ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳ ಪತ್ತೆಗೆ ಕ್ರಮವಹಿಸಿದ್ದ ಪೊಲೀಸರು ದೇವರನಾವದಗಿ ಗ್ರಾಮದ ನಿವಾಸಿಗಳಾದ ಮಲ್ಲಿಕಾರ್ಜುನ ಜನಿವಾರ, ಸಂತೋಷ ಕುಮಸಗಿ, ಅನ್ವರ್ ನದಾಫ ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ.
ಆಲಮೇಲ(ಜು.21): ರೌಡಿಶೀಟರ್ ಹತ್ಯೆ ಪ್ರಕರಣದಲ್ಲಿ ಮೂವರೂ ಆರೋಪಿಗಳನ್ನು ಆಲಮೇಲ ಪೊಲೀಸರು ಈಚೆಗೆ ಬಂಧಿಸಿದ್ದಾರೆ. ಆಲಮೇಲ ತಾಲ್ಲೂಕಿನ ದೇವರನಾವದಗಿ ಗ್ರಾಮದಲ್ಲಿ ಜುಲೈ 11ರಂದು ರೌಡಿಶೀಟರ್, ಆಲಮೇಲ ನಿವಾಸಿ ಮಾಳಪ್ಪ ನಾಯ್ಕೋಡಿ (ಮೇತ್ರಿ) (45) ಎಂಬಾತನನ್ನು ಹತ್ಯೆಗೈದು ಆರೋಪಿಗಳು ಪರಾರಿಯಾಗಿದ್ದರು.
ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳ ಪತ್ತೆಗೆ ಕ್ರಮವಹಿಸಿದ್ದ ಪೊಲೀಸರು ದೇವರನಾವದಗಿ ಗ್ರಾಮದ ನಿವಾಸಿಗಳಾದ ಮಲ್ಲಿಕಾರ್ಜುನ ಜನಿವಾರ, ಸಂತೋಷ ಕುಮಸಗಿ, ಅನ್ವರ್ ನದಾಫ ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ.
ಅಪ್ತಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ: ಪಾದ್ರಿ ಬಂಧನ-ಸಂಘಟನೆಗಳು ಆಕ್ರೋಶ
ಕಬ್ಬು ಕಟಾವ್ ಮಾಡುವ ಕಡತದಿಂದ ಕೊಚ್ಚಿ, ಕಲ್ಲು ಎತ್ತಿ ಹಾಕಿ ಜುಲೈ 11ರಂದು ದೇವರನಾವದಗಿ ಗ್ರಾಮದಲ್ಲಿ ಆರೋಪಿಗಳು ಮಾಳಪ್ಪನ ಕೊಲೆ ಮಾಡಿದ್ದರು. ಆಲಮೇಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.