ವೀಕೆಂಡ್ ಟ್ರಿಪ್‌ನಿಂದ ಮರಳುತ್ತಿದ್ದ ವೇಳೆ ನಿದ್ದೆಗೆ ಜಾರಿದ ಚಾಲಕ, ಭೀಕರ ಅಪಘಾತದಲ್ಲಿ 6 ಮಂದಿ ಸಾವು!

By Suvarna News  |  First Published Jan 28, 2024, 4:36 PM IST

ಶುಕ್ರವಾರ ಗಣರಾಜ್ಯೋತ್ಸವ ದಿನ, ಶನಿವಾರ, ಭಾನುವಾರ ರಜಾ ದಿನ. ಹೀಗಾಗಿ ಬಹುತೇಕ ಎಲ್ಲಾ ಪ್ರವಾಸಿ ತಾಣಗಳು ಭರ್ತಿಯಾಗಿತ್ತು. ಮೂರು ದಿನಗಳ ರಜೆಯಿಂದ ಹಲವರು ಟ್ರಿಪ್ ತೆರಳಿದ್ದಾರೆ. ಹೀಗೆ ಟ್ರಿಪ್ ಮುಗಿಸಿ ಮರಳುತ್ತಿದ್ದ ವೇಳೆ 6 ಮಂದಿಯಿದ್ದ ಕಾರು ಟ್ರಕ್‌ಗೆ ಡಿಕ್ಕಿಯಾಗಿದೆ. ಭೀಕರ ಅಪಘಾತದಲ್ಲಿ 5 ಪ್ರಯಾಣಿಕರು ಸ್ಥಳದಲ್ಲೆ ಮೃತಪಟ್ಟಿದ್ದಾರೆ.


ಚೆನ್ನೈ(ಜ.28) ಲಾಂಗ್ ವೀಕೆಂಡ್ ಹಿನ್ನಲೆಯಲ್ಲಿ ಪ್ರವಾಸಿ ತಾಣ, ಧಾರ್ಮಿಕ ಕೇಂದ್ರಗಳು ಬಹುತೇಕ ಭರ್ತಿಯಾಗಿತ್ತು. ಗಣರಾಜ್ಯೋತ್ಸವ, ಶನಿವಾರ ಹಾಗೂ ಭಾನುವಾರ ಒಟ್ಟು 3 ದಿನಗಳ ರಜೆಯಿಂದ ಹೆದ್ದಾರಿಗಳಲ್ಲಿ ವಾಹನ ಸಂಚಾರ ಕೂಡ ಹೆಚ್ಚಾಗಿತ್ತು. ಮೂರು ದಿನಗಳ ರಜೆ ಸಿಕ್ಕ ಕಾರಣದಿಂದ ಯುವಕರ ಗುಂಪೊಂದು ಟ್ರಿಪ್ ಹೊರಟಿದೆ. ಮೂರು ದಿನಗಳ ಬ್ಯೂಸಿ ಟ್ರಿಪ್ ಮುಗಿಸಿಕೊಂಡು ಮರಳುತ್ತಿದ್ದ ವೇಳೆ ಕಾರು ಡ್ರೈವ್ ಮಾಡುತ್ತಿದ್ದ ವ್ಯಕ್ತಿ ನಿದ್ದೆಗೆ ಜಾರಿದ್ದಾನೆ. ಪರಿಣಾಮ ಕಾರು ನೇರವಾಗಿ ಟ್ರಿಕ್‌ಗೆ ಡಿಕ್ಕಿ ಹೊಡೆದಿದೆ. ಈ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ 5 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೊರ್ವ ಆಸ್ಪತ್ರೆ ಸಾಗಿಸುವ ಮದ್ಯ ಮೃತಪಟ್ಟಿದ್ದಾನೆ. ಈ ಭೀಕರ ಅಪಘಾತ ತಮಿಳುನಾಡಿನ ತಿರುನೇಲ್‌ವೆಲ್ಲಿ ವ್ಯಾಪ್ತಿಯಲ್ಲಿ ನಡೆದಿದೆ. 

ಗುರುವಾರ ರಾತ್ರಿ 6 ಮಂದಿ ಯುವಕರ ಗುಂಪು ಕಾರಿನಲ್ಲಿ ತಮಿಳುನಾಡಿನ ತೆಂಕಾಶಿ ಜಿಲ್ಲೆಯ ಕುರ್ತಾಲಂ ಹಾಗೂ ಸುತ್ತಮುತ್ತಲಿನ ಪ್ರದೇಶಕ್ಕೆ ಟ್ರಿಪ್ ತೆರಳಿದ್ದಾರೆ. ಮೂರು ದಿನಗಳಲ್ಲಿ ಹಲವು ಪ್ರವಾಸಿ ತಾಣಗಳನ್ನು ಸಂದರ್ಶಿಸಬೇಕಾದ ಕಾರಣ ಬಿಡುವಿಲ್ಲದೆ ಪ್ರಯಾಣ, ಪ್ರವಾಸಿ ತಾಣಗಳಲ್ಲಿ ಕಾಲ ಕಳೆದಿದಿದ್ದಾರೆ. ಟ್ರಿಪ್ ಮುಗಿಸಿ ಶನಿವಾರ ತಡರಾತ್ರಿ ತಮ್ಮ ಮನೆಗೆ ಮರಳು ಕಾರಿನಲ್ಲಿ ಹೊರಟಿದ್ದಾರೆ.

Tap to resize

Latest Videos

ಬಾಗಲಕೋಟೆಯಲ್ಲಿ ಭೀಕರ ಅಪಘಾತ: ನಿಂತಿದ್ದ ಟ್ರ್ಯಾಕ್ಟರ್‌ಗೆ ಕಾರು ಡಿಕ್ಕಿ, ಸ್ಥಳದಲ್ಲೇ ನಾಲ್ವರ ದುರ್ಮರಣ

ಮುಂಜಾನೆ 3.30ರ ವೇಳೆ ಚಾಲನೆ ಮಾಡುತ್ತಿದ್ದ ವ್ಯಕ್ತಿ ಕಾರು ಚಲಿಸುತ್ತಿದ್ದಂತೆ ನಿದ್ದೆಗೆ ಜಾರಿದ್ದಾನೆ. ಪರಿಣಾಮ ಎದುರಿನಿಂದ ವೇಗವಾಗಿ ಬರುತ್ತಿದ್ದ ಟ್ರಕ್‌ಗೆ ಡಿಕ್ಕಿಯಾಗಿದೆ. ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ 5 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತೊರ್ವ ಗಂಭೀರವಾಗಿ ಗಾಯಗೊಂಡಿದ್ದು ತಿರುನೇಲ್‌ವೆಲ್ಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿಲಾಗಿತ್ತು. ಆದರೆ ಗಾಯದ ಪ್ರಮಾಣ ಹೆಚ್ಚಾಗಿದ್ದ ಕಾರಣ ಆಸ್ಪತ್ರೆ ದಾಖಲಿಸಿದ ವ್ಯಕ್ತಿಯೂ ಮೃತಪಟ್ಟಿದ್ದಾನೆ.  ಮೃತರನ್ನು ಕಾರ್ತಿಕ್, ವೆಲ್ ಮನೋಜ್, ಸುಬ್ರಮಣಿ, ಮನೋಹರನ್, ಪೋಥಿರಾಜ ಎಂದು ಗುರುತಿಸಲಾಗಿದೆ.

ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದಾರೆ. ಟ್ರಕ್ ಅಡಿಯಲ್ಲಿ ಸಿಲುಕಿದ್ದ ವಾಹನವನ್ನು ಎಳೆದು ಕಾರಿನಲ್ಲಿದ್ದ ಪ್ರಯಾಣಿಕರನ್ನು ಹೊರತೆಗೆಯಲು ಹರಸಾಹಸ ಮಾಡಿದ್ದಾರೆ. ಮೃತದೇಹವನ್ನು ತಿರುನೇಲ್‌ವೆಲ್ಲಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ, ಚಲಿಸುತ್ತಿರುವಾಗಲೇ ಚಾಲಕ ನಿದ್ದೆಗೆ ಜಾರಿದ ಕಾರಣ ಅಪಘಾತ ಸಂಬವಿಸಿದೆ ಅನ್ನೋ ಮಾಹಿತಿ ನೀಡಿದ್ದಾರೆ.ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದ್ದು, ಆಸ್ಪತ್ರೆಯತ್ತ ದೌಡಾಯಿಸಿದ್ದಾರೆ.  

 

 

 

 

ಅಟಲ್ ಸೇತುವಿನಲ್ಲಿ ಅಪಘಾತ: ಹಿಂದಿದ್ದ ಕಾರಿನ ಡ್ಯಾಶ್ ಕ್ಯಾಮರಾದಲ್ಲಿ ಸೆರೆಯಾಯ್ತು ಭೀಕರ ದೃಶ್ಯ
 

click me!