10 ಸೆಕೆಂಡ್‌ಗೂ ಕಡಿಮೆ ಸಮಯ ವಿದ್ಯಾರ್ಥಿನಿಯ ಖಾಸಗಿ ಅಂಗ ಮುಟ್ಟಿದ್ದು ದೌರ್ಜನ್ಯವಲ್ಲ: ಇಟಲಿ ಕೋರ್ಟ್‌ ತೀರ್ಪು

By BK Ashwin  |  First Published Jul 15, 2023, 12:19 PM IST

 "ಐದು ಮತ್ತು 10 ಸೆಕೆಂಡುಗಳ ನಡುವೆ" ಅಸಭ್ಯವಾಗಿ ಮಹಿಳೆಯನ್ನು ಮುಟ್ಟಲಾಗಿದೆ. ಆದ್ದರಿಂದ ಅಪರಾಧವೆಂದು ಪರಿಗಣಿಸುವುದು ಕಷ್ಟ ಎಂದು ಇಟಲಿಯ ಕೋರ್ಟ್‌ ತೀರ್ಪು ನೀಡಿದೆ. 


ರೋಮ್‌ (ಜುಲೈ 15, 2023): ಇಟಲಿಯಲ್ಲಿ 66 ವರ್ಷದ ಶಾಲಾ ದ್ವಾರಪಾಲಕರೊಬ್ಬರು ವಿದ್ಯಾರ್ಥಿನಿಯ ಖಾಸಗಿ ಅಂಗವನ್ನು ಕೆಟ್ಟದಾಗಿ ಸ್ಪರ್ಶಿಸಿದರೂ ಕೋರ್ಟ್‌ ಅವರ ಮೇಲಿನ ಆರೋಪದಿಂದ ಮುಕ್ತಗೊಳಿಸಿದೆ. ಇದಕ್ಕೆ ಕಾರಣ ಅವರು  10 ಸೆಕೆಂಡ್‌ಗಿಂತಲೂ ಕಡಿಮೆ ಅವಧಿ ವಿದ್ಯಾರ್ಥಿನಿಯ ಖಾಸಗಿ ಅಂಗವನ್ನು ಸ್ಪರ್ಶಿಸಿದ್ದಾರೆಂದು. ಕೋರ್ಟ್‌ನ ಈ ತೀರ್ಪಿಗೆ ಇಟಲಿಯ ಜನತೆ ಆನ್‌ಲೈನ್‌ನಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ರೋಮ್‌ನ ಶಾಲೆಯೊಂದರಲ್ಲಿ 17 ವರ್ಷದ ವಿದ್ಯಾರ್ಥಿನಿಯೊಬ್ಬಳು 2022ರ ಏಪ್ರಿಲ್‌ನಲ್ಲಿ ತನ್ನ ಸ್ನೇಹಿತನೊಂದಿಗೆ ಮೆಟ್ಟಿಲನ್ನು ಹತ್ತಿ ಹೋಗುತ್ತಿದ್ದಾಗ ಕೇರ್‌ಟೇಕರ್‌ನಿಂದ ದೌರ್ಜನ್ಯಕ್ಕೊಳಗಾದಳು ಎಂದು ದೂರಿದ್ದಳು ಎಂದು ಸಿಎನ್‌ಎನ್‌ ವರದಿ ಮಾಡಿದೆ.  ಪ್ಯಾಂಟ್ ತನ್ನ ಸೊಂಟದಿಂದ ಕೆಳಗೆ ಬಿದ್ದಿತ್ತು. ಅವುಗಳನ್ನು ಮೇಲಕ್ಕೆ ಎಳೆಯುತ್ತಿದ್ದಾಗ, ಆ ವ್ಯಕ್ತಿ ತನ್ನ ಒಳಉಡುಪುಗಳನ್ನು ಹಿಡಿದು ಒಂದು ಇಂಚಿನಷ್ಟು ಮೇಲಕ್ಕೆ ಎತ್ತುವ ಮೊದಲು ಒಂದು ಜೋಡಿ ಕೈಗಳು ತನ್ನ ಪೃಷ್ಠದ ಮೇಲೆ ಸ್ಪರ್ಶಿಸುತ್ತಿರುವುದನ್ನು ತಾನು ಭಾವಿಸಿದೆ ಎಂದೂ ಸಂತ್ರಸ್ತೆ ವಿದ್ಯಾರ್ಥಿನಿ ದೂರಿನಲ್ಲಿ ಹೇಳಿದ್ದಳು.

Tap to resize

Latest Videos

ಇದನ್ನು ಓದಿ: ಬರೋಬ್ಬರಿ 17 ವರ್ಷಗಳ ಬಳಿಕ ಮಹಿಳೆಯ ಕೊಲೆ ಪ್ರಕರಣದ ಹಂತಕನ ಪತ್ತೆ ಹಚ್ಚಿದ ಪೊಲೀಸರು!

ಅಲ್ಲದೆ, ‘’ಲವ್‌, ನಾನು ತಮಾಷೆ ಮಾಡುತ್ತಿದ್ದೆ ಎಂದು ನಿಮಗೆ ತಿಳಿದಿದೆ" ಎಂದು ದ್ವಾರಪಾಲಕ ಹೇಳಿದರು ಎಂದೂ ಹದಿಹರೆಯದ ಹುಡುಗಿ ಹೇಳಿದ್ದಾಳೆ ಎಂದೂ ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ. ಇನ್ನು, ವಿಚಾರಣೆಯ ಸಮಯದಲ್ಲಿ, 66 ವರ್ಷ ವಯಸ್ಸಿನ ಆರೋಪಿ  ಆಂಟೋನಿಯೊ ಅವೊಲಾ ಎಂದು ಗುರುತಿಸಲಾದ ವ್ಯಕ್ತಿ, ತಾನು ವಿದ್ಯಾರ್ಥಿನಿಯನ್ನು ಸ್ಪರ್ಶಿಸಿದ್ದೇನೆ. ಆದರೆ, ಅದು ತಮಾಷೆ ಎಂದು ಒಪ್ಪಿಕೊಂಡಿದ್ದಾರೆ.  ನಂತರ ನ್ಯಾಯಾಧೀಶರು ಈ ಕೃತ್ಯವು ಹುಡುಗಿಯ ಬಗ್ಗೆ "ಕಾಮಪ್ರಚೋದಕ ಉದ್ದೇಶ"ವಿಲ್ಲದೆ ‘’ದೊಡ್ಡ ತಮಾಷೆ’’ ಎಂಬ ಡಿಫೆನ್ಸ್‌ ವಾದವನ್ನು ಒಪ್ಪಿಕೊಂಡಿದ್ದಾರೆ. ಅಲ್ಲದೆ, ಈ ಗ್ರೋಪ್‌ "ಐದು ಮತ್ತು 10 ಸೆಕೆಂಡುಗಳ ನಡುವೆ" ನಡೆದಿದೆ ಮತ್ತು ಆದ್ದರಿಂದ ಅಪರಾಧವೆಂದು ಪರಿಗಣಿಸುವುದು ಕಷ್ಟ ಎಂದೂ ಅವರು ತೀರ್ಪು ನೀಡಿದರು.

ಇನ್ನು, ಈ ನಿರ್ಧಾರವು ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದ್ದು, ಮತ್ತು ಸಾಂಆಜಿಕ ಮಾಧ್ಯಮದಲ್ಲಿ ಈ ಸಂಬಂಧ ಟ್ರೆಂಡಿಂಗ್‌ಗೆ ಕಾರಣವಾಗಿದೆ. ಹಲವಾರು ಬಳಕೆದಾರರು "ಪಾಲ್ಪಾಟಾ ಬ್ರೀವ್" (ಸಂಕ್ಷಿಪ್ತ ಗ್ರೋಪ್) ಮತ್ತು "10 ಸೆಕೆಂಡಿ" (10 ಸೆಕೆಂಡುಗಳು) ಎಂಬ ಹ್ಯಾಶ್‌ಟ್ಯಾಗ್‌ಗಳ ಜೊತೆಗೆ ದೇಹದ ಖಾಸಗಿ ಭಾಗಗಳನ್ನು ಸ್ಪರ್ಶಿಸುವ ವಿಡಿಯೋಗಳನ್ನು ಪೋಸ್ಟ್ ಮಾಡಿದ್ದಾರೆ. ಅಲ್ಲದೆ, 'ವೈಟ್ ಲೋಟಸ್' ನಟ ಪಾವೊಲೊ ಕ್ಯಾಮಿಲ್ಲಿ ಕೂಡ "ರಾಜ್ಯವು ನಮ್ಮನ್ನು ರಕ್ಷಿಸಬಾರದೇ?" ಎಂಬ ಶೀರ್ಷಿಕೆಯೊಂದಿಗೆ ತಮ್ಮ ಇನ್ಸ್ಟಾಗ್ರಾಮ್‌ ಅಕೌಂಟ್‌ನಲ್ಲಿ ವಿಡಿಯೋವೊಂದನ್ನು ಪೋಸ್ಟ್‌ ಮಾಡಿದ್ದಾರೆ. 

ಇದನ್ನೂ ಓದಿ: ದೆಹಲಿಯಲ್ಲಿ ಮಹಿಳೆಯ ಬರ್ಬರ ಕೊಲೆ: ದೇಹ ಪೀಸ್‌ ಪೀಸ್‌ ಮಾಡಿ ಫ್ಲೈಓವರ್‌ ಬಳಿ ಎಸೆದ ಪಾಪಿ!

ಇನ್‌ಸ್ಟಾಗ್ರಾಮ್‌ನಲ್ಲಿ 29.4 ಮಿಲಿಯನ್ ಅನುಯಾಯಿಗಳನ್ನು ಹೊಂದಿರುವ ಇಟಲಿಯ ಅತ್ಯಂತ ಪ್ರಸಿದ್ಧ ಪ್ರಭಾವಿ ಚಿಯಾರಾ ಫೆರಾಗ್ನಿ ಮತ್ತೊಂದು ವಿಡಿಯೊವನ್ನು ರೀಪೋಸ್ಟ್ ಮಾಡಿದ್ದಾರೆ. ಇನ್ನೊಬ್ಬ ಪ್ರಭಾವಿ, ಫ್ರಾನ್ಸೆಸ್ಕೊ ಸಿಕೊನೆಟ್ಟಿ ಅವರು, "10 ಸೆಕೆಂಡುಗಳು ದೀರ್ಘ ಸಮಯವಲ್ಲ ಎಂದು ಯಾರು ನಿರ್ಧರಿಸುತ್ತಾರೆ? ನೀವು ಕಿರುಕುಳಕ್ಕೊಳಗಾಗುತ್ತಿರುವಾಗ ಸೆಕೆಂಡುಗಳನ್ನು ಯಾರು ಲೆಕ್ಕಹಾಕುತ್ತಾರೆ? ಪುರುಷರಿಗೆ ಮಹಿಳೆಯರ ದೇಹವನ್ನು ಮುಟ್ಟುವ ಹಕ್ಕಿಲ್ಲ, ಒಂದು ಸೆಕೆಂಡ್ ಕೂಡ ಇಲ್ಲ - ಇನ್ನು, 5 ಅಥವಾ 10 ಸೆಕೆಂಡ್‌ ಅವಕಾಶವೇ ಇಲ್ಲ ಬಿಡಿ ಎಂದೂ ಕೋರ್ಟ್‌ ತೀರ್ಪಿಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಇದನ್ನೂ ಓದಿ: ಮುಂಬೈನಲ್ಲಿ ಆಟೋದಲ್ಲೇ ಮಹಿಳೆಗೆ ರೇಪ್‌, ಬೆದರಿಕೆ: ಪಾಪಿ ಆಟೋರಿಕ್ಷಾ ಚಾಲಕ ಅಂದರ್‌

click me!