ಕಲಬುರಗಿಯಲ್ಲಿ ಕೊಲೆ ಯತ್ನ: ಇಬ್ಬರು ಅರೆಸ್ಟ್‌

Published : Jul 15, 2023, 10:45 PM IST
ಕಲಬುರಗಿಯಲ್ಲಿ ಕೊಲೆ ಯತ್ನ: ಇಬ್ಬರು ಅರೆಸ್ಟ್‌

ಸಾರಾಂಶ

ಇಕ್ಬಾಲ್‌ ಕಾಲೋನಿಯ ಮಹ್ಮದ್‌ ಹಸನ್‌ ತಂದೆ ಮಹಿಬೂಬ್‌ ಡಾಂಗೆ ಎಂಬ ಯುವಕನನ್ನು ಹಣಕಾಸಿನ ವಿಷಯಕ್ಕೆ ಚಾಕುವಿನಿಂದ ಇರಿದು ಕೊಲೆ ಮಾಡಲು ಯತ್ನಿಸಲಾಗಿತ್ತು. ಈ ಸಂಬಂಧ ರಾಘವೇಂದ್ರ ನಗರ ಪೊಲೀಸ್‌ ಠಾಣೆಯಲ್ಲಿ ದೂರು ಸಲ್ಲಿಸಿದ್ದ ಯುವಕನ ತಂದೆ ಮಹಿಬೂಬ್‌ ಡಾಂಗೆ. 

ಕಲಬುರಗಿ(ಜು.15):  ಇತ್ತೀಚೆಗೆ ಇಕ್ಬಾಲ್‌ ಕಾಲೋನಿಯಲ್ಲಿ ಹಾಡುಹಗಲೇ ಚಾಕುವಿನಿಂದ ಇರಿದು ಯುವಕನೊಬ್ಬನನ್ನು ಕೊಲೆ ಮಾಡಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಘವೇಂದ್ರ ನಗರ ಪೊಲೀಸರು ಬಂಧಿಸಿದ್ದಾರೆ.

ಇಕ್ಬಾಲ್‌ ಕಾಲೋನಿಯ ಮಹ್ಮದ್‌ ಹಸನ್‌ ತಂದೆ ಮಹಿಬೂಬ್‌ ಡಾಂಗೆ ಎಂಬ ಯುವಕನನ್ನು ಹಣಕಾಸಿನ ವಿಷಯಕ್ಕೆ ಚಾಕುವಿನಿಂದ ಇರಿದು ಕೊಲೆ ಮಾಡಲು ಯತ್ನಿಸಲಾಗಿತ್ತು. ಈ ಸಂಬಂಧ ಯುವಕನ ತಂದೆ ಮಹಿಬೂಬ್‌ ಡಾಂಗೆ ರಾಘವೇಂದ್ರ ನಗರ ಪೊಲೀಸ್‌ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. 

ಕಲಬುರಗಿಯಲ್ಲಿ ಗಾಂಜಾ ಮಾರಾಟ: ಇಬ್ಬರ ಬಂಧನ

ಈ ದೂರಿನ ಅನ್ವಯ ನಗರ ಉಪ ಪೊಲೀಸ್‌ ಆಯುಕ್ತರಾದ ಅಡ್ಡೂರು ಶ್ರೀನಿವಾಸಲು, ಐ.ಎ. ಚಂದ್ರಪ್ಪ, ದಕ್ಷಿಣ ಉಪ-ವಿಭಾಗದ ಎಸಿಪಿ ಭೂತೇಗೌಡ ಅವರ ಮಾರ್ಗದರ್ಶನದಲ್ಲಿ ರಾಘವೇಂದ್ರ ನಗರ ಪೊಲೀಸ್‌ ಠಾಣೆ ಪಿಐ ಶಿವಾನಂದ ಎ.ಗಾಣಗೇರ ಅವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಸಿಕ್ರೇಶ್ವರ, ಮುಜಾಹಿದ ಕೊತ್ವಾಲ್‌, ಶರಣಬಸವ ಅವರು ತನಿಖೆ ನಡೆಸಿ ಇಕ್ಬಾಲ್‌ ಕಾಲೋನಿಯ ಶೇಖ್‌ ಮುಬಿನ್‌ (19) ಮತ್ತು ಎಂಎಸ್‌ಕೆ ಮಿಲ್‌ ಮಿಸ್ಬಾ ನಗರದ ಮಹ್ಮದ್‌ ಇರ್ಫಾನ್‌ (20) ಎಂಬುವವರನ್ನು ಬಂಧಿಸಿ ಕೃತ್ಯಕ್ಕೆ ಬಳಸಿದ ಚಾಕು ಜಪ್ತಿ ಮಾಡಿದ್ದಾರೆ. 

ಮಹ್ಮದ್‌ ಹಸನ್‌ ತೆಗೆದುಕೊಂಡ ಹಣ ವಾಪಸ್‌ ಕೊಡದೆ ಅವಾಚ್ಯವಾಗಿ ಬೈಯ್ದಿದ್ದರಿಂದ ಚಾಕುವಿನಿಂದ ಇರಿದು ಆತನ ಕೊಲೆಗೆ ಯತ್ನಿಸಲಾಗಿದೆ ಎಂದು ಆರೋಪಿಗಳು ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ
ಮಧುಗಿರಿ: ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು