
ಗುಂಟೂರು(ಆ.06) ಲೀವ್ ಇನ್ ಪಾರ್ಟ್ನರ್‌ನಿಂದ ನಡೆಯುತ್ತಿರುವ ಹಿಂಸಾ ಪ್ರವೃತ್ತಿಗಳು ಇತ್ತೀಚೆಗೆ ಹೆಚ್ಚಾಗುತ್ತಿದೆ. ಇದೀಗ ತಾಯಿ, 1 ವರ್ಷದ ಮಗು ಹಾಗೂ 13 ವರ್ಷದ ಬಾಲಕಿಯನ್ನು ತಾಯಿಯ ಲೀವ್ ಇನ್ ಪಾರ್ಟ್ನರ್ ಸೇತುವೆಯಿಂದ ಕೆಳಕ್ಕೆ ತಳ್ಳಿದ ಘಟನೆ ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ನಡೆದಿದೆ. ತಾಯಿ ಹಾಗೂ 1 ವರ್ಷದ ಮಗು ನಾಪತ್ತೆಯಾಗಿದ್ದರೆ, 13 ವರ್ಷದ ಬಾಲಕಿ ಸೇತುವೆ ಪೈಪ್‌ನಲ್ಲೇ ನೇತಾಡಿ ಬದುಕುಳಿದಿದ್ದಾಳೆ. ಒಂದು ಕೈನಲ್ಲಿ ಪೈಪ್ ಹಿಡಿದು ನೇತಾಡಿದ ಬಾಲಕಿ ಮತ್ತೊಂದು ಕೈಯಿಂದ ಜೇಬಿನಿಂದ ಫೋನ್ ತೆಗೆದು ಪೊಲೀಸರಿಗೆ ಕರೆ ಮಾಡಿದ್ದಾಳೆ. ಇದರ ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಬಾಲಕಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಷ್ಟೇ ಅಲ್ಲ ಭೀಕರ ಘಟನೆ ಬೆಳಕಿಗೆ ಬಂದಿದೆ.
ಗುಂಟೂರು ಜಿಲ್ಲೆಯ 36 ವರ್ಷದ ಪುಪ್ಪಾಲ ಸುಹಾಸಿನಿಗೆ ಇಬ್ಬರು ಮಕ್ಕಳು. 13 ವರ್ಷದ ಕೀರ್ತನಾ ಹಾಗೂ 1 ವರ್ಷದ ಹೆಣ್ಣು ಮಗು ಜೆರ್ಸಿ . ಗಂಡನಿಂದ ದೂರವಾಗಿದ್ದ ಪುಪ್ಪಾಲ ಸುಹಾಸಿನಿಗೆ ಉಲವಾ ಸುರೇಶ್ ಅನ್ನೋ ವ್ಯಕ್ತಿಯ ಪರಿಚಯವಾಗಿತ್ತು. ಸುರೇಶ್ ಪ್ರೀತಿಯ ನಾಟಕಕ್ಕೆ ಸುಹಾಸಿನಿ ಮನಸ್ಸು ಬದಲಾಯಿಸಿದಳು. ಪ್ರೀತಿ ಆಳವಾಯಿತು. ಬಳಿಕ ಲೀವ್ ಇನ್ ರಿಲೇಶನ್‌ಶಿಪ್ ಸಂಬಂಧ ಮುಂದುವರಿಯಿತು.
ಪ್ರೀತಿಯ ನಾಟಕವಾಡಿ ತನ್ನ ಆಸೆಗಳನ್ನು ತೀರಿಸಿಕೊಂಡ ಉಲವಾ ಸುರೇಶ್ ಬಳಿಕ ಕಿರಿಕ್ ಆರಂಭಿಸಿದ್ದ. ಹೀಗಾಗಿ ಪದೇ ಪದೇ ಸಣ್ಣ ಸಣ್ಣ ವಿಚಾರಕ್ಕೆ ಜಗಳವಾಗುತ್ತಿತ್ತು. ಭಾನುವಾರ ಇಬ್ಬರು ಮಕ್ಕಳು ಹಾಗೂ ಸುಹಾಸಿನಿಯನ್ನು ಕರೆದುಕೊಂಡು ಪಿಕ್‌ನಿಕ್ ತೆರಳಿ ಸುರೇಶ್, ಹತ್ಯೆಗೆ ಸ್ಕೆಚ್ ಹಾಕಿದ್ದ. ಭಾನುವಾರ ಬೆಳಗಿನ ಜಾವ ಪಿಕ್‌ನಿಕ್ ಹೋಗುವ ಸಂದರ್ಭದಲ್ಲಿ ಗೋದಾವರಿ ನದಿ ಸೇತುವೆ ಮೇಲೆ ಕಾರು ನಿಲ್ಲಿಸಿದ ಸುರೇಶ್, ಸೆಲ್ಫಿ ತೆಗೆದುಕೊಳ್ಳೋಣ ಎಂದಿದ್ದಾನೆ.
ಕಾರಿನಿಂದ ಇಳಿದ ಸುಹಾನಿಸಿ ಹಾಗೂ ಇಬ್ಬರು ಮಕ್ಕಳನ್ನು ನಿಲ್ಲಿಸಿ ತಾನು ಫೋಟೋ ತೆಗೆಯುವುದಾಗಿ ಹೇಳಿದ್ದಾರೆ. ಸೇತುವೆಯ ಅಂಚಿನಲ್ಲಿ ಮೂವರನ್ನು ನಿಲ್ಲಿಸಿದ್ದಾನೆ. 1 ವರ್ಷದ ಪುತ್ರಿಯನ್ನು ಹಿಡಿದುಕೊಂಡು ಸುಹಾನಿಸಿ ನಿಂತಿದ್ದರೆ, 13 ವರ್ಷದ ಕೀರ್ತನಾ ತಾಯಿ ಜೊತೆ ನಿಂತಿದ್ದಾಳೆ. ಫೋಟೋ ತೆಗೆದ ರೀತಿ ನಾಟಕವಾಡಿ ಹತ್ತಿರ ಬಂದ ಸುರೇಶ್, ಮೂವರು ಸೇತುವೆಯಿಂದ ಕೆಳಕ್ಕೆ ತಳ್ಳಿದ್ದಾನೆ.
ತುಂಬಿ ಹರಿಯುತ್ತಿರುವ ಗೋದಾವರಿ ನದಿಗೆ ತಳ್ಳಿದ ಬೆನ್ನಲ್ಲೇ ಸುರೇಶ್ ಕಾರು ಚಲಾಯಿಸಿಕೊಂಡು ಪರಾರಿಯಾಗಿದ್ದಾನೆ. ಇತ್ತ ಸುಹಾನಿಸಿ ಹಾಗೂ ಕೈಯಲ್ಲಿದ್ದ 1 ವರ್ಷದ ಮಗುವ ತಳ್ಳಿದ ರಭಸಕ್ಕೆ ನದಿಗೆ ಬಿದ್ದಿದ್ದಾರೆ. ಆದರೆ 13 ವರ್ಷದ ಕೀರ್ತನಾ ಕೆಳಕ್ಕೆ ಬೀಳುವ ಸಂದರ್ಭದಲ್ಲಿ ಸೇತುವೆ ಪ್ಲಾಸ್ಟಿಕ್ ಪೈಪ್ ಹಿಡಿದ್ದಾರೆ. ಈ ಪೈಪ್ ಹಿಡಿದು ನೇತಾಡಿದ ಕೀರ್ತನಾ ತನ್ನ ಜೇಬಿನಿಂದ ಫೋನ ತೆಗೆದು 100 ನಂಬರ್‌ಗೆ ಕರೆ ಮಾಡಿದ್ದಾಳೆ. ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ಬೆಳಗಿನ ಜಾವ 3.50ಕ್ಕೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ.
ತಕ್ಷಣವೇ ಸ್ಥಳ್ಕಕೆ ಆಗಮಿಸಿದ ಪೊಲೀಸರು 13 ವರ್ಷದ ಬಾಲಕಿಯನ್ನು ರಕ್ಷಿಸಿದ್ದಾರೆ. ಸಣ್ಣಪುಟ್ಟ ಗಾಯಗೊಂಡಿರುವ ಕೀರ್ತನಾ ನಡೆದ ಘಟನೆ ವಿವರಿಸಿದ್ದಾರೆ. ಇತ್ತ ಸುಹಾಸಿನಿ ಹಾಗೂ 1 ವರ್ಷದ ಮಗು ನಾಪತ್ತೆಯಾಗಿದ್ದಾರೆ. ನದಿ ಪಾತ್ರದಲ್ಲಿ ಹುಡುಕಾಟ ನಡೆಸಲಾಗುತ್ತಿದೆ. ಇತ್ತ ಆರೋಪಿ ಸುರೇಶ್ ಪರಾರಿಯಾಗಿದ್ದಾನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ