ಈ ಸಹೋದರಿಯರು ತಿರುಪ್ಪೂರು ಜಿಲ್ಲೆಯ ಕಾಂಗೆಯಂನ ಜವಳಿ ಗಿರಣಿಯಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿ ಅವರು ತಮ್ಮ ಸಹ ಉದ್ಯೋಗಿಗಳಾದ ಇಬ್ಬರು ಸಹೋದರರನ್ನು ಭೇಟಿಯಾದರು ಮತ್ತು ಅವರನ್ನು ಪ್ರೀತಿಸುತ್ತಿದ್ದರು ಎಂದು ತಿಳಿದುಬಂದಿದೆ.
ಚೆನ್ನೈ (ಜೂನ್ 8, 2023): ತಮಿಳುನಾಡಿನ ತಿರುಚಿರಾಪಳ್ಳಿ ಜಿಲ್ಲೆಯ ಇಬ್ಬರು ಸಹೋದರಿಯರು ತಾವು ಪ್ರೀತಿಸುತ್ತಿದ್ದ ಹುಡುಗರನ್ನು ಪೋಷಕರು ವಿರೋಧಿಸಿದ್ದಕ್ಕೆ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಈ ಇಬ್ಬರೂ ಹಿಂದೂ ಧರ್ಮದ ಸಹೋದರಿಯರು ಇಬ್ಬರು ಮುಸ್ಲಿಂ ಸಹೋದರರನ್ನು ಪ್ರೀತಿಸುತ್ತಿದ್ದರು ಎಂದು ತಿಳಿದುಬಂದಿದ್ದು, ಈ ಅನ್ಯಧರ್ಮೀಯ ಪ್ರೀತಿಗೆ ಪೋಷಕರು ವಿರೋಧಿಸಿದ್ದರು. ಈ ಹಿನ್ನೆಲೆ ಇಬ್ಬರು ಯುವತಿಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ತಮಿಳುನಾಡಿನ ತಿರುಚಿರಾಪಳ್ಳಿ ಜಿಲ್ಲೆಯ ವಳನಾಡು ಗ್ರಾಮದ ಬಾವಿಯೊಂದರಲ್ಲಿ ವಿದ್ಯಾ (21) ಮತ್ತು ಗಾಯತ್ರಿ (23) ಮೃತದೇಹಗಳು ತೇಲುತ್ತಿದ್ದವು, ಇವರಿಬ್ಬರೂ ಮರುಂಗಾಪುರಿ ತಾಲೂಕಿನ ಅಯನಪುದುಪಟ್ಟಿ ಗ್ರಾಮದವರು ಎಂದು ವರದಿಯಾಗಿದೆ. ಈ ಸಹೋದರಿಯರು ತಿರುಪ್ಪೂರು ಜಿಲ್ಲೆಯ ಕಾಂಗೆಯಂನ ಜವಳಿ ಗಿರಣಿಯಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿ ಅವರು ತಮ್ಮ ಸಹೋದ್ಯೋಗಿಗಳಾದ ಇಬ್ಬರು ಸಹೋದರರನ್ನು ಭೇಟಿಯಾದರು ಮತ್ತು ಅವರನ್ನು ಪ್ರೀತಿಸುತ್ತಿದ್ದರು ಎಂದು ತಿಳಿದುಬಂದಿದೆ. ಇದಕ್ಕೆ ಸೋದರಿಯ ಪೋಷಕರಾದ ದಿನಗೂಲಿ ಕಾರ್ಮಿಕ ಪಿಚೈ ಮತ್ತು ತಾಯಿ ಅಖಿಲಾಂಡೇಶ್ವರಿ ವಿರೋಧಿಸುತ್ತಿದ್ದರು.
undefined
ಇದನ್ನು ಓದಿ: ಸಂಗಾತಿ ಮೃತದೇಹ ತುಂಡು ತುಂಡು ಮಾಡಿ ಬೀದಿ ನಾಯಿಗೆ ಹಾಕ್ದ: ಶ್ರದ್ಧಾ ವಾಕರ್ ಹಂತಕನೇ ಇವನಿಗೆ ಸ್ಪೂರ್ತಿ!
ನಂತರ, ಇಬ್ಬರೂ ಸಹೋದರಿಯರು ತಮ್ಮ ಗ್ರಾಮದಲ್ಲಿ ದೇವಸ್ಥಾನದ ಉತ್ಸವದಲ್ಲಿ ಪಾಲ್ಗೊಳ್ಳಲು ಭಾನುವಾರ ಮನೆಗೆ ಬಂದಿದ್ದರು. ತಮ್ಮ ಹೆಣ್ಣುಮಕ್ಕಳು ದೀರ್ಘ ಕಾಲದಿಂದ ಫೋನ್ ಕರೆಗಳಲ್ಲಿ ತೊಡಗಿರುವುದನ್ನು ಅವರ ಪೋಷಕರು ಗಮನಿಸಿದರು. ಬಳಿಕ, ಇನ್ನೂ ಪ್ರೀತಿಸುತ್ತಿರುವ ಬಗ್ಗೆ ಅನುಮಾನ ಬಂದು ಪ್ರಶ್ನಿಸಿದಾಗ ಸಹೋದರಿಯರು ಅದನ್ನು ಒಪ್ಪಿಕೊಂಡರು. ಆದರೆ, ಅವರು ಪ್ರೀತಿಸುತ್ತಿದ್ದ ಪುರುಷರು ಮುಸ್ಲಿಮರಾಗಿದ್ದ ಕಾರಣ ಹುಡುಗಿಯರ ಪೋಷಕರು ಇದನ್ನು ಬಲವಾಗಿ ವಿರೋಧಿಸಿದರು’’ ಎಂದು ತುವರಂಕುರಿಚಿ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಲ್ಲದೆ, ಅವರನ್ನು ಮಾತನಾಡಿಸುವುದನ್ನು ನಿಲ್ಲಿಸಿ ಎಂದೂ ಒತ್ತಡ ಹಾಕಿದ್ದಾರೆ.
ಸೋಮವಾರದ ಈ ಘರ್ಷಣೆಯ ಬಳಿಕ ಮಂಗಳವಾರ ಬೆಳಗ್ಗೆ 7:30ಕ್ಕೆ ಇಬ್ಬರೂ ಸಹೋದರಿಯರು ಮನೆಯಿಂದ ಹೋದವರು ಹಲವು ಗಂಟೆಗಳಾದರೂ ವಾಪಸ್ ಹಿಂತಿರುಗಲಿಲ್ಲ ಎಂದು ತಿಳಿದುಬಂದಿದೆ. ಬಳಿಕ, ಸ್ಥಳೀಯ ದನಗಾಹಿಗಳು ಮನೆಯ ಸಮೀಪವಿರುವ ಬಾವಿಯೊಂದರಲ್ಲಿ ಎರಡು ಮೊಬೈಲ್ ಫೋನ್‌ಗಳನ್ನು ಪತ್ತೆಹಚ್ಚಿದ್ದಾರೆ ಮತ್ತು ಒಂದು ಮೃತದೇಹ ನೀರಿನಲ್ಲಿ ತೇಲುತ್ತಿರುವುದನ್ನು ನೋಡಿದ್ದಾರೆ ಎಂದೂ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಸಂಗಾತಿಯನ್ನು ಬರ್ಬರ ಹತ್ಯೆ ಮಾಡಿ 20ಕ್ಕೂ ಹೆಚ್ಚು ತುಂಡು ತುಂಡಾಗಿ ಕತ್ತರಿಸಿದ ಪಾಪಿ: ಬೆಚ್ಚಿಬಿದ್ದ ಮುಂಬೈ
ನಂತರ, "ಸ್ಥಳೀಯ ಪೊಲೀಸರು ಮತ್ತು ಅಗ್ನಿಶಾಮಕ ರಕ್ಷಣಾ ಸೇವೆಗಳಿಗೆ ತಕ್ಷಣ ಮಾಹಿತಿ ನೀಡಲಾಯಿತು ಮತ್ತು ನಾವು ಸಹೋದರಿಯರ ದೇಹಗಳನ್ನು ಬಾವಿಯಿಂದ ಹೊರತೆಗೆದಿದ್ದೇವೆ" ಎಂದೂ ಅಧಿಕಾರಿ ಹೇಳಿದರು. ಅಲ್ಲದೆ, ತಾವು ಸಂಬಂಧ ಹೊಂದಿರುವ ಪುರುಷರ ತಾಯಿಗೆ ವಾಯ್ಸ್ ಮೆಸೇಜ್ ಕಳಿಸಿದ್ದ ಸಹೋದರಿಯರು, ತಮ್ಮ ಜೀವನವನ್ನು ಅಂತ್ಯಗೊಳಿಸಲು ಬಯಸುವುದಾಗಿ ಹೇಳಿದ್ದರು. ಅಲ್ಲದೆ, ಒಬ್ಬ ಸಹೋದರಿ ತನ್ನ ಕೈಯ ಮೇಲೆ ತನ್ನ ಹೆಸರನ್ನು ಬರೆದಿದ್ದರೆ, ಇನ್ನೊಬ್ಬಳು ತಮ್ಮ ಕಿರಿಯ ಸಹೋದರನ ಫೋನ್ ನಂಬರ್ ಬರೆದಿದ್ದರು ಎಂದೂ ತಿಳಿದುಬಂದಿದೆ.
ತಮ್ಮ ಸಂಬಂಧಗಳಿಗೆ ಪೋಷಕರ ವಿರೋಧದಿಂದ ಉಂಟಾದ ದುಃಖದಿಂದ ಸಹೋದರಿಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಪ್ರಾಥಮಿಕ ತನಿಖೆಯಿಂದ ತಿಳಿಸಿದ್ದಾರೆ. ಅಲ್ಲದೆ, ಮೊಬೈಲ್ ಫೋನ್‌ಗಳನ್ನು ಪರಿಶೀಲಿಸಲಾಗುತ್ತಿದೆ ಎಂದೂ ಅವರು ಹೇಳಿದರು. ಹಾಗೂ, ಮೃತ ಯುವತಿಯರಿಬ್ಬರ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಿದ್ದಾರೆ ಮತ್ತು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 174 (ಆತ್ಮಹತ್ಯೆ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ: ದೆಹಲಿ ಬಾಲಕಿ ಬರ್ಬರ ಹತ್ಯೆ ಕೇಸ್: 15 ದಿನದ ಹಿಂದೆಯೇ ಸ್ಕೆಚ್; ಕೊಲೆಗೆ ಕಾರಣ ಹೀಗಿದೆ..
ಇದನ್ನೂ ಓದಿ: ಮತ್ತೊಂದು ಲವ್ ಜಿಹಾದ್ ಕೇಸ್: ಗರ್ಭಿಣಿಗೆ ಮತಾಂತರಕ್ಕೆ ಒತ್ತಾಯಿಸಿ ವಿಷ ಹಾಕಿ ಕೊಂದ ಪಾಪಿಗಳು!