
ನವದೆಹಲಿ (ಜು.28): ಉತ್ತರ ಪ್ರದೇಶದಲ್ಲಿ ಮಹಿಳೆಯೊಬ್ಬಳು ತನ್ನ ಪತಿಯನ್ನು ಕೊಡಲಿಯಿಂದ ಕೊಚ್ಚಿ ಕೊಂದಿದ್ದಾಳೆ. ಪೊಲೀಸರ ಎದುರು ತಪ್ಪೊಪ್ಪಿಕೊಂಡ ಬಳಿಕ ಆಕೆಯನ್ನು ಬಂಧಿಸಲಾಗಿದೆ. ನಿದ್ರೆಯಲ್ಲಿದ್ದ ಪತಿಯನ್ನು ಮಂಚಕ್ಕೆ ಕಟ್ಟಿ ಕೊಡಲಿಯಿಂದ ಕಡಿದಿರುವ ಈಕೆ ಬಳಿಕ ದೇಹವನ್ನು ಐದು ತುಂಡು ಮಾಡಿದ್ದಾಳೆ. ಈ ಭಾಗಗಳನ್ನು ಸ್ಥಳೀಯ ಕಾಲುವೆಗೆ ಎಸೆದಿರುವ ಘಟನೆ ಫಿಲಿಬಿತ್‌ನಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಗಜ್ರೌಲಾ ಪ್ರದೇಶದ ಶಿವನಗರ ನಿವಾಸಿ 55 ವರ್ಷದ ರಾಮ್ ಪಾಲ್ ಎಂದು ಗುರುತಿಸಲಾಗಿದೆ. ರಾಮ್ ಪಾಲ್ ಅವರ ಮಗ ಸೋನ್ ಪಾಲ್, ತನ್ನ ತಂದೆ ಕಾಣೆಯಾಗಿರುವ ಬಗ್ಗೆ ಪೊಲೀಸರಿಗೆ ಮೊದಲು ದೂರು ನೀಡಿದ್ದರು.. ಸೋನ್‌ಪಾಲ್ ತಮ್ಮ ಹೆಂಡತಿ ಮತ್ತು ಮಕ್ಕಳೊಂದಿಗೆ ಹತ್ತಿರದಲ್ಲೇ ವಾಸಿಸುತ್ತಿದ್ದರು. ರಾಮ್ ಪಾಲ್ ಅವರ ಪತ್ನಿ ದುಲಾರೊ ದೇವಿ, ಮೂರು ತಿಂಗಳ ಹಿಂದೆ ಗಂಡನ ಸ್ನೇಹಿತನೊಂದಿಗೆ ಓಡಿಹೋಗಿದ್ದಳು. ಸಾಕಷ್ಟು ಹುಡುಕಾಟ ನಡೆಸಿದ ಬಳಿಕ ಒಂದು ವಾರದ ಹಿಂದೆಯಷ್ಟೇ ಈಕೆಯನ್ನು ಮನೆಗೆ ವಾಪಾಸ್ ಕರೆತರಲಾಗಿತ್ತು. ಸೋಮವಾರ ರಾತ್ರಿಯಿಂದ ತಂದೆ ಕಾಣುಸುತ್ತಿಲ್ಲ ಎಂದು ಮಗನಿಗೆ ತಿಳಿಸಿದ್ದಾಳೆ. ಅನುಮಾನದ ಆಧಾರದ ಮೇಲೆ, ಪೊಲೀಸರು ದುಲಾರೋ ದೇವಿಯನ್ನು ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ಮಾಡಿದ ಬಳಿಕ ಸತ್ಯಾಂಶ ಗೊತ್ತಾಗಿದೆ.
ಮೃತನ ಪತ್ನಿ ತಾನು ಕೃತ್ಯ ಎಸಗಿರುವುದಾಗಿ ತಪ್ಪೊಪ್ಪಿಕೊಂಡಿದ್ದು, ಸೋಮವಾರ ರಾತ್ರಿ ರಾಮ್ ಪಾಲ್ ಮಲಗಿದ್ದಾಗ ಆತನನ್ನು ಕೊಂದಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾಳೆ. ದೇಹದ ಭಾಗವನ್ನು ಹತ್ತಿರದ ಕಾಲುವೆಯಲ್ಲಿ ಎಸೆದಿರುವುದಾಗಿ ಹೇಳಿದ್ದಾಳೆ. ರಾಮ್ಪಾ ಪಾಲ್ ಅವರ ದೇಹದ ಭಾಗಗಳನ್ನು ಹೊರತೆಗೆಯಲು ಡೈವರ್‌ಗಳ ಸಹಾಯವನ್ನು ಪಡೆಯುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಇದೇ ವೇಳೆ ಕಾಲುವೆಯಲ್ಲಿ ಮೃತ ರಾಮ್‌ಪಾಲ್‌ನ ರಕ್ತಸಿಕ್ತ ಬಟ್ಟೆ ಹಾಗೂ ಹಾಸಿಗೆ ಪತ್ತೆಯಾಗಿದೆ.
ತಂದೆ ಕಾಣೆಯಾದ ದಿನದಿಂದಲೂ ತನಗೆ ತಾಯಿ ದುಲಾರೋ ದೇವಿ ಬಗ್ಗೆಯೇ ಅನುಮಾನವಿತ್ತು ಎಂದು ಸೋನ್‌ಪಾಲ್ ತಿಳಿಸಿದ್ದಾರೆ. ನನ್ನ ತಾಯಿಯ ನಡತೆ ಉತ್ತಮವಾಗಿರಲಿಲ್ಲ ಎಂದಿದ್ದಾನೆ. ಇದನ್ನು ಪೊಲೀಸರ ಎದುರು ತಿಳಿಸಿದ ಬಳಿಕ ದುಲಾರೋ ದೇವಿಯನ್ನು ವಿಚಾರಣೆ ನಡೆಸಿದಾಗ ಈ ಕೃತ್ಯ ಆಕೆಯ ಮಾಡಿದ್ದು ಗೊತ್ತಾಗಿದೆ. 'ರಾಮ್‌ಪಾಲ್ ಪ್ರತಿದಿನ ಹಿಂಸೆ ನೀಡುತ್ತಿದ್ದ. ಇದರಿಂದ ಬೇಸತ್ತ ನಾನು ಆತ ಮಲಗಿದ್ದ ವೇಳೆ ಮಂಚಕ್ಕೆ ಆತನ ಕೈಕಾಲುಗಳನ್ನು ಕಟ್ಟಿ ಹೊಡೆದಿದ್ದೆ. ಕೊಡಲಿಯಿಂದ ಆತನ ಮೇಲೆ ಹಲ್ಲೆ ಮಾಡುವಾಗ, ಅದು ತಲೆಗೆ ತಾಗಿತ್ತು. ಇದರ ಬೆನ್ನಲ್ಲಿಯೇ ಅತ ಸಾವು ಕಂಡಿದ್ದ. ಆದರೆ, ನನ್ನೊಬ್ಬಳಿಂದ ದೇಹವನ್ನು ಹೊರಗೆ ಹಾಕುವುದು ಸಾಧ್ಯವಿರಲಿಲ್ಲ. ಇದೇ ಕಾರಣಕ್ಕಾಗಿ ಆತಕ ಎರಡೂ ಕೈಗಳು ಮತ್ತು ಕಾಲುಗಳನ್ನು ಕತ್ತರಿಸಿ, ಗೋಣಿ ಚೀಲಕ್ಕೆ ತುಂಬಿದ್ದೆ. ಬಳಿಕ ಮನೆಯಿಂದ 500 ಮೀಟರ್ ದೂರವಿದ್ದ ನಿಗೋಹಿ ಕಾಲುವೆಯಲ್ಲಿ ಅದನ್ನು ಎಸೆದಿದ್ದೆ' ಎಂದು ದುಲಾರೋ ದೇವಿ ತಿಳಿಸಿದ್ದಾಳೆ. ಕೈಕಾಲುಗಳನ್ನು ಒಂದು ಚೀಲದಲ್ಲಿ ಹಾಕಿದ್ದರೆ, ಮುಂಡವನ್ನು ಇನ್ನೊಂದು ಗೋಣಿಚೀಲದಲ್ಲಿ ಹಾಕಿದ್ದೆ. ಇದಕ್ಕೆ ನನಗೆ ಇನ್ನೊಬ್ಬರು ಸಹಾಯ ಮಾಡಿದ್ದರು ಎಂದಿದ್ದಾಳೆ.
ಫೋನ್ ಕಳ್ಳತನದ ದೂರು ಕೊಡಲು ಹೋಗುವಾಗ ಬೈಕ್ ಕದ್ದ ಖದೀಮರು!
ಈ ನಡುವೆ ಸ್ಥಳೀಯ ಮಾರ್ಕೆಟ್‌ನಲ್ಲಿ ಪೊಲೀಸರು ವಿಚಾರಣೆ ನಡೆಸಿದ್ದು, ಇತ್ತೀಚೆಗೆ ಗಂಡನೊಂದಿಗೆ ಮಾರುಕಟ್ಟೆಗೆ ಬಂದಿದ್ದ ಆಕೆ ಕೊಡಲಿಯನ್ನು ಹರಿತ ಮಾಡಿಕೊಂಡು ಹೋಗಿದ್ದಳು. ಆದರೆ, ತನ್ನನ್ನು ಕೊಲೆ ಮಾಡುವ ಸಲುವಾಗಿಯೇ ಕೊಡಲಿಯನ್ನು ಹರಿತ ಮಾಡಿಕೊಂಡು ಹೋಗಿದ್ದಳು ಎನ್ನುವುದು ರಾಮ್‌ಪಾಲ್‌ಗೆ ತಿಳಿದಿರಲಿಲ್ಲ. ವಿಚಾರಣೆ ನಡೆಸಿರುವ ಪೊಲೀಸರು, ದುಲಾರೋ ದೇವಿಗೆ ಇನ್ನೊಬ್ಬ ವ್ಯಕ್ತಿಯ ಜೊತೆ ಸಂಬಂಧವಿತ್ತು. ಮೂರು ತಿಂಗಳ ಹಿಂದೆ ಆಕೆಯ ಮನೆಯನ್ನು ಬಿಟ್ಟು ಹೋಗಿದ್ದಳು. ಈ ಬಗ್ಗೆ ಮನೆಯಲ್ಲಿ ಯಾರಿಗೂ ಮಾಹಿತಿ ಇದ್ದಿರಲಿಲ್ಲ. ಒಂದು ವಾರದ ಹಿಂದೆಯಷ್ಟೇ ಈಕೆ ಮನೆಗೆ ವಾಪಾಸ್ ಬಂದಿದ್ದಳು ಎಂದಿದ್ದಾರೆ. ಇನ್ನು ದುಲಾರೋ ದೇವಿ ಸಂಬಂಧಿಗಳು ಯಾವುದೇ ಮಾಹಿತಿಯನ್ನು ನೀಡಿಲ್ಲ.
Bengaluru: ಮಾಸ್ಟರ್ ಆನಂದ್ ಪುತ್ರಿ ವನ್ಷಿಕಾ ಹೆಸರಲ್ಲಿ ವಂಚಿಸಿದ್ದ ನಿಶಾ ನರಸಪ್ಪ ಜೈಲಿಂದ ರಿಲೀಸ್..
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ