* ಎಸ್‌ಜಿಎಸ್‌ಎಸ್ ಕನ್ಸಲ್ಟಂಟ್ ಸಂಸ್ಥೆ ಮುಖ್ಯಸ್ಥ ರಾಘವೇಂದ್ರ ಕಟ್ಟಿ
* ವ್ಯವಸ್ಥಾಪಕಿ ಪೂರ್ಣಿಮಾ ಸೊಪ್ಪಿಮಠ ನ್ಯಾಯಾಂಗ ಬಂಧನಕ್ಕೆ
* ಒಬ್ಬೊಬ್ಬರಿಂದ ಎರಡ್ಮೂರು ಲಕ್ಷ ಹಣ ಪಡೆದುಕೊಂಡಿರುವ ಬಗ್ಗೆ ದೂರುಗಳು ದಾಖಲು
ಧಾರವಾಡ(ಏ.02): ನೌಕರಿ(Job) ಕೊಡಿಸುತ್ತೇವೆ ಎಂದು ನೂರಾರು ಯುವಕರಿಂದ ಹಣ ಪಡೆಯಲಾದ ಪ್ರಕರಣದ ಇಬ್ಬರು ಆರೋಪಿಗಳನ್ನು ಶುಕ್ರವಾರ ಉಪ ನಗರ ಪೊಲೀಸರು(Police) ಬಂಧಿಸಿದ್ದಾರೆ. ಎಸ್‌ಜಿಎಸ್‌ಎಸ್ ಕನ್ಸಲ್ಟಂಟ್ ಸಂಸ್ಥೆಯ ಮುಖ್ಯಸ್ಥ ರಾಘವೇಂದ್ರ ಕಟ್ಟಿ ಹಾಗೂ ವ್ಯವಸ್ಥಾಪಕಿ ಪೂರ್ಣಿಮಾ ಸೊಪ್ಪಿಮಠ ಬಂಧಿತರು(Arrest).
ಕಮಲಾಪುರ ಬಡಾವಣೆಯಲ್ಲಿರುವ ಸಂಸ್ಥೆಯ ರಾಘವೇಂದ್ರ ಕಟ್ಟಿ ನೂರಾರು ಯುವಕರಿಗೆ ಮೋಸ ಮಾಡಿರುವ ಆರೋಪ ಎದುರಿಸುತ್ತಿದ್ದು, ಇವರ ವಿರುದ್ಧ ಉಪ ನಗರ ಪೊಲೀಸ್ ಠಾಣೆಯಲ್ಲಿ ಕಳೆದ ಒಂದು ವಾರದಿಂದ ಮೋಸ ಹೋದ ಯುವಕರು ದೂರು ದಾಖಲಿಸುತ್ತಿದ್ದರು.
Suvarna FIR: ಮಸ್ಕಿ, ಹೆತ್ತವರು ಬೇಡ ಅಂದಿದ್ದಕ್ಕೆ ಜೀವ ಕಳೆದುಕೊಂಡ ಪ್ರೇಮಿಗಳು.. ಲವ್ ಸ್ಟೋರಿ ಅಂತ್ಯ!
ನೂತನ ಶಿಕ್ಷಣ ನೀತಿ ಜಾರಿಗಾಗಿ ಕೇಂದ್ರ, ರಾಜ್ಯ ಸರ್ಕಾರಗಳು ವಿವಿಧ ಹುದ್ದೆಗಳನ್ನು ತುಂಬಿಕೊಳ್ಳಲಿವೆ ಎಂದು ತನ್ನ ಸಂಸ್ಥೆಯ ಮೂಲಕ ಅನೇಕರಿಗೆ ಮಾಹಿತಿ ನೀಡಿದ್ದ ರಾಘವೇಂದ್ರ ಕಟ್ಟಿ ಆ ನೌಕರಿಯನ್ನು ಕೊಡಿಸಲು ಈಗಿನಿಂದಲೇ ತರಬೇತಿ ನೀಡಲಾಗುವುದು ಎಂದು ಹೇಳಿದ್ದನು.
ಒಬ್ಬೊಬ್ಬರಿಂದ ಎರಡ್ಮೂರು ಲಕ್ಷ ಹಣ ಪಡೆದುಕೊಂಡಿರುವ ಬಗ್ಗೆ ದೂರುಗಳು ದಾಖಲಾಗಿವೆ. ಆದರೆ, ಪ್ರಕರಣ ದಾಖಲು ಆಗುತ್ತಿದ್ದಂತೆ ಅನಾರೋಗ್ಯದ ನೆಪ ಹೇಳಿ ಆಸ್ಪತ್ರೆಗೆ ದಾಖಲಾಗಿದ್ದನು. ಈ ಬಗ್ಗೆ ಆತನ ಪತ್ನಿ ಹಾಗೂ ಸಂಸ್ಥೆಯ ಕಾನೂನು ಸಲಹೆಗಾರರಾದ ಸ್ನೇಹಾ ಕಟ್ಟಿ ಇತ್ತೀಚಿಗೆ ಪತ್ರಿಕಾಗೋಷ್ಠಿ ನಡೆಸಿ ಸಂಸ್ಥೆಯ ಯಾವ ಮೋಸ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದರು.
ರಾಜ್ಯದ(Karnataka) ವಿವಿಧ ಜಿಲ್ಲೆಗಳ ಅನೇಕ ಯುವಕರು ಈ ವಂಚನೆಯಿಂದ ಸಾಕಷ್ಟು ದುಡ್ಡು(Money) ಕಳೆದುಕೊಂಡಿದ್ದಾರೆ. ಇದೇ ಕಾರಣಕ್ಕೆ ಕಳೆದ ಎರಡು ವಾರದಿಂದ ನಿರಂತರವಾಗಿ ಹೋರಾಟವೂ ನಡೆದಿತ್ತು. ನಿತ್ಯವೂ ಬೇರೆ ಬೇರೆ ಜಿಲ್ಲೆಗಳಿಂದ ಬಂದು ಪೊಲೀಸರಿಗೆ ದೂರು ನೀಡಿದ ಯುವಕರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಪೊಲೀಸರ ಮೇಲೆಯೂ ಆರೋಪಿಗಳನ್ನು ಬಂಧಿಸುವ ಒತ್ತಡ ಹೆಚ್ಚಾಗಿತ್ತು. ಆದರೆ ರಾಘವೇಂದ್ರ ಕಟ್ಟಿಮಾತ್ರ ಅನಾರೋಗ್ಯದ ನೆಪ ಹೇಳಿ, ಆಸ್ಪತ್ರೆಗೆ ದಾಖಲಾಗಿರುವುದಾಗಿ ಹೇಳಿ ತಲೆ ಮರೆಸಿಕೊಂಡಿದ್ದನು. ಇದೀಗ ಯುಗಾದಿ ಮುನ್ನಾ ದಿನವೇ ಕಟ್ಟಿಜತೆಗೆ ಸಂಸ್ಥೆಯ ವ್ಯವಸ್ಥಾಪಕಿ ಪೂರ್ಣಿಮಾ ಸೊಪ್ಪಿಮಠ ಸಹ ಬಂಧನಕ್ಕೆ ಒಳಗಾಗಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ದರೋಡೆಗೆ ಹೊಂಚು ಹಾಕಿದ್ದ ವರು ಆರೋಪಿಗಳ ಬಂಧನ
ಬೆಂಗಳೂರು(Bengaluru): ಮಾರಕಾಸ್ತ್ರ ಹಿಡಿದು ದರೋಡೆಗೆ(Robbery) ಹೊಂಚು ಹಾಕಿ ಕುಳಿತ್ತಿದ್ದ ಐವರನ್ನು ಡಿ.ಜೆ.ಹಳ್ಳಿ ಠಾಣೆ ಪೊಲೀಸರು ನಗರದ ಎಲ್.ಆರ್.ಬಂಡೆ ಮುಖ್ಯರಸ್ತೆಯ ಮೈದಾನದ ಬಳಿ ಬಂಧಿಸಿದ್ದಾರೆ.
ಬನಶಂಕರಿ ಪ್ರಗತಿಪುರ ನಿವಾಸಿ ಮುಜಾಹಿದ್ ಪಾಷಾ(21), ನೀಲಸಂದ್ರದ ಅಮೀನ್ ಫರೀಷ್(21), ಡಿ.ಜೆ.ಹಳ್ಳಿಯ ವಾಸೀಂ ಪಾಷಾ(21), ಶಾಬಾದ್ ನಗರದ ಮೊಹಮ್ಮದ್ ರಿಜ್ವಾನ್(21) ಹಾಗೂ ಕಾವೇರಿ ನಗರದ ಸೈಯದ್ ಸಲ್ಮಾನ್(20) ಬಂಧಿತರು. ಆರೋಪಿಗಳಿಂದ ಮಾರಕಾಸ್ತ್ರಗಳು, ಕಾರದಪುಡಿ, ಮೂರು ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಓರ್ವನ ಹತ್ಯೆ, 6 ಜನರಿಗೆ ಗಾಯ: ಬೆಳಗಾವಿಯ ಗ್ಯಾಂಗ್‌ವಾರ್ ಭೀಕರತೆ ಬಿಚ್ಚಿಟ್ಟ ಬೊಲೆರೋ ವಾಹನ
ಆರೋಪಿಗಳು(Accused) ಮಾ.30ರಂದು ರಾತ್ರಿ 7.30ರ ಸುಮಾರಿಗೆ ಎನ್.ಆರ್.ಬಂಡೆ ಮುಖ್ಯರಸ್ತೆಯ ಆಟದ ಮೈದಾನದ ಬಳಿ ಮಾರಕಾಸ್ತ್ರ ಹಿಡಿದು ಸಾರ್ವಜನಿರಕ ದೋರೆಡೆಗೆ ಸಜ್ಜಾಗಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಕಾರ್ಯಾಚಣೆ ನಡೆಸಿ ವಶಕ್ಕೆ ಪಡೆಯಲಾಗಿದೆ.
ಆರೋಪಿಗಳು ದರೋಡೆಗೆ ಹೊಂಚು ಹಾಕಿ ಕುಳಿತಿದ್ದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ. ಈ ಹಿಂದೆಯೂ ಆರೋಪಿಗಳು ಹಲವು ಅಪರಾಧ(Crime) ಕೃತ್ಯಗಳಲ್ಲಿ ಭಾಗಿಯಾಗಿರುವ ಸಾಧ್ಯತೆಯಿದ್ದು, ಈ ಸಂಬಂಧ ವಿಚಾರಣೆ ಮುಂದುವರಿದಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಈ ಸಂಬಂಧ ಡಿ.ಜೆ.ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.