Viral video: ಸಾರ್ವಜನಿಕವಾಗಿ ಹಲ್ಲೆ ಮಾಡಿದ ಪಿಎಸ್‌ಐ!

By Ravi Nayak  |  First Published Aug 12, 2022, 12:41 PM IST

ಮೊಹರಂ ಹಬ್ಬದ ಗಲಾಟೆ ವಿಚಾರವಾಗಿ ಪಿಎಸ್‌ಐ ಒಬ್ಬರು  ಸಾರ್ವಜನಿಕವಾಗಿ ಹಲ್ಲೆ ನಡೆಸಿ ಈರಣ್ಣ ಎನ್ನುವ ವ್ಯಕ್ತಿಯೊಬ್ಬನಿಗೆ ಕಾಲು ಮುರಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ಪಿಎಸ್‌ಐ ಅಮಾನತ್ತು ಮಾಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.


ವರದಿ : ನರಸಿಂಹ ಮೂರ್ತಿ ಕುಲಕರ್ಣಿ

ಬಳ್ಳಾರಿ (ಆ.12) : ಜವಾಬ್ದಾರಿಯುತ ಸ್ಥಾನದಲ್ಲಿರೋ ಪಿಎಸ್ಐ ಒಬ್ಬರು ಗ್ರಾಮದ ನಡುಬೀದಿಯಲ್ಲಿ ಆರೋಪಿಯ ಮೇಲೆ ಆರೋಪಿಯೋಬ್ಬನ ಮೇಲೆ ಹಲ್ಲೆ ಮಾಡಿರೋ ಘಟನೆ ಕುರುಗೋಡು ತಾಲೂಕಿನ ತಾಳೂರು ಗ್ರಾಮದಲ್ಲಿ ನಡೆದಿದೆ. ವ್ಯಕ್ತಿಯೊಬ್ಬರು  ತಪ್ಪು ಮಾಡಿರಬಹುದು ಅವರನ್ನು ಬಂಧಿಸಿ ವಿಚಾರಣೆ ಮಾಡಬಹುದಿತ್ತು. ಆದ್ರೇ, ನಡುಬೀದಿಯಲ್ಲಿ ಹಲ್ಲೆ ಮಾಡುವದು  ಎಷ್ಟರ ಮಟ್ಟಿಗೆ ಸರಿ ಎನ್ನುವುದು ಒಂದೇಡೆಯಾದ್ರೇ, ಆರೋಪಿಯ ಹಿನ್ನೆಲೆ ಮತ್ತು ಘಟನೆಗೆ ಹತ್ತು ಹಲವು ಕಾರಣವಿದೆ ಎನ್ನಲಾಗುತ್ತಿದೆ. ಆದ್ರೇ, ಹಲ್ಲೆ ಮಾಡಿರೋ ಮತ್ತು ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಿರೋ ವಿಡಿಯೋ ವೈರಲ್ ಆಗುತ್ತಿರೋದು ಸಾರ್ವಜನಿಕರಲ್ಲಿ ಪೊಲೀಸರ ಮೇಲಿರೋ ಗೌರವ ಕಡಿಮೆಯಾಗುವಂತೆ ಮಾಡಿದೆ

Tap to resize

Latest Videos

undefined

ಪಲ್ಸರ್ ಬೈಕ್ ಮಾತ್ರ ಕಳ್ಳತನ ಮಾಡೋ ವಿಶೇಷ ಕಳ್ಳರಿವರು!

ಅವಾಚ್ಯ ಶಬ್ಧಗಳಿಂದ ನಿಂಧನೆ ಎಲ್ಲರೇದುರೆ ಹಲ್ಲೆ: ಕೊಳೋರು(Koloru) ಗ್ರಾಮದಲ್ಲಿ ಮೊಹರಮ್(Moharamm) ಹಬ್ಬದ ವೇಳೆ ಬ್ಯಾನರ್(Banner) ಹರಿದ ವಿಚಾರಕ್ಕೆ ಗ್ರಾಮದಲ್ಲಿ ಗಲಾಟೆಯಾಗಿತ್ತು. ಈ ವೇಳೆ ಬ್ಯಾನರ್ ಹರಿದು ಗಲಾಟೆಗೆ ಕಾರಣವಾಗಿದ್ದಾರೆ. ಎನ್ನುವ ಕಾರಣಕ್ಕೆ ಕೊಳೋರು ಗ್ರಾಮದ ಈರಣ್ಣ(Earanna) ಎನ್ನುವ ವ್ಯಕ್ತಿಯ ಮೇಲೆ ಕುರುಗೋಡು ಠಾಣೆಯ ಪಿಎಸ್ಐ ಮಣಿಕಂಠ(PSI Manikant Kurugodu Police Station ಹಲ್ಲೆ ಮಾಡಿ ಅವಚ್ಯ ಶಬ್ಧಗಳಿಂದ ನಿಂದನೆ ಮಾಡಿ ದ್ದಾರೆ. ಮೊನ್ನೆ ಮೊಹರಂ ಹಬ್ಬದ ದಿನದಂದು ನಡೆದ ಈ ಘಟನೆಯ ವಿಡಿಯೋ ಇದೀಗ ವೈರಲ್ ಆಗಿದ್ದಿ ಪಿಎಸ್ಐ ವಿರುದ್ದ ಸಾಕಷ್ಟು ಆಕ್ರೋಶ ವ್ಯಕ್ತವಾಗುತ್ತಿದೆ. ಅಲ್ಲದೇ ಸಾರ್ವಜನಿಕವಾಗಿ ಹಲ್ಲೆ ಮಾಡಿದ್ದು, ಕೆಟ್ಟ ಭಾಷೆಯಲ್ಲಿ ಬೈಯೋದಕ್ಕೆ ಇವರಿಗೆ ಯಾರು ಅಧಿಕಾರ ಕೊಟ್ಟರು ಎಂದು ಪ್ರಶ್ನಿಸುತ್ತಿದ್ದಾರೆ.

ಪಿಎಸ್ಐ ಆಕ್ರೋಶಕ್ಕೆ ಹಿಂದಿನ ಘಟನೆಯೇ ಕಾರಣವಾಯ್ತೇ..? ಇನ್ನೂ ಇಷ್ಟೊಂದು ಆಕ್ರೋಶ ಗೊಂಡು ಹೊಡೆಯಲು ಕೂಡ ಕಾರಣವಿದೆ. ಕಳೆದ  ಹತ್ತು ದಿನಗಳ‌ ಹಿಂದೆ ಕೊಳೋರು ಕ್ರಾಸ್ ಬಳಿ ಅಪರಿಚಿತ ಶವ ಪತ್ತೆಯಾಗಿತ್ತು.. ಜನರ‌ ಗುಂಪು ಶವ ನೋಡಲು ನುಕುನುಗ್ಗಲು ಮಾಡಿದ್ದರಿಂದ ಲಘು ಲಾಠಿ ಪ್ರಹಾರ ಮಾಡಲಾಗಿತ್ತು.. ಆಗ ಪಿಎಸ್ಐ ಮಣಿಕಂಠ ಹೊಡೆದಿದ್ದಾರೆಂದು ಈಗ ಹಲ್ಲೆಗೊಳಗಾದ ಈರಣ್ಣ ಕಾಲು‌ ಮುರಿದುಕೊಂಡು ಆಸ್ಪತ್ರೆ ದಾಖಲಾಗಿದ್ದನು. ಆಗ ಬಳ್ಳಾರಿ ಸಿರಗುಪ್ಪ ರಾಜ್ಯ ಹೆದ್ದಾರಿ ತಡೆದು ಗಂಟೆಗಟ್ಟಲೇ ಪೊಲೀಸರ ವಿರುದ್ಧ ಪ್ರತಿಭಟನೆ ಮಾಡಿದ್ರು. ಆಗ ಅಂದಿನಿಂದಲೂ ಪಿಎಸ್ಐ ಮಣಿಕಂಠ ಮತ್ತು ಕೋಳೂರು ಗ್ರಾಮದ ಕೆಲ ಜನರ ಮಧ್ಯೆ ವೈಷಮ್ಯ ಬೆಳೆದಿತ್ತು.

ಪೊಲೀಸರ ಸೋಗಿನಲ್ಲಿ ಬಂದು ಚಿನ್ನಾಭರಣ ಕದ್ದು ಪರಾರಿಯಾದ ಖದೀಮರು!

ಮೊಹರಂ ವೇಳೆ ಬ್ಯಾನರ್ ಹರಿದ ವಿಷಯ ಗಲಾಟೆಗೆ ಕಾರಣವಾಯ್ತು. ಇನ್ನೂ ಕಳೆದ ಹತ್ತು ದಿನಗಳ ಹಿಂದೆ ನಡೆದ ಈ ಘಟನೆ ಸ್ವಲ್ಪ ತಣ್ಣಗಾಗಿತ್ತು. ಎನ್ನುವಾಗಲೇ ಮೊನ್ನೆ ಮೊಹರಂ ವೇಳೆ ಮಾಜಿ ಶಾಸಕ ಸುರೇಶ್ ಬಾಬು ಅವರ ಬ್ಯಾನರ್ ಹರಿದ ವಿಚಾರವಾಗಿ ಗಲಾಟೆ ನಡೆದಿದೆ. ಆಗ ಅಂದು ಗಾಯ ಗೊಂಡ ಈರಣ್ಣನೇ ಈ ಗಲಾಟೆಗೂ ಕಾರಣವೆಂದು ಗ್ರಾಮದ ಕೆಲವರು ಆರೋಪಿಸಿದ್ರು. ಅಲ್ಲದೇ ಹತ್ತು ದಿನಗಳ ಹಿಂದೆ ಗಾಯಗೊಂಡು ದೊಡ್ಡದಾಗಿ ಬ್ಯಾಂಡೇಜ್ ಹಾಕಿಕೊಂಡಿದ್ದ ವ್ಯಕ್ತಿ ವಾರ ಕಳೆಯೊದ್ರೊಳಗೆ ಹಬ್ಬದಲ್ಲಿ ಕುಣಿದಾಡಿ ಡ್ಯಾನ್ಸ್ ಕೂಡ ಮಾಡಿದ್ದು, ಹೇಗೆ..? ಎನ್ನುವದು ಎಲ್ಲರ ಪ್ರಶ್ನೆಯಾಗಿತ್ತು. ಒಟ್ಟಾರೇ ಗಲಾಟೆಗಳಿಗೆ ಈರಣ್ಣ ಅವರೇ ಕಾರಣ ಎನ್ನುವುದು ಗ್ರಾಮದ ಒಂದು ಬಣದ ವಾದವಾಗಿತ್ತು. ಹೀಗಾಗಿ ಗಲಾಟೆ ನಡೆದ ವೇಳೆ ಸ್ಥಳಕ್ಕೆ ಬಂದ ಪಿಎಸ್ಐ ಮಣಿಕಂಠ ಈರಣ್ಣ ಅವರ ಮೇಲೆ ಹಲ್ಲೆ ಮಾಡಿ ಮನಸೋಯಿಚ್ಚೆ ಬೈದಾಡಿದ್ದಾನೆ.  

ಅಮಾನತ್ತು ಮಾಡುವಂತೆ ಸಾರ್ವಜನಿಕರ ಒತ್ತಾಯ : ಇನ್ನೂ ಘಟನೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಜನರು ಸೇರಿದಂತೆ ಜನಪ್ರತಿನಿಧಿಗಳು ಪಿಎಸ್ಐ ಮಣಿಕಂಠ ಅವರನ್ನು ಅಮಾನತ್ತು ಮಾಡುವಂತೆ ಒತ್ತಾಯ ಕೇಳಿ ಬಂದಿದೆ. ಆದ್ರೇ, ಈ ಬಗ್ಗೆ ಈವರೆಗೂ ಪೊಲೀಸರು ಅಧಿಕೃತ ಯಾವುದೇ ಕ್ರಮ ತೆಗೆದು ಕೊಂಡಿಲ್ಲವಾದ್ರೂ ಪಿಎಸ್ಐ ಮಣಿಕಂಠ ಅವರನ್ನು ಬಳ್ಳಾರಿ ನಗರದ ಗಾಂಧಿ ನಗರ ಠಾಣೆ ಗೆ ವರ್ಗಾವಣೆ ಮಾಡಲಾಗಿದೆ. ಆದ್ರೇ, ಘಟನೆಯಿಂದಲೇ ವರ್ಗವಾಣೆ ಯಾಗಿದೆಯೋ ಅಥವಾ ಮುಂಚೆಯೇ ವರ್ಗಾವಣೆ ಮಾಡಿದ್ದಾರೋ ಅನ್ನೋ ಬಗ್ಗೆ ಖಚಿತ ಮಾಹಿತಿಯಿಲ್ಲ.

click me!