ಕೆಎಸ್‌ಆರ್‌ಟಿಸಿ ಬಸ್‌ ನಲ್ಲಿ ಬೆಂಗಳೂರಿನಿಂದ ತೆರಳುತ್ತಿದ್ದ ಪ್ರಯಾಣಿಕನ ಮೇಲೆ ಚಿತ್ರದುರ್ಗದಲ್ಲಿ ಆಸಿಡ್ ದಾಳಿ!

By Suvarna News  |  First Published Jan 16, 2024, 10:45 PM IST

ಚಿತ್ರದುರ್ಗ ಜಿಲ್ಲೆ ಹಿರಿಯೂರು ಪಟ್ಟಣ ಬಳಿ ವ್ಯಕ್ತಿಯೊಬ್ಬರ ಮೇಲೆ ಆಸಿಡ್ ದಾಳಿ ನಡೆದಿದೆ. ಹೊಳಲ್ಕೆಯ ಅರುಣ್ ಕುಮಾರ್(29) ಮೇಲೆ ಆಸಿಡ್ ದಾಳಿ ನಡೆದಿದ್ದು ಇವರು ಬೆಂಗಳೂರಿನ ಖಾಸಗಿ ಬಂಕ್ ನಲ್ಲಿ ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸಿಸುತ್ತಿದ್ದಾರೆ.


ಚಿತ್ರದುರ್ಗ (ಜ.16): ಚಿತ್ರದುರ್ಗ ಜಿಲ್ಲೆ ಹಿರಿಯೂರು ಪಟ್ಟಣ ಬಳಿ ವ್ಯಕ್ತಿಯೊಬ್ಬರ ಮೇಲೆ ಆಸಿಡ್ ದಾಳಿ ನಡೆದಿದೆ. ಹೊಳಲ್ಕೆಯ ಅರುಣ್ ಕುಮಾರ್(29) ಮೇಲೆ ಆಸಿಡ್ ದಾಳಿ ನಡೆದಿದ್ದು ಇವರು ಬೆಂಗಳೂರಿನ ಖಾಸಗಿ ಬಂಕ್ ನಲ್ಲಿ ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸಿಸುತ್ತಿದ್ದಾರೆ.

ಅರುಣ್ ಕುಮಾರ್ ಚಿತ್ರದುರ್ಗದಿಂದ ರಾಜಹಂಸ ಬಸ್ ನಲ್ಲಿ ಬೆಂಗಳೂರು ಕಡೆಗೆ ತೆರಳುತ್ತಿದ್ದರು. ಹಿರಿಯೂರು ಬಳಿ ಖಾಸಗಿ ಡಾಭಾ ಬಳಿ ಬಸ್ ನಿಂತಾಗ ಈ ದುರ್ಘಟನೆ ನಡೆದಿದೆ.

Tap to resize

Latest Videos

undefined

ವಾಶ್ ರೂಮ್ ಗೆ ಹೋಗಿ ಬಸ್ ಏರಲು ವಾಪಸ್‌ ಬರುವಾಗ ಆಸಿಡ್ ದಾಳಿ ನಡೆದಿದ್ದು  ಇಬ್ಬರು ದುಷ್ಕರ್ಮಿಗಳು ಆಸಿಡ್ ಎರಚಿ ಎಸ್ಕೇಪ್ ಆಗಿದ್ದಾರೆ. ಅರುಣ್ ಕೈ ಮತ್ತು ಮುಖಕ್ಕೆ ಗಾಯವಾಗಿದ್ದು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.

ರಾತ್ರೋ ರಾತ್ರಿ ಸ್ಟಾರ್ ಆದ ಈ ನಟಿಯ ಒಂದು ತಪ್ಪು ನಿರ್ಧಾರ ವೃತ್ತಿಜೀವನ ...

ಅರುಣ್ ಕುಮಾರ್ ಯುವತಿ ಒಬ್ಬಳನ್ನು ಪ್ರೀತಿಸುತ್ತಿದ್ದು, ಯುವತಿ ಕಡೆಯವರಿಂದ ಪ್ರೇಮಕ್ಕೆ ವಿರೋಧವಿದೆ. ಪ್ರೀತಿಸಿದ ಯುವತಿ ಕಡೆಯವರಿಂದಲೇ ಕೃತ್ಯದ ಶಂಕೆ ಎಂದು ಅರುಣ್ ಆರೋಪಿಸಿದ್ದಾರೆ. ಕರೆ ಮಾಡಿ ಬೆದರಿಕೆ ಒಡ್ಡಿದ್ದರು, ಅಪಾಯವಿದೆ ಎಂದು ಹೇಳಿದ್ದರು. ಕಳೆದ ಎರಡು ದಿನದಿಂದ ಫಾಲೋ ಮಾಡಿದ್ದಾರೆ ಎಂದು ಅರುಣ್ ಮಾಹಿತಿ ನೀಡಿದ್ದಾರೆ. ಹಿರಿಯೂರು ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಪ್ರಕರಣ ಇದಾಗಿದ್ದು,  ಪ್ರಕರಣ  ದಾಖಲಿಸಲಾಗಿದೆ.

click me!