Bengaluru Crime: ನಟಿಗೆ ಅಶ್ಲೀಲ ಸಂದೇಶ ಕಳುಹಿಸಿದ್ದ ಪ್ರಸಾದ್‌ ಬಿದ್ದಪ್ಪ ಪುತ್ರನ ಬಂಧನ

Kannadaprabha News   | Asianet News
Published : Mar 05, 2022, 04:32 AM IST
Bengaluru Crime: ನಟಿಗೆ ಅಶ್ಲೀಲ ಸಂದೇಶ ಕಳುಹಿಸಿದ್ದ ಪ್ರಸಾದ್‌ ಬಿದ್ದಪ್ಪ ಪುತ್ರನ ಬಂಧನ

ಸಾರಾಂಶ

*  ವಿವಾದತಿತ ನಟಿಗೆ ತಡರಾತ್ರಿ ವಾಟ್ಸ್‌ಆ್ಯಪ್‌ನಲ್ಲಿ ಸಂದೇಶ ಕಳುಹಿಸಿದ್ದ ಆ್ಯಡಂ ಬಿದ್ದಪ್ಪ *  ನಟಿಯಿಂದ ದೂರು *  ನಟಿ ನಂ. ಬ್ಲಾಕ್‌ ಮಾಡಿ, ಮೆಸೇಜ್‌ ಡಿಲೀಟ್‌ ಮಾಡಿದ್ದ ಅ್ಯಡಂ  

ಬೆಂಗಳೂರು(ಮಾ.05):  ಕನ್ನಡ ಚಲನಚಿತ್ರ(Sandalwood) ರಂಗದ ವಿವಾದಾತ್ಮಕ ನಟಿಯೊಬ್ಬಳಿಗೆ ರಾತ್ರಿ ವೇಳೆ ಆಶ್ಲೀಲ ಸಂದೇಶ(Porn Message) ಕಳುಹಿಸಿ ಕಿರುಕುಳ ನೀಡಿದ ಆರೋಪದ ಮೇರೆಗೆ ಖ್ಯಾತ ವಸ್ತ್ರ ವಿನ್ಯಾಸಕ ಪ್ರಸಾದ್‌ ಬಿದ್ದಪ್ಪ(Prasad Biddappa) ಪುತ್ರನನ್ನು ಇಂದಿರಾ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಫ್ಯಾಷನ್‌ ಡಿಸೈನರ್‌(Fashion Designer) ಪ್ರಸಾದ್‌ ಬಿದ್ದಪ್ಪ ಪುತ್ರ ಆ್ಯಡಂ ಬಿದ್ದಪ್ಪ(Adam Biddappa) ಬಂಧಿತನಾಗಿದ್ದು(Arrest), ಇತ್ತೀಚೆಗೆ ಇಂದಿರಾ ನಗರ ಸಮೀಪ ನೆಲೆಸಿರುವ ನಟಿಗೆ ತಡರಾತ್ರಿ ವಾಟ್ಸ್‌ಆ್ಯಪ್‌ನಲ್ಲಿ ಆಶ್ಲೀಲ ಸಂದೇಶ ಕಳುಹಿಸಿದ್ದ. ಈ ಬಗ್ಗೆ ನಟಿ ನೀಡಿದ ದೂರಿನ ಮೇರೆಗೆ ತನಿಖೆ ಕೈಗೆತ್ತಿಕೊಂಡ ಇಂದಿರಾ ನಗರ ಠಾಣೆ ಪೊಲೀಸರು(Police), ಮಡಿಕೇರಿಯ ಹೋಂ ಸ್ಟೇಟ್‌ನಲ್ಲಿ ವಾಸ್ತವ್ಯ ಹೂಡಿದ್ದ ಆ್ಯಡಂನನ್ನು ಬಂಧಿಸಿ ಕರೆ ತಂದಿದ್ದಾರೆ. ಬಳಿಕ ನ್ಯಾಯಾಲಯದ ಮುಂದೆ ಶುಕ್ರವಾರ ಆರೋಪಿಯನ್ನು ಪೊಲೀಸರು ಹಾಜರುಪಡಿಸಿದರು. ನ್ಯಾಯಾಂಗ ಬಂಧನಕ್ಕೊಪ್ಪಿಸಿ ನ್ಯಾಯಾಧೀಶರು ಆದೇಶಿಸಿದ ಹಿನ್ನೆಲೆಯಲ್ಲಿ ಸಂಜೆ ಆತನನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಬಿಡಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Bengaluru Crime: ಸ್ಪಾ ಓನರ್‌ಗೆ ಬೆದರಿಸಿ ಹಣ ಸುಲಿದ ಗೃಹರಕ್ಷಕರು, ಪತ್ರಕರ್ತ ಸೆರೆ

ಹಲವು ವರ್ಷಗಳಿಂದ ನಟಿ ಮತ್ತು ಆ್ಯಡಂ ಬಿದ್ದಪ್ಪ ಸ್ನೇಹಿತರಾಗಿದ್ದರು. ಆದರೆ ಇತ್ತೀಚೆಗೆ ಅಪರಾಧ ಪ್ರಕರಣದಲ್ಲಿ(Criminal Case) ನಟಿ ಸಿಲುಕಿದ ಬಳಿಕ ಆಡಂ ದೂರವಾಗಿದ್ದ. ಜೈಲಿನಿಂದ(Jail) ಹೊರ ಬಂದ ಬಳಿಕ ಆತನಿಂದ ನಟಿ ಸಹ ಪ್ರತ್ಯೇಕವಾಗಿದ್ದಳು. ಹೀಗಿರುವಾಗ ಫೆ.25ರಂದು ರಾತ್ರಿ 10ರಿಂದ 12ರವರೆಗೆ ನಿರಂತರವಾಗಿ ನಟಿಯ ವಾಟ್ಸ್‌ ಆ್ಯಪ್‌ಗೆ ಆರೋಪಿ ಆಶ್ಲೀಲ ಮೆಸೇಜ್‌ ಕಳುಹಿಸಿದ್ದ ಎಂಬ ಆರೋಪ ಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ವಿಚಾರಣೆ ವೇಳೆ ತನ್ನ ಮೇಲಿನ ಆರೋಪವನ್ನು ಆ್ಯಡಂ ನಿರಾಕರಿಸಿದ್ದಾನೆ. ಅಲ್ಲದೆ ನಟಿಗೆ ತಾನು ಕಳುಹಿಸಿದ್ದ ವಾಟ್ಸ್‌ಆ್ಯಪ್‌(WhatsApp) ಸಂದೇಶಗಳನ್ನು ಕೂಡ ಆತ ಡಿಲೀಟ್‌ ಮಾಡಿದ್ದು, ಆಕೆಯ ಮೊಬೈಲ್‌ ನಂಬರನ್ನು ಬ್ಲ್ಯಾಕ್‌ ಮಾಡಿದ್ದ. ಆದರೆ ದೂರಿನ ಜತೆ ಆ್ಯಡಂ ಕಳುಹಿಸಿದ್ದ ಮೆಸೇಜ್‌ಗಳ ಕಾಪಿಯನ್ನು ನಟಿ ಸಲ್ಲಿಸಿದ್ದರು. ಹೀಗಾಗಿ ಮಹಿಳೆ(Women) ಜತೆ ಅನುಚಿತ ವರ್ತನೆ (ಐಪಿಸಿ 354ಎ) ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ ಉಲ್ಲಂಘನೆ ಆರೋಪದಡಿ ಆಡಂನನ್ನು ಬಂಧಿಸಲಾಯಿತು ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಕ್ಯಾಶ್‌ ಬ್ಯಾಕ್‌ ಹೆಸರಲ್ಲಿ ವಂಚಿಸುತ್ತಿದ್ದ Paytm ಮಾಜಿ ನೌಕರನ ಬಂಧನ

ಬೆಂಗಳೂರು: ‘ಪೇಟಿಎಂ ಬ್ಯುಸಿನೆಸ್‌ ಆ್ಯಪ್‌’(Paytm Business App) ಅಳವಡಿಸಿಕೊಂಡರೆ ‘ಕ್ಯಾಶ್‌ ಬ್ಯಾಕ್‌’(Cash Back) ಸಿಗುತ್ತದೆ ಎಂದು ನಂಬಿಸಿ ವ್ಯಾಪಾರಿಗಳಿಂದ ಹಣ ಪಡೆದು ಟೋಪಿ ಹಾಕುತ್ತಿದ್ದ ಪೇಟಿಎಂ ಕಂಪನಿಯ ಮಾಜಿ ನೌಕರನೊಬ್ಬ ಈಶಾನ್ಯ ವಿಭಾಗದ ಸಿಇಎನ್‌ ಠಾಣೆ ಪೊಲೀಸರ ಬಲೆಗೆ ಬಿದ್ದ ಘಟನೆ ಮಾ.02 ರಂದು ನಡೆದಿತ್ತು. 

Dowry Harassment: ಗರ್ಭಿಣಿ ಪತ್ನಿಯನ್ನು ಸಿಗರೇಟ್‌ನಿಂದ ಸುಡ್ತಿದ್ದ ಕುಂದಾಪುರದ ಗಂಡ

ಬೆಟ್ಟಹಲಸೂರು ನಿವಾಸಿ ದೀಪನ್‌ ಚಕ್ರವರ್ತಿ ಬಂಧಿತನಾಗಿದ್ದು(Arrest), ಆರೋಪಿಯಿಂದ(Accused) ಮೊಬೈಲ್‌ ಜಪ್ತಿ ಮಾಡಲಾಗಿದೆ. ಕೆಲ ದಿನಗಳ ಹಿಂದೆ ಔಷಧಿ ವ್ಯಾಪಾರಿಯೊಬ್ಬರಿಗೆ ಪೇಟಿಎಂ ಬ್ಯುಸಿನೆಸ್‌ ಆ್ಯಪ್‌ ನೆಪದಲ್ಲಿ .19 ಸಾವಿರ ವಸೂಲಿ ಮಾಡಿ ವಂಚಿಸಿದ್ದ(Fraud). ಈ ಬಗ್ಗೆ ತನಿಖೆ ನಡೆಸಿ ಇನ್‌ಸ್ಪೆಕ್ಟರ್‌ ಆರ್‌.ಸಂತೋಷರಾಮ್‌ ತಂಡ ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಯನ್ನು ಪತ್ತೆ ಹಚ್ಚಿದೆ ಎಂದು ಅಧಿಕಾರಿಗಳು ಹೇಳಿದ್ದರು. 
ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆ ಹೊಂದಿರುವ ದೀಪನ್‌ ಚಕ್ರವರ್ತಿ ಕುಟುಂಬದ ಜತೆ ಬೆಟ್ಟಹಲಸೂರಿನಲ್ಲಿ ನೆಲೆಸಿದ್ದಾನೆ. ಕೆಲವು ತಿಂಗಳು ಕಾಲ ಪೇಟಿಎಂ ಕಂಪನಿಯಲ್ಲಿ ನೌಕರನಾಗಿದ್ದ. ಅಂಗಡಿಗಳಿಗೆ ತೆರಳಿ ಬ್ಯುಸಿನೆಸ್‌ ಆ್ಯಪ್‌ ಇನ್‌ಸ್ಟಾಲ್‌ ಮಾಡುತ್ತಿದ್ದ. ಬ್ಯುಸಿನೆಸ್‌ ಅಪ್ಲಿಕೇಷನ್‌ನನ್ನು ಇನ್‌ಸ್ಟಾಲ್‌ ಮಾಡಿಕೊಂಡರೆ ಸಿಗುವ ಲಾಭದ ಬಗ್ಗೆ ಸಾರ್ವಜನಿಕರಿಗೆ ತಿಳಿಸಿ ಬಳಿಕ ಮೊಬೈಲ್‌ ನಂಬರ್‌ ಸಂಗ್ರಹಿಸುತ್ತಿದ್ದ ಆರೋಪಿ, ಅಪ್ಲಿಕೇಷನ್‌ ಇನ್‌ಸ್ಟಾಲ್‌ ಮಾಡಿ ಪಾಸ್‌ವರ್ಡ್‌ ನೀಡಿ ಬರುತ್ತಿದ್ದ.

ಆದರೆ ಇತ್ತೀಚೆಗೆ ಕೆಲಸ ತೊರೆದಿದ್ದ ಆತ, ಕಂಪನಿಯ ಹೆಸರು ಬಳಸಿಕೊಂಡು ಜನರಿಗೆ ವಂಚಿಸಲು ಆರಂಭಿಸಿದ್ದ. ತಾನು ಪೇಟಿಎಂ ಇನ್‌ಸ್ಟಾಲ್‌ ಮಾಡಿಕೊಟ್ಟಿದ್ದ ಅಂಗಡಿಗಳ ಮೊಬೈಲ್‌ ನಂಬರ್‌ಗೆ ತನ್ನ ಮೊಬೈಲ್‌ ನಂಬರ್‌ನಿಂದ ಕರೆ ಮಾಡಿ ಅಥವಾ ಅಂಗಡಿಗೆ ಹೋಗಿ ಕ್ಯಾಶ್‌ ಬ್ಯಾಕ್‌ ಬರುತ್ತದೆ. ಇದಕ್ಕಾಗಿ ಪೇಟಿಎಂ ಆ್ಯಪ್‌ನಲ್ಲಿ ಮಿನಿಮಮ್‌ ಡಿಪಾಸಿಟ್‌ ಇಡಬೇಕು ಎಂದು ತಿಳಿಸುತ್ತಿದ್ದ. ಈ ಮಾತು ಕೇಳಿ ವ್ಯಾಪಾರಿಗಳು ಠೇವಣಿ ಇಟ್ಟಾಗ ಆರೋಪಿಗೆ ಪಾಸ್‌ವರ್ಡ್‌ ತಿಳಿದಿದ್ದರಿಂದ ಇದನ್ನು ಬಳಸಿ ಆ ದುಡ್ಡನ್ನು ಕದಿಯುತ್ತಿದ್ದ. ಈ ಬಗ್ಗೆ ವಿಚಾರಣೆ ವೇಳೆ ದೀಪನ್‌ ಬಾಯ್ಬಿಟ್ಟಿದ್ದಾನೆ ಎಂದು ಪೊಲೀಸರು(Police) ತಿಳಿಸಿದ್ದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Bengaluru: ಕ್ಯಾಬ್ ಚಾಲಕನ ಮೇಲೆ ಯುವತಿ ರೇಪ್ ಆರೋಪ, ತನಿಖೆ ವೇಳೆ ಬಿಗ್ ಟ್ವಿಸ್ಟ್!
ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?