ಕಾಫಿಗೆ ವಿಷ ಹಾಕಿ ಯೋಧನನ್ನು ಕೊಲ್ಲಲು ಯತ್ನಿಸಿದ ಪಾಪಿ ಮಹಿಳೆ: ಕಾರಣ ಕೇಳಿದ್ರೆ ಶಾಕ್‌ ಆಗ್ತೀರಾ..!

By BK Ashwin  |  First Published Aug 7, 2023, 5:24 PM IST

ಜರ್ಮನಿಯಲ್ಲಿ ನೆಲೆಸಿದ್ದಾಗ ತನ್ನ ಕಾಫಿಯ ರುಚಿ ಕೆಟ್ಟಿದೆ ಅನ್ನೋದನ್ನು ಮಾರ್ಚ್‌ ತಿಂಗಳಿನಿಂದ ಗಮನಿಸಿದೆ ಅಂತ ಪತಿ ಹೇಳಿದ್ದಾರೆ. ಬಳಿಕ, ಸೂಕ್ಷ್ಮವಾಗಿ ಗಮನಿಸಿದಾಗ ಹಲವು ಬಾರಿ ವಿಷ ಹಾಕಿರುವ ಬಗ್ಗೆ ಸಾಕ್ಷ್ಯಗಳು ದೊರೆತಿವೆ.


ವಾಷಿಂಗ್ಟನ್‌ ಡಿ.ಸಿ. (ಆಗಸ್ಟ್ 7, 2023): ಅಮೆರಿಕದ ಆರಿಝೋನಾದ ಮಹಿಳೆಯೊಬ್ಬರು ತನ್ನ ಪತಿಯನ್ನು ತಿಂಗಳುಗಟ್ಟಲೆ ಪ್ರತಿನಿತ್ಯದ ಕಾಫಿಗೆ ವಿಷ ಹಾಕಿ ಕೊಲೆ ಮಾಡಲು ಯತ್ನಿಸಿದ ಆರೋಪದ ಮೇಲೆ ಬಂಧಿಸಲಾಗಿದೆ. ಟಕ್ಸನ್‌ನ ಮೆಲೊಡಿ ಫೆಲಿಕಾನೊ ಜಾನ್ಸನ್ ಅವರನ್ನು ಮೊದಲ ಹಂತದ ಕೊಲೆ ಯತ್ನ (ಕೌಟುಂಬಿಕ ಹಿಂಸಾಚಾರ), ಆಕ್ರಮಣ ಮತ್ತು ಆಹಾರ ಅಥವಾ ಪಾನೀಯವನ್ನು ವಿಷಪೂರಿತಗೊಳಿಸಲು ಪ್ರಯತ್ನಿಸಿದ ಆರೋಪದ ಮೇಲೆ ಗ್ರ್ಯಾಂಡ್ ಜ್ಯೂರಿ ದೋಷಾರೋಪಣೆ ಮಾಡಿದೆ ಎಂದು ಅಂತಾರಾಷ್ಟ್ರೀಯ ಸುದ್ದಿಸಂಸ್ಥೆ ಸಿಎನ್‌ಎನ್‌ ವರದಿ ಮಾಡಿದೆ.

ಜರ್ಮನಿಯಲ್ಲಿ ನೆಲೆಸಿದ್ದಾಗ ತನ್ನ ಕಾಫಿಯ ರುಚಿ ಕೆಟ್ಟಿದೆ ಅನ್ನೋದನ್ನು ಮಾರ್ಚ್‌ ತಿಂಗಳಿನಿಂದ ಗಮನಿಸಿದೆ ಅಂತ ಪತಿ ಹೇಳಿದ್ದಾರೆ. ಈ ಸಂಬಂಧ ಆರೋಪಿ ಮಹಿಳೆಯ ವಿಚಾರಣೆ ನಡೆಸ್ತಿರೋ ನ್ಯಾಯಾಲಯದ ದಾಖಲೆಗಳು ತಿಳಿಸಿವೆ ಎಂದೂ ವರದಿಯಾಗಿದೆ. ರಾಬಿ ಜಾನ್ಸನ್ ಯುಎಸ್ ಏರ್‌ಫೋರ್ಸ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರೋ ಈ ದಂಪತಿ ಮಗುವಿನ ಜತೆಗೆ ಒಟ್ಟಿಗೆ ವಾಸಿಸುತ್ತಿದ್ದರು ಎಂದೂ ತಿಳಿದುಬಂದಿದೆ. 

Tap to resize

Latest Videos

ಇದನ್ನು ಓದಿ: ಡೈಲಿ ಒಂದು ಪೆಗ್‌ ಹಾಕಿದ್ರೂ ನೀವು ಸೇಫಲ್ಲ: ನಿಮ್ಮನ್ನೂ ಕಾಡುತ್ತೆ ‘’ಸೈಲೆಂಟ್‌ ಕಿಲ್ಲರ್‌’’!

ಕಾಫಿ ಕಪ್‌ನಲ್ಲಿ ಹೆಚ್ಚಿನ ಮಟ್ಟದ ಕ್ಲೋರಿನ್ ಇದೆ ಎಂದು ಪೂಲ್ ಟೆಸ್ಟಿಂಗ್ ಸ್ಟ್ರಿಪ್‌ಗಳ ಮೂಲಕ ಪತಿಯೇ ಪತ್ತೆಹಚ್ಚಿದ್ದರು ಎಂದೂ ನ್ಯಾಯಾಲಯದ ದಾಖಲೆಗಳು ಹೇಳಿವೆ. ಆದರೂ, ಪೊಲೀಸರಿಗೆ ದೂರು ನೀಡಲು ಡೇವಿಸ್ ಮೊಂಥನ್ ಏರ್ ಫೋರ್ಸ್ ಬೇಸ್‌ಗೆ ಹಿಂದಿರುಗುವವರೆಗೆ ಕಾಯಲೆಂದು ಕಾಫಿ ಕುಡಿಯುವುದನ್ನು ಮುಂದುವರಿಸುವಂತೆ ನಟಿಸಿದ್ದರು ಎಂದೂ ಮಾಧ್ಯಮ ವರದಿ ಮಾಡಿದೆ. 

ಅಲ್ಲದೆ, ಇದಕ್ಕೆ ಮತ್ತಷ್ಟು ಸಾಕ್ಷ್ಯಗಳನ್ನು ಪತ್ತೆಹಚ್ಚಲು ಮೆಲೊಡಿ ಫೆಲಿಕಾನೊ ಜಾನ್ಸನ್ ಅನೇಕ ಹಿಡನ್‌ ಕ್ಯಾಮೆರಾಗಳನ್ನು ಫಿಕ್ಸ್‌ ಮಾಡಿದ್ದರು. ಈ ವೇಳೆ, ಬ್ಲೀಚ್ ತೆಗೆದುಕೊಂಡು ಅದನ್ನು ಕಂಟೇನರ್‌ಗೆ ಸುರಿಯುವುದನ್ನು ಮತ್ತು ನಂತರ ಕಾಫಿ ಮೇಕರ್‌ಗೆ ಸುರಿಯೋದು ಕ್ಯಾಮೆರಾದಲ್ಲಿ ಬಯಲಾಗಿದೆ ಎಂದು ತನಿಖಾಧಿಕಾರಿಗಳಿಗೆ ತಿಳಿಸಿದ್ದಾರೆ ಎಂದು ದೋಷಾರೋಪಣೆ ಹೇಳುತ್ತದೆ.

ಇದನ್ನೂ ಓದಿ: ಅಮೆರಿಕದಲ್ಲಿ ಅಂಗಡಿ ಲೂಟಿ ಮಾಡಲು ಯತ್ನಿಸಿದ ಕಳ್ಳನಿಗೆ ಥಳಿಸಿದ ಭಾರತೀಯ: ವಿಡಿಯೋ ವೈರಲ್

ವಿಡಿಯೋ ಫೂಟೇಜ್‌ ಅನ್ನು ಪೊಲೀಸರಿಗೆ ನೀಡಿದ ನಂತರ ಅವರು ತನಿಖೆ ಪ್ರಾರಂಭಿಸಿದ್ದು, ತನ್ನ ಸಾವಿನ ಬಳಿಕ ಸಿಗೋ ಬೆನಿಫಿಟ್ಸ್‌ ಪಡೆಯಲು ಪತ್ನಿ ತನ್ನನ್ನು ಕೊಲ್ಲಲು ಬಯಸಿದ್ದರು ಎಂದೂ ಪತಿ ಪೊಲೀಸರಿಗೆ ತಿಳಿಸಿದ್ದಾರೆ. ಪಿಮಾ ಕೌಂಟಿ ಜೈಲಿನಲ್ಲಿ ಇರಿಸಲಾಗಿದೆ. ಇತ್ತೀಚೆಗೆ ಆಕೆ ಫೀಲಿಫೈನ್ಸ್‌ನಲ್ಲಿ ಮನೆ ಖರೀದಿಸಿದ್ದು, ಈ ಹಿನ್ನೆಲೆ ಆಕೆ ದೇಶ ಬಿಟ್ಟು ಪಲಾಯನವಾಗ್ಬೋದು ಅಂತ ಪ್ರಾಸಿಕ್ಯೂಟರ್‌ಗಳು ನ್ಯಾಯಾಧೀಶರಿಗೆ ಮನವರಿಕೆ ಮಾಡಿಕೊಟ್ಟ ನಂತರ ಅಕೆಯನ್ನು ಬಂಧಿಸಲಾಗಿದೆ. ಇತ್ತೀಚೆಗೆ ಫಿಲಿಪೈನ್ಸ್‌ನಲ್ಲಿ ಕುಟುಂಬಕ್ಕೆ ಸಮೀಪವಿರುವ ಮನೆಯನ್ನು ಖರೀದಿಸಿದ್ದಾಳೆ ಎಂದು ದಿ ಇಂಡಿಪೆಂಡೆಂಟ್ ವರದಿ ಮಾಡಿದೆ.

ಇನ್ನು, ಶುಕ್ರವಾರ ಈ ಸಂಬಂಧ ವಿಚಾರಣೆ ನಡೆದಿದ್ದು, ಸೆಪ್ಟೆಂಬರ್‌ 6 ರಂದು ಆಕೆಯ ನ್ಯಾಯಾಲಯದಲ್ಲಿ ಹಾಜರಾಗಬೇಕಿದೆ ಎಂದೂ ತಿಳಿದುಬಂದಿದೆ. 

ಇದನ್ನೂ ಓದಿ: ಈ ಡಯಾಬಿಟೀಸ್‌ ಔಷಧಿ ತಗೊಂಡ್ರೆ ಶುಗರ್‌ ಲೆವೆಲ್‌ ಜತೆಗೆ ತೂಕನೂ ಇಳಿಸ್ಬೋದು!

ಪತಿಯನ್ನ ಪರದೈವ ಅನ್ನೋ ಹೆಂಡ್ತಿಯರಿದ್ದಾರೆ. ಆದರಿಲ್ಲಿ, ಗಂಡನ ಸಾವಿನ ನಂತರ ಸಿಗೋ ಪ್ರಯೋಜನಗಳನ್ನು ಪಡಯಲು ಅಮೆರಿಕ ಏರ್‌ಫೋರ್ಸ್‌ನಲ್ಲಿ ಕೆಲಸ ಮಾಡ್ತಿರೋ ಪತಿಯನ್ನು ಕೊಲ್ಲಲು ಕಾಫಿಗೆ ಪದೇ ಪದೇ ವಿಷ ಹಾಕಿರೋದು ನಿಜಕ್ಕೂ ಆಘಾತಕಾರಿಯಾಗಿದೆ. 

ಇದನ್ನೂ ಓದಿ: ಇಷ್ಟೇ ಸಿಖ್ಖರು ಸತ್ತಿದ್ದಾ ಎಂದಿದ್ರಂತೆ ಕಾಂಗ್ರೆಸ್‌ನ ಜಗದೀಶ್ ಟೈಟ್ಲರ್: ಸಿಬಿಐ ಸ್ಪೋಟಕ ಚಾರ್ಜ್‌ಶೀಟ್‌

click me!