
ಗೋವಿಂದಪುರಂ(ಜ.28) ಕುಡುಕ ಪತಿಯ ಅವಾಂತರಕ್ಕೆ ಅಮಾಯಕ ಜೀವವೊಂದು ಬಲಿಯಾಗಿದೆ.ಕಂಠಪೂರ್ತಿ ಕುಡಿದು ಮನೆಗೆ ಬಂದ ಪತಿಯನ್ನು ಪತ್ನಿ ಹಿಗ್ಗಾಮುಗ್ಗಾ ಜಾಡಿಸಿದ್ದಾಳೆ. ಮೊದಲೇ ಕುಡಿದು ಮದ ಏರಿದ್ದ ಪತಿ ಆಕ್ರೋಶ ಡಬಲ್ ಆಗಿದೆ. ಇದೇ ಆಕ್ರೋಶದಲ್ಲಿ ಮೂರನೇ ಮಹಡಿಯಿಂದ ಪತ್ನಿಯನ್ನು ಎತ್ತಿ ಕಳೆಕ್ಕೆ ಎಸೆದಿದ್ದಾನೆ. ಮೂರನೇ ಮಹಡಿ ಮೇಲಿಂದ ಬಿದ್ದ ಪತ್ನಿಯನ್ನು ತಕ್ಷಣ ಆಸ್ಪತ್ರೆ ದಾಖಲಿಸಿದ್ದರೂ ಬದುಕಿ ಉಳಿಯಲಿಲ್ಲ. ಈ ಭೀಕರ ಘಟನೆ ಉತ್ತರ ಪ್ರದೇಶದ ಗೋವಿಂದಪುರದಲ್ಲಿ ನಡೆದಿದೆ.
ಪಾರ್ಕಿಂಗ್ ಕಾಂಟ್ರಾಕ್ಟರ್ ಆಗಿದ್ದ ವಿಕಾಸ್ ಕುಮಾರ್ ಕುಡಿತದ ದಾಸನಾಗಿದ್ದ. ಪ್ರತಿ ದಿನ ಮನೆಗೆ ಬರುವಾಗ ಕುಡಿದು ಬರುತ್ತಿದ್ದ. ಪತಿಯ ಕುಡಿತದ ಚಟದಿಂದ ರೋಸಿ ಹೋಗಿದ್ದ ಪತ್ನಿಯ ಸಹನೆ ಕಟ್ಟೆ ಒಡೆದಿದೆ. ಶುಕ್ರವಾರ ರಾತ್ರಿ(ಜ.26) ಕುಡಿದ ಪತಿ ಮೂರನೇ ಮಹಡಿಯಲ್ಲಿದ್ದ ಮನೆಗೆ ತೂರಾಡುತ್ತಾ ಬಂದಿದ್ದಾನೆ. ಕಂಠಪೂರ್ತಿ ಕುಡಿದು ಮನೆಗೆ ಬಂದ ಪತಿಯನ್ನು ಪತ್ನಿ ಪ್ರಶ್ನಿಸಿದ್ದಾಳೆ. ಇಷ್ಟೇ ಅಲ್ಲ ಹಿಗ್ಗಾಮುಗ್ಗಾ ಜಾಡಿಸಿದ್ದಾಳೆ. ಪತ್ನಿಯ ಮಾತುಗಳಿಂದ ಪಾನಮತ್ತ ಪತಿಯ ಆಕ್ರೋಶ ಹೆಚ್ಚಾಗಿದೆ.
ಗಂಡನ ಗೆಳತಿ ಸಂಬಂಧಿಯಲ್ಲ ಎಂದು ಗರ್ಲ್‌ಫ್ರೆಂಡ್ ಮೇಲಿನ ಎಫ್‌ಐಆರ್ ರದ್ದುಗೊಳಿಸಿದ ಹೈಕೋರ್ಟ್
ಇದೇ ರೀತಿ ಕುಡಿಯುತ್ತಿದ್ದರೆ ಮನೆಗೆ ಬರುವುದೇ ಬೇಡ ಎಂದು ಪತ್ನಿ ಹೇಳಿದ್ದಾರೆ. ಮೊದಲೇ ರೊಚ್ಚಿಗೆದ್ದಿದ್ದ ಪತ್ನಿ ನನ್ನ ಮನೆಗೆ ಬರಬೇಡ ಎಂದು ಹೇಳುತ್ತಿಯಾ ಎಂದು ಧರಧರನೆ ಪತ್ನಿಯನ್ನು ಎಳೆದುಕೊಂಡು ಹೊರತಂದ ಪತಿ, ವರಾಂಡದಿಂದ ಎತ್ತಿ ಕೆಳಕ್ಕೆ ಎಸೆದಿದ್ದಾನೆ. ಮೂರೇ ಮಹಡಿಯಿಂದ ಕೆಳಕ್ಕೆ ಬಿದ್ದ ಪತ್ನಿಗೆ ತೀವ್ರ ಗಾಯವಾಗಿದೆ. ತಕ್ಷಣವೇ ಜನ ಸೇರಿದ್ದಾರೆ. ವಿಕಾಸ್ ಕುಮಾರ್ ಕೂಡ ಪತ್ನಿಯನ್ನು ಆಸ್ಪತ್ರೆ ಸಾಗಿಸಲು ನೆರವು ನೀಡಿದ್ದಾನೆ.
ಆಸ್ಪತ್ರೆಗೆ ಬಂದ ಬೆನ್ನಲ್ಲೇ ವೈದ್ಯರು ತಪಾಸಣೆ ನಡೆಸಿ ಮಹಿಳೆ ಮೃತಪಟ್ಟಿದ್ದಾಳೆ ಎಂದು ದೃಢಪಡಿಸಿದ್ದಾರೆ. ಇಷ್ಟೇ ಅಲ್ಲ ಆಸ್ಪತ್ರೆ ಸಿಬ್ಬಂದಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇತ್ತ ಪೊಲೀಸರು ಆಗಮಿಸುವ ಮೊದಲೇ ವಿಕಾಸ್ ಕುಮಾರ್ ಪರಾರಿಯಾಗಿದ್ದಾನೆ. ತೀವ್ರ ತಪಾಸಣೆ ನಡೆಸಿದ ಪೊಲೀಸರು ಆರೋಪಿ ವಿಕಾಸ್ ಕುಮಾರ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಷ್ಟರಲ್ಲಿ ಕುಡಿದ ಮತ್ತೆಲ್ಲಾ ಇಳಿದು ಹೋಗಿದೆ. ಇದೀಗ ಜೈಲು ಸೇರಿರುವ ಆರೋಪಿ ವಿಕಾಸ್ ಕುಮಾರ್ ಪರಿತಪಿಸುತ್ತಿದ್ದಾನೆ.
ಬೆಂಗಳೂರು: ಅಕ್ರಮ ಸಂಬಂಧಕ್ಕೆ ತುರೆಮಣೆಯಿಂದ ಕೊಯ್ದು ಪತ್ನಿ ಹತ್ಯೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ