ಲವ್‌ ಅಫೇರ್‌ಗೆ ತಂಗಿಯ ಶಿರಚ್ಛೇದ, ರುಂಡ ಹಿಡಿದು ಗ್ರಾಮದಲ್ಲಿ 800 ಮೀಟರ್‌ ತಿರುಗಾಡಿದ ಅಣ್ಣ!

Published : Jul 21, 2023, 11:08 PM IST
ಲವ್‌ ಅಫೇರ್‌ಗೆ ತಂಗಿಯ ಶಿರಚ್ಛೇದ, ರುಂಡ ಹಿಡಿದು ಗ್ರಾಮದಲ್ಲಿ 800 ಮೀಟರ್‌ ತಿರುಗಾಡಿದ ಅಣ್ಣ!

ಸಾರಾಂಶ

ತಂಗಿಯ ಲವ್‌ ಅಫೇರ್‌ನಿಂದ ಸಿಟ್ಟಿಗೆದ್ದ ಅಣ್ಣ, ಆಕೆಯ ರುಂಡ ಕಡಿದು ಗ್ರಾಮದಲ್ಲಿ 800 ಮೀಟರ್‌ ದೂರ ತಿರುಗಾಡಿದ ಭೀಕರ ಘಟನೆ ನಡೆದಿದೆ. ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ಘಟನೆ ನಡೆದಿದ್ದು, ಇದರ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.  

ಲಕ್ನೋ (ಜು.21):  ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ಶುಕ್ರವಾರ ಭಯಾನಕ ಘಟನೆ ನಡೆದಿದೆ. ಸಹೋದರನೊಬ್ಬ ತನ್ನ ತಂಗಿಯ ಶಿರಚ್ಛೇದ ಮಾಡಿದ್ದಾನೆ. ಆ ಬಳಿಕ ಆಕೆಯ ರುಂಡವನ್ನು ಹಿಡಿದುಕೊಂಡು ಗ್ರಾಮದಲ್ಲಿ 800 ಮೀಟರ್ ದೂರು ತಿರುಗಾಡಿದ ಘಟನೆ ನಡೆದಿದೆ. ಗ್ರಾಮಸ್ಥರ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ಧಾವಿಸಿ, ಬಳಿಕ ಆರೋಪಿ ಸಹೋದರನನ್ನು ಬಂಧಿಸಿದ್ದಾರೆ. ಆರೋಪಿ ತನ್ನ 18 ವರ್ಷದ ಸಹೋದರಿಯ ಲವ್‌ ಅಫೇರ್‌ನಿಂದ ಕೋಪಗೊಂಡು ಈ ಕೃತ್ಯ ಎಸಗಿದ್ದಾನೆ ಎಂದು ಎಸಿಪಿ ಅಶುತೋಷ್ ಮಿಶ್ರಾ ತಿಳಿಸಿದ್ದಾರೆ. ಆರೋಪಿಯನ್ನು ರಿಯಾಜ್‌ ಎಂದು ಗುರುತಿಸಲಾಗಿದ್ದು, ಬೆಳಗ್ಗೆ 11.30ಕ್ಕೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಮೃತ ವ್ಯಕ್ತಿಯ ರುಂಡ ಹಾಗೂ ಆಕೆಯ ದೇಹವನ್ನು ಪೊಲೀಸರು ವಶಪಡಿಸಿಕೊಂಡಿದ್ದು,  ಫತೇಪುರ್ ಪೊಲೀಸ್ ಠಾಣೆ ವ್ಯಾಪ್ತಿಯ ಮಿತ್ವಾರಾ ಗ್ರಾಮದಲ್ಲಿ ಘಟನೆ ನಡೆದಿದೆ.

ಬಟ್ಟೆ ತೊಳೆಯುವಂತೆ ಹೇಳಿದ್ದ ರಿಯಾಜ್‌: ನೆರೆಹೊರೆಯವರು ನೀಡಿರುವ ಮಾಹಿತಿಯ ಪ್ರಕಾರ, ಶುಕ್ರವಾರ ಬೆಳಗ್ಗೆ ರಿಯಾಜ್‌ ತನ್ನ ತಂಗಿ ಆಸಿಫಾ ಜೊತೆ ಗಲಾಟೆ ಮಾಡಿಕೊಂಡಿದ್ದ. ಕೆಲ ಹೊತ್ತು ಮನೆಯಲ್ಲಿ ಇದ್ದ ಬಳಿಕ ಆತ ಹೊರಗಡೆ ಹೋಗಿದ್ದ. ಮತ್ತೆ ಮನೆಗೆ ವಾಪಾಸ್‌ ಬಂದ ಬಳಿಕ ತಂಗಿಗೆ ಬಟ್ಟೆಯನ್ನು ತೊಳೆದುಹಾಕುವಂತೆ ಹೇಳಿದ್ದಾರೆ. ಈ ವೇಳೆ ಮನೆಯಿಂದ ಹೊರಬಂದ ಆಸೀಫಾ ಬಟ್ಟೆಯನ್ನು ತೊಳೆಯುವ ಸಲುವಾಗಿ ಬಕೆಟ್‌ನಲ್ಲಿ ನೀರು ತುಂಬಿಸಿಕೊಳ್ಳಲು ಮುಂದಾಗಿದ್ದಾಳೆ. ಈ ಹಂತದಲ್ಲಿ ರಿಯಾಜ್‌ ಹಿಂದಿನಿಂದ ಬಂದು ತಂಗಿಯ ಮೇಲೆ ಹಲ್ಲೆಮಾಡಿದ್ದಲ್ಲದೆ, ಆಕೆಯ ಕೆನ್ನೆಗೆ ಹೊಡೆದಿದ್ದಾರೆ. ಆತನಿಗೆ ಎಷ್ಟು ಸಿಟ್ಟಿತ್ತೆಂದರೆ, ಆಕೆಯ ಕುತ್ತಿಗೆಯನ್ನು ಕೊಯ್ದು, ಅದನ್ನು ಹಿಡಿದುಕೊಂಡು ಪೊಲೀಸ್‌ ಠಾಣೆಯತ್ತ ತೆರಳು ಆರಂಭಿಸಿದ್ದ. ರುಂಡ ಸಮೇತ ರಿಯಾಜ್‌ ಮನೆಯಿಂದ ಹೊರಗೆ ಹೋಗಿದ್ದನ್ನು ಕಂಡು ನೆರೆಹೊರೆಯವರು ಕಂಗಾಲಾಗಿ ಹೋಗಿದ್ದರು. ತಕ್ಷಣವೇ ಪೊಲೀಸರಿಗೆ ಈ ಮಾಹಿತಿ ನೀಡಿದ್ದು, ತಂಗಿಯ ರುಂಡವನ್ನು ಹಿಡಿದುಕೊಂಡು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ರಿಯಾಜ್‌ನನ್ನು ಮಾರ್ಗಮಧ್ಯದಲ್ಲಿಯೇ ಪೊಲೀಸರು ಬಂಧಿಸಿದ್ದಾರೆ.

ಮಾಹಿತಿಯ ಪ್ರಕಾರ, ರಿಯಾಜ್‌ನ ಸಹೋದರಿ ಕೆಲ ತಿಂಗಳ ಹಿಂದೆ ತನ್ನ ಬಾಯ್‌ಫ್ರೆಂಡ್‌ ಜೊತೆ ಓಡಿ ಹೋಗಿದ್ದಳು. ಈ ಕುರಿತಾಗಿ ಮೇ 29 ರಂದು ರಿಯಾಜ್‌ನ ಕುಟುಂಬ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಬೇರೆ ಗ್ರಾಮದ ಯುವಕ ಹಾಗೂ ಆಸೀಫಾರನ್ನು ಪೊಲೀಸರು ಹಿಡಿಯುವಲ್ಲಿ ಯಶಸ್ವಿಯಾಗಿದ್ದರು. ಸದ್ಯ ಆಸೀಫಾ ಬಾಯ್‌ಫ್ರೆಂಡ್‌ ಜೈಲಿನಲ್ಲಿದ್ದರೆ, ಬಾಲಕಿಯನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರ ಮಾಡಲಾಗಿತ್ತು. ಈ ವಿಚಾರವಾಗಿ ಮನೆಯಲ್ಲಿ ಸಾಕಷ್ಟು ಜಗಳವಾಗಿತ್ತು. ಇದಾದ ನಂತರ ರಿಯಾಜ್ ತನ್ನ ತಂಗಿಯನ್ನು ಇಷ್ಟಪಡುತ್ತಿರಲ್ಲ. ಪ್ರತಿದಿನ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು. ಶುಕ್ರವಾರ ಬೆಳಗ್ಗೆಯೂ ಇಬ್ಬರ ನಡುವೆ ಜಗಳ ನಡೆದಿದೆ. ಇದಾದ ಬಳಿಕ ರಿಯಾಜ್ ಕೃತ್ಯ ಎಸಗಿದ್ದಾನೆ.

ಭೀಮನಂಥ ಗಂಡನನ್ನು ಭೀಮನ ಅಮವಾಸ್ಯೆ ದಿನವೇ ಶಿವನ ಪಾದ ಸೇರಿಸಿದ್ಲು ಹೆಂಡ್ತಿ!

ರಿಯಾಜ್ ತನ್ನ ಸಹೋದರಿಯನ್ನು ಕೊಂದಾಗ. ಆ ಸಮಯದಲ್ಲಿ ಮನೆಯಲ್ಲಿ ತಂದೆ-ತಾಯಿ ಹಾಗೂ ಕುಟುಂಬದವರಿದ್ದರು. ಹಾಗಾಗಿ ತಂಗಿಯನ್ನು ಬಟ್ಟೆ ಒಗೆಯಲು ಮನೆಯಿಂದ ಹೊರಗೆ ಕಳುಹಿಸಿದ್ದಾನೆ. ಯಾರೊಬ್ಬರೂ ಮಧ್ಯಪ್ರವೇಶಿಸಲಾಗದಷ್ಟು ವೇಗವಾಗಿ ರಿಯಾಜ್‌, ತಂಗಿಯ ಕತ್ತನ್ನು ಕಡಿದಿದ್ದಾರೆ. ಹಳ್ಳಿಯಲ್ಲಿ ತರಕಾರಿ ಅಂಗಡಿ ಇರಿಸಿಕೊಂಡಿರುವ ರಿಯಾಜ್‌ ಮೇಲೆ ಈಗಾಗಲೇ ಹಲವಾರು ಕೇಸ್‌ಗಳಿವೆ. ಆತನ ಸಹೋದರಿ ತನ್ನ ಪ್ರಿಯಕರನೊಂದಿಗೆ ಓಡಿಹೋಗಿದ್ದಾಗ ಹಲ್ಲೆಗೆ ಸಂಬಂಧಿಸಿದ ಪ್ರಕರಣದಲ್ಲಿ ಜೈಲಿನಲ್ಲಿದ್ದ. 15 ದಿನಗಳ ಹಿಂದಷ್ಟೇ ಜೈಲಿನಿಂದ ಹೊರ ಬಂದಿದ್ದ ಎನ್ನಲಾಗಿದೆ.

6 ತಿಂಗಳ ಕಂದ ಸೇರಿ ಕುಟುಂಬದ ನಾಲ್ವರ ಬರ್ಬರ ಹತ್ಯೆ, ಹಳ್ಳ ಹಿಡಿದ ರಾಜಸ್ಥಾನ ಕಾನೂನು ಸುವ್ಯವಸ್ಥೆ!

ಪ್ರತ್ಯಕ್ಷದರ್ಶಿಯೊಬ್ಬರ ಪ್ರಕಾರ, ರಿಯಾಜ್ ತನ್ನ ಸಹೋದರಿಯ ತಲೆಯನ್ನು ಕೈಯಲ್ಲಿ ಹಿಡಿದುಕೊಂಡು ನಿಧಾನವಾಗಿ ರಸ್ತೆಯಲ್ಲಿ ನಡೆಯುತ್ತಿದ್ದ. ಮೊದಮೊದಲು ನನಗೆ ಅರ್ಥವಾಗದಿದ್ದರೂ ಹತ್ತಿರ ಬಂದಾಗ ಅವನ ಕೈಯಲ್ಲಿ ಆತನ ತಂಗಿಯ ತಲೆಯನ್ನು ನೋಡಿ ಆಶ್ಚರ್ಯವಾಯಿತು. ಅವನ ತಂಗಿಯ ಮುಖದ ತುಂಬೆಲ್ಲಾ ರಕ್ತ. ರಿಯಾಜ್ ಮುಖದಲ್ಲಿ ಯಾವುದೇ ಬೇಸರ ಕಾಣಿಸಲಿಲ್ಲ. ಅವನ ಕೈಯಲ್ಲಿ ಒಂದು ಚಪ್ಪಲಿಯೂ ಇತ್ತು. ರಿಯಾಜ್‌ನನ್ನು ಕಂಡ ನನಗೆ ಅವನೊಂದಿಗೆ ಮಾತನಾಡುವ ಧೈರ್ಯವೂ ಇರಲಿಲ್ಲ ಎಂದು ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ: ಶಿಕ್ಷಕನಿಗೆ ಪೋಷಕರಿಂದ ಧರ್ಮದೇಟು!
ಬೆಂಗಳೂರಲ್ಲಿ ಹೊಟ್ಟೆಪಾಡಿಗೆ ಕಳ್ಳತನ ಮಾಡ್ತಿದ್ದ ಕಳ್ಳನನ್ನೇ ರಾಬರಿ ಮಾಡಿದ ಖತರ್ನಾಕ್ ಕಿತಾಪತಿಗಳು!