಇತ್ತ ಅಭ್ಯರ್ಥಿಯಾಗಿ ಕ್ಷೇತ್ರಕ್ಕೆ ಹೋಗದೇ ಬೆಂಬಲಿಗರಿಂದಲೇ ಗೆದ್ದು ಬರುವ ಸವಾಲು ಒಂದೆಡೆಯಾದರೆ, ಕೊಲೆ ಪ್ರಕರಣದ ಕಾನೂನು ತೊಡಕುಗಳು ಸಹ ಅವರಿಗೆ ಎದುರಾಗಿದ್ದು ಎಲ್ಲವನ್ನು ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದ

click me!