ವಿಜಯಪುರ: ಬದುಕಿದ್ದಾಗಲೇ ಮರಣ ಪ್ರಮಾಣ ಪತ್ರ ಕಂಡು ದಂಗಾದ ವೃದ್ಧೆ, ಆಸ್ತಿ ಲಪಟಾಯಿಸಲು ಪ್ಲಾನ್..?

Published : Apr 06, 2023, 08:37 PM IST
ವಿಜಯಪುರ: ಬದುಕಿದ್ದಾಗಲೇ ಮರಣ ಪ್ರಮಾಣ ಪತ್ರ ಕಂಡು ದಂಗಾದ ವೃದ್ಧೆ, ಆಸ್ತಿ ಲಪಟಾಯಿಸಲು ಪ್ಲಾನ್..?

ಸಾರಾಂಶ

ಏನೇ ಇರಲಿ ಜೀವಂತವಿರುವ ವೃದ್ಧೆಗೆ ಮರಣ ಪತ್ರ ನೀಡಿ ಎಸಗಿರುವ ಪ್ರಮಾದದಿಂದ ಜನನ ಮತ್ತು ಮರಣ ನೋಂದಣಿ ಅಧಿಕಾರಿ ಇಲಾಖೆಯನ್ನು ಅಣುಕಿಸುವಂತಾಗಿದೆ.

ಷಡಕ್ಷರಿ‌ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್, ವಿಜಯಪುರ

ವಿಜಯಪುರ(ಏ.06):  ಸತ್ತ ಮೇಲೆ ಆ ವ್ಯಕ್ತಿಯ ಮರಣ ಪತ್ರ ಪಡೆದುಕೊಳ್ಳಲು ಕುಟುಂಬಸ್ಥರು ಸರ್ಕಾರಿ ಕಚೇರಿಗಳಿಗೆ ಅಲೆದಾಡಿದ ಅದೇಷ್ಟೋ ಪ್ರಸಂಗಗಳಿವೆ. ಸತ್ತವರ ಕುಟುಂಬಸ್ಥರ ಮರಣ‌ ಪತ್ರ ಪಡೆಯಲು ಕಚೇರಿಗೆ ಅಲೆದಾಡಿ ಚಪ್ಪಲಿ ಹರಿದುಕೊಂಡ ಪ್ರಸಂಗಗಳು ಇವೆ. ಆದ್ರೆ ಈ ನಡುವೆ ವಿಜಯಪುರ ಜಿಲ್ಲೆಯ ಚಡಚಣದ ಜನನ, ಮರಣ ನೋಂದಣಾಧಿಕಾರಿಗಳು ವೃದ್ಧೆಯೊಬ್ಬಳಿಗೆ ಆಕೆ ಸಾವಿಗೂ ಮುನ್ನವೇ ಮರಣ ಪ್ರಮಾಣ ಪತ್ರ ನೀಡಿದ್ದಾರೆ. ಅಧಿಕಾರಿಗಳ ಈ ಯಡವಟ್ಟಿಗೆ ಜನರು ಹಿಡಿಶಾಪ ಹಾಕ್ತಿದ್ದಾರೆ. ಆಸ್ತಿ ಹೊಡೆಯಲು ನಡೆದ ಪ್ಲಾನ್ ಇದು ಎನ್ನುವ ಆರೋಪಗಳು ಸಹ ಕೇಳಿ ಬಂದಿವೆ. 

ತನ್ನದೇ ಡೆತ್ ಸರ್ಟಿಫಿಕೇಟ್ ಕಂಡು ಕಂಗಾಲಾದ ವೃದ್ಧೆ..!

ಬದುಕಿರುವಾಗಲೇ ವೃದ್ಧೆಯೊಬ್ಬಳಿಗೆ ಮರಣ ಪತ್ರ ನೀಡಿದ ವಿಚಿತ್ರ ಘಟನೆಯೊಂದು ಜಿಲ್ಲೆಯ ಚಡಚಣ ತಾಲೂಕಿನ ನಡೆದಿರುವದು ತಡವಾಗಿ ಬೆಳಕಿಗೆ ಬಂದಿದೆ. ಇದರ ಹಿಂದೆ ಸಂಬಂಧಿಕರ ಆಸ್ತಿ ಹೊಡೆಯುವ ದುರಾಲೋಚನೆ ಇತ್ತಾ? ಅಥವಾ ಜನನ ಮತ್ತು ಮರಣ ಪತ್ರ ನೋಂದಣಿ ಕೇಂದ್ರದ ಅಧಿಕಾರಿಗಳ ಎಡವಟ್ಟು ಕಾರಣವೇ ಇನ್ನುವ ಪ್ರಶ್ನೆ ಎದುರಾಗಿದೆ. ಚಡಚಣ ತಾಲೂಕಿನ ದೇವರ ನಿಂಬರಗಿ ಗ್ರಾಮದ 60 ವರ್ಷದ ಸಾವಿತ್ರಿ ರಾಮಾಗುಂಡ ಮಾಳಿ ಎಂಬವಳಿಗೆ ಚಡಚಣ ಜನನ ಮತ್ತು ಮರಣ ನೋಂದಣಿ ಇಲಾಖೆ ಅಧಿಕಾರಿಗಳು ಮರಣ ಪತ್ರ ನೀಡಿ ಅವಳಿಗೆ ಅಚ್ಚರಿ ಮೂಡಿಸಿದ್ದಾರೆ. ವೃದ್ಧೆ ಸಾವಿತ್ರಿ ಮಾಳೆ ತಮ್ಮ ತಾಯಿಯ ಮರಣ ಪತ್ರ ಪಡೆಯಲು ಕಚೇರಿಗೆ ಹೋದಾಗ ಅಧಿಕಾರಿಗಳು ನೀವು 12/3/2001ರಲ್ಲಿ ನಿಧನರಾಗಿದ್ದೀರಿ ಎಂದು ಅವಳ ಮರಣ ಪತ್ರವೇ ನೀಡಿದ್ದಾರೆ. ಇದರಿಂದ ಕುಂತಲ್ಲೆ ವೃದ್ಧೆಗೆ ಕುಸಿದು ಹೋದ ಅನುಭವವಾಗಿದೆ. ಜೊತೆಗೆ ಆಘಾತಕ್ಕೆ ಒಳಗಾದ ಸಾವಿತ್ರಿಗೆ ಆಕಾಶವೇ ಕಳಚಿ ಬಿದ್ದಂತಾಗಿದೆ.

ಬದುಕಿದ್ದೇನೆ ಎನ್ನುವ ಸಾಕ್ಷಿಗಾಗಿ ಕೋರ್ಟ್‌ಗೆ ಬಂದ ವೃದ್ಧ, ಅಧಿಕಾರಿಗಳ ಮುಂದೆಯೇ ಸಾವು ಕಂಡ!

ಆಸ್ತಿ ಲಪಟಾಯಿಸಲು ನಡೆದ ಕುತಂತ್ರವಾ..? ಖದೀಮರ ಜೊತೆಗೆ ಕೈ ಜೋಡಿಸಿದ್ರಾ ಅಧಿಕಾರಿಗಳು.!?

ಸಾವಿತ್ರಿ ಮೂಲತಃ ಹೊನ್ನಳ್ಳಿ ಗ್ರಾಮದವರು ಇವರ ತಂದೆಗೆ ಒಬ್ಬಳೇ ಮಗಳು ತಂದೆ ನಿಧನಾದಂತರ ಅವರ 12 ಎಕರೆ ಹೊಲ ಇವರ ಹೆಸರಿಗೆ ಬಂದಿತ್ತು. ಈ ಆಸ್ತಿ ಲಪಟಾಯಿಸಲು ತಮ್ಮ ಸಂಬಂಧಿಕರೇ ಸಾವಿತ್ರ ದತ್ತು ಪುತ್ರನೆಂದು ಬಿಂಬಿಸಿ ತನ್ನ ಆಸ್ತಿ ಕಬಳಿಸಲು ಮರಣ ಪತ್ರ ಸೃಷ್ಟಿ ಮಾಡಿದ್ದಾರೆ ಎಂದು ಸಾವಿತ್ರಿ ಮಾಳೆ ಆರೋಪಿಸಿದ್ದಾಳೆ. 

ಮರಣ ಪತ್ರದ ಹಿಂದಿನ ಕರಾಳ ಸತ್ಯ..!

ಸಾವಿತ್ರಿ ಮಾಳೆಯ ಪತಿ ನಿಂಗಪ್ಪ ಮಾಳಿ ಅನಾರೋಗ್ಯ ಪೀಡಿತನಾಗಿ ಹಾಸಿಗೆ ಹಿಡಿದಿದ್ದಾನೆ. ಇವಳಿಗೆ ಇಬ್ಬರು ಗಂಡು ಮಕ್ಕಳಿದ್ದರೂ ಅವಿದ್ಯಾವಂತರು ಪ್ರಪಂಚದ ಜ್ಞಾನ ಸಹ ಗೊತ್ತಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡು ಅವರ ಸಂಬಂಧಿಕರೊಬ್ಬರು ಸಾವಿತ್ರಿ ಹೆಸರಿನಲ್ಲಿರುವ 12ಎಕರೆ ಜಮೀನು ಹೊಡೆಯಲು 2001ರಲ್ಲಿ ಸಾವಿತ್ರಿ ಚಡಚಣ ತಾಲೂಕಿನ ದೇವರ ನಿಂಬರಗಿ ಗ್ರಾಮದಲ್ಲಿ  11-03-2001ರಂದು ನಿಧನರಾಗಿದ್ದಾಳೆಂದು ಚಡಚಣದ ಗ್ರಾಮಲೆಕ್ಕಾಧಿಕಾರಿ ಮೂಲಕ ಜನನ ಮತ್ತು ಮರಣಗಳ ನೋಂದಣಿ ಕಚೇರಿಯಲ್ಲಿ ಮರಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಅದು ನೊಂದಣಿಯಾಗಿದ್ದು ಮಾತ್ರ 2-01-2013 ರಂದು. ನಂತರ 5-01-2023ರಂದು ಮರಣ ಪ್ರಮಾಣ ಪತ್ರಕ್ಕೆ ಅನುಮೋದನೆ ದೊರೆತಿದೆ. ಇದು ಗೊತ್ತಿಲ್ಲದ ವೃದ್ಧೆ ಸಾವಿತ್ರಿ ತಮ್ಮ ತಾಯಿಯ ಮರಣ ಪತ್ರ ಪಡೆಯಲು ಹೋದಾಗ ತನ್ನ ಮರಣ ಪತ್ರ ನೀಡಿದ ಮೇಲೆ ಇಡಿ ಪ್ರಕರಣ ಬೆಳಕಿಗೆ ಬಂದಿದೆ. 

ಮರಣ ಪ್ರಮಾಣಪತ್ರ ಕಳೆದೋಗಿದೆ: ಬದುಕಿರುವಾಗಲೇ ವ್ಯಕ್ತಿ ನೀಡಿದ ಜಾಹೀರಾತು ಫುಲ್ ವೈರಲ್

ವೃದ್ಧೆಯ ನೆರವಿಗೆ ಕಾನೂನು ಸೇವಾ ಪ್ರಾಧಿಕಾರ..!

ಸಧ್ಯ ನ್ಯಾಯಾಲಯದ ಮೆಟ್ಟಿಲೇರಿರುವ ವೃದ್ದೆ ಸಾವಿತ್ರಿ ಮಾಳಿ ಜೀವಿತಾವಧಿಯಲ್ಲಿಬಮರಣ ಪತ್ರ ನೀಡಿರುವ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು.‌ ಜತೆ ಮಾನಸಿಕವಾಗಿ ನೊಂದಿರುವ ತಮಗೆ ಕಾನೂನಿನ‌ ನೆರವು ನೀಡಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಹಿರಿಯ ಅಧಿಕಾರಿಗಳಿಗೆ ಅರ್ಜಿ ಬರೆದಿದ್ದಾಳೆ. 

ಪ್ರಕರಣ ಬೆಳಕಿಗೆ ತಂದ ವಕೀಲ ಭೃಂಗಿಮಠ ..!

ಕಾನೂನು ಪ್ರಾಧಿಕಾರಕ್ಕೆ ಸಾವಿತ್ರಿ ಅರ್ಜಿ ಹಾಕಿದ ಮೇಲೆ ಪ್ರಕರಣ ನ್ಯಾಯವಾದಿಗಳ ಗಮನಕ್ಕೆ ಬಂದಿದೆ. ಜೀವಂತವಿರುವಾಗಲೇ ವೃದ್ಧೆಗೆ ಮರಣ ಪ್ರಮಾಣ ಪತ್ರ ನೀಡಿರುವದು ದೊಡ್ಡ ಅಪರಾಧವಾಗಿದೆ ಎಂದು ಹಿರಿಯ ನ್ಯಾಯವಾದಿ ಮಲ್ಲಿಕಾರ್ಜುನ ಭೃಂಗಿಮಠ ಅಭಿಪ್ರಾಯಪಟ್ಟಿದ್ದಾರೆ. ವಿಜಯಪುರ ಜಿಲ್ಲೆಯಲ್ಲಿ ಇಂಥಹ ಪ್ರಕರಣ ನೋಡಿರಲಿಲ್ಲ, ಆಕೆ ಹೇಳುವಂತೆ ಆಸ್ತಿಗಾಗಿ ಈ ರೀತಿ ಮಾಡಿದ್ದಾರೆ ಎಂದು ಆದರೆ ಏನೇ ಇರಲಿ ಜೀವಂತವಿರುವ ವ್ಯಕ್ತಿಗಳಿಗೆ ಮರಣಪತ್ರ ನೀಡಿದ್ದಾರೆ. ಇದಕ್ಕೆ ಸಂಬಂಧ ಪಟ್ಟ ಅಧಿಕಾರಿಗಳನ್ನು ತಕ್ಷಣ ಅಮಾನತು ಮಾಡಿ ಅವರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಿ ತನಿಖೆ ನಡೆಸಬೇಕು. ಇಲ್ಲವಾದಲ್ಲಿ ಮುಂದಿನ ಹೋರಾಟ ಕೈಗೊಳ್ಳಲಾಗುವದು ಎಂದು ಎಚ್ಚರಿಸಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
ಮಂಗಳಮುಖಿಯರಿಂದ ಯುವಕನ ಅಪಹರಣ; ಶಸ್ತ್ರಚಿಕಿತ್ಸೆ ನಡೆಸಿ ಪರಿವರ್ತನೆಗೆ ಯತ್ನ?