ಪಕ್ಕದಮನೆ ಹುಡುಗನೇ ಪ್ರೀತಿಸುವ ನಾಟಕವಾಡಿ ಮದುವೆಯಾಗುವುದಾಗಿ ನಂಬಿಸಿ ಯುವತಿಯನ್ನು ಲೈಂಗಿಕವಾಗಿ ಬಳಸಿಕೊಂಡು ನಂತರ ಕೈಕೊಟ್ಟು ಪರಾರಿ ಆಗಿದ್ದಾನೆ.
ರಾಯಚೂರು (ಜು.15): ಕೇವಲ ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ನಡೆಯುತ್ತಿದ್ದ ಹುಡುಗಿಯರನ್ನು ಪ್ರೀತಿಸುವ ನಾಟಕವಾಡಿ ಅವರನ್ನು ಲೈಂಗಿಕವಾಗಿ ಬಳಸಿಕೊಂಡು ಕೈಕೊಟ್ಟು ಹೋಗುವ ಘಟನೆ ಈಗ ಹಳ್ಳಿಗೂ ಕಾಲಿಟ್ಟಿದೆ. ಪಕ್ಕದಮನೆ ಹುಡುಗನೇ ಪ್ರೀತಿಸುವ ನಾಟಕವಾಡಿ ನಿನ್ನನ್ನೇ ಮದುವೆಯಾಗುವುದಾಗಿ ನಂಬಿಸಿ ಯುವತಿಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ನಂತರ, ಹುಡುಗಿ ಮದುವೆ ಆಗುವಂತೆ ಒತ್ತಾಯಿಸಿದ ಕೂಡಲೇ ಮನೆ ಹಾಗೂ ಊರು ಬಿಟ್ಟು ಪರಾರಿ ಆಗಿದ್ದಾನೆ.
ಇನ್ನು ಲವ್, ಸೆಕ್ಸ್ ಮತ್ತು ದೋಖಾ ಘಟನೆ ನಡೆದಿರುವುದು ರಾಯಚೂರು ಜಿಲ್ಲೆ ಸಿರವಾರ ತಾಲೂಕಿನ ತೊಪ್ಪಲದೊಡ್ಡಿ ಗ್ರಾಮದಲ್ಲಿ. ಈ ಗ್ರಾಮದಲ್ಲಿ ಪಕ್ಕದಮನೆ ಹುಡುಗನಿಂದಲೇ, ಪಕ್ಕದ್ಮನೆಯ ಹುಡುಗಿಗೆ ಮೋಸವಾಗಿದೆ. ಪಕ್ಕದ್ಮನೆ ಹುಡುಗ ಮಲ್ಲೇಶ್ ವಿರುದ್ಧ ಹುಡುಗಿ ಗಂಭೀರ ಆರೋಪ ಮಾಡಿದ್ದಾಳೆ. ಮದುವೆ ಆಗ್ತೀನಿ ಎಂದು ನಂಬಿಸಿ ವಂಚನೆ ಮಾಡಿದ್ದಾನೆ ಎಂದು ಯುವತಿ ದೂರು ಕೊಟ್ಟಿದ್ದಾಳೆ. ಇನ್ನು ಡ್ರೈವರ್ ಕೆಲಸ ಮಾಡಿಕೊಂಡಿದ್ದ ಯುವಕ ಮದುವೆ ಆಗುವುದಾಗಿ ನಂಬಿಸಿ ತನ್ನನ್ನು ಬಳಸಿಕೊಂಡು ಕೈಕೊಟ್ಟಿದ್ದಾನೆ ಎಂದು ಯುವತಿ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ್ದಾಳೆ.
10 ಸೆಕೆಂಡ್‌ಗೂ ಕಡಿಮೆ ಸಮಯ ವಿದ್ಯಾರ್ಥಿನಿಯ ಖಾಸಗಿ ಅಂಗ ಮುಟ್ಟಿದ್ದು ದೌರ್ಜನ್ಯವಲ್ಲ: ಇಟಲಿ ಕೋರ್ಟ್ ತೀರ್ಪು
ಆರು ತಿಂಗಳಿಂದ ಕೈಕೊಟ್ಟು ಪರಾರಿ: ನ್ಯಾಯಕ್ಕಾಗಿ ಯುವತಿ ಹೋರಾಟ ಮಾಡುತ್ತಿದ್ದಾಳೆ. ಒಂದು ವರ್ಷದಿಂದ ಮಲ್ಲೇಶ್ ಮತ್ತು ಯುವತಿ ಪ್ರೀತಿ ಮಾಡ್ತಿದ್ದರು. ಕಳೆದ 6 ತಿಂಗಳ ಹಿಂದೆ ಮದುವೆ ಆಗ್ತೀನಿ ಎಂದು ನಂಬಿಸಿ ಮಲ್ಲೇಶ್ ಮೋಸ ಮಾಡಿದ್ದಾನೆ. ಯುವತಿ ಜೊತೆ ಮಂಚ ಹತ್ತಿದ್ದ ಐನಾತಿ ಮಲ್ಲೇಶ್ ಈಗ ಪರಾರಿ ಆಗಿದ್ದಾನೆ. ಇನ್ನು ತನ್ನನ್ನು ಪ್ರೀತಿಸಿ ಬಳಸಿಕೊಂಡ ಯುವಕನೇ ಬೇಕು ಎಂದು ಯುವತಿ ಕ್ರಿಮಿನಾಶಕ ಔಷಧಿಯನ್ನೂ ಸೇವಿಸಿದ್ದಳು. ಆದರೆ, ಕುಟುಂಬಸ್ಥರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಪ್ರಾಣ ಉಳಿಸಿದ್ದಾರೆ. ವಿಷ ಸೇವನೆಗೆ ಕಾರಣ ಕೇಳಿದಾಗ ಪಕ್ಕದ ಮನೆ ಹುಡುಗು ಪ್ರೀತಿಸಿ ಕೈಕೊಟ್ಟ ಸುದ್ದಿಯನ್ನು ಬಾಯಿ ಬಿಟ್ಟಿದ್ದಳು.
ರಾಜಿ ಪಂಚಾಯಿತಿಗೂ ಬಗ್ಗದ ಯುವಕ: ಇನ್ನು ಹಲವು ವರ್ಷಗಳಿಂದ ಅಕ್ಕ-ಪಕ್ಕದ ಮನೆಯಲ್ಲಿಯೇ ವಾಸವಿದ್ದ ಕುಟುಂಬ ಸದಸ್ಯರು ಆತ್ಮೀಯರಾಗಿದ್ದರು. ಇವರಿಬ್ಬರ ಪ್ರೇಮ ಪ್ರಕರಣದಿಂದ ಕುಟುಂಬಗಳ ನಡುವೆಯೂ ದ್ವೇಷದ ವಾತಾವರಣ ನಿರ್ಮಾಣ ಆಗಿತ್ತು. ಕೊನೆಗೆ, ಇಬ್ಬರ ಪ್ರೀತಿಯನ್ನು ಎರಡೂ ಕುಟುಂಬಗಳು ಒಪ್ಪಿಕೊಳ್ಳಲು ಮುಂದಾಗಿದ್ದು, ರಾಜಿ ಪಂಚಾಯಿತಿ ಮಾಡಿ ಇಬ್ಬರನ್ನೂ ಒಂದುಗೂಡಿಸಲು ಕುಟುಂಬ ಸದಸ್ಯರು ಪ್ರಯತ್ನ ಮಾಡಿದ್ದಾರೆ. ಆದರೆ. ಇದ್ಯಾವುದಕ್ಕೂ ಬಗ್ಗದ ಯುವಕ ಮಲ್ಲೇಶ್ ಹುಡುಗಿ ಹಾಗೂ ಅವರ ಮನೆಯವರ ಸಂಪರ್ಕಕ್ಕೆ ಸಿಗದೇ ಪರಾರಿ ಆಗಿದ್ದಾರೆ.
ವಂಶಿಕಾ ಹೆಸರಲ್ಲಿ ವಂಚಿಸಿದವಳು ಅರೆಸ್ಟ್, 14 ದಿನಗಳು ನ್ಯಾಯಾಂಗ ಬಂಧನ
ಮಲ್ಲೇಶ್‌ನನ್ನೇ ಮದುವೆಯಾಗುವುದಾಗಿ ಯುವತಿ ಪಟ್ಟು: ಹಲವು ದಿನಗಳು ಕಾದು ಕುಳಿತರೂ ಮನೆಯತ್ತ ಸುಳಿಯದ ಯುವಕನಿಗೆ ಕರೆ ಮಾಡಿ ಹೈರಾಣಾಗಿದ್ದಾಳೆ. ಯಾವುದಕ್ಕೂ ಸಂಪರ್ಕ ಸಿಗದ ಹಿನ್ನೆಲೆಯಲ್ಲಿ ತನ್ನ ಪ್ರೀಯಕರನನ್ನು ಹುಡುಕಿಕೊಡುವಂತೆ ಹಾಗೂ ಆತ ಮಾಡಿದ ಮೋಸದ ವಿರುದ್ಧ ಕ್ರಮ ಕೈಗೊಳ್ಳುವಂತೆ ಕವಿತಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ನಾನು, ಮದುವೆ ಆದರೆ ಅದು ಮಲ್ಲೇಶ್‌ನನ್ನೇ ಇಲ್ಲವೆಂದರೆ ಮದುವೆ ಆಗುವುದಿಲ್ಲ ಎಂದು ಯುವತಿ ಪಟ್ಟು ಹಿಡಿದು ಕುಳಿತಿದ್ದಾಳೆ.