Robbery: ಜುಮಾ, ನಮಿತಾ, ರಾಖಿ... ದಾರಿ ತಪ್ಪಿ ಬಂದ ಉದ್ಯಮಿಯ ಕೂಡಿಹಾಕಿ ಎಲ್ಲ ದೋಚಿದ್ರು!

By Contributor Asianet  |  First Published Apr 1, 2022, 6:41 PM IST

* ದಾರಿ ತಪ್ಪಿದ ಉದ್ಯಮಿಯ ದೋಚಿದ ನಶೆ ಸುಂದರಿಯರು
* ವೇರಶ್ಯೆಯರ ಬಳಿ ದಾರಿ ಕೇಳಿದ್ದೆ ತಪ್ಪಾಯ್ತು
* ಎಂಭತ್ತು ಸಾವಿರ ದೋಚಿದ್ದರು
* ಚಾಕು ತೋರಿಸಿ ಮೊಬೈಲ್ ಬ್ಯಾಂಕಿಂಗ್ ನಿಂದಲೂ ಹಣ ಲಪಟಾಯಿಸಿದ್ದರು


ಕೋಲ್ಕತ್ತಾ( ಏ. 01)  ಇದೊಂದು ವಿಚಿತ್ರ ಆದರೆ ಅಷ್ಟೇ ಆತಂಕಕಾರಿ ಪ್ರಕರಣ. ಅಹಮದಾಬಾದ್‌ನ (Ahmedabad) ಮೂಲದ ವ್ಯಕ್ತಿಯೊಬ್ಬನಿಗೆ ಚಾಕು ತೋರಿಸಿ 80,000 ರೂಪಾಯಿ ದರೋಡೆ (Robbery)  ಮಾಡಲಾಗಿದೆ.  ಇಲ್ಲಿ ದರೋಡೆ ಮಾಡಿದವರು ನಾಲ್ವರು ಮಹಿಳೆಯರು. ಅವರು ವೇಶ್ಯಾವಾಟಿಕೆಯಲ್ಲಿ (Prostitution) ತೊಡಗಿದವರು.

ಜುಮಾ ದಾಸ್, ಶ್ರುತಿ ಮುಖರ್ಜಿ, ನಮಿತಾ ದಾಸ್ ಮತ್ತು ರಾಖಿ ದಾಸ್ ಎಂಬುವರನ್ನು ಬಂಧಿಸಲಾಗಿದೆ.  ಮಂಗಳವಾರ ಇಮಾಮ್ ಬಾಕ್ಸ್ ಲೇನ್ ನಲ್ಲಿ ದರೋಡೆ ಮಾಡಿದ್ದರು. ದಾರಿ  ತಪ್ಪಿಕೊಂಡಿದ್ದ ಅಹಮದಾಬಾದ್ ಮೂಲದ ವ್ಯಕ್ತಿ ಲೈಂಗಿಕ ಕಾರ್ಯಕರ್ತೆಯರ ಕೈಗೆ (Arrest) ಸಿಕ್ಕಿಬಿದ್ದಿದ್ದಾರೆ. ಇದೇ ಸಂದರ್ಭ  ಬಳಸಿಕೊಂಡು ಅವರನ್ನು ದೋಚಲಾಗಿದೆ.

Tap to resize

Latest Videos

ದಾರಿ ತಪ್ಪಿದ್ದ ವ್ಯಕ್ತಿಗೆ ತಮ್ಮನ್ನು ಫಾಲೋ ಮಾಡುವಂತೆ ವೇಶ್ಯೆಯರು ಹೇಳಿದ್ದಾರೆ. ಇದಕ್ಕೆ ವ್ಯಕ್ತಿ ಒಪ್ಪದಿದ್ದಾಗ ಅವರನ್ನು ಕೋಣೆಯೊಳಗೆ ಕೂಡಿ ಹಾಕಿದ್ದಾರೆ.   ಈ ವೇಳೆ ಅವರಿಂದ 15,000 ರೂ. ದರೋಡೆ ಮಾಡಿದ್ದಾರೆ. ಇನ್ನು ಹೆಚ್ಚಿನ ಹಣ ಕೊಡಲು ಒತ್ತಾಯಿಸಿದ್ದಾರೆ.  ನಿರಾಕರಿಸಿದಾಗ,  ಚಾಕುವಿನಿಂದ ಬೆದರಿಸಿ ಆತನ ಮೊಬೈಲ್ ಕಸಿದುಕೊಂಡು, ಫೋನ್ ಬ್ಯಾಂಕಿಂಗ್ ಮೂಲಕ ಹಣ ವರ್ಗಾವಣೆ ಮಾಡುವಂತೆ ಹೇಳಿದ್ದಾರೆ. ಭಯಗೊಂಡ ವ್ಯಕ್ತಿ ತನ್ನ ಖಾತೆಯಿಂದ 65,000 ರೂ.ಗಳನ್ನು ವರ್ಗಾಯಿಸಿದ್ದಾರೆ.

ಸ್ಟುಡೆಂಟ್ಸ್ ಬಳಸಿಕೊಂಡು ವೇಶ್ಯಾವಾಟಿಕೆ ಜಾಲ.. ಎಂತಾ ದಂಧೆ

ಆತನನ್ನು ಸಂಪೂರ್ಣ ದೋಚಿದ ನಂತರ ಕೋಣೆಯಿಂದ ಹೊರದೂಡಿದ್ದಾರೆ.  ದರೋಡೆ  ನಂತರ ವ್ಯಕ್ತಿ ಬುರ್ಟೊಲ್ಲಾ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ.

ವ್ಯಕ್ತಿಯ ದೂರು ಆಧರಿಸಿ  ಇಂಥ ಕೆಲಸದಲ್ಲಿ ತೊಡಗಿಕೊಂಡವರನ್ನು ಬಂಧಿಸಲಾಗಿದೆ. ಈ ಮಹಿಳೆಯರನ್ನು ವಿಚಾರಣೆ ನಡೆಸಿದಾಗ ಮತ್ತಷ್ಟು ಸಂಗತಿಗಳು ಬಯಲಾಗಿವೆ.

ವೇಶ್ಯಾವಾಟಿಕೆ ಜಾಲ:  ಪಶ್ಚಿಮ ಬಂಗಾಳದ ನೂರ್‌ಪುರದಿಂದ ವರದಿಯಾದ ಪ್ರಕರಣದಲ್ಲಿ, ವೇಶ್ಯಾವಾಟಿಕೆ ದಂಧೆಯನ್ನು ಪೊಲೀಸರು ಭೇದಿಸಿ ಐದು ಬಾಂಗ್ಲಾದೇಶಿಗಳು ಸೇರಿದಂತೆ ಎಂಟು ಜನರನ್ನು ಬಂಧಿಸಲಾಗಿದ್ದು ಬಾಲಕಿಯನ್ನು ರಕ್ಷಿಸಲಾಗಿದೆ.  ಬಾಂಗ್ಲಾದೇಶದಿಂದ ಕಳ್ಳ ದಾರಿಯನ್ನು ಮಹಿಳೆಯರನ್ನು ಇಲ್ಲಿಗೆ ಕರೆತಂದು ವೇಶ್ಯಾವಾಟಿಕೆಗೆ ದೂಡಲಾಗುತ್ತಿತ್ತು. 

ಹೊರಗೆ ಸ್ಪಾ, ಒಳಗೆ ವೇಶ್ಯಾವಾಟಿಕೆ ಅಡ್ಡೆ:   ಹೊರಗೆ ಸ್ಪಾ ಒಳಗೆ ವೇಶ್ಯಾವಾಟಿಕೆ ಅಡ್ಡೆ. ಚೆನ್ನೈ ನಗರದ ವೆಲಾಚೇರಿ ಪ್ರದೇಶದಲ್ಲಿ ಸ್ಪಾ ಸೆಂಟರ್‌ನ ಸೋಗಿನಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ದಂಧೆಯನ್ನು ಪೊಲೀಸರು ಭೇದಿಸಿದ್ದರು. ಅಪರಾಧದ ಬಗ್ಗೆ ಮಾಹಿತಿ ಪಡೆದ ನಂತರ, ಪೊಲೀಸರು ಕೇಂದ್ರದ ಮೇಲೆ ದಾಳಿ ನಡೆಸಿ ಮೂವರು  ಮಹಿಳೆಯರ ರಕ್ಷಣೆ ಮಾಡಿದ್ದರು.

ಮಹಿಳೆಯರು ಉದ್ಯೋಗ ಅರಸಿ ಚೆನ್ನೈ ಗೆ ಬಂದಿದ್ದರು.  ಅವರನ್ನು ವಂಚಿಸಿ  ವೇಶ್ಯಾವಾಟಿಕೆ ದಂಧೆಗೆ ದೂಡಲಾಗಿತ್ತು.  ದಂಧೆ ನಡೆಸುತ್ತಿದ್ದ ಇಬ್ಬರು ಕಿಂಗ್ ಪಿನ್ ಗಳನ್ನು ಬಂಧಿಸಲಾಗಿದೆ. ಬಂಧಿತರನ್ನು ಸ್ಪಾ ಮ್ಯಾನೇಜರ್ ಎಂ ಮೊಹಮ್ಮದ್ ಅಸಿಮ್ (30) ಜಿ ನಿತ್ಯನ್ ಎಂದು ಗುರುತಿಸಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿತ್ತು.

ಮತ್ತೊಂದು ಪ್ರಕರಣ: ಇದೇ ರೀತಿಯ ಮತ್ತೊಂದು ಪ್ರಕರಣದಲ್ಲಿ, ಚೆನ್ನೈ ಪೊಲೀಸರು ತೆನಾಂಪೇಟೆಯ ಪಂಚತಾರಾ ಹೋಟೆಲ್‌ನಲ್ಲಿ ದಾಳಿ ನಡೆಸಿ ವೇಶ್ಯಾವಾಟಿಕೆ ಜಾಲ ಪತ್ತೆ ಮಾಡಿದ್ದಾರೆ.ಸಿನಿಮಾದಲ್ಲಿ ಅವಕಾಶ ನೀಡುತ್ತೇನೆ ಎಂದು ಮಹಿಳೆಯರನ್ನು ಕರೆದುತಂದು ಅವರನ್ನು ದಂಧೆಗೆ ದೂಡಲಾಗುತ್ತಿತ್ತು.  ತಮಿಳು ಸಿನಿಮಾದಲ್ಲಿ ಪ್ರಮುಖ ಪಾತ್ರಗಳ ಭರವಸೆ ನೀಡಿ ನಗರಕ್ಕೆ ಕರೆತಂದ ಮಹಿಳೆಯರನ್ನು ರಕ್ಷಿಸಿದರು. ರಕ್ಷಿಸಲ್ಪಟ್ಟ ಮಹಿಳೆಯರು ಮಾಡೆಲಿಂಗ್ ವೃತ್ತಿಯಲ್ಲಿದ್ದರು

ಹುಬ್ಬಳ್ಳಿ ಮತ್ತು ಮಂಗಳೂರಲ್ಲಿ ಹೈಟೆಕ್ ವೇಶ್ಯಾವಾಟಿಕೆ ಜಾಲ: ಹುಬ್ಬಳ್ಳಿ ಹಾಗೂ ಮಂಗಳೂರಿನಲ್ಲಿ ನಡೆಯುತ್ತಿದ್ದ ಹೈಟೆಕ್ ವೇಶ್ಯಾವಾಟಿಕೆ (Prostitution) ದಂಧೆ ಮೇಲೆ ದಾಳಿ ಮಾಡಲಾಗಿತ್ತು. ಹುಬ್ಬಳ್ಳಿಯ ಎಸ್.ಜಿ.ಟವರ್ಸ್, ಅಮೃತ ಡಿಲಕ್ಸ್ ಹೋಟೆಲ್‌ನಲ್ಲಿ ಹೈಟೆಕ್‌ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆರೋಪದ ಮೇಲೆ ಲಾಡ್ಜ್ ಮಾಲೀಕ ಸೇರಿ ಹಲವರನ್ನು ಪೊಲೀಸರು ಬಂಧಿಸಲಾಗಿತ್ತು.

 

 

 

 

click me!