* ಹೊರಗೆ ಸ್ಪಾ ಒಳಗೆ ವೇಶ್ಯಾವಾಟಿಕೆ ಜಾಲ
*ಮಾಲ್ ನಲ್ಲಿ ನಡೆಯುತ್ತಿದ್ದ ಸೆಕ್ಸ್ ರಾಕೆಟ್
* ಒಂಭತ್ತು ಜನರ ಬಂಧನ
* ಮಹಾನಗರಗಳಲ್ಲಿ ಹೆಚ್ಚುತ್ತಿರುವ ಪ್ರಕರಣ
ಘಾಜಿಯಾಬಾದ್(ಏ. 01) ಹೊರಗೆ ಸ್ಪಾ..(Spa) ಒಳಗೆ ವೇಶ್ಯಾವಾಟಿಕೆ (Prostitution) ಅಡ್ಡೆ.. ಇದು ಹೊಸದೇನೂ ಅಲ್ಲ. ಬೆಂಗಳೂರು(Bengaluru), ಚೆನ್ನೈ ನಂತರ ಇದೀಗ ಘಾಜಿಯಾಬಾದ್ ನಿಂದ ಪ್ರಕರಣ ವರದಿಯಾಗಿದೆ. ಎಲ್ಲದಕ್ಕಿಂತ ಮುಖ್ಯವಾಗಿ ಇಲ್ಲಿನ ಮಾಲ್ ನಲ್ಲಿಯೇ ವೇಶ್ಯಾವಾಟಿಕೆ ಮುಕ್ತವಾಗಿ ನಡೆಯುತ್ತಿತ್ತು.
ಮಾಲ್‌ನಲ್ಲಿ ಸ್ಪಾ ಸೆಂಟರ್‌ನಲ್ಲಿ ನಡೆಸಲಾಗುತ್ತಿದ್ದ ಸೆಕ್ಸ್ (Sex Rocket) ರಾಕೆಟ್ ನ್ನು ಪೊಲೀಸರು ಪತ್ತೆ ಮಾಡಿ ನಾಲ್ವರು ಮಹಿಳೆಯರು ಸೇರಿದಂತೆ ಒಂಭತ್ತು ಮಂದಿಯನ್ನು ಬಂಧಿಸಿದ್ದಾರೆ. ಕೌಶಂಬಿಯಲ್ಲಿರುವ ಮಹಾಗುನ್ ಮಾಲ್‌ನಲ್ಲಿರುವ ಸ್ಪಾ ಕೇಂದ್ರದ ಮೇಲೆ ಪೊಲೀಸರು ಮತ್ತು ಘಾಜಿಯಾಬಾದ್ ಆಡಳಿತ ಅಧಿಕಾರಿಗಳ ಜಂಟಿ ತಂಡ ದಾಳಿ ನಡೆಸಿತು. ದಾಳಿಯ ನಂತರ ಐವರು ಪುರುಷರು ಮತ್ತು ನಾಲ್ವರು ಮಹಿಳೆಯರನ್ನು ಬಂಧಿಸಲಾಗಿದೆ. ಬಂಧಿತ ಒಂಭತ್ತು ಆರೋಪಿಗಳಲ್ಲಿ ನಾಲ್ವರನ್ನು ರಶೀದ್ ಅಲ್ವಿ (26), ನಿತಿನ್, ಅಜಯ್ ಕುಮಾರ್ (38), ಕುನಾಲ್ ಕುಮಾರ್ (32) ಮತ್ತು ಅಂಕಿತ್ (24) ಎಂದು ಗುರುತಿಸಲಾಗಿದೆ.
ಕೌಶಾಂಬಿ ಪೊಲೀಸ್ ಠಾಣಾ ವ್ಯಾಪ್ತಿಯ ವೈಶಾಲಿಯ ಸೆಕ್ಟರ್ 3 ನಲ್ಲಿರುವ ಮಹಾಗುನ್ ಮಾಲ್‌ನ ರುದ್ರಾ ಸ್ಪಾ ಸೆಂಟರ್‌ನ ಬೇಸ್‌ಮೆಂಟ್ ನಲ್ಲಿ ವೇಶ್ಯಾವಾಟಿಕೆ ನಡೆಸಲಾಗುತ್ತಿದೆ ಎಂಬ ಮಾಹಿತಿ ಸಿಕ್ಕಿತ್ತು.
ಪೊಲೀಸರು ಬಂಧಿಸಿದವರಲ್ಲಿ ಸ್ಪಾ ಸೆಂಟರ್‌ನ ಮ್ಯಾನೇಜರ್ ಸೇರಿದ್ದಾರೆ. ಸ್ಪಾ ಸೆಂಟರ್‌ನ ಲ್ಲಿ ಅಶ್ಲೀಲ ವಿಡಿಯೋದ ದೊಡ್ಡ ಖಜಾನೆಯೇ ಇತ್ತು.
ಇಂದಿರಾಪುರಂ ಸರ್ಕಲ್ ಆಫೀಸ್ ಅಭಯ್ ಕುಮಾರ್ ಮಿಶ್ರಾ ಈ ಬಗ್ಗೆ ತಿಳಿಸಿದ್ದಾರೆ . ಇದಾದ ನಂತರ ಮಹಾಗುನ್ ಮಾಲ್‌ನಲ್ಲಿರುವ ಸ್ಪಾ ಕೇಂದ್ರದ ಮೇಲೆ ದಾಳಿ ನಡೆಸಲಾಗಿದೆ. ಪೊಲೀಸರು ದಾಳಿ ನಡೆಸುತ್ತಿದ್ದಂತೆ ಸ್ಪಾ ಸೆಂಟರ್‌ನಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಅನೈತಿಕ ಸಂಚಾರ (ತಡೆಗಟ್ಟುವಿಕೆ) ಕಾಯ್ದೆಯ ಸೆಕ್ಷನ್ 3 ಮತ್ತು 4 ರ ಅಡಿಯಲ್ಲಿ ಕೌಶಂಬಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಆರೋಪಿಗಳಿಂದ 13,100 ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ.
Cyber Fraud ಒಟಿಪಿ ಶೇರ್ ಮಾಡ್ಲಿಲ್ಲ, ಆದ್ರೂ 3.63 ಲಕ್ಷ ರೂಪಾಯಿ ಕಳೆದುಕೊಂಡ ಮಹಿಳೆ!
ಉದ್ಯಮಿಯದನ್ನು ದೋಚಿದ್ದ ವೇಶ್ಯೆಯರು: ಅಹಮದಾಬಾದ್‌ನ ಮೂಲದ ವ್ಯಕ್ತಿಯೊಬ್ಬನಿಗೆ ಚಾಕು ತೋರಿಸಿ 80,000 ರೂಪಾಯಿ ದರೋಡೆ (Robbery) ಮಾಡಲಾಗಿದೆ. ದರೋಡೆ ಮಾಡಿದ ಆರೋಪದ ಮೇಲೆ ನಾಲ್ವರು ಮಹಿಳೆಯರನ್ನು ಬಂಧಿಸಲಾಗಿದೆ.
ಜುಮಾ ದಾಸ್, ಶ್ರುತಿ ಮುಖರ್ಜಿ, ನಮಿತಾ ದಾಸ್ ಮತ್ತು ರಾಖಿ ದಾಸ್ ಎಂಬುವರನ್ನು ಬಂಧಿಸಲಾಗಿದೆ. ಮಂಗಳವಾರ ಇಮಾಮ್ ಬಾಕ್ಸ್ ಲೇನ್ ನಲ್ಲಿ ದರೋಡೆ ಮಾಡಿದ್ದರು. ದಾರಿ ತಪ್ಪಿಕೊಂಡಿದ್ದ ಅಹಮದಾಬಾದ್ ಮೂಲದ ವ್ಯಕ್ತಿ ಲೈಂಗಿಕ ಕಾರ್ಯಕರ್ತೆಯರ ಕೈಗೆ (Arrest) ಸಿಕ್ಕಿಬಿದ್ದಿದ್ದಾರೆ. ಇದೇ ಸಂದರ್ಭ ಬಳಸಿಕೊಂಡು ಅವರನ್ನು ದೋಚಲಾಗಿದೆ.
ಆತನನ್ನು ಸಂಪೂರ್ಣ ದೋಚಿದ ನಂತರ ಕೋಣೆಯಿಂದ ಹೊರದೂಡಿದ್ದಾರೆ. ದರೋಡೆ ನಂತರ ವ್ಯಕ್ತಿ ಬುರ್ಟೊಲ್ಲಾ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ವ್ಯಕ್ತಿಯ ದೂರು ಆಧರಿಸಿ ಇಂಥ ಕೆಲಸದಲ್ಲಿ ತೊಡಗಿಕೊಂಡವರನ್ನು ಬಂಧಿಸಲಾಗಿದೆ. ಈ ಮಹಿಳೆಯರನ್ನು ವಿಚಾರಣೆ ನಡೆಸಿದಾಗ ಮತ್ತಷ್ಟು ಸಂಗತಿಗಳು ಬಯಲಾಗಿವೆ.
ಹೊರಗೆ ಸ್ಪಾ, ಒಳಗೆ ವೇಶ್ಯಾವಾಟಿಕೆ ಅಡ್ಡೆ: ಹೊರಗೆ ಸ್ಪಾ ಒಳಗೆ ವೇಶ್ಯಾವಾಟಿಕೆ ಅಡ್ಡೆ. ಚೆನ್ನೈ ನಗರದ ವೆಲಾಚೇರಿ ಪ್ರದೇಶದಲ್ಲಿ ಸ್ಪಾ ಸೆಂಟರ್‌ನ ಸೋಗಿನಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ದಂಧೆಯನ್ನು ಪೊಲೀಸರು ಭೇದಿಸಿದ್ದರು. ಅಪರಾಧದ ಬಗ್ಗೆ ಮಾಹಿತಿ ಪಡೆದ ನಂತರ, ಪೊಲೀಸರು ಕೇಂದ್ರದ ಮೇಲೆ ದಾಳಿ ನಡೆಸಿ ಮೂವರು ಮಹಿಳೆಯರ ರಕ್ಷಣೆ ಮಾಡಿದ್ದರು.
ಮಹಿಳೆಯರು ಉದ್ಯೋಗ ಅರಸಿ ಚೆನ್ನೈ ಗೆ ಬಂದಿದ್ದರು. ಅವರನ್ನು ವಂಚಿಸಿ ವೇಶ್ಯಾವಾಟಿಕೆ ದಂಧೆಗೆ ದೂಡಲಾಗಿತ್ತು. ದಂಧೆ ನಡೆಸುತ್ತಿದ್ದ ಇಬ್ಬರು ಕಿಂಗ್ ಪಿನ್ ಗಳನ್ನು ಬಂಧಿಸಲಾಗಿದೆ. ಬಂಧಿತರನ್ನು ಸ್ಪಾ ಮ್ಯಾನೇಜರ್ ಎಂ ಮೊಹಮ್ಮದ್ ಅಸಿಮ್ (30) ಜಿ ನಿತ್ಯನ್ ಎಂದು ಗುರುತಿಸಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿತ್ತು.