Bengaluru: ತ್ರಿಕೋನ ಪ್ರೇಮಕಥೆಗೆ ವಿದ್ಯಾರ್ಥಿ ಬಲಿ: ಪ್ರೀತಿ ಮಾಡ್ದೋನ ಬಿಟ್ಟು ಜೊತೆಲಿದ್ದೋನ ಕೊಂದ್ರು

By Sathish Kumar KHFirst Published Jul 28, 2023, 6:05 PM IST
Highlights

ಬೆಂಗಳೂರಿನಲ್ಲಿ ಕಾಲೇಜು ವಿದ್ಯಾರ್ಥಿಗಳ ನಡುವಿನ ತ್ರಿಕೋನ ಪ್ರೇಮಕಥೆಯಿಂದಾಗಿ ಅಮಾಯಕ ವಿದ್ಯಾರ್ಥಿಯನ್ನು ಕೊಲೆ ಮಾಡಲಾಗಿದೆ. 

ವರದಿ- ಕಿರಣ್.ಕೆ.ಎನ್.ಏಷ್ಯಾನೆಟ್ ಸುವರ್ಣ ನ್ಯೂಸ್ 

ಬೆಂಗಳೂರು (ಜು.28): ಅದು ಖಾಸಗಿ ಕಾಲೇಜು ವಿದ್ಯಾರ್ಥಿಯೊಬ್ಬನ ಟ್ರೈ ಆ್ಯಂಗಲ್ ಲವ್ ಸ್ಟೋರಿ.. ಬೇಡ ಅಂದ್ರೂ ಯುವತಿ ಹಿಂದೆ ಬಿದ್ದಿದ್ದ ವಿಚಾರ ಗ್ಯಾಂಗ್ ವೊಂದರ ಕೈಗೆ ಸೇರಿತ್ತು.. ಮೊದಲೇ ರಕ್ತದ ಕಲೆ ಕೈಗೆ ಹಚ್ಚಿಕೊಂಡಿದ್ದ ಯುವಕರು ಅಮಾಯಕ ಯುವಕನೊಬ್ಬನನ್ನ ಕೊಲೆ ಮಾಡಿದ್ದಾರೆ.. ಟೀ ಕುಡಿಯೋಕೆ ನಿಂತಿದ್ದವನನ್ನ ಕರೆದಿದ್ದವರು ಕೊಂದಿದ್ದು ಪಾಪವೇ ಸರಿ..

Latest Videos

ಅವ್ರೆಲ್ಲಾ 20-21ವರ್ಷದ ಹುಡುಗರು.. ಕಾಲೇಜು ಓದುತ್ತಲೇ ರಕ್ತ ಕೈಗತ್ತಿತ್ತು.. ಓದಿನಲ್ಲಿ ಡ್ರಾಪೌಟ್ ಆಗಿ ಪೋಲಿ ಸುತ್ತಿದ್ರು.. ಹೀಗಿದ್ದಾಗ ಅದೊಂದು ಯುವತಿಯ ವಿಚಾರ ಕಿವಿಗೆ ಬಿದ್ದಿತ್ತು.. ಗೆಳೆಯನ ಹುಡುಗಿ ಹಿಂದೆ ಸುತ್ತುತ್ತಿದ್ದ ಯುವಕನ ಬೆನ್ನಟ್ಟಿದ್ರು.. ಟ್ರೈ ಆ್ಯಂಗಲ್ ಲವ್ ಸ್ಟೋರಿಯೊಂದಕ್ಕೆ ಕನೆಕ್ಟೇ ಇಲ್ಲದ ಅಮಾಯಕನೊಬ್ಬನನ್ನ ಕೊಲೆ ಮಾಡಿದ್ದ ಆರು ಜನ ಹಂತಕರನ್ನ ಹೆಣ್ಣೂರು ಮತ್ತು ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ.. ಅಂದ್ಹಾಗೆ ಇದು ಬೇರೆ ಯಾವ ಕೇಸೂ ಅಲ್ಲ.. ಕಳೆದೆರಡು ದಿನದ ಹಿಂದೆ ಅನುಮಾನಾಸ್ಪದವಾಗಿ ಸತ್ತಿದ್ದ ಖಾಸಗಿ ಕಾಲೇಜು ವಿದ್ಯಾರ್ಥಿ ಕೇಸ್..

Bengaluru: 19 ವರ್ಷಕ್ಕೆ ದೊಡ್ಡಪ್ಪನ ಮಗಳ ಪ್ರೀತಿಸಿದ ಶಶಾಂಕ: ಪೋಷಕರಿಂದಲೇ ಬೆಂಕಿ ಹಚ್ಚಿಸಿಕೊಂಡು ತ್ಯಜಿಸಿದ ಇಹಲೋಕ

ಇವ್ರೆ ನೋಡಿ.. ಕೊಲೆ ಆರೋಪಿಗಳು.. ಕಾರ್ತಿಕ್, ಅಭಿಶೇಕ್, ನೆಲ್ಸನ್, ರಾಕಿ, ಡ್ಯಾನಿಯಲ್, ಶ್ರಿಕಾಂತ್.. ಈ ಸಂಪೂರ್ಣ ಕೊಲೆ ಕೇಸ್ ನ ರುವಾರಿ ಇವ್ನೆ ನೋಡಿ... ಶ್ರೀಕಾಂತ್.. ಈತನ ಹುಡುಗಿಯ ಟ್ರೈ ಆ್ಯಂಗಲ್ ಲವ್ ಕೊಲೆ, ಕೇಸ್ ಅರೆಸ್ಟ್ ವರೆಗೆ ತಂದು ನಿಲ್ಲಿದೆ.. ಇವ್ರ ಕಥೆ ಹೇಳ್ತೀವಿ ಕೇಳಿ.. ಈ ಪೋಟೋದಲ್ಲಿರೋ ಶ್ರೀಕಾಂತ್ ಯುವತಿಯೊಬ್ಬಳನ್ನ ಲವ್ ಮಾಡ್ತಿದ್ದ.. ಆದ್ರೆ ಅದೇ ಯುವತಿಯ ಹಿಂದೆ ಕೊಲೆಯಾದ ಮಾರ್ವೇಶ್ ಗೆಳೆಯ ಬಿದ್ದಿದ್ದ.. ಪ್ರೀತ್ಸು ಪ್ರೀತ್ಸು ಅಂತಾ ಕಾಟ ಕೊಡ್ತಿದ್ನಂತೆ.. ಈ ವಿಚಾರ ಯಾವಾಗ ಶ್ರೀಕಾಂತ್ ಕಿವಿಗೆ ಬಿತ್ತೋ ತನ್ನ ಹುಡುಗಿ ಹಿಂದೆ ಬಿದ್ದಚನ ಹುಡುಕಾಟಕ್ಕೆ ನಿಂತಿದ್ದ.. ಆಗ ಸಿಕ್ಕಿದ್ದು ಅವನ ಗೆಳೆಯ ಮಾರ್ವೇಶ್.. ತನ್ನ ಕಾಲೇಜು ಬಳಿ ಮೊನ್ನೆ ಮಧ್ಯಾಹ್ನ ಟೀ ಕುಡಿಯುತ್ತಿದ್ದವನ ಬಳಿ ಗೆಳೆಯರಬ್ಬರಾದ ಆರೋಪಿ ಡ್ಯಾನಿಯಲ್ ಮತ್ತು ರಾಕಿಯನ್ನ ಕಳಿಸಿದ್ದ.. ಟೀ ಕುಡಿಯೋಕೆ ನಿಂತಿದ್ದವನ್ನ ಮಾತಾಡ್ಬೇಕು ಅಂತಾ ಕರೆದೊಯ್ದಿದ್ದವರು ಒಪ್ಪಿಸಿದ್ದು ಕಾರ್ತಿಕ್ ಆ್ಯಂಡ್ ಗ್ಯಾಂಗ್ ಗೆ.. ಅಷ್ಟೇ ಮಾರ್ವೇಶ್ ಗೆಳೆಯನ ಪತ್ತೆಗೆ ಈತನ ಬಾಯ್ಬಿಡಿಸಲು ಹೊಡೆದಿದ್ದ ಆರೋಪಿಗಳು ಕೊಲೆಯನ್ನೇ ಮಾಡಿದ್ರು.. 

ಅಂದ್ಹಾಗೆ ಇಲ್ಲಿದಾರಲ್ಲ ಈ ಮೂವರು.. ಕಾರ್ತಿಕ್, ನೆಲ್ಸನ್, ಅಭಿಶೇಕ್ ಈ ಮೂವರೂ ಕಾಲೇಜ್ ಡ್ರಾಪೌಟ್.. ಬಿಕಾಂ ಹೋದ್ತಿದ್ದವರ ಕೈಗೆ ಅದಾಗಲೇ ರಕ್ತ ಹತ್ತಿತ್ತು.. ಕೊಲೆಯತ್ನ ಕೇಸ್ ಗಳಲ್ಲಿ ಭಾಗಿಯಾಗಿದ್ರು.. ಕಾರ್ತಿಕ್ ಮೇಲೆ ರಾಮಮೂರ್ತಿ ನಗರ ಸ್ಟೇಷನ್ ನಲ್ಲಿ ರೌಡಿಶೀಟ್ ಕೂಡ ಓಪನ್ ಆಗಿತ್ತು.. ಹೀಗೆರೋವಾಗ ಶ್ರೀಕಾಂತ್ ತನ್ನ ಲವರ್ ಹಿಂದೆ ಬೇರೊಬ್ಬ ಬಿದ್ದಿದ್ದ ವಿಚಾರ ಇವ್ರ ಕಿವಿಗೆ ಹಾಕಿದ್ದ.. ಆತ ಸಿಗದೆ ಮಾರ್ವೇಶ್ ನನ್ನ ಕರೆದು ಕರೆಸಲು ಯತ್ನಿಸಿದ್ರು.. ಆದ್ರೆ ಮಾರ್ವೇಶ್ ಕರೆ ಮಾಡ್ದಾಗ ಆತನ ಗೆಳೆಯ ಕರೆ ರಿಸೀವ್ ಮಾಡಿರಲಿಲ್ಲ.. ನಂತರ ಪೈಪ್ ನಿಂದ ಹೊಡೆತ ಜೋರು ಮಾಡಿದ್ದವರು ಕೊಂದೇ ಬಿಟ್ಟಿದ್ದಾರೆ.

Bengaluru PES College: ಪರೀಕ್ಷೆಯಲ್ಲಿ ಕಾಪಿ ಮಾಡ್ತಿದ್ದ ವಿದ್ಯಾರ್ಥಿಗೆ ಅವಮಾನ: 14ನೇ ಮಹಡಿಯಿಂದ ಬಿದ್ದು ಸಾವು

ಸದ್ಯ ಅಮಾಯಕನೊಬ್ಬನನ್ನ ಕೊಲೆ ಮಾಡಿದ್ದ ಎಲ್ಲಾ ಆರೋಪಿಗಳನ್ನ ಬಂಧಿಸಿರೋ ಪೊಲೀಸರು ಅವ್ರನ್ನ ಕಸ್ಟಡಿಗೆ ಪಡೆದಿದ್ದಾರೆ.. ಕೇಸ್ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸ್ತಿದ್ದಾರೆ.. ಆದ್ರೆ ಇದ್ರಲ್ಲಿ ಕೊಲೆಯಾದ ಮಾರ್ವೇಶ್ ಘಟನೆ ಮಾತ್ರ ದುರಂತ.. ಯಾರದ್ದೋ ತಪ್ಪು ಮತ್ಯಾರಿಗೋ ಶಿಕ್ಷೆ ಅಂತಾ ಹಂತಕರು ಅಮಾಯಕನ್ನ ಕೊಂದಿರೋದು ಬೇಸರದ ಸಂಗತಿ..

click me!