* 45 – 25ರ ಲವ್ ಸ್ಟೋರಿ ದುರಂತ ಅಂತ್ಯಕ್ಕೆ ಬಿಗ್ ಟ್ವಿಸ್ಟ್
* ಶಂಕ್ರಣ್ಣ ಮೇಘನಾ 4 ತಿಂಗಳು ಪ್ರೆಗ್ನೆಂಟ್
* ಶಂಕ್ರಣ್ಣ ಆತ್ಮಹತ್ಯೆ ಹಿಂದಿನ ಅಸಲಿ ಸತ್ಯ ಬಿಟ್ಟಿಟ್ಟ ಪತ್ನಿ ಮೇಘನಾ.!
ತುಮಕೂರು, (ಮಾ.29): 45 ವರ್ಷದ ವ್ಯಕ್ತಿ ಜೊತೆಗೆ 25ರ ಯುವತಿ ಮದುವೆಯಾಗಿದ್ದ ತುಮಕೂರಿನ ಶಂಕರಣ್ಣ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮದ್ವೆಯಾಗಿ 5 ತಿಂಗಳಿಗೇ ದುರಂತ ಅಂತ್ಯ ಕಂಡಿದ್ದಾರೆ.
ಇಂದು(ಮಂಗಳವಾರ) ಬೆಳಗ್ಗೆ ತಮ್ಮ ತೋಟದಲ್ಲಿ ಶಂಕರಣ್ಣ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತ್ನಿ ಮೇಘನಾ ಕಿರಿಕಿರಿಯಿಂದಾಗಿ ಶಂಕರಣ್ಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಆದ್ರೆ, ಇದೀಗ 45 –25 ಲವ್ ಸ್ಟೋರಿ ದುರಂತ ಅಂತ್ಯಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಪತಿ ಆತ್ಮಹತ್ಯೆ ಹಿಂದಿನ ಅಸಲಿ ಸತ್ಯವನ್ನು ಪತ್ನಿ ಮೇಘನಾ ಬಿಟ್ಟಿದ್ದಾಳೆ.
25 ವರ್ಷದ ಯುವತಿ ಜತೆ ಮದ್ವೆಯಾಗಿದ್ದ 45 ವರ್ಷದ ಶಂಕರಣ್ಣ ಆತ್ಮಹತ್ಯೆಗೆ ಕಾರಣ ಬಯಲು
ಅಸಲಿ ಸತ್ಯ ಬಿಚ್ಚಿಟ್ಟ ಮೇಘನಾ
ಈ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿರುವ ಮೇಘನಾ, ಬೆಂಗಳೂರು - ಮೈಸೂರಿಗೆ ಹೋಗುವಂತೆ ನಾನು ಡಿಮ್ಯಾಂಡ್ ಮಾಡಿರಲಿಲ್ಲ. ಸತ್ಯಾಂಶ ಗೊತ್ತಿದೆ, ನನ್ನದು ಸಂತೇಮಾವತ್ತೂರು. ಮೂರು ತಿಂಗಳು ಚೆನ್ನಾಗಿದ್ದೋ , ಆಮೇಲೆ ಜಗಳ ತೆಗೆದರು. ಮನೆಯಲ್ಲಿ ಪಾತ್ರೆ ತೊಳೆಯುವ ವಿಚಾರವಾಗಿ ಜಗಳವಾಯ್ತು. ಹೊಸ ವರ್ಷ ದಿನವೇ ಜಗಳ ಮಾಡಿದ್ರು ಎಂದು ಬಿಚ್ಚಿಟ್ಟಳು.
ತಾಯಿ- ಮಗನನ್ನು- ದೂರ ಮಾಡ್ತಿದ್ದಾಳೆ ಅಂತ ನನ್ನ ಮೇಲೆ ದ್ವೇಷ ಸಾಧಿಸುತ್ತಿದ್ದರು. ನಾನು ಯಾವುದೆ ಕಾಟ ಕೊಟ್ಟಿಲ್ಲ. ತಾಯಿಯೇ ಹೋಗಿ ನೇಣು ಮಾಡಿಕೊ ಅಂತ ಹೇಳಿದ್ದಕ್ಕೆ ಮನನೊಂದು ನನ್ನ ಗಂಡ ಆತ್ಮಹತ್ಯೆ ಮಾಡಿಕೊಂಡರು. ನಿನ್ನೆ(ಸೋಮವಾರ) ಕೂಡ ನನ್ನ ಕೆಟ್ಟದಾಗಿ ಬೈದರು. ನಾನು ನಾಲ್ಕು ತಿಂಗಳ ಪ್ರಗ್ನೆಂಟ್ ಎಂದು ಕಣ್ಣೀರು ಹಾಕಿದಳು.
25 ವರ್ಷದ ಯುವತಿ ಕೈ ಹಿಡಿದಿದ್ದ 45 ವರ್ಷದ ಶಂಕರಣ್ಣ ಸೂಸೈಡ್!
ನಾನು ಗಂಡ ಚೆನ್ನಾಗಿದ್ವಿ, ಎರಡು ತಿಂಗಳಿಂದ ನನ್ನ ಜೊತೆಗೆ ಅತ್ತೆ ಜಗಳ ಮಾಡುತ್ತಿದ್ದರು. 15 ದಿನಕ್ಕೊಂದು ಸಲ ಜಗಳ ಆಗುತ್ತಿತ್ತು. ಗಂಡ- ಹೆಂಡತಿ ನಡುವೆ ಏನು ಸಮಸ್ಯೆ ಇರಲಿಲ್ಲ. ಅತ್ತೆ ಪದೇ ಪದೇ ಹೊರಗೆ ಹೋಗ್ತಾಳೆ , ಅಂತ ಜಗಳ ಮಾಡುತ್ತಿದ್ದರು ಎಂದು ಆರೋಪ ಮಾಡಿದರು.
ನನ್ನ ತಂದೆ ತಾಯಿಯರ ಜೊತೆಗೂ ಮಾತನಾಡಲು ಬಿಡುತ್ತಿರಲಿಲ್ಲ.ಇಬ್ಬರನ್ನು ಸಂಭಾಳಿಸಲು ಸಾಧ್ಯವಿಲ್ಲ ಅಂತ ನನ್ನ ಗಂಡ ಹೇಳಿದ್ರು. ನೀನು ಹೋಗಿ ಸಾಯಿ ಅಂತ ನಮ್ಮ ಅತ್ತೆಯೇ ಮಗನಿಗೆ ಬೈದರು. ಮನೆ ಬಿಟ್ಟು ಹೋದ ಗಂಡ ರಾತ್ರಿಯಲ್ಲ ವಾಪಸ್ ಬರಲಿಲ್ಲ. ರಾತ್ರಿಯಲ್ಲಾ ಪೋನ್ ಮಾಡಿದೆ ಕಾಲ್ ರಿಸೀವ್ ಮಾಡಲಿಲ್ಲ. ಬೆಳಗ್ಗೆ ಸತ್ತಿರುವ ಸುದ್ದಿ ಗೊತ್ತಾಯಿತ್ತು ಎಂದರು.
ಜಮೀನು, ಹಣ ಹಂತಸ್ತು ನೋಡಿ ಬರಲಿಲ್ಲ. ಒಂದ್ವೇಳೆ ಆ ರೀತಿ ನಾನು ಇದ್ದರೆ, ಮದುವೆಗೆ ಮುಂಚೇನೆ ನನ್ನ ಹೆಸರಿಗೆ ಆಸ್ತಿ ಬರೆಯುವಂತೆ ಕೇಳುತ್ತಿದ್ದೆ. ಮೆಣಸಿಗೆರೆ ದೊಡ್ಡಿ ರಾಜಣ್ಣ ಎಂಬುವರು ನನಗೆ ಮದುವೆ ಮಾಡಿಸಿದರು. ಅಪ್ಪ, ಅಮ್ಮ ನನ್ನು ಬಿಟ್ಟು ಮದುವೆಯಾಗಿದ್ದೆ. ನನ್ನನ್ನು ಚೆನ್ನಾಗಿ ನೋಡಿಕೊಳ್ಳಬೇಕಿತ್ತು. ಎಲ್ಲಾರು ಸೇರಿಕೊಂಡು ಕಾಟ ನೀಡಿದ್ರು ಎಂದು ಮೇಘನಾ ಕಣ್ಣೀರಿಟ್ಟರು,
ಮದುವೆಯಾಗಿದ್ದು, ನಮ್ಮ ಅತ್ತೆಗೆ ಇಷ್ಟ ಇರಲಿಲ್ಲ. ನನಗೆ ಮೊದಲನೇ ಮದುವೆಯಾಗಿತ್ತು. ಮೊದಲನೇ ಮದುವೆ ಲವ್ ಮ್ಯಾರೇಜ್ ಆಗಿತ್ತು.ಆತ ಸಾಲ ಮಾಡಿಕೊಂಡು ನನ್ನ ಬಿಟ್ಟು ಹೋದ. ಆತನನ್ನು ಒಂದೂವರೆ ವರ್ಷ ಹುಡುಕಿಸಿದ್ದೆ, ಆತ ಸಿಗಲಿಲ್ಲ, ಪೊಲೀಸ್ ಠಾಣೆಗೂ ದೂರು ನೀಡಿದ್ದೆ ಎಂದು ಹೇಳಿದರು.
ಕೊನೆಗೆ ರಾಜಣ್ಣ ಶಂಕ್ರಪ್ಪ ನನ್ನು ಮದುವೆಯಾಗುವ ಪ್ರಸ್ತಾಪ ಮಾಡಿದರು. ಶಂಕ್ರಪ್ಪನೇ ನನ್ನನ್ನು ಇಷ್ಟು ಪಟ್ಟಿ ಮದುವೆಯಾದ್ರು. ಮದುವೆ ಸಂದರ್ಭದಲ್ಲೂ ಏನು ಕೊಡಲಿಲ್ಲ, ಸೀರೆ, ತಾಳಿ, ಕಾಲೂಂಗರ ಮಾತ್ರ ಕೊಟ್ಟಿದ್ದರು ಎಂದು ತಿಳಿಸಿದರು.