* ಶಿವಮೊಗ್ಗದಲ್ಲಿ ಹಿಂದೂ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣದ ತನಿಖೆ ಚುರುಕು
* ಹರ್ಷ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಿಬ್ಬರ ಬಂಧನ
* ಹರ್ಷ ಹತ್ಯೆಗೆ ಬಳಸಿದ್ದ ಮಾರಕಾಸ್ತ್ರಗಳು ಪತ್ತೆ
ಶಿವಮೊಗ್ಗ, (ಫೆ.24): ಶಿವಮೊಗ್ಗದ ಬಜರಂಗದಳದ ಕಾರ್ಯಕರ್ತ ಹರ್ಷ ಕುಟುಂಬಕ್ಕೆ ಧನಸಹಾಯ ಪ್ರಕ್ರಿಯೆ, ಕುಟುಂಬಸ್ಥರ ಭೇಟಿ, ಸಂತಾಪ-ಸಂತ್ವಾನಗಳು ಇನ್ನೂ ಮುಂದುವರಿದಿದ್ದು, ಮನೆಯವರ ದುಃಖವೂ ಉಮ್ಮಳಿಸಿ ಬರುತ್ತಲೇ ಇದೆ.
ಇದರ ಮಧ್ಯೆ ಮತ್ತಿಬ್ಬರ ಬಂಧನವಾಗಿದ್ದು, ಬಂಧಿತರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ಮೊದಲು ಇಬ್ಬರು, ಆಮೇಲೆ ನಾಲ್ವರು, ಮತ್ತೆ ಇಬ್ಬರ ಬಂಧನವಾಗಿದ್ದು, ಈಗ ಮತ್ತಿಬ್ಬರ ಬಂಧನ ಆಗುವ ಮೂಲಕ ಶಿವಮೊಗ್ಗದ ಬಜರಂಗದಳದ ಕಾರ್ಯಕರ್ತ ಹರ್ಷ ಕೊಲೆಗೆ (Harsha Murder Case) ಸಂಬಂಧಿಸಿದಂತೆ ಒಟ್ಟು ಹತ್ತು ಮಂದಿಯ ಬಂಧನವಾದಂತಾಗಿದೆ.
undefined
ಹರ್ಷ ಕೊಲೆ ಪ್ರಕರಣ, ಪೊಲೀಸ್ ವಶಕ್ಕೆ ಪಡೆದ ಆರೋಪಿಗಳು ಯಾರು? ಕೊಲೆ ಉದ್ದೇಶವೇನು?ಸ್ಫೋಟಕ ಮಾಹಿತಿ ಬಹಿರಂಗ!
ಹೌದು...ಬಜರಂಗದಳದ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಹರ್ಷ ಕೊಲೆ ಹಿಂದೆ ಅದೆಷ್ಟು ಜನರಿದ್ದಾರೋ ಎಂಬ ಪ್ರಶ್ನೆ ಮೂಡಿದ್ದು, ಇಂದು(ಗುರುವಾರ) ಮತ್ತಿಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಹರ್ಷ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭದ್ರಾವತಿ ಹೊಸಮನೆಯ ಅಬ್ದುಲ್ ರೋಶನ್, ಶಿವಮೊಗ್ಗ ವಾದಿ ಎ ಹುದಾದ ಜಾಫರ್ ಸಾದಿಕ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನು ಬಂಧಿತರಿಂದ ಎರಡು ಕಾರು ಮತ್ತು ಒಂದು ಬೈಕ್ ಹಾಗೂ ಹರ್ಷನ ಕೊಲೆಗೆ ಬಳಸಿದ್ದ ಮಾರಕಾಸ್ತ್ರಗಳನ್ನು ಭದ್ರಾವತಿ ಬಳಿ ವಶಕ್ಕೆ ಪಡೆದಿದ್ದಾರೆ.
ವಿಚಾರಣೆ ತೀವ್ರಗೊಳಿಸಿರುವ ಪೊಲೀಸರು ಎಲ್ಲಾ ಆರೋಪಿಗಳು ಎ1 ಆರೋಪಿ ಖಾಸೀಫ್ ಜೊತೆ ನಿರಂತರ ಸಂಪರ್ಕದಲ್ಲಿದ್ದರು ಎಂಬ ವಿಚಾರ ಕಾಲ್ ಡಿಟೇಲ್ಸ್‌ನಲ್ಲಿ ಪತ್ತೆ ಹಚ್ಚಿದ್ದಾರೆ. ಆದ್ರೆ ಇದುವರೆಗೂ ಹರ್ಷ ಮೊಬೈಲ್ ಸಿಕ್ಕಿಲ್ಲ. ಮೊಬೈಲ್‍ನ ಟ್ರೇಸ್ ಮಾಡ್ತಿದ್ದೀವಿ ಎಂದು ಎಸ್‍ಪಿ ತಿಳಿಸಿದ್ದಾರೆ.
ಹರ್ಷ ಕೊಲೆ ನಡೆಯುವ ಕೆಲ ಗಂಟೆ ಮೊದಲು ಹತ್ಯೆಗೆ ಸ್ಕೆಚ್
ಹರ್ಷ ಕೊಲೆ (Harsha Death) ನಡೆಯುವ ಕೆಲ ಗಂಟೆ ಮೊದಲು, ಹತ್ಯೆಗೆ ಸ್ಕೆಚ್ ಹಾಕಿದ್ದರು. ಸೆಕೆಂಡ್ ಹ್ಯಾಂಡ್ ಸ್ವಿಫ್ಟ್ ಕಾರ್ನಲ್ಲಿ ಬಂದಿದ್ದ ಹಂತಕರು ಕೊಲೆಗೆ ಸ್ಕೆಚ್ ಹಾಕಿದ್ರು ಎಂದು ಮಾಹಿತಿ ಲಭ್ಯವಾಗಿದೆ. ಕಾರಿನಲ್ಲಿದ್ದ 6 ಜನ ಒಟ್ಟಿಗೆ ಭಾರತಿ ಕಾಲೋನಿಗೆ ಎಂಟ್ರಿ ಕೊಟ್ಟಿದ್ದರು. ಕಾರು ಡೀಲರ್ ಬದ್ರುದ್ದೀನ್ ಮಗ ಜಿಲಾನ್ ಸಹ ಬಂದಿದ್ದ. ಪ್ರಮುಖ ಆರೋಪಿ ರಿಯಾನ್ ಬಾಲ್ಯ ಸ್ನೇಹಿತ ಜಿಲಾನ್ ಬಂದಿದ್ದ. ಹರ್ಷಗೂ ಜಿಲಾನ್ಗೂ ಯಾವುದೇ ರೀತಿ ವೈರತ್ವ ಇರಲಿಲ್ಲ. ಆದರೆ ರಿಯಾನ್ ಸಹಾಯಕ್ಕೆಂದು ಜಿಲಾನ್ ಬಂದಿದ್ದ ಎಂದು ತಿಳಿದುಬಂದಿದೆ.
ಹಿಂದೂ ಕಾರ್ಯಕರ್ತ ಹರ್ಷ ಕೊಲೆ ನಂತರ ಎಲ್ಲರ ಮೊಬೈಲ್ ಆಫ್ ಆಗಿತ್ತು. ಕಮ್ಯೂನಿಕೇಷನ್ಗಾಗಿ ಹಂತಕರ ಒರ್ವನ ಮೊಬೈಲ್ ಮಾತ್ರ ಆನ್ ಇತ್ತು. ಭದ್ರಾವತಿ ಮೂಲಕ ರೈಲಿನ ಮೂಲಕ ಹಂತಕರು ಪರಾರಿಯಾಗಿದ್ದರು. ರಾತ್ರಿ 10.30 ಗಂಟೆಯ ಶಿವಮೊಗ್ಗ ಟು ಬೆಂಗಳೂರು, ಶಿವಮೊಗ್ಗ ಟು ಮೈಸೂರುಗೆ ಹೊರಡುವ ರೈಲಿನ ಮೂಲಕ ಪರಾರಿ ಆಗಿದ್ದರು. ಭದ್ರಾವತಿ ರೈಲ್ವೆ ಸ್ಟೆಷನ್ವರೆಗೂ ಕಾರಿನಲ್ಲಿಯೇ ಬಂದಿದ್ದ ಹಂತಕರು ಬಳಿಕ, ಮೊದಲನೇ ಫ್ಲ್ಯಾನ್ನಂತೆ ಎಲ್ಲರೂ ಒಂದೊಂದು ಕಡೆ ಪಾರಾರಿ ಆಗಿದ್ದರು ಎಂದು ತಿಳಿದುಬಂದಿದೆ.
ಸಂಜೆ 4 ಗಂಟೆಗೆ ಕಾರ್ ಹೊರ ತಂದಿದ್ದ ಜಿಲಾನ್, ರಾತ್ರಿ 8.30 ರ ವರೆಗೂ ಸಿಟಿ ಸುತ್ತಾಡಿರುವ ಹಂತಕರು. ಸಂಜೆ 4 ಗಂಟೆಯಿಂದಲೇ ಹಂತರಕ ಟೀಂ ಶಿವಮೊಗ್ಗ ಸಿಟಿ ರೌಡ್ಸ್ ಹಾಕಿತ್ತು ಎಂದು ತಿಳಿದುಬಂದಿದೆ. ಸಿಗೆಹಟ್ಟಿ, ಭಾರತಿ ನಗರ ಆಸುಪಾಸಿನಲ್ಲಿ ಹಂತರಕ ಟೀಂ ಫುಲ್ರೌಂಡ್ಸ್ ಹಾಕಿತ್ತು. ಕಾರ್ನಲ್ಲಿ ಸುತ್ತಾಡಿಕೊಂಡೇ ಹರ್ಷ ಚಲನವಲನದ ಬಗ್ಗೆ ಗಮನ ಹರಿಸಲಾಗಿತ್ತು ಎಂದು ಮಾಹಿತಿ ಲಭಿಸಿದೆ.
ಪ್ರಕರಣ ಸಂಬಂಧಿಸಿ ಖಾಸಿಫ್ನನ್ನು ಭದ್ರಾವತಿಯಲ್ಲಿಯೇ ಪೊಲೀಸರು ಬಂಧಿಸಿದ್ದಾರೆ. ಹಾಸನದಲ್ಲಿ ಮೂವರು ರಿಹಾನ್, ಆಶೀಪ್, ನೀಹಾಲ್, ಶಿವಮೊಗ್ಗದಲ್ಲಿ ನದೀಮ್, ಬೆಂಗಳೂರು ಜಿಲಾನ್, ಚಿಕ್ಕಮಗಳೂರು ಜಿಲ್ಲೆಯಲ್ಲಿ ಅಫ್ನಾನ್ ಬಂಧಿಸಲಾಗಿತ್ತು.