25 ವರ್ಷದ ಯುವತಿ ಜತೆ ಮದ್ವೆಯಾಗಿದ್ದ 45 ವರ್ಷದ ಶಂಕರಣ್ಣ ಆತ್ಮಹತ್ಯೆಗೆ ಕಾರಣ ಬಯಲು

By Suvarna News  |  First Published Mar 29, 2022, 11:54 AM IST

* 25 ವರ್ಷದ ಯುವತಿ ಜೊತೆ ವಿವಾಹವಾಗಿದ್ದ 45 ವರ್ಷದ ಶಂಕರಣ್ಣ ಆತ್ಮಹತ್ಯೆ
* ಮದ್ವೆಯಾದ 5 ತಿಂಗಳಿಗೇ ದುರಂತ ಅಂತ್ಯ ಕಂಡ ಶಂಕರಣ್ಣ
* ಶಂಕರಣ್ಣನ ಆತ್ಮಹತ್ಯೆ ಆತ್ಮಹತ್ಯೆಗೆ ಕಾರಣ ಬಯಲು


ತುಮಕೂರು, (ಮಾ.29): ಕಳೆದ ವರ್ಷ 45 ವರ್ಷದ ವ್ಯಕ್ತಿ ಜೊತೆಗೆ 25ರ ಯುವತಿ ಮದುವೆಯಾಗಿದ್ದ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡಿತ್ತು. ಆದರೀಗ ಈ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಶಂಕರಣ್ಣ(45) ಮೃತ ದುರ್ದೈವಿಯಾಗಿದ್ದು, ಕಳೆದ ವರ್ಷ ಕುಣಿಗಲ್ ತಾಲೂಕಿನ ಚೌಡನಕುಪ್ಪೆ ಗ್ರಾಮದ ಬಳಿಯಿರುವ ಅಕ್ಕಿಮರಿಪಾಳ್ಯದ ಶಂಕರಣ್ಣ ಮತ್ತು ಮೇಘನಾ ಅವರ ಮದುವೆ ನಡೆದಿತ್ತು. ಮದ್ವೆಯಾದ 5 ತಿಂಗಳಿಗೇ ದುರಂತ ಅಂತ್ಯ ಕಂಡಿದ್ದಾರೆ. ತಮ್ಮ ತೋಟದಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

Tap to resize

Latest Videos

ನಾನು 4 ತಿಂಗ್ಳು ಪ್ರೆಗ್ನೆಂಟ್, ಎಲ್ಲಾರು ಸೇರಿಕೊಂಡು ಕಾಟ ನೀಡಿದ್ರು, ಶಂಕ್ರಣ್ಣ ಆತ್ಮಹತ್ಯೆ ಸತ್ಯ ಬಿಟ್ಟಿಟ್ಟ ಪತ್ನಿ

ಶಂಕರಣ್ಣನ ಆತ್ಮಹತ್ಯೆಗೆ ಕಾರಣ ಬಯಲು
ಶಂಕರಣ್ಣನ ಹೆಸರಲ್ಲಿ 2.5 ಎಕರೆ ಜಮೀನಿದೆ. ಇದನ್ನು ಮಾರಾಟ ಮಾಡಿ ಬೆಂಗಳೂರು ಅಥವಾ ಮೈಸೂರಿಗೆ ಹೋಗಿ ನೆಲೆಸೋಣ ಎಂದು ಮದುವೆ ಆದಾಗಿನಿಂದ ಮೇಘನಾ ಒತ್ತಾಯಿಸುತ್ತಿದ್ದಳಂತೆ. 

ಯಾವುದೇ ಕಾರಣಕ್ಕೂ ಆಸ್ತಿ ಮಾರಾಟ ಮಾಡೋಕೆ ನಾನು ಬಿಡಲ್ಲ ಅಂತ ಶಂಕರಣ್ಣನ ತಾಯಿ ಪಟ್ಟು ಹಿಡಿದಿದ್ದರು. ಇದೇ ವಿಚಾರಕ್ಕೆ ಪದೇ-ಪದೇ ಮನೆಯಲ್ಲಿ ಅತ್ತೆ, ಸೊಸೆ ನಡುವೆ ಗಲಾಟೆ ನಡೆಯುತ್ತಿತ್ತು. ಎಲ್ಲೂ ಹೋಗೋದು ಬೇಡ, ಇಲ್ಲೇ ತಾಯಿ ಜತೆ ಹಳ್ಳಿಯಲ್ಲೇ ಇರೋಣ ಎಂದು ಶಂಕರಣ್ಣ ಹೇಳಿದರೂ ಮೇಘನಾ ಒಪ್ಪಿರಲಿಲ್ಲವಂತೆ. 

25 ವರ್ಷದ ಯುವತಿ ಕೈ ಹಿಡಿದಿದ್ದ 45 ವರ್ಷದ ಶಂಕರಣ್ಣ ಸೂಸೈಡ್!

ನಿನ್ನೆ(ಸೋಮವಾರ) ಸಂಜೆಯೂ ಅತ್ತೆ-ಸೊಸೆ ಜಗಳವಾಡಿದ್ದರಂತೆ. ಇದರಿಂದ ಬೇಸತ್ತ ಶಂಕರಣ್ಣ, ಇಂದು(ಮಂಗಳವಾರ) ಬೆಳಗ್ಗೆ ಹೊಲದಲ್ಲಿ ಹಲಸಿನ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಹುಲಿಯೂರು ದುರ್ಗ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. 

2021ರ ಅಕ್ಟೋಬರ್​ನಲ್ಲಿ ತುಮಕೂರು ಜಿಲ್ಲೆ ಕುಣಿಗಲ್(Kunigal)​ ತಾಲೂಕಿನ ಸಂತೆಮಾವತ್ತೂರು ಗ್ರಾಮದ 25 ವರ್ಷ ವಯಸ್ಸಿನ ಮೇಘನಾ ತನಗಿಂತ ಇಪ್ಪತ್ತು ವರ್ಷ ಹಿರಿಯ ವ್ಯಕ್ತಿಯನ್ನು ಮದುವೆಯಾಗಿದ್ದರು. ಇದೇ ತಾಲೂಕಿನ ಚೌಡನಕುಪ್ಪೆ ಗ್ರಾಮ ಸಮೀಪದ ಅಕ್ಕಿಮರಿಪಾಳ್ಯದ ಶಂಕರಣ್ಣ ಎಂಬವರನ್ನು ಮದುವೆಯಾಗಿದ್ದಳು. 45 ವರ್ಷದ ಶಂಕರಣ್ಣಗೆ ಮದುವೆ ಆಗಿರಲಿಲ್ಲ. ಹೀಗಿರುವಾಗ ಮೇಘನಾ ಅವರ ಬಳಿಕ ತನನ್ನು ಮದುವೆಯಾಗುವಂತೆ ಕೇಳಿದ್ದಾರೆ. ಇದಕ್ಕೆ ಶಂಕರಣ್ಣನೂ ಒಪ್ಪಿಗೆ ಸೂಚಿಸಿದ್ದರು, ಇಬ್ಬರೂ ಸಮೀಪದ ದೇವಾಲಯದ ಬಳಿ ಸರಳವಾಗಿ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇವರ ಈ ಮದುವೆ ವಿಚಾರ ಇಡೀ ರಾಜ್ಯಾದ್ಯಂತ ಸದ್ದು ಮಾಡಿತ್ತು. 

ಮದುವೆ ಬಳಿಕವೂ ಈ ಜೋಡಿ ವಿಭಿನ್ನ ವಿಡಿಯೋಗಳ ಮೂಲಕ ಸಾಮಾಜಿಕ ಜಾಲಾತಾಣಗಳಲ್ಲೂ ಸದ್ದು ಮಾಡುತ್ತಿತ್ತು. ಆರಂಭದಲ್ಲಿ ಟ್ರೋಲ್ ಆಗಿದ್ದ ಈ ಜೋಡಿಯ ವಿಡಿಯೋಗಳನ್ನು ಅನೇಕರು ಇಷ್ಪಟ್ಟಿದ್ದರು. 

ಲಭ್ಯವಾದ ಮಾಹಿತಿ ಅನ್ವಯ ಮೇಘನಾಗೆ ಮೂರು ವರ್ಷದ ಹಿಂದೆ ಮದುವೆಯಾಗಿತ್ತು. ಆದರೆ ಮದುವೆಯಾದ ಒಂದು ವರ್ಷದಲ್ಲಿ ಆಕೆಯ ಪತಿ ಮನೆ ಬಿಟ್ಟು ಓಡಿ ಹೋಗಿದ್ದರು. ಆತನಿಗೆ ಅದಕ್ಕೂ ಮೊದಲೇ ಬೇರೊಬ್ಬನ ಜತೆ ಮದುವೆ ಆಗಿತ್ತಂತೆ, ಅಲ್ಲದೇ ಮನೆ ಬಿಟ್ಟು ಹೋದ ಗಂಡ ಮೇಘನಾಳನ್ನು ನೋಡಲು ಕೂಡಾ ಬರುತ್ತಿರಲಿಲ್ಲ.  ಹೀಗಿರುವಾಗ ಕಳೆದೆರಡು ವರ್ಷದಿಂದ ಒಬ್ಬಂಟಿಯಾಗಿದ್ದ ಮೇಘನಾ ಬೇಸತ್ತು ಆರು ತಿಂಗಳ ಹಿಂದೆ ಶಂಕರಣ್ಣನನ್ನು ಮದುವೆ ಆಗಿದ್ದಳು. 

click me!