
ಉತ್ತರಪ್ರದೇಶ: ಕಾನ್ಪುರದ ಚಕೇರಿ ಪ್ರದೇಶದಲ್ಲಿ ಉಚಿತವಾಗಿ ಪಾನಿಪುರಿ ಕೊಡಲು ನಿರಾಕರಿಸಿದ ಮಾರಾಟಗಾರನನ್ನು ಯುವಕರ ತಂಡ ಥಳಿಸಿ ಸಾಯಿಸಿದ ಘಟನೆ ನಡೆದಿದೆ. ಪಾನಿಪುರಿ ವ್ಯಾಪಾರಿ ಪ್ರೇಮ್ ಚಂದ್ರನನ್ನು ಸ್ಥಳೀಯ ಗೂಂಡಾ ಮತ್ತು ಆತನ ಸಹಾಯಕರು ಹೊಡೆದು ಕೊಂದಿದ್ದಾರೆ. ಪ್ರೇಮ್, ಯುವಕರ ತಂಡಕ್ಕೆ ಉಚಿತವಾಗಿ ಪಾನಿ ಪುರಿ ನೀಡಲು ನಿರಾಕರಿಸಿದರು. ಇದಕ್ಕೆ ಸಿಟ್ಟಿಗೆದ್ದ ಯುವಕರ ತಂಡ ಈ ದುಷ್ಕೃತ್ಯವನ್ನು ಮಾಡಿದೆ.
ಕಾನ್ಪುರ ದೇಹತ್ ನಿವಾಸಿ ಪ್ರೇಮ್ ಚಂದ್ರ (40) ಅವರು ಪತ್ನಿ ಮತ್ತು ಮಕ್ಕಳೊಂದಿಗೆ ಚಕೇರಿಯಲ್ಲಿ ವಾಸಿಸುತ್ತಿದ್ದರು. ಭಾನುವಾರ ಸಂಜೆ ಅವರು ಮನೆಗೆ ಮರಳುತ್ತಿದ್ದಾಗ ಸ್ಥಳೀಯ ಗೂಂಡಾ ಧೀರಜ್ ಮತ್ತು ಆತನ ನಾಲ್ವರು ಸಹಾಯಕರು ಆತನನ್ನು ತಡೆದು ಪಾನಿ ಪುರಿ ಉಚಿತವಾಗಿ ನೀಡುವಂತೆ ಕೇಳಿದ್ದಾರೆ. ಪ್ರೇಮ್ ನಿರಾಕರಿಸಿದಾಗ, ಗೂಂಡಾ ಮತ್ತು ಅವನ ಸಹಾಯಕರು ಆತನನ್ನು ನಿಂದಿಸಲು ಪ್ರಾರಂಭಿಸಿದರು. ನಂತರ ಅವನನ್ನು ಎಲ್ಲರೂ ಸೇರಿ ಥಳಿಸಿದರು. ಸ್ಥಳೀಯರು ಮಧ್ಯ ಪ್ರವೇಶಿಸಿ ಪ್ರೇಮ್‌ಚಂದ್‌ನ್ನು ರಕ್ಷಿಸಿದ್ದಾರೆ.
ಬಾಯ್‌ಫ್ರೆಂಡ್ ಜೊತೆ ಸರಸಕ್ಕಾಗಿ ಪತಿ ಕೊಂದು ಹೃದಯಾಘಾತ ನಾಟಕವಾಡಿದ ಪತ್ನಿ!
ಆದರೆ, ರಾತ್ರಿ ಪ್ರೇಮ್‌ನ ಸ್ಥಿತಿ ಹದಗೆಟ್ಟಿತು ಮತ್ತು ಅವರ ಕುಟುಂಬವು ಆಸ್ಪತ್ರೆಗೆ ಕರೆದೊಯ್ದರು. ಆಸ್ಪತ್ರೆಯಲ್ಲಿ ವೈದ್ಯರು ಪ್ರೇಮ್‌ಚಂದ್ ಸಾವನ್ನಪ್ಪಿದ್ದಾಗಿ ಘೋಷಿಸಿದರು. ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಪ್ರಕರಣದ ಕುರಿತು ಇನ್ನೂ ಎಫ್‌ಐಆರ್ ದಾಖಲಾಗಬೇಕಿದೆ.. ಘಟನೆಯ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಚಕೇರಿ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಅಶೋಕ್ ಕುಮಾರ್ ದುಬೆ ತಿಳಿಸಿದ್ದಾರೆ.
'ವ್ಯಕ್ತಿಯ ದೇಹದಲ್ಲಿ ಗೋಚರವಾದ ಗಾಯದ ಗುರುತುಗಳು ಕಂಡುಬಂದಿಲ್ಲ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಶವಪರೀಕ್ಷೆ ವರದಿ ಮತ್ತು ಇತರ ಅಗತ್ಯ ಸಂಶೋಧನೆಗಳ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗುವುದು' ಎಂದು ಇನ್ಸ್‌ಪೆಕ್ಟರ್ ಅಶೋಕ್ ಕುಮಾರ್ ದುಬೆ ಹೇಳಿದರು.
ಮಗುವನ್ನು ಲಾಲಿ ಹಾಡಿ ಮಲಗಿಸಿದ ಬಳಿಕ ಹತ್ಯೆಗೈದ ಕ್ರೂರಿ ತಾಯಿ ಸುಚನಾ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ