Delhi University ನಿವೃತ್ತ ಪ್ರಾಧ್ಯಾಪಕ ದಂಪತಿ ನೇಣಿಗೆ ಶರಣು!

By Suvarna News  |  First Published Oct 28, 2021, 1:18 PM IST

*ಕಳೆದ ವರ್ಷ ನಡೆದ ಅಪಘಾತದ ನಂತರ ಹಾಸಿಗೆ ಹಿಡಿದಿದ್ದ ಪ್ರಾಧ್ಯಾಪಕ ದಂಪತಿ
*ಪ್ರತ್ಯೇಕ  ಪತ್ರ ಬರೆದು ಆತ್ಮಹತ್ಯೆಗೆ ಶರಣಾದ ರಾಕೇಶ್-ಉಷಾ
*ದೆಹಲಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಪಕರಾಗಿದ್ದ ಗಂಡ-ಹೆಂಡತಿ


ನವದೆಹಲಿ (ಅ. 28 ) : ದೆಹಲಿ ವಿಶ್ವವಿದ್ಯಾನಿಲಯದ (Delhi University) ನಿವೃತ್ತ ಪ್ರಾಧ್ಯಾಪಕ ದಂಪತಿಗಳು ತಮ್ಮ ಜೀವನವನ್ನು ನಿಭಾಯಿಸಲು ಸಾಧ್ಯವಾಗದ ಹಿನ್ನೆಲೆ ಆಗ್ನೇಯ ದೆಹಲಿಯ ಗೋವಿಂದಪುರಿ (Govindapuri) ಪ್ರದೇಶದ ತಮ್ಮ ಮನೆಯಲ್ಲಿ ಬುಧವಾರ, ಅಕ್ಟೋಬರ್ 27 ರಂದು ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಮೃತರು ರಸ್ತೆ ಅಪಘಾತದಲ್ಲಿ ಗಾಯಗೊಂಡು ಬಹು ಸಮಯದಿಂದ ಹಾಸಿಗೆ ಹಿಡಿದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಪತಿ ದೆಹಲಿಯ ಶಹೀದ್ ಭಗತ್ ಸಿಂಗ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದರು ಹಾಗೂ ಪತ್ನಿ ಮೈತ್ರೇಯಿ ಕಾಲೇಜಿನಲ್ಲಿ ಶಿಕ್ಷಕಿಯಾಗಿದ್ದರು.

ಕಲಬುರಗಿ: ಇಬ್ಬರು ಮಕ್ಕಳಿಗೆ ಬೆಂಕಿಹಚ್ಚಿ ತಾಯಿ ಆತ್ಮಹತ್ಯೆ

Tap to resize

Latest Videos

undefined

74 ವರ್ಷದ ರಾಕೇಶ್ ಕುಮಾರ್ ಜೈನ್ (Rakesh Kumar Jain) ಮತ್ತು ಅವರ 69 ವರ್ಷದ ಪತ್ನಿ ಉಷಾ ರಾಕೇಶ್ ಕುಮಾರ್ ಜೈನ್ (Usha Rakesh Kumar Jain) ಗೋವಿಂದಪುರಿಯಲ್ಲಿರುವ ಕಲ್ಕಾಜಿ ಎಕ್ಸ್‌ಟೆನ್ಶನ್‌ನಲ್ಲಿರುವ ತಮ್ಮ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರು;  ದೂರವಾದ ಪ್ರಿಯತಮೆ, ಮನನೊಂದ ಜಿಮ್ ಟ್ರೇನರ್ ಸುಸೈಡ್

ಪ್ರತಿದಿನದಂತೆ ಅವರ ಕೇರ್‌ಟೇಕರ್ (caretaker) ಅಜಿತ್ ಮಧ್ಯಾಹ್ನ 2:30 ರ ಸುಮಾರಿಗೆ ಅವರ ಮನೆಗೆ ಬಂದಿದ್ದರು. ಆದರೆ ಹಲವಾರು ಬಾರಿ ಬೆಲ್ ಬಾರಿಸಿದರು ಒಳಗಿನಿಂದ ಯಾರೂ ಪ್ರತಿಕ್ರಿಯಿಸಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಈ ವಿಚಾರವನ್ನು ಫೋನ್‌ ಮೂಲಕ ತಿಳಿಸಿದ ನಂತರ ದಂಪತಿಯ ಪುತ್ರಿ ಅಂಕಿತಾ ಅಲ್ಲಿಗೆ ಬಂದಿದ್ದಾರೆ. ಅಂಕಿತಾ ಮನೆಯ ಬೀಗ ಒಡೆದು ನೋಡಿದಾಗ ತಾಯಿ ಮತ್ತು ತಂದೆಯ ಶವ ಪತ್ತೆಯಾಗಿದೆ. ನಂತರ ಮಧ್ಯಾಹ್ನ 3:45 ಕ್ಕೆ ಗೋವಿಂದಪುರಿ ಪೊಲೀಸ್ ಠಾಣೆಗೆ ಕರೆ ಮಾಡಿದ್ದಾರೆ. ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ ಬಳಿಕ ಟೇಬಲ್ ಮೇಲೆ ಎರಡು ಪ್ರತ್ಯೇಕ ಆತ್ಮಹತ್ಯೆ ಪತ್ರಗಳು ಪತ್ತೆಯಾಗಿವೆ.

ಜೀವನದಿಂದ ಬೇಸತ್ತು ಆತ್ಮಹತ್ಯೆ!

ಪೊಲೀಸರ ಪ್ರಕಾರ, ಕಳೆದ ವರ್ಷ ಉತ್ತರ ಪ್ರದೇಶದ ಗೊಂಡಾಗೆ ಹೋಗುತ್ತಿದ್ದಾಗ ವೃದ್ಧ ದಂಪತಿ ಅಪಘಾತಕ್ಕೀಡಾಗಿದ್ದರು. ಈ ಸಂದರ್ಭದಲ್ಲಿ ರಾಕೇಶ್ ಜೈನ್ ಬೆನ್ನುಹುರಿಯಲ್ಲಿ ಗಾಯವಾಗಿತ್ತು. ಅವರ ಪತ್ನಿಯ ದೇಹದ ಅನೇಕ ಭಾಗಗಲ್ಲಿ ಫ್ರ್ಯಾಕ್ಚರ್‌ (Fractures)  ಆಗಿದ್ದವು ಎಂದು ತಿಳಿದು ಬಂದಿದೆ. ಅಪಘಾತದ ನಂತರ ದಂಪತಿಗಳಿಬ್ಬರು ಹಾಸಿಗೆ ಹಿಡಿದಿದ್ದರು. ಆದರೆ ಈಗ ತಮ್ಮ ಹಾಸಿಗೆಯ ಜೀವನದಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗುತ್ತಿದ್ದೇವೆ ಎಂದು ಆತ್ಮಹತ್ರೆ  ಪತ್ರಗಳಗಳಲ್ಲಿ ಉಲ್ಲೇಖಿಸಲಾಗಿದೆ ಎಂದು ಪೋಲಿಸರು ತಿಳಿಸಿದ್ದಾರೆ.

"ನಮ್ಮ ತಂಡವು ಘಟನಾ ಸ್ಥಳವನ್ನು ಪರಿಶೀಲಿಸಿದೆ. ಮೇಜಿನ ಮೇಲೆ ಎರಡು ಆತ್ಮಹತ್ಯಾ  ಪತ್ರಗಗಳು ಪತ್ತೆಯಾಗಿವೆ. ಅಪಘಾತದ ನಂತರ ಅನೇಕ ತೊಂದರೆಗಳಿಂದಾಗಿ ತಮ್ಮ ಹಾಸಿಗೆಯ ಜೀವನದಿಂದ ಬೇಸತ್ತಿದ್ದೇವೆ ಎಂದು ದಂಪತಿಗಳು ಬರೆದಿದ್ದಾರೆ. ಅನುಮಾನಾಸ್ಪದವಾಗಿ ಏನೂ ಪತ್ತೆಯಾಗಿಲ್ಲ" ಎಂದು ಡಿಸಿಪಿ  (ಆಗ್ನೇಯ) ಈಶಾ ಪಾಂಡೆ (Esha Pandey) ತಿಳಿಸಿದ್ದಾರೆ.

ಪ್ರೇಯಸಿ ಹತ್ಯೆಗೈದು ಆತ್ಮಹತ್ಯೆಗೆ ಶರಣಾದ ಪ್ರಿಯಕರ!

ಪ್ರೇಯಸಿಯನ್ನ ಹತ್ಯೆಗೈದು ಪ್ರಿಯಕರನೂ ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರು(Bengaluru) ಗ್ರಾಮಾಂತರ ಜಿಲ್ಲೆಯ ಹೊಸಕೋಟೆ(Hoskote) ತಾಲೂಕಿನ ಲಿಂಗಧೀರಮಲ್ಲಸಂದ್ರ ಗ್ರಾಮದಲ್ಲ  ಬುಧವಾರ, ಅಕ್ಟೋಬರ್‌ 27 ರಂದು ನಡೆದಿದೆ.  ಉಷಾಗೌಡ(24) ಎಂಬಾಕೆಯೇ ಹತ್ಯೆಯಾದ(Murder) ದುರ್ದೈವಿಯಾಗಿದ್ದಾಳೆ. ಪ್ರಿಯತಮೆಯನ್ನು ಕೊಂದ ಬಳಿಕ ಪ್ರಿಯಕರ ಗೋಪಾಲಕೃಷ್ಣ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. 

ಹೊಸಕೋಟೆ: ಪ್ರೇಯಸಿ ಹತ್ಯೆಗೈದು ಆತ್ಮಹತ್ಯೆಗೆ ಶರಣಾದ ಪ್ರಿಯಕರ, ಕಾರಣ?

ಯುವತಿಯ ಮನೆಯಲ್ಲಿ ಯಾರು ಇಲ್ಲದ ವೇಳೆ ಮನೆಗೆ ಬಂದಿದ್ದ ಗೋಪಾಲಕೃಷ್ಣ ತಲೆದಿಂಬಿನಿಂದ ಉಸಿರುಗಟ್ಟಿಸಿ ಉಷಾಳನ್ನ ಹತ್ಯೆ ಮಾಡಿದ್ದಾನೆ. ಬಳಿಕ ಗೋಪಾಲಕೃಷ್ಣ ತರಬಹಳ್ಳಿ ಗ್ರಾಮದ ಬಳಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಸಂಬಂಧ ಅನುಗೊಂಡನಹಳ್ಳಿ ಪೊಲೀಸ್(Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

click me!